ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RSS: ಶಿಸ್ತುಬದ್ಧ ಆರ್‌ಎಸ್‌ʼಎಸ್‌ ನೋಂದಣಿ ಆಗಿಲ್ಲವೇಕೆ ?: ಗೃಹಸಚಿವ ಖರ್ಗೆಯಿಂದ ಸರಸಂಘಚಾಲಕ ಭಾಗವತ್‌ಗೆ ಪಶ್ನೆ

ಪತ್ರದಲ್ಲಿ ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಖರ್ಗೆ, ಯಾಕೆ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್, ಸಂಘ ಸರಕಾರದಿಂದ ದೇಣಿಗೆ ತೆಗೆದುಕೊಂಡಿಲ್ಲ, ನೋಂದಣಿ ಅಗತ್ಯ ವಿಲ್ಲ ಎಂದು ಹೇಳಿದ್ದಾರೆ.

ಶಿಸ್ತುಬದ್ಧ ಆರ್‌ಎಸ್‌ʼಎಸ್‌ ನೋಂದಣಿ ಆಗಿಲ್ಲವೇಕೆ ?

-

Profile
Ashok Nayak Jun 16, 2026 6:44 AM

ಸರಕಾರದ ದೇಣಿಗೆ ಪಡೆದಿಲ್ಲ, ನೋಂದಣಿ ಬೇಕಿಲ್ಲ: ಭಾಗವತ್

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ತನ್ನ ನೂರನೇ ವರ್ಷದ ಸಂಭ್ರಮಾ ಚರಣೆಯಲ್ಲಿರುವ ಹೊತ್ತ, ಸಂಘದ ಪಾರದರ್ಶಕತೆ ಹಾಗೂ ಸಂವಿಧಾನಾತ್ಮಕ ಹೊಣೆಗಾರಿಕೆಯ ಕುರಿತು ಪ್ರಶ್ನಿಸಿ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರವೊಂದನ್ನು ರವಾನಿಸಿದ್ದಾರೆ.

ಪತ್ರದಲ್ಲಿ ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಖರ್ಗೆ, ಯಾಕೆ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಸಂಘ ಸರಕಾರದಿಂದ ದೇಣಿಗೆ ತೆಗೆದುಕೊಂಡಿಲ್ಲ, ನೋಂದಣಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ನೋಂದಣಿ ವಿಚಾರ ಎತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಶತಮಾನೋತ್ಸವದ ಶುಭಾಶಯ ಗಳೊಂದಿಗೆ ಆರಂಭವಾಗಿರುವ ಈ ಪತ್ರದಲ್ಲಿ, ದೇಶವಿದೇಶಗಳಲ್ಲಿ ಸಾವಿರಾರು ಶಾಖೆಗಳು ಹಾಗೂ ಕೋಟ್ಯಂತರ ಸ್ವಯಂಸೇವಕರ ಬೃಹತ್ ಜಾಲ ಹೊಂದಿರುವ ಸಂಘಟನೆಯು ಸಾರ್ವಜನಿಕ ಜೀವನದಲ್ಲಿ ಭಾರಿ ಪ್ರಭಾವ ಬೀರುತ್ತಿದೆ.

ಹೀಗಾಗಿ, ತನ್ನ ಕಾನೂನುಬದ್ಧ ಸ್ಥಾನಮಾನ ಹಾಗೂ ಆರ್ಥಿಕ ಮೂಲಗಳ ಕುರಿತು ದೇಶದ ಜನತೆಗೆ ಸಂಘ ಸ್ಪಷ್ಟನೆ ನೀಡಬೇಕು ಎಂದು ತೀವ್ರವಾಗಿ ಒತ್ತಾಯಿಸಲಾಗಿದೆ.ಕಾರ್ಯಕ್ರಮಗಳಿಗೆ ಮತ್ತು ಯಾವುದೇ ಸಾರ್ವಜನಿಕವಾಗಿ ಪಡೆಯುತ್ತಿರುವ ಅಧಿಕೃತ ಅನುಮತಿಗಳು ನೋಂದಣಿಯಿಲ್ಲದೆ ಕಾರ್ಯನಿರ್ವಹಿಸಲು ಇರುವ ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಆಧಾರಗಳೇನು ಅಖಿಲ ಭಾರತೀಯ ಪ್ರತಿನಿಧಿಸಭಾದ 2025-26ನೇ ಸಾಲಿನ ಕರ್ನಾಟಕದ ವರದಿಯನ್ನು ಉಲ್ಲೇಖಿಸಿರುವ ಸಚಿವರು, ರಾಜ್ಯದಲ್ಲಿ ಆರ್‌ಎಸ್‌ಎಸ್ ಹೊಂದಿರುವ ಬೃಹತ್ ಪ್ರಭಾವ ವಿವರಿಸಿದ್ದಾರೆ.

