ಅತ್ಯುತ್ತಮ ಲಾಭದಾಯಕತೆ ಒದಗಿಸುವ ಹೊಚ್ಚ ಹೊಸ LPT 812 ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
ಫ್ಯಾಕ್ಟರಿಯಲ್ಲಿ ಅಳವಡಿಸಲಾದ ಏರ್-ಕಂಡಿಷನಿಂಗ್ ಹೊಂದಿರುವ LPT 812 ವಾಹನವು 5- ಟನ್ ತೂಕ ಹೊರುವ ಸಾಮರ್ಥ್ಯವನ್ನು ಹೊಂದಿರುವ ಭಾರತದ ಮೊದಲ 4-ಟೈರ್ ಟ್ರಕ್ ಆಗಿದೆ. ಇದು ಅತಿ ಹೆಚ್ಚು ತೂಕ ಹೊರುವ ಸಾಮರ್ಥ್ಯವನ್ನು ಹೊಂದಿದ್ದು, ನಗರದ ಸರಕು ಸಾಗಾಣಿಕೆ ಸುಲಭ ವಾಗಿ ನಡೆಯುವಂತೆ ನೋಡಿಕೊಳ್ಳಲಿದೆ.

-

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇಂದು ಇಂಟರ್‌ಮೀಡಿಯೇಟ್, ಲೈಟ್ ಆಂಡ್ ಮೀಡಿಯಂ ಕಮರ್ಷಿಯಲ್ ವೆಹಿಕಲ್ಸ್ (ಐಎಲ್ಎಂಸಿವಿ) ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಡಲಿರುವ ತನ್ನ ಹೊಚ್ಚ ಹೊಸ ವಾಹನ LPT 812 ಅನ್ನು ಬಿಡುಗಡೆ ಮಾಡಿದೆ.
ಹೆಚ್ಚಿನ ತೂಕ ಹೊರುವ ಸಾಮರ್ಥ್ಯ, ಅತ್ಯುತ್ತಮ ಕಾರ್ಯಾಚರಣೆ ದಕ್ಷತೆ ಒದಗಿಸುವ ಈ ಟಾಟಾ LPT 812 ವಾಹನವನ್ನು ಒಟ್ಟು ವೆಚ್ಚದಲ್ಲಿ ಉಳಿತಾಯ ಆಗುವಂತೆ ಮತ್ತು ಆ ಮೂಲಕ ವಾಹನ ಮಾಲೀಕರಿಗೆ ಉತ್ತಮ ಲಾಭ ದೊರೆಯುವಂತೆ ವಿನ್ಯಾಸಗೊಳಿಸಲಾಗಿದೆ.
ಫ್ಯಾಕ್ಟರಿಯಲ್ಲಿ ಅಳವಡಿಸಲಾದ ಏರ್-ಕಂಡಿಷನಿಂಗ್ ಹೊಂದಿರುವ LPT 812 ವಾಹನವು 5- ಟನ್ ತೂಕ ಹೊರುವ ಸಾಮರ್ಥ್ಯವನ್ನು ಹೊಂದಿರುವ ಭಾರತದ ಮೊದಲ 4-ಟೈರ್ ಟ್ರಕ್ ಆಗಿದೆ. ಇದು ಅತಿ ಹೆಚ್ಚು ತೂಕ ಹೊರುವ ಸಾಮರ್ಥ್ಯವನ್ನು ಹೊಂದಿದ್ದು, ನಗರದ ಸರಕು ಸಾಗಾಣಿಕೆ ಸುಲಭ ವಾಗಿ ನಡೆಯುವಂತೆ ನೋಡಿಕೊಳ್ಳಲಿದೆ. ಟಾಟಾ ಮೋಟಾರ್ಸ್ ನ ಪಾರಂಪರಿಕ ಎಲ್‌ಪಿಟಿ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಿತವಾಗಿರುವ ಈ ವಾಹನವು 6 ಟೈರ್ ವಾಹನದ ದೃಢತೆಯನ್ನು 4 ಟೈರ್ ಟ್ರಕ್‌ನಲ್ಲಿಯೇ ಒದಗಿಸುತ್ತದೆ. ಜೊತೆಗೆ ಅತ್ಯುತ್ತಮ ದಕ್ಷತೆ, ಚುರುಕುತನ ಮತ್ತು ಕಡಿಮೆ ನಿರ್ವಹಣಾ ಸಾಮರ್ಥ್ಯ ಹೊಂದಿದೆ. ಬಹುವಿಧದ ಲೋಡ್ ಬಾಡಿ ಆಯ್ಕೆಗಳೊಂದಿಗೆ ಲಭ್ಯವಿರುವ ಈ ವಾಹನವು ಕೈಗಾರಿಕಾ ಸರಕುಗಳು, ಮಾರುಕಟ್ಟೆ ಲೋಡ್, ಹಣ್ಣು ಮತ್ತು ತರಕಾರಿಗಳು, ಕೊರಿಯರ್ ಸೇವೆಗಳು ಸೇರಿದಂತೆ ವಿವಿಧ ರೀತಿಯ ಕಾರ್ಯಗಳಿಗೆ ಒದಗಿ ಬರುತ್ತದೆ.
