ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಪ್ರೋದಿಂದ ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶಗಳ ಪ್ರಕಟ

ಮುಂಚೂಣಿಯ ಎಐ-ಪವರ್ಡ್ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೋ ಲಿಮಿ ಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂ.ಐ.ಟಿ., ಬಿ.ಎಸ್.ಇ: 507685, ಎನ್.ಎಸ್.ಇ.: ವಿಪ್ರೊ) ಮಾರ್ಚ್ 31,2026ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಇಂಟರ್ನ್ಯಾಷ ನಲ್ ಫೈನಾನ್ಷಿ ಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ (ಐ.ಎಫ್.ಆರ್.ಎಸ್.) ಅಡಿಯಲ್ಲಿ ಪ್ರಕಟಿಸಿದೆ.

ವಿಪ್ರೋದಿಂದ ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶಗಳ ಪ್ರಕಟ

-

Profile
Ashok Nayak Apr 17, 2026 12:20 PM

ಐಟಿ ಸೇವಾ ವಲಯದ ಆದಾಯವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.0.6ರಷ್ಟು ವೃದ್ಧಿಸಿದೆ, ನಿವ್ವಳ ಆದಾಯ ₹3500 ಕೋಟಿಗೆ ಹೆಚ್ಚಳ

  • ಒಟ್ಟಾರೆ ಡೀಲ್ ಬುಕಿಂಗ್ ಗಳು 3.4 ಬಿಲಿಯನ್ ಡಾಲರ್; ಲಾರ್ಜ್ ಡೀಲ್ ಬುಕಿಂಗ್ ಗಳು 1.4 ಬಿಲಿಯನ್ ಡಾಲರ್
  • ವಿಪ್ರೋ ಪ್ರತಿ ಷೇರಿಗೆ ₹250 ರಂತೆ ₹15,000 ಕೋಟಿ ಬೈಬ್ಯಾಕ್ ಪ್ರಕಟಣೆ

ಬೆಂಗಳೂರು: ಮುಂಚೂಣಿಯ ಎಐ-ಪವರ್ಡ್ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೋ ಲಿಮಿಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂ.ಐ.ಟಿ., ಬಿ.ಎಸ್.ಇ: 507685, ಎನ್.ಎಸ್.ಇ.: ವಿಪ್ರೊ) ಮಾರ್ಚ್ 31,2026ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಇಂಟರ್ನ್ಯಾಷ ನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ (ಐ.ಎಫ್.ಆರ್.ಎಸ್.) ಅಡಿಯಲ್ಲಿ ಪ್ರಕಟಿಸಿದೆ.

ಈ ಫಲಿತಾಂಶಗಳ ಪ್ರಮುಖಾಂಶಗಳು:

1.ನಿವ್ವಳ ಆದಾಯ ₹24,240 ಕೋಟಿ (2,583 ಮಿಲಿಯನ್ ಡಾರ್) ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.2.9, ವರ್ಷದಿಂದ ವರ್ಷಕ್ಕೆ ಶೇ.7.7

  1. ಐಟಿ ಸೇವೆಗಳ ವಲಯದ ಆದಾಯವು 2651 ಮಿಲಿಯನ್ ಡಾಲರ್ ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.0.6ರಷ್ಟು ಹೆಚ್ಚಳ
  2. ತ್ರೈಮಾಸಿಕದ ನಿವ್ವಳ ಆದಾಯ ₹3,500 ಕೋಟಿ (373.2ಮಿಲಿಯನ್ ಡಾಲರ್) ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.12.3ರಷ್ಟು ವೃದ್ಧಿಸಿದೆ

4.ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ ಶೇ.17.3ರಷ್ಟಿದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.0.3ರಷ್ಟು ಕುಗ್ಗಿದೆ.

ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ವಿಪ್ರೋ ಇಂದು ಮಾರ್ಚ್ 31, 2026ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿಯು 24,240 ಕೋಟಿ ನಿವ್ವಳ ಆದಾಯ ಮತ್ತು 3,500 ಕೋಟಿ ಲಾಭ ಗಳಿಸಿದೆ ಎಂದು ಪ್ರಕಟಿಸಿದೆ. ಈ ತ್ರೈಮಾಸಿಕಕ್ಕೆ ಐಟಿ ಸೇವೆಗಳ ಕಾರ್ಯಾಚರಣೆಯ ಮಾರ್ಜಿನ್ ಶೇ.17.3ರಷ್ಟಿದ್ದು ಅದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.0.3ರಷ್ಟು ಕುಸಿದಿದೆ.

ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಲ, “ಎಐನಲ್ಲಿ ಸುಧಾರಣೆಗಳು ಗ್ರಾಹಕರ ಆದ್ಯತೆ ಗಳನ್ನು ಮರು ರೂಪಿಸತ್ತಿವೆ ಮತ್ತು ನಮಗೆ ಹೆಚ್ಚು ಆಳವಾದ ಮೌಲ್ಯ ಪ್ರೇರಿತ ಫಲಿತಾಂಶ ಗಳನ್ನು ಪೂರೈಸಲು ಸಹಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಎಐ-ಪ್ರಥಮ ಜಗತ್ತಿನಲ್ಲಿ ನಮ್ಮ ಸ್ಥಾನ ಸದೃಢಗೊಳಿಸಿಕೊಳ್ಳಲು ನಾವು ಸರ್ವೀಸಸ್-ಆಸ್-ಎ- ಸಾಫ್ಟ್ ವೇರ್ ಮಾದರಿಗೆ ಎಐ ನೇಟಿವ್ ಬಿಸಿನೆಸ್ ಅಂಡ್ ಪ್ಲಾಟ್ ಫಾರಮ್ಸ್ ಘಟಕದ ಮೂಲಕ ಬದಲಾಗಿದ್ದೇವೆ. ಓಲಂ ಸಮೂಹ ದೊಂದಿಗೆ ನಮ್ಮ ದಿಟ್ಟ ಕಾರ್ಯತಂತ್ರೀಯ ವಹಿವಾಟು ದೊಡ್ಡ ಮಟ್ಟದಲ್ಲಿ ನಾವು ಅವಕಾಶ ಗಳನ್ನು ಪಡೆದುಕೊಳ್ಳಲು ನಿರ್ಣಾಯಕ ಹೂಡಿಕೆಗಳು ನಾವು ಮಾಡುತ್ತಿರುವು ದನ್ನು ತೋರುತ್ತದೆ” ಎಂದರು.

ನಮ್ಮ ನಿರ್ದೇಶಕರ ಮಂಡಳಿಯು ಷೇರುದಾರರ ಅನುಮೋದನೆಯ ನಂತರ ₹250ರ ಬೆಲೆಯಲ್ಲಿ ₹15,000 ಕೋಟಿ ಷೇರು ಬೈಬ್ಯಾಕ್ ಪ್ರಕಟಿಸಿದೆ.