ಶಬರಿಮಲೆ ಮಾರ್ಗದಲ್ಲಿ ಸಂಪರ್ಕ ಜಾಲ ಬಲಪಡಿಸಿದ ವಿ: ಮಕ್ಕಳ ಸುರಕ್ಷತಾ ಮಣಿಕಟ್ಟಿನ ಬ್ಯಾಂಡ್‌ಗಳ ಪೂರ್ವ-ನೋಂದಣಿಗೆ ಚಾಲನೆ
ಸುಗಮ ಸಂಪರ್ಕ ಖಚಿತಪಡಿಸಿಕೊಳ್ಳಲು ವಿ ತೀರ್ಥಯಾತ್ರೆಯ ದಟ್ಟಣೆಯ ಸಮಯ ದಲ್ಲಿಯೂ ಸಹ ಬಲವಾದ ಡೇಟಾ ಮತ್ತು ಧ್ವನಿ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಭಾರಿ ಪ್ರಮಾಣದ ಮಿಮೊ (ಎಂಐಎಂಒ) ತಂತ್ರಜ್ಞಾನದೊಂದಿಗೆ ಸುಧಾರಿತ ಎಫ್‌ಡಿಡಿ ಮತ್ತು ಟಿಡಿಡಿ ಲೇಯರ್ಸ್ ಗಳನ್ನು ನಿಯೋಜಿಸಿದೆ.
-
ಶಬರಿಮಲೆಯಲ್ಲಿ ತನ್ನ ಅತಿದೊಡ್ಡ ವಾರ್ಷಿಕ ತೀರ್ಥಯಾತ್ರೆಗೆ ಕೇರಳವು ಸನ್ನದ್ಧವಾಗು ತ್ತಿದ್ದಂತೆ, ರಾಜ್ಯದ ಪೊಲೀಸ್ ಇಲಾಖೆ ಮತ್ತು ಕೇರಳದ ಅತಿದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆಯಾಗಿರುವ ವಿ ಅಡೆತಡೆರಹಿತ ಸುರಕ್ಷಿತ ತೀರ್ಥಯಾತ್ರೆ ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪರಸ್ಪರ ಕೈಜೋಡಿಸಿವೆ.
ಯಾತ್ರಿಕರು ಮಾರ್ಗದಲ್ಲಿ ಪರಸ್ಪರ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ವಿ ತನ್ನ ಸಂಪರ್ಕ ಮೂಲಸೌಲಭ್ಯಗಳನ್ನು ಸನ್ನಿಧಾನಂ, ಪಂಪಾ ಮತ್ತು ನಿಲಕ್ಕಲ್‌ನಾದ್ಯಂತ ಬಲಪಡಿಸಿದೆ. ಇದು ಎಲ್900, ಎಲ್1800, ಎಲ್2100, ಎಲ್2300, ಎಲ್2500 ಸ್ಪೆಕ್ಟ್ರಮ್ ಬ್ಯಾಂಡ್‌ಗಳಲ್ಲಿ 70 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ನಿಯೋಜಿಸಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ 13 ಹೊಸ ಸೈಟ್‌ಗಳನ್ನು ಸೇರ್ಪಡೆ ಮಾಡಿದೆ.
ಸುಗಮ ಸಂಪರ್ಕ ಖಚಿತಪಡಿಸಿಕೊಳ್ಳಲು ವಿ ತೀರ್ಥಯಾತ್ರೆಯ ದಟ್ಟಣೆಯ ಸಮಯ ದಲ್ಲಿಯೂ ಸಹ ಬಲವಾದ ಡೇಟಾ ಮತ್ತು ಧ್ವನಿ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಭಾರಿ ಪ್ರಮಾಣದ ಮಿಮೊ (ಎಂಐಎಂಒ) ತಂತ್ರಜ್ಞಾನದೊಂದಿಗೆ ಸುಧಾರಿತ ಎಫ್‌ಡಿಡಿ ಮತ್ತು ಟಿಡಿಡಿ ಲೇಯರ್ಸ್‌ಗಳನ್ನು ನಿಯೋಜಿಸಿದೆ.
ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್
ಗಣಪತಿ ಕೋವಿಲ್, ನಡಪ್ಪಂತಲ್, ಆಡಳಿತ ಕಚೇರಿಗಳು, ಪಂಪಾ-ಸನ್ನಿಧಾನಂ ಚಾರಣ ಮಾರ್ಗ ಮತ್ತು ನಿಲಕ್ಕಲ್ ಪಾರ್ಕಿಂಗ್ ಮತ್ತು ಬಸ್ ನಿಲ್ದಾಣದಲ್ಲಿ ಮೊಬೈಲ್ ಸಂಪರ್ಕ ಸೇವೆಯನ್ನು ಗಣನೀಯವಾಗಿ ಬಲಪಡಿಸಲಾಗಿದೆ, ಭಕ್ತರು ತಮ್ಮ ಕುಟುಂಬದ ಸದಸ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಲು, ಮಾಹಿತಿಯನ್ನು ಪಡೆಯಲು ಮತ್ತು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಅಡೆತಡೆಯಿಲ್ಲದೆ ಹಂಚಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.
ವಿ ಸುರಕ್ಷಾ
ಕಳೆದ ವರ್ಷದ ವಿ ಸುರಕ್ಷಾ ಉಪಕ್ರಮಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿ ಮತ್ತೊಮ್ಮೆ ಕೇರಳ ಪೊಲೀಸ್ ಇಲಾಖೆಯ ಜೊತೆ ಪಾಲುದಾರಿಕೆ ಮಾಡಿಕೊಂಡು ಮಕ್ಕಳಿಗೆ ಕ್ಯುಆರ್-ಕೋಡೆಡ್ ಸುರಕ್ಷತಾ ಮಣಿಕಟ್ಟಿನ ಬ್ಯಾಂಡ್‌ಗಳನ್ನು ಒದಗಿಸುತ್ತಿದೆ. ಪ್ರತಿಯೊಂದು ಮಣಿಕಟ್ಟಿನ ಬ್ಯಾಂಡ್ ಅನ್ನು ಪೋಷಕರ ಮೊಬೈಲ್ ಜೊತೆಗೆ ಸಂಪರ್ಕ ಕಲ್ಪಿಸಲಾಗಿದ್ದು, ಕಳೆದುಹೋದ ಮಕ್ಕಳನ್ನು ಅವರ ಕುಟುಂಬ ಗಳೊಂದಿಗೆ ತ್ವರಿತವಾಗಿ ಮತ್ತೆ ಸೇರಿಸಲು ಇದು ಪೊಲೀಸರಿಗೆ ನೆರವಾಗಲಿದೆ.
ಈ ವರ್ಷ ವಿ ಸರಳೀಕೃತ ಪೂರ್ವ-ನೋಂದಣಿ ಪ್ರಕ್ರಿಯೆ ಪರಿಚಯಿಸಿದೆ. ಕುಟುಂಬಗಳು ಬೇಸ್ ಕ್ಯಾಂಪ್ ತಲುಪುವ ಮೊದಲೇ ನೋಂದಾಯಿಸಿಕೊಳ್ಳಲು ಮತ್ತು ಪಂಬಾ ಬೇಸ್ ಕ್ಯಾಂಪ್‌ನಲ್ಲಿರುವ ಯಾವುದೇ ವಿ ಸುರಕ್ಷಾ ಕಿಯೋಸ್ಕ್‌ಗಳಿಂದ ಸುರಕ್ಷತಾ ಬ್ಯಾಂಡ್‌ಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ:
- ಪಾಲಕರು / ಪೋಷಕರು www.visuraksha.online ಗೆ ಲಾಗಿನ್ ಆಗುವ ಮೂಲಕ ಅಥವಾ ಕೇರಳದಾದ್ಯಂತ ಯಾವುದೇ ವಿ ಸ್ಟೋರ್ ಅಥವಾ ವಿ ಮಿನಿ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ತಮ್ಮ ಮಕ್ಕಳನ್ನು ವಿ ಸುರಕ್ಷಾ ರಿಸ್ಟ್ ಬ್ಯಾಂಡ್‌ಗಾಗಿ ಮೊದಲೇ ನೋಂದಾಯಿಸಿಕೊಳ್ಳಬಹುದು ಮತ್ತು ಶಬರಿಮಲೆ ತೀರ್ಥಯಾತ್ರೆಯನ್ನು ಕೈಗೊಳ್ಳುವ ಮೊದಲು ಡಿಜಿಟಲ್ ನೋಂದಣಿ ಐಡಿ ಪಡೆದುಕೊಳ್ಳಬಹುದು.