ಇದನ್ನೂ ಓದಿ: Marilinga Gowda Mali Patil Column: ಮಾಹಿತಿ ಹಕ್ಕು ಕಾಯಿದೆ ಎಂದರೆ ಭ್ರಷ್ಟರಿಗೆ ಭಯವೇಕೆ...?
ಈ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಟ್ರಕ್ಸ್ ವಿಭಾಗದ ವೈಸ್ ಪ್ರೆಸಿಡೆಂಟ್ ಮತ್ತು ಬಿಸಿನೆಸ್ ಹೆಡ್ ಆದ ಶ್ರೀ ರಾಜೇಶ್ ಕೌಲ್ ಅವರು, “ಟಾಟಾ LPT 812 ವಾಹನವು ಗ್ರಾಹಕರಿಗೆ ಲಾಭದಾಯಕತೆ ಒದಗಿಸುವ ವಿಚಾರದಲ್ಲಿ ಈ ವಿಭಾಗದಲ್ಲಿಯೇ ಹೊಸ ಮಾನದಂಡವನ್ನು ಹಾಕಿಕೊಡಲಿದೆ. ಈ ವಿಭಾಗದಲ್ಲಿ ಸಂಚಲನ ಉಂಟು ಮಾಡಲಿರುವ ಈ ಟ್ರಕ್, ಉತ್ಪಾದಕತೆ ಹೆಚ್ಚಿಸುವ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ. ಜೊತೆಗೆ ಉತ್ತಮ ಇಂಧನ ದಕ್ಷತೆ, ಸುಲಭ ಕಾರ್ಯಾಚರಣಾ ವ್ಯವಸ್ಥೆ ಮತ್ತು ಗರಿಷ್ಠ ಪ್ರಯೋಜನವನ್ನು ಒದಗಿಸುತ್ತದೆ. ಈ ವಾಹನವು ಮಾರುಕಟ್ಟೆಯ ಅಗತ್ಯಗಳನ್ನು ಅರ್ಥಮಾಡಿಕೊಂಡು, ಗ್ರಾಹಕರಿಗೆ ದೀರ್ಘಾವಧಿಯ ವ್ಯಾಪಾರ ಬೆಳವಣಿಗೆಗೆ ನೆರವಾಗುವ ಉತ್ತಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಅತ್ಯುತ್ತಮವಾದ 4SPCR ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿರುವ ಟಾಟಾ LPT 812 ವಾಹನವು, 125 ಎಚ್ ಪಿ ಮತ್ತು 360ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಈ ಟ್ರಕ್ ಉತ್ತಮ ಕಾರ್ಯಕ್ಷಮತೆಯನ್ನು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಮಿಳಿತಗೊಳಿಸಿದೆ. 5-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಬೂಸ್ಟರ್-ಅಸಿಸ್ಟೆಡ್ ಕ್ಲಚ್ ಹೊಂದಿದ್ದು, ಈ ಮೂಲಕ ಸುಗಮವಾಗಿ ಗೇರ್‌ಶಿಫ್ಟ್ ಗಳನ್ನು ಮಾಡಲು ಮತ್ತು ಚಾಲಕನ ಆಯಾಸವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಈ ವಾಹನದಲ್ಲಿ ಸುಧಾರಿತ ಬ್ರೇಕಿಂಗ್ ಮತ್ತು ಭಾರೀ ಡ್ಯೂಟಿ ರೇಡಿಯಲ್ ಟೈರ್ ಗಳನ್ನು ಒದಗಿಸಲಾಗಿದ್ದು, ಇದು ಭಾರವಾದ ಲೋಡ್ ಗಳನ್ನು ಸುಲಭವಾಗಿ ಸಾಗಿಸಲು ಸಹಾಯ ಮಾಡುತ್ತದೆ.
