ಅಮೆಜಾನ್'ನೊಂದಿಗೆ ಕೊನೆಯ ಹಂತದ ಡೆಲಿವರಿ ಉದ್ಯಮ ನಿರ್ಮಿಸಿದ ಸೇನಾ ನಿವೃತ್ತ ಕ್ಯಾಪ್ಟನ್ ಮೃದುಮೊಯ್ ದತ್ತಾ
2007ರಲ್ಲಿ ಸೇವೆಯಿಂದ ನಿವೃತ್ತರಾದ ನಂತರ ಮೃದುಮೊಯ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಪೂರ್ಣ ಗೊಳಿಸಿ ಕಾರ್ಪೊರೇಟ್ ಜಗತ್ತಿಗೆ ಕಾಲಿರಿಸಿದರು. ಅವರ ಕಾರ್ಪೊರೇಟ್ ಜವಾಬ್ದಾರಿಯಲ್ಲಿ ಅವರು ಈಶಾನ್ಯ ಪ್ರದೇಶದಲ್ಲಿ ಸಂಕೀರ್ಣ, ಬಹು ಪಾಲುದಾರರ ಕಾರ್ಯಾಚರಣೆಯ ರೆಗ್ಯು ಲೇಟರಿ ಅಂಡ್ ನೋಡಲ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು
-
ಭಾರತವು ತನ್ನ 77ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶವು ತಮ್ಮ ಸೇವೆ ಮತ್ತು ನಾಯಕತ್ವದಿಂದ ದೇಶದ ಭದ್ರತೆ ಮತ್ತು ಸಂಸ್ಥೆಗಳನ್ನು ಸದೃಢ ಗೊಳಿಸಿದ ಸೇನಾ ನಿವೃತ್ತರ ಕೊಡುಗೆಗಳನ್ನು ಗುರುತಿಸುವ ಸಮಯವಾಗಿದೆ. ಸೇನೆಯಿಂದ ನಾಗರಿಕ ಬದುಕಿಗೆ ಪರಿವರ್ತನೆಯಾಗುವಾಗ ಮುಂದುವರಿದ ವೃತ್ತಿಪರ ಪ್ರಗತಿಗೆ ಅವರ ಕೌಶಲ್ಯ ಗಳನ್ನು ಗೌರವಿಸುವ ರಚನಾತ್ಮಕ ಎರಡನೆಯ ವೃತ್ತಿಯ ಅವಕಾಶಗಳ ಲಭ್ಯತೆ ಅಗತ್ಯ.
ಅಮೆಜಾನ್ ಇಂಡಿಯಾ ಸೇನಾ ನಿವೃತ್ತರಿಗೆ ಕಾರ್ಪೊರೇಟ್ ವೃತ್ತಿಗಳನ್ನು ರೂಪಿಸಿಕೊಳ್ಳಲು ಮತ್ತು ಉದ್ಯಮಶೀಲತೆಯನ್ನು ಕಂಡುಕೊಳ್ಳಲು `ಡೆಲಿವರಿ ಸರ್ವೀಸ್ ಪಾರ್ಟ್ನರ್’ (ಡಿ.ಎಸ್.ಪಿ) ರೀತಿಯ ಕಾರ್ಯಕ್ರಮಗಳ ಮೂಲಕ ಮಾರ್ಗಗಳನ್ನು ಸೃಷ್ಟಿಸಿ ಬೆಂಬಲಿಸು ತ್ತದೆ.
