ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Self Harming: ಪೋಷಕರು ಬೈದಿದ್ದಕ್ಕೆ ಮನವೊಂದು ನೇಣು ಬಿಗಿದುಕೊಂಡ 10ನೇ ತರಗತಿ ವಿದ್ಯಾರ್ಥಿನಿ

Self Harming: ಬೆಂಗಳೂರಿನ ಶ್ರೀನಗರದ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೂರ್ವಸಿದ್ಧತಾ ಪರೀಕ್ಷೆಗಳಿಗೆ ಸರಿಯಾಗಿ ಓದದ ಹಿನ್ನೆಲೆ ಪೋಷಕರು ಗದರಿಸಿದ್ದರಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಪೋಷಕರು ಬೈದಿದ್ದಕ್ಕೆ ಮನವೊಂದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Profile Prabhakara R Jan 31, 2025 1:49 PM

ಬೆಂಗಳೂರು: 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಶ್ರೀನಗರದ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಿರಿನಗರದ ಖಾಸಗಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಮೃತಳು.

ಪೂರ್ವಸಿದ್ಧತಾ ಪರೀಕ್ಷೆಗಳಿಗೆ ಸರಿಯಾಗಿ ಓದದ ಹಿನ್ನೆಲೆ ಪೋಷಕರು ಗದರಿಸಿದ್ದರಿಂದ ಬುಧವಾರ ರಾತ್ರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಪೊಲೀಸರಿಗೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಹೀಗಾಗಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ.

ಗುರುವಾರ ಬೆಳಗ್ಗೆ ಭೂಮಿಕಾಳ ಪೋಷಕರು ಅವಳನ್ನು ಎಬ್ಬಿಸಲು ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿಕ್ಕ. ಈ ವೇಳೆ ಕಿಟಕಿಯ ಮೂಲಕ ನೋಡಿದಾಗ ಆಕೆ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ | Viral Video: ನ್ಯಾಯಾಲಯದ ಹೊರಗೆ ಕಕ್ಷಿದಾರರಿಗೆ ಹಿಗ್ಗಾಮುಗ್ಗಾ ಥಳಿಸಿದ ವಕೀಲರು; ವಿಡಿಯೊ ನೋಡಿ

ಬೆಂಗಳೂರಲ್ಲಿ ನಡೀತು ಬೆಚ್ಚಿ ಬೀಳಿಸುವ ಘಟನೆ; ಕ್ಯಾಬ್‌ ಒಳಗೆ ನುಗ್ಗಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಂಗಳೂರು: ಸಿಲಿಕಾನ್‌ ಸಿಟಿ ಮಹಿಳೆಯರಿಗೆ ಸುರಕ್ಷಿತವಾಗಿದೆಯೇ? ಇಲ್ಲವೇ ಎಂಬ ಪ್ರಶ್ನೆ ಆಗಾಗ ಕೇಳಿ ಬರುತ್ತಿರುತ್ತದೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳುವಂತಹ ಘಟನೆಯೊಂದು ನಡೆದಿದ್ದು, ಅಪರಿಚಿತರಿಬ್ಬರು ಕ್ಯಾಬ್​ನಲ್ಲಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. (Bengaluru Horror)

ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಮ್ಮನಹಳ್ಳಿಯಿಂದ ವೈಟ್ ಫೀಲ್ಡ್‌ಗೆ ಊಬರ್ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಬಂದ ಕೂಡಲೇ ಹತ್ತಿ ಕುಳಿತಿದ್ದಾಳೆ. ಆಗ ಅಲ್ಲಿಗೆ ಬಂದ ಇಬ್ಬರು ಕಾಮುಕರು ಯುವತಿಯಿದ್ದ ಕಾರಿನೊಳಗೆ ನುಗ್ಗಿದ್ದಾರೆ ಭಯಗೊಂಡ ಯುವತಿ ಕಾರಿನಿಂದ ಇಳಿದು ಓಡಿದ್ದಾಳೆ. ಯುವತಿಯನ್ನು ಬಿಡದೇ ಬೆನ್ನಟ್ಟಿದ ಕಾಮುಕರು ಆಕೆಯನ್ನು ನೆಲಕ್ಕೆ ಬೀಳಿಸಿ ಯವತಿಯ ಎದೆಭಾಗ ಸ್ಪರ್ಶಿಸಿದ್ದಾರೆ, ಅಲ್ಲದೇ ಬಟ್ಟೆ ಬಿಚ್ಚಲು ಕೂಡ ಯತ್ನಿಸಿದ್ದಾರೆ. ಕೂಡಲೇ ಯುವತಿ ಜೋರಾಗಿ ಕಿರುಚಿಕೊಂಡಿದ್ದು , ಸಾರ್ವಜನಿಕರು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲೇ ಕಾಮುಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಈ ಬಗ್ಗೆ ಯುವತಿ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಯುವತಿ ದೂರಿನ ಮೇರೆಗೆ ಪೊಲೀಸರು ಬಿಎನ್ಎಸ್ ಸೆಕ್ಷನ್ 74 (ಮಹಿಳೆಯ ಗೌರವಕ್ಕೆ ಧಕ್ಕೆ) ಮತ್ತು 75 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ದೂರಿನ ಪ್ರಕಾರ ಅಪರಿಚಿತರು 20 ಅಥವಾ 30 ರ ವಯಸ್ಸಿವರಾಗಿದ್ದಾರೆ. ಇನ್ನು ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಆದ್ದರಿಂದ ನಾವು ಸುತ್ತಮುತ್ತಲಿನ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಕೀಚಕನೊಬ್ಬ ಮೂರು ವರ್ಷದ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ತನಗೆ ಪರಿಚಯವಿರುವ ಮಗುವಿಗೆ ಚಾಕೊಲೇಟ್ ನೀಡುವ ಆಸೆ ತೋರಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದ

ಈ ಸುದ್ದಿಯನ್ನೂ ಓದಿ : Chennai Horror: ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ; ಅಪ್ರಾಪ್ತರು ಸೇರಿ 6 ಆರೋಪಿಗಳು ಅರೆಸ್ಟ್

ಬಾಲಕಿ ಮನೆಯಿಂದ ಹೊರಗೆ ಆಟವಾಡುತ್ತಿದ್ದಾಗ ಆತ ಬಂದು ಚಾಕೊಲೇಟ್ ನೀಡುವುದಾಗಿ ಹೇಳಿದ್ದಾನೆ. ಆಗ ಮಗು ಆತನನ್ನು ನಂಬಿ ಹೋಗಿದೆ, ಆಗ ಪುಟ್ಟ ಮಗು ಎಂದೂ ನೋಡದೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಅತ್ಯಾಚಾರದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು ನಂತರ ಆರೋಪಿ ಸಿಕ್ಕಿ ಬಿದ್ದಿದ್ದ. ಬಳಿಕ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.