80 ಸಾವಿರಕ್ಕೂ ಹೆಚ್ಚು ಡೆಲಿವರಿ ಅಸೋಸಿಯೇಟ್ ಗಳು ಮತ್ತು ಟ್ರಕ್ ಚಾಲಕರಿಗೆ ರಸ್ತೆ ಸುರಕ್ಷತೆಯ ತರಬೇತಿ ಕಾರ್ಯಾಗಾರಗಳಿಗೆ ಚಾಲನೆ
ಅಮೆಜಾನ್ ಇಂಡಿಯಾದ ಡೈರೆಕ್ಟರ್ ಆಫ್ ಆಪರೇಷನ್ಸ್ ಸಲೀಮ್ ಮೆಮೊನ್, “ನಮ್ಮ ಉದ್ಯೋ ಗಿಗಳು ಮತ್ತು ಡೆಲಿವರಿ ಪಾಲುದಾರರ ಸುರಕ್ಷತೆಯು ಪ್ರತಿನಿತ್ಯ ನಾವು ಹೇಗೆ ಕಾರ್ಯಾಚರಿಸು ತ್ತೇವೆ ಎನ್ನುವುದರ ಮೂಲಭೂತ ಅಂಶವಾಗಿದೆ. ರಸ್ತೆ ಸುರಕ್ಷತೆಯು ನಮ್ಮ ತರಬೇತಿ, ಪ್ರಕ್ರಿಯೆ ಗಳು ಮತ್ತು ಸ್ಥಳದಲ್ಲಿನ ರೂಢಿಗಳಲ್ಲಿ ಆಳವಾಗಿ ಬೇರೂರಿದೆ.
-
ನವದೆಹಲಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಅಮೆಜಾನ್ ಇಂಡಿಯಾ ತನ್ನ ಕಾರ್ಯಾಚರಣೆಗಳ ಜಾಲದ 80 ಸಾವಿರಕ್ಕೂ ಹೆಚ್ಚು ಡೆಲಿವರಿ ಅಸೋಸಿಯೇಟ್ಸ್, ಪಾಲು ದಾರರು ಮತ್ತು ಟ್ರಕ್ ಚಾಲಕರಿಗೆ ಬಹು ನಗರಗಳ ರಸ್ತೆ ಸುರಕ್ಷತಾ ಅರಿವು ಮತ್ತು ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿದೆ. ಈ ಉಪಕ್ರಮವು ದೇಶಾದ್ಯಂತ ಸುರಕ್ಷಿತ ಚಾಲನೆ ಯ ರೂಢಿಗಳು ಹಾಗೂ ಕೊನೆಯ ಹಂತದ ಜವಾಬ್ದಾರಿಯುತ ರಸ್ತೆ ವರ್ತನೆ ಮತ್ತು ಮಧ್ಯ ಹಂತದ ಕಾರ್ಯಾಚರಣೆಗಳಿಗೆ ಅಮೆಜಾನ್ ಆದ್ಯತಯನ್ನು ಮರು ದೃಢೀ ಕರಿಸುತ್ತದೆ.
ಅಮೆಜಾನ್ ಇಂಡಿಯಾದ ಡೈರೆಕ್ಟರ್ ಆಫ್ ಆಪರೇಷನ್ಸ್ ಸಲೀಮ್ ಮೆಮೊನ್, “ನಮ್ಮ ಉದ್ಯೋಗಿಗಳು ಮತ್ತು ಡೆಲಿವರಿ ಪಾಲುದಾರರ ಸುರಕ್ಷತೆಯು ಪ್ರತಿನಿತ್ಯ ನಾವು ಹೇಗೆ ಕಾರ್ಯಾಚರಿಸುತ್ತೇವೆ ಎನ್ನುವುದರ ಮೂಲಭೂತ ಅಂಶವಾಗಿದೆ. ರಸ್ತೆ ಸುರಕ್ಷತೆಯು ನಮ್ಮ ತರಬೇತಿ, ಪ್ರಕ್ರಿಯೆಗಳು ಮತ್ತು ಸ್ಥಳದಲ್ಲಿನ ರೂಢಿಗಳಲ್ಲಿ ಆಳವಾಗಿ ಬೇರೂರಿದೆ.
ನಿಯಮಿತ, ಪ್ರಾಯೋಗಿಕ ತರಬೇತಿ ಮತ್ತು ರಿಯಲ್-ವರ್ಲ್ಡ್ ಕಲಿಕೆಯಿಂದ ನಾವು ನಮ್ಮ ಡೆಲಿವರಿ ಅಸೋಸಿಯೇಟ್ ಗಳಿಗೆ ಮತ್ತು ಚಾಲಕರಿಗೆ ಪ್ರತಿನಿತ್ಯದ ರಸ್ತೆಯ ಪರಿಸ್ಥಿತಿಗಳಲ್ಲಿ ಸುರಕ್ಷಿತವಾಗಿ ಸಂಚರಿಸಲು ಸನ್ನದ್ಧಗೊಳಿಸುತ್ತೇವೆ. ಸತತವಾಗಿ ಜವಾಬ್ದಾರಿಯುತ ವರ್ತನೆ ಯನ್ನು ಮರು ದೃಢೀಕರಿಸುವ ಮತ್ತು ಸುರಕ್ಷತೆಯ ಗೇರ್ ನ ಸರಿಯಾದ ಬಳಕೆಯ ಮೂಲಕ ನಾವು ನಮ್ಮ ಲಾಜಿಸ್ಟಿಕ್ಸ್ ಜಾಲದಲ್ಲಿ ಸುರಕ್ಷತೆಯ ಮಾನದಂಡಗಳನ್ನು ಸದೃಢ ಗೊಳಿಸುವುದಲ್ಲದೆ ನಾವು ಸೇವೆ ಒದಗಿಸುವ ಸಮುದಾಯಗಳಿಗೆ ಸುರಕ್ಷಿತ ರಸ್ತೆಗಳಿಗೆ ಕೊಡುಗೆ ನೀಡುತ್ತೇವೆ” ಎಂದರು.
ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ
ಒಂದು ತಿಂಗಳು ನಡೆಯುವ ಈ ಉಪಕ್ರಮವು ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಬಳಕೆ, ಸುರಕ್ಷಿತ ರೈಡಿಂಗ್ ಮತ್ತು ಚಾಲನೆ, ವೇಗ ನಿರ್ವಹಣೆ, ಅಡೆತಡೆ ನಿವಾರಣೆ ಮತ್ತು ತುರ್ತು ಸನ್ನದ್ಧತೆ ಒಳಗೊಂಡು ಕಡ್ಡಾಯ ಸ್ಥಳದಲ್ಲಿನ ತರಬೇತಿ ಒಳಗೊಂಡಿರುತ್ತದೆ. ಪ್ರಾಯೋಗಿಕ ಅಭ್ಯಾಸಗಳಲ್ಲಿ ಲೇನ್ ಶಿಸ್ತು, ಸೈನೇಜ್ ಅರಿವು, ಸುರಕ್ಷಿತ ವಾಹನದ ದೂರ ಮತ್ತು ಹೈಡ್ರೇಷನ್ ಬಿಡುವುಗಳು ಮತ್ತು `ಫೋನ್ ಅವೇ ಬಿಫೋರ್ ಇಗ್ನಿಷನ್’ ನಂತಹ ಸರಳ ರೂಢಿಗಳಿರುತ್ತವೆ.
ಈ ಪ್ರಯತ್ನಗಳು ಕ್ರಿಯಾತ್ಮಕ ಕ್ರಮಗಳಾದ `ನೋ ಹೆಲ್ಮೆಟ್, ನೋ ರೈಡ್’ ಚಾಲನೆಗಳು, ಹೆಲ್ಮೆಟ್ ಪರೀಕ್ಷೆಗಳು, ಪ್ರಿ-ರೈಡ್ ಚೆಕ್ ಗಳು, ಅತ್ಯುತ್ತಮ ರೂಢಿಗಳ ಸಹೋದ್ಯೋಗಿಗಳ ಪ್ರಾತ್ಯಕ್ಷಿಕೆಗಳು ಮತ್ತು ನೂರಾರು ಅಸೋಸಿಯೇಟ್ ಗಳಿಗೆ ಐ.ಎಸ್.ಐ. ಗುರುತಿನ ಹೆಲ್ಮೆಟ್ ಗಳ ವಿತರಣೆ ಒಳಗೊಂಡಿರುತ್ತದೆ.
ಅಮೆಜಾನ್ ಸುಸ್ಥಿರ ಅರಿವಿನ ಪ್ರಯತ್ನಗಳು ಮತ್ತು ತಂತ್ರಜ್ಞಾನ-ಪ್ರೇರಿತ ಸುರಕ್ಷತೆಯ ಪರಿಹಾರಗಳನ್ನು ಅನುಷ್ಠಾನಗೊಳಿಸುವುದನ್ನು ಮುಂದುವರಿಸುತ್ತಿದ್ದು ಅದರಲ್ಲಿ ಹೊರಡುವ ಮುನ್ನ ವಾಹನದ ಪರೀಕ್ಷೆಗಳು, ಹೆಲ್ಮೆಟ್ ಧರಿಸುವುದನ್ನು ಗಮನಿಸುವುದು, ರಿಯಲ್-ಟೈಮ್ ಸ್ಪೀಡಿಂಗ್ ಅಲರ್ಟ್ ಗಳು, ಮನೆಬಾಗಿಲಿನ ಸೇಫ್ಟಿ ಪ್ರಾಂಪ್ಟ್ ಗಳು ಮತ್ತು ತುರ್ತು ಸಂದರ್ಭಗಳಲ್ಲಿ ಮೂರನೇ ವ್ಯಕ್ತಿಯ ಆಂಬುಲೆನ್ಸ್ ಸೇವೆಗಳ ತಕ್ಷಣ ಲಭ್ಯತೆ ಒಳಗೊಂಡಿರುತ್ತದೆ.
ಒಟ್ಟಿಗೆ ಈ ಕ್ರಮಗಳು ಸುರಕ್ಷಿತ ಸಮುದಾಯಗಳಿಗೆ ಬೆಂಬಲಿಸುವುದರೊಂದಿಗೆ ಕಾರ್ಯಾ ಚರಣೆಗಳಲ್ಲಿ ಸುರಕ್ಷತೆ-ಪ್ರಥಮ ಸಂಸ್ಕೃತಿಯನ್ನು ತರುವ ಉದ್ದೇಶ ಹೊಂದಿದೆ.