ಇದು ಅವರಿಗೆ ಈ ಕಾರ್ಯಕ್ರಮದ ಅಡಿಯಲ್ಲಿ ಕೊನೆಯ ಹಂತದ ಡೆಲಿವರಿ ಪಾಲುದಾರ ರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತದೆ. ಕ್ಯಾಪ್ಟನ್ ಮೃದುಮೊಯ್ ದತ್ತಾ (ನಿ.) ಅವರು ಇಟಾಶ್ ಡೆಲಿವರಿ ಟೆಕ್ನಾಲಜೀಸ್ ಸಂಸ್ಥಾಪಕರಾಗಿದ್ದು ಈ ಪರಿರ್ತನೆಯು ಈ ಬದ್ಧತೆಯ ಮುಂದುವರಿಕೆಯನ್ನು ಪ್ರತಿನಿಧಿಸುತ್ತಿದ್ದು ಮೊದಲ ಸಾಲನಿಂದ ಕೊನೆಯ ಹಂತದವರೆಗೆ ಅಮೆಜಾನ್ ಡೆಲಿವರಿ ಜಾಲದ ಸಹಯೋಗದಲ್ಲಿ ಸಮುದಾಯಗಳೊಂದಿಗೆ ಜವಾಬ್ದಾರಿ, ಸದೃಢತೆ ಮತ್ತು ಸಹಯೋಗದ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ
2002ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಮೃದುಮೊಯ್ ಅವರು 101 ಫೀಲ್ಡ್ ರೆಜಿಮೆಂಟ್ (ಎಸ್.ಪಿ.), ಆರ್ಟಿಲರಿ, ಪೂಂಛ್, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಮತ್ತು ಜಮ್ಮುವಿನಲ್ಲಿ ಸ್ವತಂತ್ರ ಸಶಸ್ತ್ರ ಸೇನಾಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
2007ರಲ್ಲಿ ಸೇವೆಯಿಂದ ನಿವೃತ್ತರಾದ ನಂತರ ಮೃದುಮೊಯ್ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಪೂರ್ಣಗೊಳಿಸಿ ಕಾರ್ಪೊರೇಟ್ ಜಗತ್ತಿಗೆ ಕಾಲಿರಿಸಿದರು. ಅವರ ಕಾರ್ಪೊರೇಟ್ ಜವಾಬ್ದಾರಿ ಯಲ್ಲಿ ಅವರು ಈಶಾನ್ಯ ಪ್ರದೇಶದಲ್ಲಿ ಸಂಕೀರ್ಣ, ಬಹು ಪಾಲುದಾರರ ಕಾರ್ಯಾಚರಣೆ ಯ ರೆಗ್ಯುಲೇಟರಿ ಅಂಡ್ ನೋಡಲ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು- ಈ ಅನುಭವ ಅವರಿಗೆ ಈ ಪ್ರದೇಶದಲ್ಲಿ ಲಾಜಿಸ್ಟಿಕ್ಸ್ ಸಾಮರ್ಥ್ಯಗಳನ್ನು ನಿರ್ಮಿಸಲು ನೆರವಾ ಯಿತು.
ಅಮೆಜಾನ್ ನೊಂದಿಗೆ ಮೃದುಮೊಯ್ ಅವರ ಉದ್ಯಮಶಿಲತೆಯ ಪ್ರಯಾಣ 2019ರಲ್ಲಿ ಅವರು ಅಮೆಜಾನ್ ಡೆಲಿವರಿ ಸರ್ವೀಸ್ ಪಾರ್ಟ್ನರ್ ಪ್ರೋಗ್ರಾಮ್ ಬೆಂಬಲಿತ ಇಟಾಶ್ ಡೆಲಿವರಿ ಟೆಕ್ನಾಲಜೀಸ್ ಪ್ರಾರಂಭಿಸುವುದರೊಂದಿಗೆ ಚಾಲನೆ ನೀಡಿದರು. ಗೌಹಾಟಿಯಲ್ಲಿ ಒಂದು ಡೆಲಿವರಿ ಸ್ಟೇಷನ್ ನಿಂದ ಇಟಾಶ್ ಈಶಾನ್ಯ ಮತ್ತು ಪೂರ್ವದ 18 ಡೆಲಿವರಿ ಸ್ಟೇಷನ್ ಗಳಿಗೆ ತಮ್ಮ ಡೆಲಿವರಿ ವಿಸ್ತರಿಸಿದರು. ಅದರಲ್ಲಿ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳಲ್ಲಿ ಅಮೆಜಾನ್ ಸಾರಿಗೆ ಮೊದಲ ಕಾರ್ಯಾಚರಣೆಗಳು ಒಳಗೊಂಡಿ ದ್ದವು. ತಮ್ಮ ಸೇನೆಯ ನಾಯಕತ್ವ ಮತ್ತು ಕಾರ್ಯಾಚರಣೆಯ ಕಠಿಣತೆಯಿಂದ ಸನ್ನದ್ಧ ರಾದ ಮೃದುಮೊಯ್ ಅವರು ಸ್ಥಳೀಯ ಜೀವನೋಪಾಯಗಳಿಗೆ ಬೆಂಬಲಿಸುವ ಡೆಲಿವರಿ ಜಾಲ ನಿರ್ಮಿಸಿದರು ಮತ್ತು ಸಂಕೀರ್ಣ ಭೌಗೋಳಿಕತೆಗಳಲ್ಲಿ ವಿಶ್ವಾಸಾರ್ಹ ಕೊನೆಯ ಹಂತದ ಲಭ್ಯತೆ ಸಾಧ್ಯವಾಗಿಸಿದರು.