ಇದನ್ನೂ ಓದಿ: Priyank Kharge-RSS: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ; ಸಂಘದ ಕಾನೂನುಬದ್ಧ ಸ್ಥಾನಮಾನ, ಆದಾಯ ಕುರಿತು ಸ್ಪಷ್ಟನೆಗೆ ಆಗ್ರಹ

ವರದಿಯ ಪ್ರಕಾರ, ಕೇವಲ ಕರ್ನಾಟಕದಲ್ಲಿಯೇ ಆರ್‌ಎಸ್‌ಎಸ್ 4172 ದೈನಂದಿನ ಶಾಖೆಗಳು, 60 ಮಾಸಿಕ ಮಂಡಳಿಗಳನ್ನು ಲಕ್ಷ ನಿರಂತರವಾಗಿ ನಡೆಸುತ್ತಿದೆ. ಇದರ ಜತೆಗೆ ಬರೋಬ್ಬರಿ 19.61 ಜನರು ಭಾಗವಹಿಸಿದ್ದ 2194 ಸಮಾಜೋತ್ಸವಗಳು ಮತ್ತು 2.22 ಲಕ್ಷ ಗಣವೇಷಧಾರಿ ಸ್ವಯಂ ಸೇವಕರು ಪಾಲ್ಗೊಂಡಿದ್ದ 562 ಪಥಸಂಚಲನ ಯೋಜಿಸಲಾಗಿದೆ.

ಇಷ್ಟೊಂದು ದೊಡ್ಡ ಮಟ್ಟದ ಪ್ರಭಾವ ಹಾಗೂ ಕಾರ್ಯಾಚರಣೆಯ ವ್ಯಾಪ್ತಿ ಹೊಂದಿರುವ ಸಂಘಟನೆ ಕೇವಲ ಖಾಸಗಿ ಅಥವಾ ಅನೌಪಚಾರಿಕ ಗುಂಪು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಸಂಘಟನೆ ತನ್ನ ಚಟುವಟಿಕೆಗಳ ಬಗ್ಗೆ ಕಾನೂನುಬದ್ಧ ಪಾರದರ್ಶಕತೆ ಕಾಯ್ದುಕೊಳ್ಳು ವುದು ಕಡ್ಡಾಯವಾಗಿದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಆರ್ಥಿಕ ಮೂಲಗಳ ಬಹಿರಂಗಕ್ಕೆ ಪಟ್ಟು: ಸಮಾಜದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸಾರ್ವಜನಿಕ ಚಟುವಟಿಕೆಗಳನ್ನು ನಿರ್ವಹಿಸುವ ಸಂಘವು, ತನ್ನ ಅಧಿಕೃತ ನೋಂದಣಿ ಪ್ರಕ್ರಿಯೆ, ಸಾಂಸ್ಥಿಕ ರಚನೆ ಹಾಗೂ ಪ್ರಮುಖ ಪದಾಧಿಕಾರಿಗಳ ವಿವರ ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು. ಇದಲ್ಲದೆ, ದೇಣಿಗೆ, ಕಾಣಿಕೆ ಹಾಗೂ ಆದಾಯದ ಮೂಲಗಳ ಮಾಹಿತಿ, ಸಂಘದ ವೆಚ್ಚಗಳು, ಹೊಂದಿ ರುವ ಆಸ್ತಿಗಳ ವಿವರ ಹಾಗೂ ತೆರಿಗೆ ಪಾವತಿಯ ನಿಖರತೆಯ ಬಗ್ಗೆಯೂ ಪತ್ರದಲ್ಲಿ ಪ್ರಶ್ನಿಸಲಾಗಿದೆ. ಸಾರ್ವಜನಿಕ ಸಭೆಗಳು, ಸಮಾವೇಶಗಳು ಹಾಗೂ ಎಂಬ ಬಗ್ಗೆ ಸ್ಪಷ್ಟೀಕರಣ ಕೋರಲಾಗಿದೆ.

