ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೆಪ್ಟೆಂಬರ್ ಮೊದಲ ವಾರದಲ್ಲಿ ಮೆಟ್ರೋ ಪಿಂಕ್‌ ಲೈನ್‌ ಸಂಚಾರ ಆರಂಭ?

Bengaluru Metro Pink Line: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಸಿಗುವ ಸಾಧ್ಯತೆಯಿದೆ. ಆಗಸ್ಟ್ 15ರಂದು ಆರಂಭವಾಗಬೇಕಿದ್ದ ನಮ್ಮ ಮೆಟ್ರೋ ಪಿಂಕ್‌ ಲೈನ್‌ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಸದ್ಯ ಪಿಂಕ್‌ ಲೈನ್‌ ಕಾಮಗಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದ್ದಾರೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಮೆಟ್ರೋ ಪಿಂಕ್‌ ಲೈನ್‌ ಸಂಚಾರ ಆರಂಭ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 23, 2026 10:25 AM

ಬೆಂಗಳೂರು : ನಮ್ಮ ಮೆಟ್ರೋ (Bengaluru Metro) ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಸಿಗುವ ಸಾಧ್ಯತೆಯಿದೆ. ಆಗಸ್ಟ್ 15ರಂದು ಆರಂಭವಾಗಬೇಕಿದ್ದ ನಮ್ಮ ಮೆಟ್ರೋ ಪಿಂಕ್‌ ಲೈನ್‌ (Pink Line) ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ರೈಲ್ವೆ ಮಂಡಳಿಯ ಅನುಮತಿ ಹಾಗೂ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (CMRS) ಪರಿಶೀಲನೆ ಪೂರ್ಣಗೊಂಡ ಬಳಿಕ ಸಾರ್ವಜನಿಕ ಸೇವೆಗೆ ಮಾರ್ಗ ಮುಕ್ತವಾಗಲಿದೆ.

ಸದ್ಯ ಪಿಂಕ್‌ ಲೈನ್‌ ಕಾಮಗಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಶಾಸಕ ಹಾಗೂ ಸಚಿವ ರಿಜ್ವಾನ್ ಅರ್ಷದ್, ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್ ಜೊತೆಗೂಡಿ BMRCL ಅಧಿಕಾರಿಗಳಿಂದ ಕಾಮಗಾರಿಗಳ ಕುರಿತಾಗಿ ಮಾಹಿತಿ ಪಡೆದಿದ್ದಾರೆ. MG ರಸ್ತೆ ಸುರಂಗ ನಿಲ್ದಾಣದಿಂದ ಶಿವಾಜಿನಗರದ ವರೆಗೆ ಕಾಲ್ನಡಿಗೆಯಲ್ಲೇ ತೆರಳಿ ಅವರು ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.

ಮಾಹಿತಿ ನೀಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಮಾತನಾಡಿ, ಪಿಂಕ್‌ ಲೈನ್‌ಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯಿಂದ ರೈಲುಗಳ ಸಂಚಾರಕ್ಕೆ ಅನುಮತಿ ಪಡೆಯುವುದು ಮಾತ್ರ ಬಾಕಿಯಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಮಂಡಳಿಯ ಅನುಮತಿ ದೊರೆತ ಬಳಿಕ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ. ಬಿಎಂಆರ್‌ಸಿಎಲ್‌ನ ಕಡೆಯಿಂದ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ.

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: 'ಡನ್ & ಬ್ರಾಡ್‌ಸ್ಟ್ರೀಟ್' ವರದಿಯಲ್ಲಿ ಅಚ್ಚರಿಯ ಮಾಹಿತಿ!

ಇದರ ಜೊತೆಗೆ ಏರ್​​ಪೋರ್ಟ್​​ಗೆ ಸಂಪರ್ಕ ಕಲ್ಪಸುವ ಬ್ಲ್ಯೂ ಲೈನ್​​ ಕಾಮಗಾರಿಯ 2A, 2B ಯೋಜನೆಗೂ ವೇಗ ನೀಡಲಾಗಿದೆ. ಇದು ಸೆಂಟ್ರಲ್ ಸಿಲ್ಕ್ ಬೋರ್ಡ್​​ನಿಂದ ಕೆ.ಆರ್​​.ಪುರ ಮೂಲಕ ನಾಗವಾರ, ಹೆಬ್ಬಾಳ ಮಾರ್ಗವಾಗಿ ಏರ್ಪೋರ್ಟ್​​ಗಿದು ಸಂಪರ್ಕ ಕಲ್ಪಿಸಲಿದೆ. 2027 ಡಿಸೆಂಬರ್ ಅಥವಾ 2028ರ ಮಾರ್ಚ್ ವೇಳೆಗೆ ನೀಲಿ ಮಾರ್ಗದ ಲೋಕಾರ್ಪಣೆ ನಡೆಯುವ ಸಾಧ್ಯತೆ ಇದೆ.

ಮೆಟ್ರೋ ನೀಲಿ ಮಾರ್ಗ ಲೈನ್‌

  • ಕೆಆರ್‌ ಪುರ
  • ಕಸ್ತೂರಿನಗರ
  • ಹೊರಮಾವು
  • ಹೆಚ್.ಆರ್.ಬಿ.ಆರ್ ಲೇಔಟ್ / ಬಾಬುಸಾಬ್ ಪಾಳ್ಯ
  • ಕಲ್ಯಾಣ ನಗರ
  • ಹೆಚ್.ಬಿ.ಆರ್ ಲೇಔಟ್
  • ನಾಗವಾರ ( ಗುಲಾಬಿ ಮಾರ್ಗ ಸಂಪರ್ಕ)
  • ವೀರಣ್ಣನಪಾಳ್ಯ
  • ಕೆಂಪಾಪುರ
  • ಹೆಬ್ಬಾಳ
  • ಕೊಡಿಗೇಹಳ್ಳಿ
  • ಜಕ್ಕೂರು ಕ್ರಾಸ್
  • ಯಲಹಂಕ
  • ಬಾಗಲೂರು ಕ್ರಾಸ್
  • ಬೆಟ್ಟಹಲಸೂರು
  • ದೊಡ್ಡಜಾಲ
  • ಏರ್‌ಪೋರ್ಟ್ ಸಿಟಿ / ಕಾರ್ಗೋ
  • ಕೆಐಎ ಟರ್ಮಿನಲ್ 2