ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ನ್ಯಾಯಾಲಯದ ಆದೇಶದಂತೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಸ್ಥಳ ತೆರವು: ವಕೀಲ ಕಾರ್ತಿಕ್ ವಿ.

ಬಾಲಕೃಷ್ಣ ಅವರ ಮೊಮ್ಮಗ ಬಿ.ಎಸ್. ಕಾರ್ತಿಕ್ ಕಾನೂನು ಹೋರಾಟ ನಡೆಸಿದ್ದರು. ನ್ಯಾಯಾ ಲಯದ ಆದೇಶದಂತೆ ಎರಡು ತಿಂಗಳ ನಂತರವೂ ಸಮಾಧಿ ಸ್ಥಳವನ್ನು ತೆರವುಗೊಳಿಸಿರಲಿಲ್ಲ. ಆದರೆ ಕಳೆದ 2020 ರ ಜನವರಿ 10 ರಂದು ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಮೈಸೂರಿಗೆ ಸ್ಥಳಾಂತರಿ ಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು.

ನ್ಯಾಯಾಲಯದ ಆದೇಶದಂತೆ ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿ ಸ್ಥಳ ತೆರವು

Ashok Nayak Ashok Nayak Aug 9, 2025 12:12 AM

ಬೆಂಗಳೂರು: ಹಿರಿಯ ನಟ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಅಭಿಮಾನ್ ಸ್ಟೂಡಿಯೋ ದಿಂದ ರಾಜ್ಯ ಹೈಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿದೆ ಎಂದು ವಕೀಲ ಕಾರ್ತಿಕ್ ವಿ. ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ವರ್ಷದ ಜನವರಿ 13 ರಂದು ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕ ಸದಸ್ಯ ಪೀಠ ಸಮಾಧಿ ಸ್ಥಳವನ್ನು ತೆರುವುಗೊಳಿಸುವಂತೆ ಆದೇಶ ನೀಡಿತ್ತು. ಆದ್ಯತೆಯ ಮೇರೆಗೆ ಸಮಾಧಿ ತೆರವುಗೊಳಿಸುವಂತೆ ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ನಗರದ ವಿಶೇಷ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು ಎಂದಿದ್ದಾರೆ.

ಇದನ್ನೂ ಓದಿ: Bangalore News: ಪ್ಲಾಸ್ಟಿಕ್‌ ಮರುಬಳಕೆ ಕುರಿತು ಶಾಲಾ ಮಕ್ಕಳಿಗೆ ಜಾಗೃತಿ: ಸರ್ಕಾರಿ ಶಾಲೆಗೆ ಮರುಬಳಕೆ

ಬಾಲಕೃಷ್ಣ ಅವರ ಮೊಮ್ಮಗ ಬಿ.ಎಸ್. ಕಾರ್ತಿಕ್ ಕಾನೂನು ಹೋರಾಟ ನಡೆಸಿದ್ದರು. ನ್ಯಾಯಾ ಲಯದ ಆದೇಶದಂತೆ ಎರಡು ತಿಂಗಳ ನಂತರವೂ ಸಮಾಧಿ ಸ್ಥಳವನ್ನು ತೆರವುಗೊಳಿಸಿರಲಿಲ್ಲ. ಆದರೆ ಕಳೆದ 2020 ರ ಜನವರಿ 10 ರಂದು ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಮೈಸೂರಿಗೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಮೈಸೂರಿನಲ್ಲಿ ಸ್ಮಾರಕ ನಿರ್ಮಿ ಸಲು ಸರ್ಕಾರ 2.5 ಎಕರೆ ಭೂಮಿಯನ್ನು ಸಹ ಸರ್ಕಾರ ಮಂಜೂರು ಮಾಡಿತ್ತು ಎಂದು ಹೇಳಿದ್ದಾರೆ.

ಆದೇಶ ನೀಡಿದ ಎರಡು ತಿಂಗಳಲ್ಲಿ ಸಮಾಧಿ ಸ್ಥಳವನ್ನು ತೆರವು ಮಾಡದ ಕಾರಣ ನ್ಯಾಯಾಲಯದ ಆದೇಶದಂತೆ ಪೊಲೀಸರ ಸಮ್ಮುಖದಲ್ಲಿ ಸಮಾಧಿ ಸ್ಥಳವನ್ನು ತೆರವು ಮಾಡಲಾಗಿದೆ ಎಂದು ವಕೀಲ ಕಾರ್ತಿಕ್ ವಿ ತಿಳಿಸಿದ್ದಾರೆ.