ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Varamahalaxmi Saree Draping 2026: ಬಿಂದಿಗೆ ಬಳಸಿ ವರಮಹಾಲಕ್ಷ್ಮೀಗೆ ಸೀರೆ ಉಡಿಸಲು ಇಲ್ಲಿದೆ ಸುಲಭೋಪಾಯ

ಬಿಂದಿಗೆ ಬಳಸಿ ಸೀರೆಯನ್ನು ಉಡಿಸಿ, ವರಮಹಾಲಕ್ಷ್ಮೀ ದೇವಿಗೆ ಸಿಂಪಲ್ಲಾಗಿ ಸೀರೆ ಉಡಿಸುವುದು ಹೇಗೆ? ಎಂಬುದರ ಬಗ್ಗೆ ಸೀರೆ ಡ್ರೇಪಿಂಗ್ ಎಕ್ಸ್‌ಪರ್ಟ್ ಅನಿತಾ ಹಾಗೂ ಚಂದನ್ ಸಿಂಪಲ್ಲಾಗಿ ಒಂದಿಷ್ಟು ಟಿಪ್ಸ್ ತಿಳಿಸಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಬಿಂದಿಗೆ ಬಳಸಿ ವರಮಹಾಲಕ್ಷ್ಮೀಗೆ ಸೀರೆ ಉಡಿಸಲು ಇಲ್ಲಿದೆ ಸುಲಭೋಪಾಯ

ಚಿತ್ರಕೃಪೆ: ಶುಭಾ ರಾಜಶೇಖರ್, ಅನಿತಾ & ಚಂದನ್ ಟೀಮ್ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಿಮ್ಮನೆಯ ವರಮಹಾಲಕ್ಷ್ಮೀ ಅಲಂಕಾರಕ್ಕೆ ಬಿಂದಿಗೆಗೆ ಸಿಂಪಲ್ಲಾಗಿ ಸೀರೆ ಉಡಿಸಿಯೂ ಅಂದವಾಗಿ ಸಿಂಗರಿಸಬಹುದು ಎಂಬುದರ ಬಗ್ಗೆ ಸ್ಯಾರಿ ಡ್ರೇಪಿಂಗ್ ಎಕ್ಸ್‌ಪರ್ಟ್ ಅನಿತಾ ಅವರು ತಿಳಿಸಿಕೊಟ್ಟಿದ್ದಾರೆ. ಮನೆಯಲ್ಲಿರುವ ಒಂದು ಬಿಂದಿಗೆಗೆ ಅಕ್ಕಿ ತುಂಬಿಟ್ಟುಕೊಳ್ಳಿ. ಮೇಲಿನ ಕಳಸಕ್ಕೆ ನಿಮ್ಮ ಪದ್ಧತಿಯಂತೆ ಸಿರಿಧಾನ್ಯ ಹಾಕಿ. ಒಂದರ ಮೇಲೊಂದರಂತೆ 2 ಬಿಂದಿಗೆಯನ್ನಿಟ್ಟು ಮೇಲಿನ ಕಳಸಕ್ಕೆ ವಿಳ್ಯೆದೆಲೆ ಇಡಿ. ಇದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿ ಇರಿಸಿ. ದಾರದಿಂದ ಬಿಗಿಯಾಗಿ ಕಟ್ಟಿ.

Varamahalaxmi Saree Draping

ಆಕರ್ಷಕವಾದ ದೇವಿಯ ಮುಖವಾಡ ಆಯ್ಕೆ ಮಾಡಿ

ನೀವು ಆಯ್ಕೆ ಮಾಡಿದ ತೆಂಗಿನ ಕಾಯಿಯ ಮುಂಭಾಗಕ್ಕೆ ದೇವಿಯ ಮುಖವಾಡ ಹಾಕಿ. ಬಿಂದಿಗೆಯ ಕೆಳಗೆ ಬಾಳೆ ದಿಂಡು ಅಥವಾ ಒಂದು ತಟ್ಟೆಯಲ್ಲಿ ಅಕ್ಕಿ ತುಂಬಿ ಸಮತಟ್ಟಾಗಿ ಮಾಡಿ. ಮಧ್ಯಭಾಗದಲ್ಲಿ ಸರಿಯಾಗಿ ಕಳಸವನ್ನು ಅಲುಗಾಡದಂತೆ ಕೂರಿಸಿ. ಮೇಲಿನ ಕಳಸಕ್ಕೆ ಅಡ್ಡದಾಗಿ ಒಂದು ಬಿದಿರು ಅಥವಾ ಯಾವುದೇ ಅಲ್ಲಾಡದಂತಹ ಕಡ್ಡಿಯನ್ನು ಬಿಗಿಯಾಗಿ ಕಟ್ಟಿ. ಅಲಂಕರಿಸಿ.

