ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದು ಡಿಕೆ, ರೈತ ʼಸಮಾಧಾನʼ ಸಭೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ವಿವಿಧ ರೈತ ಸಂಘಟನೆಗಳ ನಡುವೆ ಸೋಮವಾರ ಬೆಳಗಾವಿಯ ಸುವರ್ಣಸೌಧ ದಲ್ಲಿ ಮಹತ್ವದ ಸಂಧಾನ ಸಭೆ ನಡೆಯಲಿದೆ. ಕಬ್ಬು ಬೆಳೆಗಾರರ ಪರ ರೈತ ನಾಯಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಈ ಸಭೆ ವಿಫಲವಾದರೆ ಅ.27ಕ್ಕೆ ಬಂದ್ ನಡೆಸುವುದಾಗಿ ರೈತ ನಾಯಕರು ಹೇಳಿದ್ದಾರೆ.

ಇಂದು ಡಿಕೆ, ರೈತ ʼಸಮಾಧಾನʼ ಸಭೆ

-

Profile
Ashok Nayak Oct 26, 2026 9:05 AM

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಮತ್ತು ವಿವಿಧ ರೈತ ಸಂಘಟನೆಗಳ ನಡುವೆ ಸೋಮವಾರ ಬೆಳಗಾವಿಯ ಸುವರ್ಣಸೌಧ ದಲ್ಲಿ ಮಹತ್ವದ ಸಂಧಾನ ಸಭೆ ನಡೆಯಲಿದೆ. ಕಬ್ಬು ಬೆಳೆಗಾರರ ಪರ ರೈತ ನಾಯಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಈ ಸಭೆ ವಿಫಲವಾದರೆ ಅ.27ಕ್ಕೆ ಬಂದ್ ನಡೆಸುವುದಾಗಿ ರೈತ ನಾಯಕರು ಹೇಳಿದ್ದಾರೆ.

ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದಿದ್ದ ಕಬ್ಬು ಹೋರಾಟಗಾರರು, ನಂತರ ಬೆಳಗಾವಿ ಯಿಂದ ಹುಬ್ಬಳ್ಳಿಗೆ ಪಾದಯಾತ್ರೆ ನಡೆಸಿದ್ದರು. ಯಾತ್ರೆ ಧಾರವಾಡದಲ್ಲಿದ್ದಾಗ ಮುಖ್ಯಮಂತ್ರಿಯ ಮನವಿಯಂತೆ ಹೋರಾಟವನ್ನು ತಾತ್ಕಾಲಿಕ ವಾಗಿ ಮುಂದೂಡಲಾಗಿತ್ತು. ಶಿವಕುಮಾರ್ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಕಾರ್ಖಾನೆ ಮಾಲೀಕರು, ರೈತ ಮುಖಂಡ ರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: Sugarcane farmers protest: ಕಬ್ಬಿಗೆ ₹5,500 ದರಕ್ಕೆ ಪಟ್ಟು; ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಕೆ: ಹೆದ್ದಾರಿ ಮೇಲೆಯೇ ಅನ್ನದಾತರ ಊಟ

ಈ ಸಭೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಎದುರಿಸುತ್ತಿರುವ ಸವಾಲು, ಪರಿಹಾರದ ಬಗ್ಗೆ ಚರ್ಚೆ ನಡೆಯಲಿದೆ. ಆದರೆ ರೈತರು ನೇರವಾಗಿ ಕೇಂದ್ರ ಸರ್ಕಾರಕ್ಕೇ ಬೇಡಿಕೆಗಳನ್ನಿಟ್ಟಿದ್ದಾರೆ. ಅದನ್ನು ಈಡೇರಿಸ ಬೇಕಾದ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿರುವುದರಿಂದ, ರೈತರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಶ ಕಾಣುವರೋ ಇಲ್ಲವೋ ಎನ್ನುವ ಕುತೂಹಲ ಶುರುವಾಗಿದೆ.

ಕಬ್ಬು ಬೆಳಗಾರರ ಹೋರಾಟ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಕೇಂದ್ರ ಸರಕಾರ 1 ಟನ್ ಕಬ್ಬಿಗೆ ಎಂಎಸ್‌ಪಿಯನ್ನು 5500 ರು.ಗೇರಿಸುವುದು, ಎಥೆನಾಲ್ ಸಂಪೂರ್ಣ ಖರೀದಿ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಸಮರ ಸಾರಿದ್ದಾರೆ. ಆದರೆ ಈ ವಿಷಯದ ಬಗ್ಗೆ ಈವರೆಗೆ ಕೇಂದ್ರ ಸರಕಾರ ಯಾವುದೇ ತೀರ್ಮಾನವನ್ನು ಘೋಷಿಸಿಲ್ಲ.

ಇನ್ನು ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಯಲ್ಲಿರುವ ಟನ್‌ಗೆ 1 ಸಾವಿರ ಪ್ರೋತ್ಸಾಹಧನ ಘೋಷಣೆ, ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಮೋಸ ತಡೆಯಲು ಡಿಜಿಟಲ್ ಯಂತ್ರ ಅಳವಡಿಕೆಗೆ 500 ಕೋಟಿ ರು ಮೀಸಲಿಡುವುದು, ಬೆಳಗಾವಿಯಲ್ಲಿರುವ ಸಕ್ಕರೆ ಆಯುಕ್ತರ ಕಚೇರಿಗೆ ಆಯುಕ್ತ ರನ್ನು ನೇಮಿಸುವ ವಿಷಯದ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

image

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸರಕಾರ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಸಂಘಟನೆ ಎದುರು ನೋಡುತ್ತಿದೆ. ಈ ಸಭೆಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವ ವಿಶ್ವಾಸವಿದೆ. ಒಂದು ವೇಳೆ ರೈತರ ಸಮಸ್ಯೆಗಳಿಗೆ ಸರಕಾರ ಸೂಕ್ತ ಪರಿಹಾರ ನೀಡದಿದ್ದರೆ ಅ.27ಕ್ಕೆ ಕರ್ನಾಟಕ ಬಂದ್ ನಡೆಲು ಸಿದ್ಧತೆ ನಡೆಸಲಾಗುವುದು.

-ಚೂನಪ್ಪ ಪೂಜಾರಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ
image

ಬೆಳಗಾವಿಯಲ್ಲಿ ಏರ್ಪಡಿಸಿರುವ ಸಭೆಯಲ್ಲಿ ಮೊದಲು ರೈತರೊಂದಿಗೆ ಚರ್ಚೆ ಮಾಡಿ ನಂತರ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಚರ್ಚಿಸುವೆ. ಕೇಂದ್ರ ಸಚಿವರು ಬೇರೆ ಕೆಲಸದ ನಿಮಿತ್ತ ಭಾಗವಹಿಸುತ್ತಿಲ್ಲ. ಎಲ್ಲಾ ರಾಜ್ಯಗಳಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ರೈತರು ಆದಷ್ಟು ಬೇಗ ಕಬ್ಬು ಅರೆಯಬೇಕು ಎಂದು ಒತ್ತಡ ಹಾಕುತ್ತಿzರೆ. ನಾನು ಸಂಸದರು, ಸಚಿವರು ಹಾಗೂ ಶಾಸಕರಿಗೆ ಸಭೆಯಲ್ಲಿ ಭಾಗವಹಿಸಲು ತಿಳಿಸಿದ್ದೇನೆ. ನಾವೆಲ್ಲರೂ ಕೂತು ಚರ್ಚೆ ಮಾಡುತ್ತೇವೆ.

- ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