ಕಾನೂನು ಆರ್‌ಎಸ್‌ಎಸ್‌ಗೇಕಿಲ್ಲ?: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಕಾನೂನಿಗಿಂತ ಮೇಲಲ್ಲ. ದೇಶದ ಸಾಮಾನ್ಯ ನಾಗರಿಕರು, ಸಣ್ಣ ಸಂಘಟನೆಗಳು, ಎಜ್‌ಜಿಒ ಗಳು, ಟ್ರಸ್ಟ್‌ಗಳು, ದೇವಾಲಯಗಳು ಹಾಗೂ ಕಾರ್ಪೋರೇಟ್ ಕಂಪನಿಗಳು ಕಾನೂನಿನ ಚೌಕಟ್ಟಿನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿ, ತಮ್ಮ ಆದಾಯ-ವೆಚ್ಚ ಬಹಿರಂಗಪಡಿಸಿ ತೆರಿಗೆ ಪಾವತಿಸುತ್ತವೆ. ಹೀಗಿರುವಾಗ, ರಾಷ್ಟ್ರೀಯತೆ, ಶಿಸ್ತು ಹಾಗೂ ಕರ್ತವ್ಯದ ಬಗ್ಗೆ ಸದಾ ಮಾತನಾಡುವ ಆರ್‌ಎಸ್‌ಎಸ್‌ಗೆ ಮಾತ್ರ ಈ ಕಾನೂನುಗಳಿಂದ ವಿನಾಯಿತಿ ಏಕೆ? ಸಾಮಾನ್ಯ ಸಂಘಟನೆಗಳು ಕಾನೂನು ಪಾಲಿಸು ವಾಗ, ಆರ್‌ಎಸ್‌ಎಸ್ ಕೂಡ ಅದೇ ಮಾನದಂಡಗಳಿಗೆ ಒಳಪಡಬೇಕು ಎಂದು ಸಚಿವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಆತ್ಮಾವಲೋಕನವಾಗಲಿ ಎಂದ ಪ್ರಿಯಾಂಕ್ ಖರ್ಗೆ: ಆರ್ಎಸ್‌ಎಸ್ ತನ್ನ ನೂರನೇ ವರ್ಷದ ಸಂಭ್ರಮ ಕೇವಲ ಆಚರಣೆಯಾಗಿ ಸೀಮಿತಗೊಳಿಸದೆ, ಇದನ್ನು ಆತ್ಮಾವಲೋಕನದ ಉತ್ತಮ ಅವಕಾಶವಾಗಿ ಬಳಸಿಕೊಳ್ಳಬೇಕು. ತನ್ನನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳುವುದು, ಆರ್ಥಿಕ ಹಾಗೂ ಸಾಂಸ್ಥಿಕ ಚಟುವಟಿಕೆಗಳ ವಿವರ ಬಹಿರಂಗಪಡಿಸುವುದು, ಅನ್ವಯವಾಗುವ ತೆರಿಗೆ ಪಾವತಿ ಮತ್ತು ಭಾರತೀಯ ಕಾನೂನು ಚೌಕಟ್ಟಿನೊಳಗೆ ಉತ್ತರದಾಯಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಮೂಲಕ ಸಂವಿಧಾನದ ಮೇಲಿನ ಗೌರವ ಸಾಬೀತು ಪಡಿಸಬೇಕು. ಈ ಎಲ್ಲಾ ಗಂಭೀರ ವಿಷಯಗಳ ಕುರಿತು ಶೀಘ್ರದ ಆರ್‌ಎಸ್‌ಎಸ್ʼನಿಂದ ಅಧಿಕೃತ ಪ್ರತಿಕ್ರಿಯೆ ನಿರೀಕ್ಷಿಸುತ್ತಿರುವುದಾಗಿ ಎಂದು ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

