ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಗೂಗಲ್ ಕ್ಯಾಂಪಸ್‌ನಲ್ಲಿ ಮೊಮ್ಮಗನ ಜತೆ ಕಾಲ ಕಳೆದ ಅಜ್ಜ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

Viral Video: ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಕಂಪನಿಯ ಉದ್ಯೋಗ ಸಿಗಬೇಕು ಎನ್ನುವ ಕನಸು, ಆಸೆ ಇರುತ್ತದೆ. ಅದರಲ್ಲೂ ಹೆಚ್ಚು ಪ್ಯಾಕೇಜ್ ಇರುವ ಕೆಲಸ ಸಿಕ್ಕಾಗ ಅದೊಂದು ದೊಡ್ಡ ಯಶಸ್ಸು ಎಂದೇ ಹೇಳಬಹುದು. ಆದರೆ ಕೆಲಸ ಎಂದಾಗ ಉತ್ತಮ ವೇತನ ಮಾತ್ರ ಮುಖ್ಯ ಅಲ್ಲ ಎಂಬುವುದನ್ನು ಇಲ್ಲೊಬ್ಬ ಬೆಂಗಳೂರಿನ ಯುವಕ ತೋರಿಸಿಕೊಟ್ಟಿದ್ದಾನೆ. ಯಶಸ್ಸು ಎಂದರೆ ಕೇವಲ ದೊಡ್ಡ ಮೊತ್ತದ ಸಂಬಳ ಮಾತ್ರವಲ್ಲ ನಮ್ಮ ಆತ್ಮೀಯರಲ್ಲಿ ಕಾಣಿಸುವ ಖುಷಿ ಕೂಡ ದೊಡ್ಡ ಸಾಧನೆ, ಯಶಸ್ಸು ಎಂದು ತೋರಿಸಿಕೊಟ್ಟಿದ್ದಾನೆ.

ಗೂಗಲ್ ಕ್ಯಾಂಪಸ್‌ನಲ್ಲಿ ತಾತನೊಂದಿಗೆ ಸಮಯ ಕಳೆದ ಮೊಮ್ಮಗ

ಗೂಗಲ್ ಕ್ಯಾಂಪಸ್‌ನಲ್ಲಿ ಮೊಮ್ಮಗನ ಜತೆ ಕಾಲ ಕಳೆದ ಅಜ್ಜ -

Profile
Pushpa Kumari Apr 27, 2026 8:12 PM

ಬೆಂಗಳೂರು, ಏ. 27: ಹೆಚ್ಚಿನ ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಕಂಪನಿಯ ಉದ್ಯೋಗ ಸಿಗಬೇಕು ಎನ್ನುವ ಕನಸು, ಆಸೆ ಇದ್ದೇ ಇರುತ್ತದೆ. ಅದರಲ್ಲೂ ಹೆಚ್ಚು ಪ್ಯಾಕೇಜ್ ಇರುವ ಕೆಲಸ ಸಿಕ್ಕಾಗ ಅದೊಂದು ದೊಡ್ಡ ಯಶಸ್ಸು ಎಂದೇ ಹೇಳಬಹುದು. ಆದರೆ ಕೆಲಸ ಎಂದಾಗ ಉತ್ತಮ ವೇತನ ಮಾತ್ರ ಮುಖ್ಯ ಅಲ್ಲ ಎಂಬುವುದನ್ನು ಇಲ್ಲೊಬ್ಬ ಬೆಂಗಳೂರಿನ (Bengaluru) ಯುವಕ ತೋರಿಸಿಕೊಟ್ಟಿದ್ದಾನೆ. ಯಶಸ್ಸು ಎಂದರೆ ಕೇವಲ ದೊಡ್ಡ ಮೊತ್ತದ ಸಂಬಳ ಮಾತ್ರವಲ್ಲ ನಮ್ಮ ಆತ್ಮೀಯರಲ್ಲಿ ಕಾಣಿಸುವ ಖುಷಿ ಕೂಡ ದೊಡ್ಡ ಸಾಧನೆ, ಯಶಸ್ಸು ಎಂದು ಸಾಬೀತುಪಡಿಸಿದ್ದಾರೆ.

