ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀವಾವಧಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಿನಯ್ ಕುಲಕರ್ಣಿ ಅವರ ಪರ ಪುತ್ರಿ ದೀಪಾಲಿ ವಿ. ಕುಲಕರ್ಣಿ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 19, 2026 10:27 AM

ಬೆಂಗಳೂರು: ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಿನಯ್ ಕುಲಕರ್ಣಿ ಅವರ ಪರ ಪುತ್ರಿ ದೀಪಾಲಿ ವಿ. ಕುಲಕರ್ಣಿ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ತಂದೆಯ ಜೊತೆಗೆ ಇರುವ ಬಾಲ್ಯದ ಹಳೆಯ ಫೋಟೋಗಳನ್ನು ಹಂಚಿಕೊಂಡಿರುವ ದೀಪಾಲಿ ತಂದೆಯ ಕುರಿತು ಬರೆದುಕೊಂಡಿದ್ದಾರೆ.

ಪೋಸ್ಟ್‌ನಲ್ಲೇನಿದೆ?

"ಉತ್ತರ ಕರ್ನಾಟಕದಾದ್ಯಂತ, ವಿದ್ಯಾರ್ಥಿ ನಾಯಕರಿಂದ ರಾಜ್ಯ ನಾಯಕರಾಗುವವರೆಗೆ ಅವರ ಪಯಣವನ್ನು ಜನರು ಸಾಕ್ಷಿಯಾಗಿ ನೋಡಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿ, ಸಾವಿರಾರು ಪಶುಗಳೊಂದಿಗಿನ ದೊಡ್ಡ ಡೈರಿ ಕಾರ್ಯಾಚರಣೆಯನ್ನು ನಿರ್ಮಿಸಿ ನಿರ್ವಹಿಸಿದವರು, ಯುವ ರೈತರಿಗೆ ಪ್ರೇರಣೆಯಾದವರು. ಅವರು ಯಾವಾಗಲೂ ಎಲ್ಲ ವಯಸ್ಸಿನ ಜನರೊಂದಿಗೆ ಸರಳವಾಗಿ ಬೆರೆತವರು, ಗೌರವದಿಂದ ವರ್ತಿಸಿದವರು ಮತ್ತು ಸಹಾಯಕ್ಕೆ ಸದಾ ಸಿದ್ಧರಾಗಿದ್ದವರು. ಜನರಿಗಾಗಿ ಬದುಕಿದ ನಾಯಕನಾಗಿ, ಅವರು ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ. ಅನೇಕ ಕುಟುಂಬಗಳಿಗೆ ಅವರು ಕೇವಲ ನಾಯಕನಲ್ಲ, ತಮ್ಮವರಲ್ಲೊಬ್ಬರು. ನಾವು ಅವರನ್ನು ಯಾವಾಗಲೂ ಅವರ ಕೆಲಸಗಳಿಂದಲೇ ಗುರುತಿಸಿದ್ದೇವೆ. ಅವರು ಎಂದೆಂದಿಗೂ ನಮ್ಮ ನಾಯಕ, ನಮ್ಮ ಮಾರ್ಗದರ್ಶಕ ಮತ್ತು ನಮ್ಮ ಅತಿ ದೊಡ್ಡ ಹೆಮ್ಮೆ.

Vinay Kulakarni

ನಾವು ದೃಢವಾಗಿದ್ದೇವೆ. ಅವರ ನೈತಿಕತೆ ಮತ್ತು ಸತ್ಯದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ವಿಷಯಕ್ಕೆ ಸಾರ್ವಜನಿಕ ಗಮನ ಮತ್ತು ವಿಭಿನ್ನ ಅಭಿಪ್ರಾಯಗಳು ಸಾಕಷ್ಟು ಬಂದಿವೆ ಎಂಬುದನ್ನೂ ನಾವು ಅರಿತಿದ್ದೇವೆ. ನ್ಯಾಯಾಂಗ ಪ್ರಕ್ರಿಯೆಗೆ ನಾವು ಗೌರವ ನೀಡುತ್ತೇವೆ ಮತ್ತು ಮೇಲ್ಮನವಿ ನ್ಯಾಯಾಲಯಗಳತ್ತ ಪೂರ್ಣ ನಂಬಿಕೆಯಿಂದ ಮುಂದುವರಿಯುತ್ತಿದ್ದೇವೆ. ನಮಗೆ ದೊರೆತಿರುವ ಪ್ರೀತಿ, ಪ್ರಾರ್ಥನೆಗಳು ಮತ್ತು ಬೆಂಬಲಕ್ಕಾಗಿ ನಾವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಒಟ್ಟಾಗಿ, ನಾವು ಬಲವಾಗಿ ನಿಲ್ಲುತ್ತೇವೆ. ನಾವು ಇದನ್ನೂ ದಾಟುತ್ತೇವೆ. ಇದು ಕೂಡ ಸಾಗಿಹೋಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ".

Yogesh Gowda Murder Case: ಮೂವರು ಮಕ್ಕಳು ಇದ್ದಾರೆ, ಕಡಿಮೆ ಶಿಕ್ಷೆ ಕೊಡಿ; ಜಡ್ಜ್‌ಗೆ ಶಾಸಕ ವಿನಯ್‌ ಕುಲಕರ್ಣಿ ಮನವಿ

ಜೈಲಿನಲ್ಲಿ ಕುಲಕರ್ಣಿ ಕಣ್ಣೀರು

ವಿನಯ್‌ ಕುಲಕರ್ಣಿ ಜೈಲಿನಲ್ಲಿ ಇರಲಾಗದೇ ಶುಕ್ರವಾರ ರಾತ್ರಿಯಿಡೀ ಚಿಂತೆಗೆ ಒಳಗಾಗಿದ್ದರು. ಜೊತೆಗೆ, ಶುಕ್ರವಾರ ರಾತ್ರಿ ಚಪಾತಿ, ಊಟ ನೀಡಲಾಗಿತ್ತು. ಸರಿಯಾಗಿ ಆಹಾರ ಸೇವಿಸದೇ ಮಲಗಿದ್ದರು. ತಡರಾತ್ರಿ ಸುಮಾರು 3 ಗಂಟೆಯವರೆಗೆ ಬೇಸರದಲ್ಲಿ ಕಣ್ಣೀರು ಹಾಕಿದ್ದ ವಿನಯ್‌ ಕುಲಕರ್ಣಿ ಹಾಗೂ ಇತರ ಅಪರಾಧಿಗಳು, ನಂತರ ನಿದ್ದೆಗೆ ಜಾರಿದ್ದರು. ಶನಿವಾರ ಮುಂಜಾನೆ ಖೈದಿಗಳ ಜೊತೆಗೆ ಕೊಂಚ ಸಮಯ ಚರ್ಚೆ ನಡೆಸಿದ ವಿನಯ್‌ ಕುಲಕರ್ಣಿ, ಬಳಿಕ ಮೌನಕ್ಕೆ ಶರಣಾಗಿದ್ದಾರೆ. ಶನಿವಾರ ಬೆಳಗ್ಗೆ ಉಪಹಾರ ಸೇವಿಸಿ, ಮಧ್ಯಾಹ್ನ ಸ್ವಲ್ಪ ಊಟ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.