1950ರಲ್ಲೇ ನೋಂದಾಯಿಸಲು ಏಕೆ ಹೇಳಲಿಲ್ಲ?: ಭಾಗವತ್ ಪ್ರಶ್ನೆ

ಕೇರಳದ ತ್ರಿಶೂರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಮೋಹನ್ ಭಾಗವತ್, ಇದೊಂದು ರಾಜಕೀಯ ಗಿಮಿಕ್ ಅಂತ ಟೀಕಿಸಿದ್ದಾರೆ. ಆರ್‌ಎಸ್‌ಎಸ್ ರಹಸ್ಯವಾಗಿಲ್ಲ, ನಾವು ತೆರೆದ ಬಯಲಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್ ಯಾವಾಗಲೂ ಬಹಿರಂಗವಾಗಿ ಕಾರ್ಯನಿರ್ವಹಿಸಿದೆ ಮತ್ತು ಎಂದಿಗೂ ರಹಸ್ಯವಾಗಿ ಕಾರ್ಯನಿರ್ವಹಿಸಿಲ್ಲ. ನಾವು ಮುಕ್ತ ಮೈದಾನದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಶಾಖೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತವೆ, ನಮ್ಮ ಕಾರ್ಯಕರ್ತರಾದವರು ಸ್ಥಳೀಯ ಪ್ರದೇಶಗಳಲ್ಲಿ ವಾಸಿಸುತ್ತಾರೆ ಮತ್ತು ಜನರು ಅವರನ್ನು ಪ್ರತಿದಿನ ನೋಡುತ್ತಾರೆ. ಪ್ರತಿ ಬ್ಲಾಕ್‌ನಲ್ಲಿ ಹಿಂದೂ ಸಮ್ಮೇಳನಗಳು ಸೇರಿದಂತೆ ನಮಗೆ ಅಗಾಧವಾದ ಕಾರ್ಯಕ್ರಮಗಳಿವೆ ಎಂದಿದ್ದಾರೆ.ಸಂಘವು ಪ್ರಾರಂಭವಾದಾಗಿನಿಂದ ಇದೇ ರೀತಿಯ ಸವಾಲು ಎದುರಿಸಿದೆ. ಸಂಘ ಆರಂಭವಾದ 10-15 ವರ್ಷದ ನಂತರ ಇವೆಲ್ಲವನ್ನೂ ಎದುರಿಸಿ ಅದಕ್ಕೆ ಒಗ್ಗಿಕೊಂಡಿದ್ದೇವೆ. ಅವು ಸಂಭವಿಸದಿದ್ದರೆ, ಏನೋ ತಪ್ಪಾಗಿದೆ ಎಂದು ನಮಗೆ ಅನಿಸುತ್ತದೆ ಅಂತ ಅವರು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಈ ಸಂಘಟನೆಯು ಸಾರ್ವಜನಿಕ ಇಚ್ಛೆಯಿಂದ ಹುಟ್ಟಿಕೊಂಡಿತು. ಹಿಂದೆ ಎರಡು ಬಾರಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಲಾಗಿತ್ತು, ಆದರೆ ನಿಷೇಧಗಳನ್ನು ತೆಗೆದು ಹಾಕಲಾಯಿತು, ಒಮ್ಮೆ ನ್ಯಾಯಾಲಯದ ಆದೇಶದ ಮೂಲಕ ಮತ್ತು ಒಮ್ಮೆ ಸತ್ಯಾಗ್ರಹದ ಮೂಲಕ ತೆರವುಗೊಳಿಸಲಾಯಿತು. ಸಂಘ ಇದೆ ಎಂದು ಸರಕಾರಕ್ಕೆ ತಿಳಿದಿದೆ. ನಮ್ಮ ಪ್ರಸ್ತಾವನೆಯನ್ನು 1950ರ ದಶಕದಲ್ಲಿ ಸರಕಾರಕ್ಕೆ ಸಲ್ಲಿಸ ಲಾಗಿತ್ತು. ಆದರೆ ಯಾರೂ ನಮಗೆ ನೋಂದಾಯಿಸಲು ಹೇಳಲಿಲ್ಲ. ಹಿಂದೂ ಧರ್ಮವನ್ನು ನೋಂದಾಯಿಸಲಾಗಿಲ್ಲ. ಅನೇಕ ವಿಷಯ ನೋಂದಾಯಿಸಲಾಗಿಲ್ಲ. ಹಾಗಿದ್ದಾಗ ನಾನು ಏಕೆ ಪ್ರತಿಕ್ರಿಯಿಸಬೇಕು? ಇದೆಲ್ಲವೂ ರಾಜಕೀಯ. ಅದರಲ್ಲಿ ಗಂಭೀರವಾಗಿ ಏನೂ ಇಲ್ಲ. ರಾಜಕೀಯ ವಿರೋಧಿಗಳು ಸಂಘದ ಕೆಲಸಕ್ಕೆ ಅಡ್ಡಿಪಡಿಸಲು ಮತ್ತು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರು ನಮ್ಮ ಬಗ್ಗೆ ತಿಳಿದಿದ್ದಾರೆ. ಹೀಗಾಗಿ ಇಂತಹ ತಹ ಪ್ರಯತ್ನಗಳು ವಿಫಲಗೊಳ್ಳುತ್ತವೆ ಎಂದಿದ್ದಾರೆ.