ಬೆಂಗಳೂರು ಮೂಲದ ಉದ್ಯೋಗಿಯೊಬ್ಬರು ತಾತನ ಜತೆ ಗೂಗಲ್‌ ಕಂಪನಿಯಲ್ಲಿ ಖುಷಿಯಾದ ದಿನವನ್ನು ಕಳೆದಿದ್ದಾನೆ. ಯಶಸ್ಸನ್ನು ಹೆಚ್ಚಾಗಿ ಸಂಬಳ ಮತ್ತು ಬಡ್ತಿಗಳ ಮೂಲಕ ಅಳೆಯುವ ಜಗತ್ತಿನಲ್ಲಿ ಈ ಸರಳ ಆಚರಣೆಯೂ ನಮ್ಮವರಿಗೆ ಎಷ್ಟು ಖುಷಿ ನೀಡುತ್ತದೆ ಎಂಬುದನ್ನು ಈ ದೃಶ್ಯ ಹೇಳುತ್ತದೆ.

ವಿಡಿಯೊ ನೋಡಿ:

ಬೆಂಗಳೂರು ಮೂಲದ ಗೂಗಲ್ ಉದ್ಯೋಗಿ ಮನೀಶ್ ಸಿಂಗ್ ಇತ್ತೀಚೆಗೆ ತಮ್ಮ ಅಜ್ಜನನ್ನು ಕಂಪನಿಯ ಕ್ಯಾಂಪಸ್‌ಗೆ ಕರೆದೊಯ್ದಿದ್ದಾರೆ. ಇಲ್ಲಿ ಇಬ್ಬರೂ ಇಡೀ ದಿನ ಒಟ್ಟಿಗೆ ಸಮಯ ಕಳೆದು ಮೋಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಕೆಫೆಟೇರಿಯಾದಲ್ಲಿ ಊಟ ಹಂಚಿ ಕೊಳ್ಳುವುದು, ಸೈಕ್ಲಿಂಗ್ ಮಾಡುವುದು ಅಷ್ಟೇ ಅಲ್ಲದೆ, ಗೇಮಿಂಗ್ ಜೋನ್‌ನಲ್ಲಿ ಕೂಡ ಖುಷಿ ಪಟ್ಟಿದ್ದಾರೆ.

ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ

ತನ್ನ ಅಜ್ಜನೇ ತನಗೆ ಬಾಲ್ಯದಲ್ಲಿ ಸೈಕಲ್ ಕೊಡಿಸಿದ್ದು ಸೈಕಲ್ ಸವಾರಿ ಮಾಡುವುದನ್ನು ಹೇಗೆ ಕಲಿಸಿದರೆಂದು ಮನೀಶ್ ನೆನಪಿಸಿಕೊಂಡಿದ್ದಾರೆ. ವರ್ಷಗಳ ನಂತರ, ಮತ್ತೆ ಒಟ್ಟಿಗೆ ಈ ಬಾರಿ ಗೂಗಲ್ ಕ್ಯಾಂಪಸ್ ಒಳಗೆ ಸೈಕ್ಲಿಂಗ್ ಮಾಡಿದ್ದು, ಮನೀಶ್‌ಗೆ ಈ ಹಿಂದಿನ ನೆನಪು ಮರುಕಳಿಸುವಂತೆ ಮಾಡಿದೆ.

ವಿಡಿಯೊವನ್ನು ಪೋಸ್ಟ್ ಮಾಡಿದ ಮನೀಶ್ ತನ್ನ ಅಜ್ಜನ ನಗುವನ್ನು ನೋಡುವುದು ಅವರು ಗಳಿಸಿದ ಪ್ರತಿಯೊಂದು ವೃತ್ತಿಪರ ಸಾಧನೆ ಎಂದು ಹೇಳಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ‌. ಒಬ್ಬರು, "ಇದು ನಿಜವಾದ ನಿಮ್ಮ ಯಶಸ್ಸು, ‌ಕುಟುಂಬವನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ'' ಎಂದು ಬರೆದಿದ್ದಾರೆ. ಮತ್ತೊಬ್ಬರು ''ನಿಜಕ್ಕೂ ಹೃದಯಸ್ಪರ್ಶಿ'' ದೃಶ್ಯ ಎಂದಿದ್ದಾರೆ.