ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ: ಶಂಕರ್ ರಾಮ್

ಭಾರತದ ಮುಂಚೂಣಿಯ ಸ್ಪ್ರಿಂಗ್ ಮ್ಯಾಟ್ರೆಸ್ ಮತ್ತು ಸ್ಲೀಪ್ ಸೊಲ್ಯೂಷನ್ಸ್ ಬ್ರ್ಯಾಂಡ್ ಆಗಿರುವ ಪೆಪ್ಸ್ ಇಂಡಸ್ಟ್ರೀಸ್ ಸಂಸ್ಥೆಯು ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯ ಮಾಚೋಹಳ್ಳಿ ಕ್ರಾಸ್‌ ನಲ್ಲಿ ತನ್ನ 134ನೇ ಗ್ರೇಟ್ ಸ್ಲೀಪ್ ಸ್ಟೋರ್ ಮಳಿಗೆಯನ್ನು ಅದ್ಧೂರಿಯಾಗಿ ಲೋಕಾರ್ಪಣೆ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ರಿಟೇಲ್ ವ್ಯಾಪಾರ ಜಾಲವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ

-

Profile
Ashok Nayak Jun 7, 2026 10:30 PM

ಬೆಂಗಳೂರು: ಭಾರತದ ಮುಂಚೂಣಿಯ ಸ್ಪ್ರಿಂಗ್ ಮ್ಯಾಟ್ರೆಸ್ ಮತ್ತು ಸ್ಲೀಪ್ ಸೊಲ್ಯೂಷನ್ಸ್ ಬ್ರ್ಯಾಂಡ್ ಆಗಿರುವ ಪೆಪ್ಸ್ ಇಂಡಸ್ಟ್ರೀಸ್ ಸಂಸ್ಥೆಯು ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯ ಮಾಚೋಹಳ್ಳಿ ಕ್ರಾಸ್‌ ನಲ್ಲಿ ತನ್ನ 134ನೇ ಗ್ರೇಟ್ ಸ್ಲೀಪ್ ಸ್ಟೋರ್ ಮಳಿಗೆಯನ್ನು ಅದ್ಧೂರಿಯಾಗಿ ಲೋಕಾರ್ಪಣೆ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ರಿಟೇಲ್ ವ್ಯಾಪಾರ ಜಾಲವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಪೆಪ್ಸ್ ಇಂಡಸ್ಟ್ರೀಸ್‌ ನ ವ್ಯವಸ್ಥಾಪಕ ನಿರ್ದೇಶಕ ಜಿ. ಶಂಕರ್ ರಾಮ್ ಅವರ ಸಮ್ಮುಖದಲ್ಲಿ ಈ ಹೊಸ ಮಳಿಗೆಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾದ ಸಮಾಜ ಸೇವಕ ಶ್ರೀ ಎಚ್.ಎಂ. ಕೃಷ್ಣಮೂರ್ತಿ ಮತ್ತು ಎಚ್.ಬಿ. ಪ್ಲೈವುಡ್ಸ್‌ ನ ಮಾಲೀಕರು ಹಾಗೂ ಸಮಾಜ ಸೇವಕರಾದ ಶ್ರೀ ಎಚ್.ಬಿ. ಬೋರೇಗೌಡ್ರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಇದನ್ನೂ ಓದಿ: Bangalore News: ಮಾನ್ಯತೆ ಇಲ್ಲದೆ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭಿಸಿದ ಶಾಲೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಎಚ್ಚರಿಕೆ

ಈ ಭಾಗದ ಗ್ರಾಹಕರಿಗೆ ಪ್ರೀಮಿಯಂ ಹಾಗೂ ಸುಧಾರಿತ ತಂತ್ರಜ್ಞಾನ ಆಧಾರಿತ ನಿದ್ರಾ ಉತ್ಪನ್ನ ಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಈ ನೂತನ ಎಕ್ಸ್‌ ಕ್ಲೂಸಿವ್ ಶೋರೂಂ ಅನ್ನು ಆರಂಭಿಸಲಾಗಿದೆ.

Pep 2

ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಪೆಪ್ಸ್ ಇಂಡಸ್ಟ್ರೀಸ್‌ ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಜಿ. ಶಂಕರ್ ರಾಮ್ ಅವರು, "ಗುಣಮಟ್ಟದ ನಿದ್ರಾ ಉತ್ಪನ್ನಗಳನ್ನು ಒದಗಿಸುವಲ್ಲಿ ನಾವು ಯಶಸ್ವಿ ಯಾಗಿ ಎರಡು ದಶಕಗಳನ್ನು ಪೂರೈಸಿದ್ದೇವೆ. ಈ ಸಂಭ್ರಮದ ಸಂದರ್ಭದಲ್ಲಿ ಬೆಂಗಳೂರಿನ ಪ್ರಮುಖ ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಕರ್ನಾಟಕವು ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದ್ದು, ಈ ಹೊಸ ಮಳಿಗೆಯ ಮೂಲಕ ನಮ್ಮ ನವೀನ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯವಾಗಲಿದೆ" ಮುಂ ದುವರಿಸಿದ ಅವರು, "ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ." ಆದ್ದರಿಂದ, ಇಂದು ಕೆಲಸದ ಒತ್ತಡದಲ್ಲಿರುವವರಿಗೆ ಒಳ್ಳೆಯ ನಿದ್ರೆ ಮುಖ್ಯ, ವಿಶ್ರಾಂತಿಯ ನಿದ್ರೆಗೆ ಒಳ್ಳೆಯ ಹಾಸಿಗೆ ಅತ್ಯಗತ್ಯ. ಎಂದು ಹೇಳಿದರು.