Bagepally News: ಅಡಿಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ 200 ಕಾರ್ಡ್ ವಿತರಣೆ
ದೇಶದಲ್ಲಿ ಹಸಿವು ನೀಗಿಸುವುದೇ ದೊಡ್ಡ ಕೆಲಸ. ತಾಯಿ ಅನ್ನ ಪೂರ್ಣೇಶ್ವರಿ ಕೃಪೆಯಿಂದ ಅಂತಹ ಹಸಿವು ನೀಗಿಸುವ ಕೆಲಸದಲ್ಲಿ ಅಡುಗೆ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಿದ್ದು, ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಅಡುಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಅಗತ್ಯವಿದೆ ಹಾಗಾಗಿ ದೇಶದಲ್ಲೇ ಮೊದಲ ಬಾರಿ ಅಡುಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ವಿತರಿಸಲಾಗುತ್ತಿದೆ
-
ಬಾಗೇಪಲ್ಲಿ: ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಅಡುಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಅಗತ್ಯವಿದೆ ಎಂದು ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಜಿ.ಎಂ.ಹರೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ತಾಲೂಕು ಅಸಂಘಟಿತ ಅಡುಗೆ ಕೆಲಸಗಾರರ ಹಾಗು ಸಹಾಯಕರ ಸೇವಾ ಟ್ರಸ್ಟ್ ಮತ್ತು ದೇವಿ ಅನ್ನಪೂರ್ಣೇಶ್ವರಿ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಸೇವಾ ಟ್ರಸ್ಟ್ ಕೋಲಾರ ಸಹಯೋಗದೊಂದಿಗೆ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಹಸಿವು ನೀಗಿಸುವುದೇ ದೊಡ್ಡ ಕೆಲಸ. ತಾಯಿ ಅನ್ನ ಪೂರ್ಣೇಶ್ವರಿ ಕೃಪೆಯಿಂದ ಅಂತಹ ಹಸಿವು ನೀಗಿಸುವ ಕೆಲಸದಲ್ಲಿ ಅಡುಗೆ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಿದ್ದು, ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಅಡುಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಅಗತ್ಯವಿದೆ ಹಾಗಾಗಿ ದೇಶದಲ್ಲೇ ಮೊದಲ ಬಾರಿ ಅಡುಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Bagepally News: ಸಿಪಿಎಂ ನಾಯಕ ದಿ. ಜಿ.ವಿ.ಶ್ರೀರಾಮರೆಡ್ಡಿ 4ನೇ ವರ್ಷದ ಸಂಸ್ಮರಣೆ
ಬಿ.ಎಸ್.ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿ ಆಗಿದ್ದಾಗ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸಲಾಯಿತು. ಈ ಮೂಲಕ ಪಿಂಚಣಿ, ವಿದ್ಯಾಭ್ಯಾಸ ಸೌಲಭ್ಯ ಸೇರಿದಂತೆ ವಿವಿಧ ಸವಲತ್ತುಗಳು ದೊರಕಿತು. ರಾಜ್ಯ ಅಡುಗೆ ಕಾರ್ಮಿಕರ ಸಂಘಕ್ಕೆ 2025ರಲ್ಲಿ ಮಾನ್ಯತೆ ಸಿಕ್ಕಿದೆ’ ಎಂದರು
ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯಲ್ಲಿ ನೊಂದಣಿ ಮಾಡಿಸಿಕೊಂಡು ಇಲಾಖೆಯಿಂದ ಸಿಗುವ ಸೌಲಭ್ಯ ಉಚಿತವಾಗಿ ಪಡೆದುಕೊಳ್ಳಬೇಕಾಗಿದೆ. ಕಾರ್ಡ್ ಉಚಿತವಾಗಿ ನೀಡಲಾಗುತ್ತಿದೆ
ಅಪಘಾತ ಪರಿಹಾರವಾಗಿ ಒಂದು ಲಕ್ಷ, ಶಾಶ್ವತ ದುರ್ಬಲತೆ ಆಧಾರದ ಮೇಲೆ 1 ಲಕ್ಷ ಪರಿಹಾರದ ಜೊತೆಗೆ ಆಸ್ಪತ್ರೆ ವೆಚ್ಚದ 50 ಸಾವಿರದವರೆಗಿಗೆ ಸೌಲಭ್ಯ ಪಡೆಯಬಹುದಾಗಿದೆ. ಮರಣ ಹೊಂದಿದ ಸಂದರ್ಭದಲ್ಲಿ ಅಂತ್ಯಕ್ರಿಯೆಗಾಗಿ 10 ಸಾವಿರ ನೆರವು ಪಡೆಯಬಹುದಾಗಿದೆ ಎಂದರು.