Saree Draping

ದೇವಿಯ ಸೀರೆಯ ಅಲಂಕಾರ

ಒಂದು ಪ್ರತ್ಯೇಕ ಬ್ಲೌಸ್ ಪೀಸನ್ನು ಬಿಂದಿಗೆಗೆ ಕಟ್ಟಿ, ಮೇಲ್ಭಾಗವನ್ನು ಪಿನ್ ಮಾಡಿ. ದೇವಿಯ ಕೈ ಕಾಲುಗಳ ಪ್ರತಿರೂಪವಿದ್ದಲ್ಲಿ ಅದನ್ನು ಬಿಂದಿಗೆಯ ಅಕ್ಕ ಪಕ್ಕ ಕಟ್ಟಿ, ಕೂರಿಸಿ. ಇನ್ನು ಸೀರೆಯ ಒಂದು ಸೈಡಿನಿಂದ ನೆರಿಗೆ ಮಾಡಿಕೊಳ್ಳಿ. ಸೆರಗಿಗೆ ಬೇಕಾದಷ್ಟು ಬಿಟ್ಟು ನೆರಿಗೆ ಕಟ್ಟಿಡಿ. ಕೆಳಗೆ ಮೇಲೆ ಎರಡಕ್ಕೂ ಕಟ್ಟಿ. ನಿಮಗೆ ಎಷ್ಟು ಎತ್ತರಕ್ಕೆ ಬೇಕೋ ಅಷ್ಟು ಎತ್ತರಕ್ಕೆ ಸೀರೆಯನ್ನು ಫೋಲ್ಡ್ ಮಾಡಿ ನೆರಿಗೆ ಎರಡು ಸ್ಟೆಪ್ ಕೂರುವಂತೆ ನೋಡಿಕೊಂಡು ಬಿಂದಿಗೆಗೆ ಕಟ್ಟಿ. ನಂತರ ಕಟ್ಟಿರುವ ನೆರಿಗೆಯನ್ನು ನೀಟಾಗಿ ಹರಡಿ. ಅಂದವಾಗಿ ಕಾಣಿಸುವುದು.

Varamahalakshmi

ಸೀರೆ ಉಡಿಸಲು ಸುಲಭ ವಿಧಾನ

ಕೋಲಿನ ಅಳತೆಗೆ ಸೆರಗು ಹಾಕಿ, ಎರಡ್ಮೂರು ಕಡೆ ಬಿಚ್ಚಿ ಹೋಗದಂತೆ ಪಿನ್ ಮಾಡಿ. ಇತ್ತ ಬಿಂದಿಗೆಯ ಎಡಭಾಗದಿಂದ ಒಂದು ಸುತ್ತು ಸೆರಗನ್ನು ತೆಗೆದುಕೊಳ್ಳಿ. ಇದರಿಂದ ಸೀರೆ ಉಡಿಸುವುದು ಸುಲಭವಾಗುತ್ತದೆ. ಸೆರಗನ್ನು ಮುಂದೆಯಾದರೂ ಹರಡಬಹುದು ಅಥವಾ ಹಿಂದೆಯಾದರೂ ಪಿನ್ ಮಾಡಬಹುದು. ನಿಮಗೆ ಬೇಕಾದ ಶೈಲಿಯಲ್ಲಿ ಸೆರಗು ಹಾಕಿ ಡಿಸೈನ್ ಮಾಡಿ.

Shravana Special 2026: ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ರೆಡಿಮೇಡ್‌ ವರಮಹಾಲಕ್ಷ್ಮೀಯರು

ಸೊಂಟದ ಪಟ್ಟಿ ಆಭರಣಗಳ ಅಲಂಕಾರ

ನಂತರ ದೇವಿಗೆ ಸೊಂಟದ ಪಟ್ಟಿ ಹಾಕಿ. ಹಂತಹಂತವಾಗಿ ಒಡವೆ ಹಾಕಿ, ಅಲಂಕರಿಸಿ. ನೋಡಲು ಆಕರ್ಷಕವಾಗಿ ಕಾಣುವುದು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)