“ಸೇನೆಯಂತೆಯೇ ಈ ಕಾರ್ಯಾಚರಣೆಗಳು ಶಿಸ್ತು, ಯೋಜನೆ ಮತ್ತು ಜನರನ್ನು ಒಳಗೊಂಡಿದ್ದವು. ಅಮೆಜಾನ್ ನ ಡೆಲಿವರಿ ಸರ್ವೀಸ್ ಪಾರ್ಟ್ನರ್ ಪ್ರೋಗ್ರಾಮ್ ಮೂಲಕ ನಾವು ಸ್ವತಂತ್ರ ಉದ್ಯಮಶೀಲತೆಯ ಅವಕಾಶ ಪಡೆದಿದ್ದು ಇದರಲ್ಲಿ ನಾನು ಉದ್ಯಮ ನಿರ್ಮಿಸುವ, ಸ್ಥಳೀಯ ಅವಕಾಶಗಳನ್ನು ಸೃಷ್ಟಿಸುವ ಮತ್ತು ಸವಾಲಿನ ಪ್ರದೇಶಗಳಲ್ಲೂ ಕೊನೆಯ ಹಂತದ ಮೂಲಸೌಕರ್ಯ ಸದೃಢಗಳಿಸುವ ಮೌಲ್ಯಗಳನ್ನು ನಾನು ದೊಡ್ಡ ಪ್ರಮಾಣದಲ್ಲಿ ಅಳವಡಿಸಬಹುದಾಗಿದೆ” ಎಂದು ಮೃದುಮೊಯ್ ಹೇಳಿದರು. ಅವರ ಪ್ರಯಾಣವು ಹೇಗೆ ಉದ್ಯೋಗದ ಅವಕಾಶಗಳು ಮತ್ತು ಉದ್ಯಮಶಿಲತೆಯ ಕಾರ್ಯಕ್ರಮ ಗಳು ಸೇನಾ ನಿವೃತ್ತರಿಗೆ ಸೇನಾ ನಾಯಕತ್ವವನ್ನು ಮತ್ತು ಕಾರ್ಯಾಚರಣೆಯ ಅನುಭವ ವನ್ನು ಸುಸ್ಥಿರ ನಾಗರಿ ಉದ್ಯಮಗಳಾಗಿ ಪರಿವರ್ತಿಸುತ್ತವೆ ಎಂದು ತೋರಿದೆ.
ಅಮೆಜಾನ್ ತನ್ನ ಮಿಲಿಟರಿ ಪ್ರೋಗ್ರಾಮ್ ಮೂಲಕ ಸೇನಾ ನಿವೃತ್ತರಿಗೆ ಬೆಂಬಲಿಸುತ್ತಿದ್ದು ಡೈರೆಕ್ಟರ್ ಜನರಲ್ ಆಫ್ ರೀಸೆಟ್ಲ್ ಮೆಂಟ್ (ಡಿಜಿಆರ್), ಆರ್ಮಿ ವೆಲ್ಫೇರ್ ಪ್ಲೇಸ್ಮೆಂಟ್ ಆರ್ಗನೈಸೇಷನ್ (ಎ.ಡಬ್ಲ್ಯೂ.ಪಿ.ಡಿ.), ಇಂಡಿಯನ್ ನೇವಲ್ ಪ್ಲೇಸ್ಮೆಂಟ್ ಏಜೆನ್ಸಿ (ಐ.ಎನ್.ಪಿ.ಎ), ಇಂಡಿಯನ್ ಏರ್ ಫೋರ್ಸ್ ಪ್ಲೇಸ್ಮೆಂಟ್ ಏಜೆನ್ಸಿ (ಐ.ಎ.ಎಫ್.ಪಿ.ಎ) ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಜೊತೆಯಲ್ಲಿ ಸಹಯೋಗದ ಮೂಲಕ ಸೇನಾ ನಿವೃತ್ತರು, ಸೈನಿಕರ ಪತ್ನಿಯರು ಮತ್ತು ಯುದ್ಧದಲ್ಲಿ ಮಡಿದವರ ಪತ್ನಿಯರಿಗೆ ಅರ್ಥಪೂರ್ಣ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಅಮೆಜಾನ್ ಬಿಸಿನೆಸ್ ಗಳಲ್ಲಿ ನೀಡುತ್ತಿದೆ.