ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ಆರ್ಯ ವೈಶ್ಯ ಸಮುದಾಯ ವಹಿವಾಟಿನ ಜೊತೆಗೆ ಸೇವಾ ಕಾಯಗಳಿಗೂ ಒತ್ತು: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು

ಆರ್ಯ ವೈಶ್ಯ ಸಮಮುದಾಯದ ಅಭಿವೃದ್ಧಿಗೆ ನನ್ನ ಸಹಕಾರ ನೀಡುವುದಾಗಿ ತಿಳಿಸಿದ ಅವರು ಆರ್ಯ ವೈಶ್ಯ ಸಮುದಾಯ ಅತ್ಯಂತ ಪ್ರಭಾವಶಾಲಿ ಸಮುದಾಯ, ಬಹುತೇಕರು ವ್ಯಾಪಾರ ವಹಿವಾಟು ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ. ತಾಲೂಕಿನ ರಾಜಕಾರಣವನ್ನು ಬದಲಿಸುವಷ್ಷು ಪ್ರಭಾವ ಹೊಂದಿರುವ ಇವರು ತಮ್ಮ ದುಡಿಮೆಯಲ್ಲಿನ ಒಂದು ಪಾಲನ್ನು ಧಾರ್ಮಿಕ ಕಾರ್ಯಗಳಿಗೆ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳಿಗೆ ನೀಡುತ್ತಿದ್ದಾರೆ.

ವಹಿವಾಟು ಜೊತೆಗೆ ಸೇವಾ ಕಾಯಗಳಿಗೂ ಆರ್ಯ ವೈಶ್ಯ ಸಮುದಾಯ ಒತ್ತು

ಆರ್ಯ ವೈಶ್ಯ ಸಮುದಾಯವು ತಮ್ಮ ವಹಿವಾಟಿನ ಜೊತೆಗೆ ಸೇವಾ ಮನೋಭಾವನೆಯನ್ನು ಹಾಗೂ ದೈವಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿಕೊಂಡು ಬಂದಿದ್ದಾರೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು ಹೇಳಿದರು. -

Profile
Ashok Nayak Apr 27, 2026 8:38 PM

ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಜಯಂತೋತ್ಸವ : ಸಮುದಾಯ ಭಾಗಿ

ಗೌರಿಬಿದನೂರು: ಆರ್ಯ ವೈಶ್ಯ ಸಮುದಾಯವು ತಮ್ಮ ವಹಿವಾಟಿನ ಜೊತೆಗೆ ಸೇವಾ ಮನೋಭಾವನೆಯನ್ನು ಹಾಗೂ ದೈವಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿಕೊಂಡು ಬಂದಿದ್ದಾರೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ(MLA KH Puttaswamy Gowda)ರು ಹೇಳಿದರು.

ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಾಸವಿ ಜಯಂತಿ ಪ್ರಯುಕ್ತ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಆರ್ಯ ವೈಶ್ಯ ಸಮುದಾಯವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುವ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಜಯಂತೋತ್ಸವವಾಗಿದ್ದು, ವಾಸವಿ ದೇವಿ ಪಾರ್ವತಿಯ ಅವತಾರವೆಂದು ಆರಾಧಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Gauribidanur News: ರಕ್ತದಾನ ಜೀವದಾನಕ್ಕೆ ಸಮಾನ: ಬಿ.ಆರ್.ಶ್ರೀನಿವಾಸ್ ಮೂರ್ತಿ

ಆರ್ಯ ವೈಶ್ಯ ಸಮಮುದಾಯದ ಅಭಿವೃದ್ಧಿಗೆ ನನ್ನ ಸಹಕಾರ ನೀಡುವುದಾಗಿ ತಿಳಿಸಿದ ಅವರು ಆರ್ಯ ವೈಶ್ಯ ಸಮುದಾಯ ಅತ್ಯಂತ ಪ್ರಭಾವಶಾಲಿ ಸಮುದಾಯ,ಬಹುತೇಕರು ವ್ಯಾಪಾರ ವಹಿವಾಟು ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ. ತಾಲೂಕಿನ ರಾಜಕಾರಣವನ್ನು ಬದಲಿಸುವಷ್ಷು ಪ್ರಭಾವ ಹೊಂದಿರುವ ಇವರು ತಮ್ಮ ದುಡಿಮೆ ಯಲ್ಲಿನ ಒಂದು ಪಾಲನ್ನು ಧಾರ್ಮಿಕ ಕಾರ್ಯಗಳಿಗೆ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳಿಗೆ ನೀಡುತ್ತಿದ್ದಾರೆ. ತಾಲೂಕಿನ ಹಲವಾರು ಶಾಲಾ ಕಾಲೇಜುಗಳನ್ನು ನಿರ್ಮಿ ಸಲು ಜಮೀನು ಹಾಗೂ ಹಣವನ್ನು ನೀಡಿ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ಲೋಕ ಕಲ್ಯಾಣಾರ್ಥವಾಗಿ ಸಮುದಾಯದವರು ಹಮ್ಮಿ ಕೊಳ್ಳುವ ಕಾರ್ಯಗಳಿಗೆ ತಾವೂ ಸಹ ಕೈಜೋಡಿಸುವುದಾಗಿ ತಿಳಿಸಿದರು.

ಆರ್ಯ ವೈಶ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹಾಗೂ ಉದ್ಯಮಿ ಬಿ.ಆರ್. ಶ್ರೀನಿವಾಸಮೂರ್ತಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಹ ಶ್ರೀ ವಾಸವಿ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ, ವಾಸವಿ ಜಯಂತಿ ಪ್ರಯುಕ್ತ ದೇವಾಲಯದಲ್ಲಿ ಮೂರು ದಿನಗಳಿಂದ ವಿಶೇಷ ಪೂಜೆ, ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವಾಸವಿ ಅಮ್ಮನವರ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ನಗರದ ರಾಜಬೀದಿಗಳಲ್ಲಿ ವಿಜೃಂಭಣೆಯಿAದ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಅಮರನಾಥಶೆಟ್ಟಿ ಆರ್ಯ ವೈಶ್ಯ ಮಂಡಳಿ ಯ ಅಧ್ಯಕ್ಷ ಅಲಂಪಲ್ಲಿ ರಾಜಣ್ಣ, ಖಜಾಂಚಿ ರತ್ನಯ್ಯ ಶೆಟ್ಟಿ, ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ನಿರ್ದೇಶಕ ರಾಮಮೋಹನ್, ವಾಸವಿ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಇಸ್ತೂರಿ ಸಂಪAಗಿರಾಮ್,ವಾಸವಿ ಯುವಜನ ಸಂಘದ ಅಧ್ಯಕ್ಷ ಸುಮನ್, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ಜ್ಯೋತಿ ವೇಣುಗೋಪಾಲ್, ಆರ್ಯಪುತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ಕೆ.ವಿ.ಆರ್.ಜಯಲಕ್ಷ್ಮಮ್ಮ,ವಾಸವಿ ದೀಕ್ಷಾ ಸಮಿತಿ ಅಧ್ಯಕ್ಷ ಕಾಪರ್ತಿ ಸುಬ್ರಹ್ಮಣ್ಯಂ ಮುಂತಾದವರು ಭಾಗವಹಿಸಿದ್ದರು.