ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻನಾವೇನ್‌ ಕೋತಿಗಳಾ? ಕೈಗೊಂಬೆ ಅಲ್ಲ ನಾನುʼ; ಒಂದೇ ಟೀಮ್‌ನಲ್ಲಿದ್ರು ಅಶ್ವಿನಿ ಗೌಡ ಮೇಲೆ ಧ್ರುವಂತ್‌ ರಾಂಗ್!‌

Bigg Boss Kannada 12 Dhruvanth: ಅಶ್ವಿನಿ ಗೌಡ ಮತ್ತು ಅವರ ತಂಡದ ಸದಸ್ಯ ಧ್ರುವಂತ್ ನಡುವೆ ಆಟದ ಆಯ್ಕೆಗೆ ಸಂಬಂಧಿಸಿದಂತೆ ಭಾರಿ ಮಾತಿನ ಚಕಮಕಿ ನಡೆಯಿತು. ಧನುಷ್ ಬದಲು ತನಗೆ ಅವಕಾಶ ನೀಡುವಂತೆ ಅಶ್ವಿನಿಗೆ ಧ್ರುವಂತ್ ಒತ್ತಾಯಿಸಿದರು. "ನನ್ನನ್ನು ಮೂಲೆಯಲ್ಲಿ ಕೂರಿಸಬೇಡಿ, ನಾನು ನಿಮ್ಮ ಕೈಗೊಂಬೆ ಅಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಏನಾಯಿತು? ಈ ಸ್ಟೋರಿ ಓದಿ.

BBK 12: ಅಶ್ವಿನಿ ಗೌಡ ಮೇಲೆ ಏಕಾಏಕಿ ರಾಂಗ್‌ ಆದ ಧ್ರುವಂತ್!‌ ಕಾರಣವೇನು?

-

Avinash GR
Avinash GR Nov 19, 2025 11:52 PM

ಅಶ್ವಿನಿ ಗೌಡ ಅವರು ಬಿಗ್‌ ಬಾಸ್‌ ಮನೆಯಲ್ಲಿ ಸ್ಟ್ರಾಂಗ್‌ ಸ್ಪರ್ಧಿ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರದ್ದೇ ನಾಯಕತ್ವದಲ್ಲಿ ರೆಡ್‌ ತಂಡ ಮನೆಯೊಳಗೆ ಆಟ ಆಡುತ್ತಿದೆ. ಎದುರಾಳಿ ಗಿಲ್ಲಿ ನಟನ ವಿರುದ್ಧ ರೊಚ್ಚಿಗೆದ್ದಿರುವ ಎಲ್ಲಾ ಗೇಮ್‌ಗಳಲ್ಲೂ ಅವರನ್ನು ಬಗ್ಗುಬಡಿಯಬೇಕು ಎಂದು ಹಠ ತೊಟಿದ್ದಾರೆ. ಆದರೆ ಅಶ್ವಿನಿ ತಂಡದಲ್ಲೇ ಇರುವ ಧ್ರುವಂತ್‌ ಅವರು ತಿರುಗಿಬಿದ್ದ ಪ್ರಸಂಗ ನಡೆದಿದೆ.

ಧನುಷ್‌ ಬದಲು ನನ್ನನ್ನು ಕಳುಹಿಸಿ!

ಆಟವೊಂದಕ್ಕೆ ಮೂವರನ್ನು ಸೆಲೆಕ್ಟ್‌ ಮಾಡಬೇಕಿತ್ತು. ಅದರಲ್ಲಿ ಓರ್ವ ಪುರುಷ ಸದಸ್ಯರಿಗೆ ಮಾತ್ರ ಆಡುವುದಕ್ಕೆ ಚಾನ್ಸ್‌ ಇತ್ತು. ಧನುಷ್‌ ಅವರನ್ನೇ ಆಡಿಸಬೇಕು ಎಂದು ಅಶ್ವಿನಿ ಗೌಡ ಆಗಲೇ ಪ್ಲ್ಯಾನ್‌ ಮಾಡಿಕೊಂಡಿದ್ದರು. ಆದರೆ ಧ್ರುವಂತ್‌ಗೆ ಇದು ಇಷ್ಟವಾಗಲಿಲ್ಲ. ಧನುಷ್‌ ಬದಲು ನನ್ನನ್ನೇ ಕಳುಹಿಸಿ ಎಂದು ಅಶ್ವಿನಿ ಗೌಡ ಮೇಲೆ ಒತ್ತಡ ತಂದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು. ಜೋರು ಧ್ವನಿಯಲ್ಲಿ ಇಬ್ಬರು ಕಿತ್ತಾಡಲು ಆರಂಭಿಸಿದರು.

‌Bigg Boss 12: ʻನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್‌ ಅಡಿಕ್ಟ್‌ ಅಲ್ಲʼ; ಕಾಕ್ರೋಚ್‌ ಸುಧಿ ಫಸ್ಟ್‌ ರಿಯಾಕ್ಷನ್

ಧ್ರುವಂತ್‌ ಏನಂದ್ರು?