- ತೀರ್ಥಯಾತ್ರೆಯ ಸಮಯದಲ್ಲಿ, ಪೋಷಕರು ಪಂಬಾ ಬೇಸ್ ಕ್ಯಾಂಪ್‌ನಲ್ಲಿರುವ ಯಾವುದೇ ವಿ ಸುರಕ್ಷಾ ಕಿಯೋಸ್ಕ್‌ಗಳಲ್ಲಿ ಡಿಜಿಟಲ್ ನೋಂದಣಿ ಐಡಿಯನ್ನು ತೋರಿಸಬಹುದು ಮತ್ತು ಈಗಾಗಲೇ ಅವರ ಮೊಬೈಲ್ ಸಂಖ್ಯೆಯೊಂದಿಗೆ ಸಂಪರ್ಕ ಕಲ್ಪಿಸಿದ ಕ್ಯುಆರ್-ಕೋಡೆಡ್ ರಿಸ್ಟ್‌ಬ್ಯಾಂಡ್‌ಗಳನ್ನು ಪಡೆದುಕೊಳ್ಳಬಹುದು
- ಈ ಸೌಲಭ್ಯವು ಉಚಿತವಾಗಿದೆ ಮತ್ತು ಎಲ್ಲಾ ಯಾತ್ರಿಕರಿಗೆ ಲಭ್ಯ ಇರಲಿದೆ.
ಹಲವಾರು ವರ್ಷಗಳಿಂದ, ಕೇರಳ ಪೊಲೀಸರು ಮಕ್ಕಳ ಯಾತ್ರಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದ್ದಾರೆ. ಕಳೆದ ವರ್ಷ ಒಟ್ಟು ಯಾತ್ರಿಕರಲ್ಲಿ ಶೇಕಡ 10 ರಿಂದ 15ರಷ್ಟು ಮಕ್ಕಳು ಇದ್ದರು. ಪ್ರತಿ ಬಾರಿಯೂ ಕೇರಳ ಪೊಲೀಸರಿಗೆ ಕಾಣೆಯಾದ ಮಕ್ಕಳ ನೂರಾರು ಪ್ರಕರಣಗಳ ದೂರು ದಾಖಲಾಗುತ್ತವೆ. ಇದು ಜನಸಂದಣಿ ನಿರ್ವಹಣೆ ಯ ಸಮಯದಲ್ಲಿ ಮಕ್ಕಳ ಸುರಕ್ಷತೆಯನ್ನು ಪ್ರಮುಖ ಸವಾಲನ್ನಾಗಿ ಮಾಡುತ್ತದೆ.
ಪಥನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಆರ್ ಅವರು ಪಥನಂತಿಟ್ಟ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೇರಳದ ವಿ ವಹಿವಾಟಿನ ಮುಖ್ಯಸ್ಥ ಜಾರ್ಜ್ ಮ್ಯಾಥ್ಯೂ ವಿ ಅವರ ಸಮ್ಮುಖದಲ್ಲಿ ವಿ ಸುರಕ್ಷಾ ಉಪಕ್ರಮದ ಪೂರ್ವ-ನೋಂದಣಿಯನ್ನು ಉದ್ಘಾಟಿಸಿದರು.
