Congress government 2.5: ನ.26ಕ್ಕೆ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಬೃಹತ್ ಪ್ರತಿಭಟನೆ : ಶ್ರೀರಂಗಾಚಾರಿ ಹೇಳಿಕೆ
ಕೇಂದ್ರ ಸರ್ಕಾರ ರೈತರು, ಕಾರ್ಮಿಕರು ಹಾಗೂ ಇತರೆ ಜನವರ್ಗಗಳ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವನ್ನು ಅಧಿಕಾರಕ್ಕೆ ತರಲಾಯಿತು.ನಾವು ಅಧಿಕಾರಕ್ಕೆ ಬಂದರೆ ಹಿಂದೆ ಬಿಜೆಪಿ ತಂದಿದ್ದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳನ್ನು ಬದಲಾಯಿಸುತ್ತೇವೆ ಎಂದು ಸಿದ್ಧರಾಮಯ್ಯ, ಡಿ.ಕೆ.ಶಿವ ಕುಮಾರ್ ಮಾತು ನೀಡಿದ್ದರು.
-
ಚಿಕ್ಕಬಳ್ಳಾಪುರ : ಜನಹಿತ ರಕ್ಷಿಸುತ್ತೇವೆ ಎಂದು ಬಂದ ಕಾಂಗ್ರೆಸ್ ಸರ್ಕಾರ ೨.೫ ವರ್ಷ ದಲ್ಲಿ ಏನು ಮಾಡುತ್ತಿದೆ? ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳು ಹಾಗೇ ಇವೆ. ಇದನ್ನು ಮನವರಿಕೆ ಮಾಡಲು ಕೊಟ್ಟಿದ್ದ ಭರವಸೆಯಂತೆ ನಡೆಯಬೇಕೆಂದು ಆಗ್ರಹಿಸಿ ನ.೨೬ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ರಾಜ್ಯ ಖಜಾಂಚಿ ಶ್ರೀರಂಗಾಚಾರಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಭವನದಲ್ಲಿ ಬುಧವಾರ ಸಂಯುಕ್ತ ಹೋರಾಟ ಸಮಿತಿ ಸಹಯೋಗದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರೈತರು, ಕಾರ್ಮಿಕರು ಹಾಗೂ ಇತರೆ ಜನವರ್ಗಗಳ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವನ್ನು ಅಧಿಕಾರಕ್ಕೆ ತರಲಾಯಿತು.ನಾವು ಅಧಿಕಾರಕ್ಕೆ ಬಂದರೆ ಹಿಂದೆ ಬಿಜೆಪಿ ತಂದಿದ್ದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳನ್ನು ಬದಲಾಯಿಸುತ್ತೇವೆ ಎಂದು ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಮಾತು ನೀಡಿದ್ದರು. ಈ ೨.೫ ವರ್ಷದಲ್ಲಿ ಕಾಂಗ್ರೆಸ್ ಸರಕಾರ ಎಲ್ಲವನ್ನೂ ಮರೆತಿದೆ. ಬಿಜೆಪಿಯಂತೆ ಕಂಪನಿಗಳ ಹಿತ ಕಾಯುವು ದರಲ್ಲಿ ಮಗ್ನವಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ದೂರಿದರು.
ಬಿಜೆಪಿ ತಂದಿದ್ದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳನ್ನು ಕೂಡಲೇ ಬದಲಾಯಿಸಬೇಕು.ಜನಹಿತ ರಕ್ಷಿಸುತ್ತೇವೆ ಎಂದು ಬಂದ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ? ಸಂಕಷ್ಟ ನಿವಾರಣೆಯ ಕ್ರಮಗಳಿಗೆ ರಾಜ್ಯ ಸರ್ಕಾರ ಕೂಡಲೇ ಮುಂದಾಗಲೇಬೇಕು. ನ.೨೬ರಂದು ಸಂಬಂಧಪಟ್ಟ ಸಚಿವರುಗಳು ಸ್ಪಷ್ಟ ತೀರ್ಮಾನ ಗಳನ್ನು ಘೋಷಿಸಬೇಕು.