"ದಯವಿಟ್ಟು ನನ್ನ ಡಮ್ಮಿ ಮಾಡಬೇಡಿ. ನನ್ನನ್ನು ಮೂಲೆಯಲ್ಲಿ ಕೂರಿಸಬೇಡಿ. ಧನುಷ್‌ ನಿನ್ನೆನೂ ಆಟ ಆಡಿದ್ದಾರೆ. ಎಲ್ಲರಿಗೂ ಅವಕಾಶ ನೀಡಿ. ನಾನು ಆಡ್ತೀನಿ, ಯಾಕೆ ನೀವು ಎಲ್ಲರಿಗೂ ಸಮಾನವಾಗಿ ಅವಕಾಶ ನೀಡುವುದಿಲ್ಲ. ನಾನು ಮನವಿ ಮಾಡುತ್ತಿದ್ದೇನೆ. ನನಗೆ ಚಾನ್ಸ್‌ ನೀಡಿ. ನೀವು ಯಾವುದೇ ಫೀಡ್‌ ಬ್ಯಾಕ್‌ನ ತಗೋಳೋದಿಲ್ಲ. ಯಾಕೆ ಕೂಗಾಡ್ತಿರಿ? ಯಾಕೆ ಕೋಪ ಮಾಡ್ಕೋತಿರಿ? ಟೀಮ್‌ ಅಂತಾರೆ, ಅವರದ್ದೇ ಮಾಡ್ತಾರೆ" ಎಂದು ಬೇಸರ ಮಾಡಿಕೊಂಡರು

Bigg Boss 12: ʻಸುಮ್‌ ಸುಮ್ನೆ ಜಗಳ ಮಾಡೋಣ, ಮಾತು ಬಿಡೋಣʼ; ಜಾಹ್ನವಿ - ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!‌

ನಾವು ಕಾಲು ಹಿಡಿಯಬೇಕಾ?

"ನಿಮ್ಮ ಜೊತೆ ಜಗಳ ಮಾಡೋದಕ್ಕೆ ನಾನು ಬಂದಿಲ್ಲ. ನಾನು ಎಲ್ಲಾ ಸಮಯದಲ್ಲೂ ಸುಮ್ನೆ ಕೂರೋಕೆ ಆಗಲ್ಲ. ನಾನು ಬರೀ ಮನೆ ಕೆಲಸವನ್ನು ಮಾಡಿಕೊಂಡಿರಬೇಕಾ? ನನ್ನನ್ನು ಏಕೆ ತಪ್ಪು ತಿಳಿದುಕೊಳ್ಳುತ್ತಿದ್ದೀರಿ? ನಾನು ಕೈಗೊಂಬೆ ಅಲ್ಲ, ನೀವು ನನಗೆ ಬಲವಂತ ಮಾಡುತ್ತಿದ್ದೀರಿ. ನಾನು ಈ ಸಲ ಆಡುತ್ತೇನೆ ಅಷ್ಟೇ. ಪ್ರತಿಸಲ ಒಬ್ಬರನ್ನೇ ನೀವು ಕಳಿಸುವಂತಿಲ್ಲ. ನಾವೇನ್‌ ಇಲ್ಲಿ ಕೋತಿಗಳಾ ಇಲ್ಲಿ? ನನ್ನ ಅಭಿಪ್ರಾಯವನ್ನು ಕೂಡ ಕೇಳೋದಿಲ್ಲ. ಮನವಿ ಮಾಡಿದ್ದೇವೆ, ಇನ್ನೇನು ಅವರ ಕಾಲು ಹಿಡಿಯಬೇಕಾ" ಎಂದು ಧ್ರುವಂತ್‌ ಹೇಳಿದರು.

ಧ್ರುವಂತ್‌ಗೆ ಸಿಕ್ತು ಚಾನ್ಸ್‌

ಧ್ರುವಂತ್‌ ಮಾತುಗಳನ್ನು ಕೇಳಿದಮೇಲೆ ಅಶ್ವಿನಿ ಗೌಡ ಕೋಪ ಮಾಡಿಕೊಂಡರು. ಅಂತಿಮವಾಗಿ ಧನುಷ್‌ ಅವರ ಬದಲು ಧ್ರುವಂತ್‌ಗೆ ಆಟ ಆಡುವ ಚಾನ್ಸ್‌ ನೀಡಿದರು. ಆಟ ಆಡುವುದಕ್ಕೆ ಹೋದ ಧ್ರುವಂತ್‌ ಉತ್ತಮ ಪ್ರದರ್ಶನ ನೀಡಿದರು. ಕೊನೆಗೆ ಆ ಗೇಮ್‌ ಅನ್ನು ಧ್ರುವಂತ್‌ ಅತ್ಯುತ್ತಮವಾಗಿ ಆಡಿ ಗೆಲ್ಲಿಸಿಕೊಟ್ಟರು. ಎಲ್ಲರೂ ಧ್ರುವಂತ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎದುರಾಳಿ ತಂಡದ ಗಿಲ್ಲಿ ನಟ ಕೂಡ ಈ ಚಾನ್ಸ್‌ ಅನ್ನು ಬಳಸಿಕೊಂಡು, ಅಶ್ವಿನಿಗೆ ಕಾಲೆಳೆದರು. ಇಷ್ಟೆಲ್ಲಾ ಆದಮೇಲೆ ಅಶ್ವಿನಿ ಗೌಡ ಮತ್ತು ಧ್ರುವಂತ್‌ ಮಾಮೂಲಿನಂತೆ ಮಾತನಾಡಲು ಆರಂಭಿಸಿದರು.