ಈ ಸೌಲಭ್ಯವು ಕೇರಳದಾದ್ಯಂತದ ಎಲ್ಲಾ 25 ವಿ ಸ್ಟೋರ್‌ಗಳು ಮತ್ತು 103 ವಿ ಮಿನಿ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ, ಪಂಬಾದಲ್ಲಿ 3 ವಿ ಸುರಕ್ಷಾ ಕಿಯೋಸ್ಕ್‌ಗಳನ್ನು ವರ್ಚು ವಲ್ ಕ್ಯೂ ಕಿಯೋಸ್ಕ್‌ಗಳ ಪಕ್ಕದಲ್ಲಿಯೇ ಸ್ಥಾಪಿಸಲಾಗಿದೆ.
ಕಳೆದ ವರ್ಷ, ವಿ 20,000 ಕ್ಕೂ ಹೆಚ್ಚು ವಿ ಸುರಕ್ಷಾ ಮಣಿಕಟ್ಟಿನ ಬ್ಯಾಂಡ್‌ಗಳನ್ನು ವಿತರಿಸಿತ್ತು. ಇದು ಯಾತ್ರೆಯ ಸಮಯದಲ್ಲಿ ಕಾಣೆಯಾದ 150ಕ್ಕೂ ಹೆಚ್ಚು ಮಕ್ಕಳನ್ನು ಅವರ ಕುಟುಂಬಗಳ ಜೊತೆಗೆ ಮತ್ತೆ ಸೇರಿಸಲು ಕೇರಳ ಪೊಲೀಸರಿಗೆ ಸಹಾಯ ಮಾಡಿತ್ತು.
ಪಥನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್. ಆರ್ ಅವರು ಮಾತನಾಡಿ, " ವಿ ಸುರಕ್ಷಾ ಉಪಕ್ರಮದ ಅಡಿಯಲ್ಲಿ ಜಿಲ್ಲಾ ಪೊಲೀಸರು ವಿ ಜೊತೆಗಿನ ಈ ಸಹಯೋಗ ವನ್ನು ಮುಂದುವರಿಸಲು ಇಷ್ಟಪಡುತ್ತಾರೆ. ಇದು ಭಕ್ತಾದಿಗಳಿಗೆ ತುಂಬ ಉಪಯುಕ್ತ ವಾಗಿದೆ. ಶಬರಿಮಲೆ ಯಾತ್ರೆಯ ಸಮಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿ ಕೊಳ್ಳಲು ನಮ್ಮ ನಿರಂತರ ಪ್ರಯತ್ನಗಳಿಗೂ ನೆರವಾಗುತ್ತಿದೆ. ವಿ ಸುರಕ್ಷಾ ಕ್ಯೂಆರ್ ಕೋಡ್ ಬ್ಯಾಂಡ್‌ಗಳು ಬೇರ್ಪಟ್ಟ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ನಮ್ಮ ಪ್ರಯತ್ನಗಳಿಗೆ ಗಮನಾರ್ಹವಾಗಿ ಸಹಾಯ ಮಾಡಲಿದೆ. ಮಕ್ಕಳು ವಿಳಂಬ ಇಲ್ಲದೆ ತಮ್ಮ ಕುಟುಂಬ ಗಳೊಂದಿಗೆ ಮತ್ತೆ ಸೇರಲು ನೆರವಾಗಲಿದೆ" ಎಂದು ಹೇಳಿದ್ದಾರೆ.