ಸಂವಿಧಾನ ದಿನವಾದ ನವೆಂಬರ್ ೨೬, ಜನರ ಹಕ್ಕುಗಳ ಕುರಿತು ಖಚಿತ ನಿರ್ಣಯ ಗಳಾಗುವ ದಿನವಾಗಬೇಕು. ನಿರ್ಲಕ್ಷಿಸಿದಲ್ಲಿ ಫ್ರೀಡಂ ಪಾರ್ಕಿನಲ್ಲೇ ತೀವ್ರ ಹೋರಾಟದ ತೀರ್ಮಾನ ಕೈಗೊಂಡು ಸರ್ಕಾರದ ಮುಂದೆ ರಾಜ್ಯದ ದುಡಿಯುವ ಹಾಗೂ ದಮನಿತರ ಜನರ ಹದಿನೈದು ಪ್ರಮುಖ ಹಕ್ಕೊತ್ತಾಯಗಳ ರೂಪದಲ್ಲಿ ಜನರು ಪರಿತಪಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಮುಂದಿಡುತ್ತಿದ್ದೇವೆ ಎಂದರು.
ನಮ್ಮ ಪ್ರಸ್ತಾಪಗಳಿವೆ. ಈ ಕೆಳಕಂಡ ವಿಚಾರಗಳಿಗೆ ಸಾಧ್ಯವಿರುವ ತ್ವರಿತ ಪರಿಹಾರಗಳ ಕುರಿತು ಚರ್ಚಿಸಲು ಕೂಡಲೇ ಸಮಾಲೋಚನಾ ಸಭೆಗಳನ್ನು ಕರೆಯಬೇಕೆಂದು ಮುಖ್ಯ ಮಂತ್ರಿಗಳಲ್ಲೂ, ಸಂಬAಧಪಟ್ಟ ಸಚಿವರುಗಳಲ್ಲಿಯೂ ನಾವು ಮನವಿ ಮಾಡಿ ಕೊಳ್ಳು ತ್ತಿದ್ದೇವೆ. ರಾಜ್ಯದ ವಿವಿಧ ಜನವರ್ಗಗಳ ಉಸಿರು ಕಟ್ಟಿಸುತ್ತಿರುವ ಸಮಸ್ಯೆಗಳು
ಹಾಗೂ ಹಕ್ಕೊತ್ತಾಯಗಳು ಹೀಗಿವೆ? ಸರಕಾರ ಈ ಕೂಡಲೇ ಬಲವಂತದ ಭೂಸ್ವಾಧೀನ ಗಳನ್ನು ಕೈಬಿಡಬೇಕು.
ಉಳುಮೆ ಮಾಡುತ್ತಿರುವ, ಅರ್ಜಿ ಸಲ್ಲಿಸಿರುವ ಹಾಗೂ ಬೇರೆ ಭೂಮಿ ಇಲ್ಲದ ಬಗರ್ ಹುಕುಂ ರೈತರಿಗೆ “ಒನ್ ಟೈಂಸೆಟಲೆAಟ್” ಆಧಾರದಲ್ಲಿ ಭೂಮಿ ಮಂಜೂರು ಮಾಡುವ ಗಟ್ಟಿ ತೀರ್ಮಾನ ಸರ್ಕಾರ ಮಾಡಬೇಕು. ಅರಣ್ಯವಾಸಿಗಳನ್ನು ಅತಂತ್ರ ಸ್ಥಿತಿಯಿಂದ ಪಾರು ಮಾಡಲು ಸರ್ಕಾರ ಮುಂದಾಗಬೇಕು. ಅರಣ್ಯ ಹಕ್ಕು ಕಾಯ್ದೆ 2006ರ ಪ್ರಕಾರ ಆದಿವಾಸಿ ಗಳಿಗೆ ಮಾತ್ರವಲ್ಲದೆ, ಎಲ್ಲಾ ಅರಣ್ಯವಾಸಿಗಳಿಗೂ ಭೂಮಿ ಹಕ್ಕು ನೀಡಬೇಕು. ಯಾವುದೇ ಕಾರಣಕ್ಕೂ ಬಡ ರೈತರನ್ನು ಒಕ್ಕಲೆಬ್ಬಿಸಬಾರದು. ಈಗಾಗಲೇ ಭೂಮಿ ಮಂಜೂರು ಮಾಡಿ ಖಾತೆ ಪಾಣಿಯಾಗಿರುವ ಭೂಮಿಗಳ ಖಾತೆಗಳನ್ನು ಯಾವುದೇ ಕಾರಣಕ್ಕೂ ರದ್ದು ಪಡಿಸಬಾರದು. ವಸತಿ ನಿವೇಶನಗಳ ಹಂಚಿಕೆಗೆ ಸರ್ಕಾರ ಮೆಗಾ ಯೋಜನೆ ರೂಪಿಸಬೇಕು.