ದೇವಿ ಅನ್ನಪೂರ್ಣೇಶ್ವರಿ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಸೇವಾ ಟ್ರಸ್ಟ್ ರಾಜ್ಯ ಮುಖಂಡ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್ ಬಾಬು ಮಾತನಾಡಿ ರಾಜ್ಯಲ್ಲಿ
‘1 ಲಕ್ಷ ಕಾರ್ಮಿಕರಿಗೆ ಗುರುತಿನ ಚೀಟಿ ನೀಡುವ ಗುರಿ ಇಟ್ಟುಕೊಂಡಿದ್ದೇವೆ. ರಾಜ್ಯದಲ್ಲಿ ಸುಮಾರು 10 ಲಕ್ಷ ಅಡುಗೆ ಕಾರ್ಮಿಕರು ಇದ್ದಾರೆ. ಪ್ರತಿ ಜಿಲ್ಲೆಯಲ್ಲಿ 3 ಸಾವಿರ ಇದ್ದಾರೆ’ ಎಂದರು.
ಅಡಿಗೆ ಕೆಲಸಗಾರರು ಹಾಗೂ ಸಹಾಯಕರ 13 ವರ್ಷಗಳ ನಿರಂತರ ಹೋರಾಟದ ಫಲವಾಗಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಕಟ್ಟಡ ಕಾರ್ಮಿಕರಿಗೆ ನೀಡುವ ಎಲ್ಲಾ ಸೌಲಭ್ಯ ನಮಗೆ ನೀಡಬೇಕಾ ಗಿದೆ. ಬಾಗೇಪಲ್ಲಿಯಲ್ಲಿ 200 ಅಡುಗೆ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಗು ತ್ತಿದ್ದು. ಉಳಿದವರು ತ್ವರಿತವಾಗಿ ಅಗತ್ಯ ದಾಖಲೆ ನೀಡಿ ಕಾರ್ಡ್ ಪಡೆಯಬೇಕೆಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ, ಟಿಎಚ್‌ಒ ಡಾ.ಸುಜಿತ್ ರೆಡ್ಡಿ, ರಘುನಾಥರೆಡ್ಡಿ, ಸಂಘದ ಅಧ್ಯಕ್ಷ ಡಿ.ಎನ್.ಶಿವಾರೆಡ್ಡಿ, ಆರ್.ಚೌಡರೆಡ್ಡಿ, ಕೇಶವರೆಡ್ಡಿ, ನಾಗಪ್ಪ, ಶಿವಪ್ಪ, ಶ್ರೀನಿವಾಸ್, ಎಸ್.ಬಸವರಾಜ್, ನರಸಿಂಹಪ್ಪ, ಮಂಜುನಾಥ, ರವಿಚಂದ್ರಾರೆಡ್ಡಿ, ನರಸರಾಮಪ್ಪ, ಶಂಕರಪ್ಪ, ವೆಂಕಟರಮಣಪ್ಪ, ಲಕ್ಷ್ಮೀನರಸಿಂಹಪ್ಪ, ಎನ್.ಆನಂದ್, ವೈ.ಎ.ಶ್ರೀನಿವಾಸ್ ಇದ್ದರು.