ಈ ಪ್ರಯತ್ನಗಳ ಕುರಿತು ಪ್ರತಿಕ್ರಿಯಿಸಿರುವ ವೊಡಾಫೋನ್ ಐಡಿಯಾದ ಕೇರಳದ ವಹಿವಾಟು ಮುಖ್ಯಸ್ಥ ಜಾರ್ಜ್ ಮ್ಯಾಥ್ಯೂ ವಿ. ಅವರು "ವಿ-ನಲ್ಲಿ, ಸುರಕ್ಷಿತ ಮತ್ತು ಚುರುಕಿನ ಸಂಪರ್ಕ ಸೌಲಭ್ಯ ಒದಗಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವತ್ತ ನಮ್ಮ ಗಮನ ಕೇಂದ್ರೀಕೃತಗೊಂಡಿದೆ. ಪ್ರತಿ ವರ್ಷ, ಲಕ್ಷಾಂತರ ಭಕ್ತರು ಶಬರಿಮಲೆಗೆ ತೀರ್ಥ ಯಾತ್ರೆ ಕೈಗೊಳ್ಳುತ್ತಾರೆ. ಅವರೆಲ್ಲರ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ಮಹತ್ವದ ಸಂಗತಿಯಾಗಿದೆ ವಿ ಸುರಕ್ಷಾದ ನವೀನ ಕ್ಯುಆರ್ ಕೋಡ್ ಬ್ಯಾಂಡ್‌ಗಳೊಂದಿಗೆ, ಕುಟುಂಬಗಳ ಸದಸ್ಯರು ಪರಸ್ಪರ ಸಂಪರ್ಕದಲ್ಲಿರಬಹುದು. ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ತಮ್ಮ ಮಕ್ಕಳನ್ನು ತ್ವರಿತವಾಗಿ ಪತ್ತೆ ಮಾಡಬಹುದು. ವಿ ಸುರಕ್ಷಾ ಉಪಕ್ರಮದಲ್ಲಿ ಕೇರಳ ಪೊಲೀಸರ ಜೊತೆಗಿನ ನಮ್ಮ ಪಾಲುದಾರಿಕೆಯ ಮೂಲಕ, ಈ ತೀರ್ಥಯಾತ್ರೆಯು ಮಕ್ಕಳಿಗೆ ಸುರಕ್ಷಿತವಾಗಿರಲು ಮತ್ತು ಕುಟುಂಬಗಳಿಗೆ ಚಿಂತೆಯಿಲ್ಲದೆ ಯಾತ್ರೆ ಪೂರ್ಣಗೊಳಿಸಲು ಮತ್ತೊಮ್ಮೆ ಸಹಾಯ ಮಾಡುವುದಕ್ಕೆ ನಾವು ಹೆಮ್ಮೆ ಪಡು ತ್ತೇವೆ. ನೀಲಕ್ಕಲ್, ಪಂಪಾ ಮತ್ತು ಸನ್ನಿಧಾನದಾದ್ಯಂತ ನಮ್ಮ ಬಲವರ್ಧಿತ ಸಂಪರ್ಕ ಜಾಲವು ಭಕ್ತರು ತಮ್ಮ ಆಧ್ಯಾತ್ಮಿಕ ಪ್ರಯಾಣದ ಸಮಯದಲ್ಲಿ ಪರಸ್ಪರ ಸಂಪರ್ಕ ದಲ್ಲಿರುವುದನ್ನು ಖಚಿತಪಡಿಸಲಿದೆ" ಎಂದು ಹೇಳಿದ್ದಾರೆ.
*
ಯಾತ್ರಿಕರು ಅಡೆತಡೆ ಇಲ್ಲದೆ ಪರಸ್ಪರ ಸಂಪರ್ಕದಲ್ಲಿರುವುದಕ್ಕೆ ನೆರವಾಗಲು ಸನ್ನಿಧಾನಂ, ಪಂಪಾ ಮತ್ತು ನಿಲಕ್ಕಲ್‌ನಾದ್ಯಂತ 5 ತರಂಗಾಂತರ ಬ್ಯಾಂಡ್‌ಗಳಲ್ಲಿ 70 ಮೆಗಾಹರ್ಟ್ಸ್ ತರಂಗಾಂತರ ನಿಯೋಜಿಸುವ ಮೂಲಕ ಸಂಪರ್ಕ ಜಾಲದ ಬಲವರ್ಧನೆ.
ವಿ ಸುರಕ್ಷಾ ಮಣಿಕಟ್ಟಿನ ಬ್ಯಾಂಡ್‌ಗಳಿಗೆ ಸರಳ ಪೂರ್ವ-ನೋಂದಣಿ ಆರಂಭ