“ಪ್ರತಿಯೊಬ್ಬರಿಗೂ ಸೂರು” ಸರ್ಕಾರದ ಕಾರ್ಯನೀತಿಯಾಗಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆಗಳನ್ನು ಪರಿಷ್ಕರಿಸಬೇಕು ಮತ್ತು ಖರೀದಿ ಪ್ರಮಾಣವನ್ನು ಹೆಚ್ಚಿಸಬೇಕು. ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು. ಹಣದ ಹಂಚಿಕೆ ನಿಲ್ಲಬೇಕು. ರೈತರಿಂದ ವಿವಿಧ ಬೆಳೆಗಳನ್ನು ಖರೀದಿಸಿ ಸಮಗ್ರ ಪ್ಯಾಕ್ ವಿತರಿಸಬೇಕು. ಕಬ್ಬಿನ ಬೆಲೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ರಾಜ್ಯ ಬೆಲೆ ನಿಗದಿ ನೀತಿಯನ್ನು ರೂಪಿಸಬೇಕು.
ಸ್ವಾಮಿನಾಥನ್ ವರದಿ ಜಾರಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಮೈಕ್ರೋಫೈನಾನ್ಸ್ ಹಾವಳಿಯಿಂದ ಜನಸಾಮಾನ್ಯರಿಗೆ ಮುಕ್ತಿ ದೊರಕಬೇಕು. ಜಪ್ತಿ, ಸಾಮಾಜಿಕ ಅವಮಾನ ಮಾಡುವಂತಹ ಕ್ರಿಯೆಗಳ ಮೇಲೆ ಕಠಿಣ ಕ್ರಮ ಕೈ ಗೊಳ್ಳಬೇಕು. ಮೈಕ್ರೋಫೈನಾನ್ಸ್ ಸಂಸ್ಥೆಗಳನ್ನೂ ಆರ್. ಬಿ. ಐ. ನಿಯಮಾವಳಿಗಳಡಿ ತರಬೇಕು. ಸಣ್ಣ ರೈತರು ಮಾಡಿರುವ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಕೇರಳಾ ಮಾದರಿಯಲ್ಲಿ ರುಣಮುಕ್ತ ಕಾಯ್ದೆ ಜಾರಿಗೆ ತರಬೇಕು.ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಜೀವಿಕ ಸಂಘಟನೆಯ ಚೆನ್ನರಾಯಪ್ಪ, ರಮೇಶ್ ಸಂಕ್ರಾಂತಿ, ಎದ್ದೇಳು ಕರ್ನಾಟಕದ ಡಾ.ನಾರಾಯಣಸ್ವಾಮಿ, ದಸಂಸ ಮುಖಂಡ ಜಿ.ಸೋಮಯ್ಯ, ತಾಲೂಕು ಸಂಚಾಲಕ ಎನ್.ಪರಮೇಶ್, ರಾಷ್ಟ್ರೀಯ ಕಿಸಾನ್ ಮೋರ್ಚಾ ಸಂಚಾಲಕ ಭೀಮಪುತ್ರ ಬಿ.ಹೆಚ್.ನರಸಿಂಹಪ್ಪ, ಜೀವಿಕ ನಾರಾಯಣಮ್ಮ, ಸಂವಿಧಾನ ಸಂರಕ್ಷಣಾ ಪಡೆಯ ನಾರಾಯಣಪ್ಪ,ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ನರಸಿಂಹಪ್ಪ,ಜೀವಿಕ ಆಂಜಿನಪ್ಪ,ಈಶ್ವರ್ ಮತ್ತಿತರರು ಇದ್ದರು.