ಅತ್ಯುತ್ತಮ ಆರಾಮದಾಯಕತೆ ಹೊಂದಲು ಮತ್ತು ಉತ್ತಮ ನಿರ್ವಹಣೆ ಮಾಡಲು ಈ ಟ್ರಕ್, ಪ್ಯಾರಾಬೋಲಿಕ್ ಫ್ರಂಟ್ ಸಸ್ಪೆನ್ಷನ್ ವಿತ್ ಆಂಟಿ-ರೋಲ್ ಬಾರ್, ಫುಲ್ ಎಸ್-ಕ್ಯಾಮ್ ಏರ್ ಬ್ರೇಕ್ ಗಳು ಮತ್ತು ಟಿಲ್ಟ್ & ಟೆಲಿಸ್ಕೋಪಿಕ್ ಪವರ್ ಸ್ಟೀರಿಂಗ್ ನೊಂದಿಗೆ ಬರುತ್ತದೆ. 3- ವರ್ಷ/ 3 ಲಕ್ಷ ಕಿಮೀ ವಾರಂಟಿ ಲಭ್ಯವಿದ್ದು, LPT 812 ದೀರ್ಘಾವಧಿಯ ವಿಶ್ವಾಸಾರ್ಹತೆ, ಮಾನಸಿಕ ಶಾಂತಿ ಒದಗಿಸಲಿದೆ. ವಾಹನ ಮಾಲೀಕರಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.
ಟಾಟಾ ಮೋಟಾರ್ಸ್ 4-19 ಟನ್ ಗಳ ಜಿವಿಡಬ್ಲ್ಯೂ ನೊಂದಿಗೆ ಐಎಲ್ಎಂಸಿವಿ ವಿಭಾಗದಲ್ಲಿ ವಿಶಾಲವಾದ ಉತ್ಪನ್ನಗಳ ಶ್ರೇಣಿಯನ್ನು ಒದಗಿಸುತ್ತದೆ. ಈ ವಾಹನಗಳನ್ನು ಗಟ್ಟಿಮುಟ್ಟಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಗ್ರಾಹಕರ ವಿವಿಧ ಅಗತ್ಯಗಳಿಗೆ ತಕ್ಕಂತೆ ಕಠಿಣ ಪರೀಕ್ಷೆಗೆ ಒಳಪಡಿಸ ಲಾಗುತ್ತದೆ. ಸಂಪೂರ್ಣ ಸೇವಾ 2.0 ಯೋಜನೆಯ ಮೂಲಕ ವಾಹನದ ಜೀವನಚಕ್ರ ನಿರ್ವಹಣೆಗೆ ಮೌಲ್ಯವರ್ಧಿತ ಸೇವೆಗಳ ಶ್ರೇಣಿಯನ್ನು ಒದಗಿಸಲಾಗುತ್ತದೆ.
ಫ್ಲೀಟ್ ಎಡ್ಜ್ ಬಳಸಿಕೊಂಡು ಟಾಟಾ ಮೋಟಾರ್ಸ್ ವಾಹನವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಆಪರೇಟರ್ ಗಳು ವಾಹನದ ಉಪಯೋಗ ವನ್ನು ಗರಿಷ್ಠಗೊಳಿಸಬಹುದು ಮತ್ತು ಒಟ್ಟಾರೆ ವೆಚ್ಚವನ್ನು ಕಡಿಮೆಗೊಳಿಸಬಹುದು. ಭಾರತದ 3200ಕ್ಕೂ ಹೆಚ್ಚು ಸೇವಾ ಟಚ್ ಪಾಯಿಂಟ್ ಗಳ 24x7 ಬೆಂಬಲದೊಂದಿಗೆ ಟಾಟಾ ಮೋಟಾರ್ಸ್ ತನ್ನ ವಾಹನಗಳಿಗೆ ಗರಿಷ್ಠ ಉಪಯೋಗ ದೊರೆಯುವಂತೆ ಮಾಡುತ್ತದೆ.