GT vs KKR: ಕೋಲ್ಕತಾಗೆ 5ನೇ ಸೋಲು, ಗುಜರಾತ್ ಟೈಟನ್ಸ್‌ಗೆ ಗೆಲುವು ತಂದುಕೊಟ್ಟ ರಬಾಡ, ಗಿಲ್!
GT vs KKR Highlights: ಕಗಿಸೊ ರಬಾಡ ಮಾರಕ ಬೌಲಿಂಗ್ ಹಾಗೂ ಶುಭಮನ್ ಗಿಲ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗೆಲುವು ಪಡೆಯಿತು. ಇದು ಕೆಕೆಆರ್ ಪಾಲಿಗೆ ಐದನೇ ಸೋಲಾಯಿತು.
ಕೆಕೆಆರ್ ಎದುರು ಅರ್ಧಶತಕ ಬಾರಿಸಿದ ಶುಭಮನ್ ಗಿಲ್. -
ಅಹಮದಾಬಾದ್: ಕಗಿಸೊ ರಬಾಡ (Kagiso Rabada) ಮಾರಕ ಬೌಲಿಂಗ್ ಹಾಗೂ ಶುಭಮನ್ ಗಿಲ್ (Shubman Gill) ಸ್ಪೋಟಕ ಬ್ಯಾಟಿಂಗ್ ಬಲದಿಂದ ಗುಜರಾತ್ ಟೈಟನ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ (GT vs KKR) ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು ಬೀಗಿತು. ಈ ಗೆಲುವಿನ ಮೂಲಕ ಶುಭಮನ್ ಗಿಲ್ ನಾಯಕತ್ವದ ಜಿಟಿ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಮೊದಲ ಗೆಲುವಿನ ಹಸಿವಿನಲ್ಲಿದ್ದ ಕೆಕೆಆರ್‌ನ ಸೋಲಿನ ಸರಪಳಿಗೆ ಮತ್ತೊಂದು ಸೇರ್ಪಡೆಯಾಯಿತು. ಇದು ಕೋಲ್ಕತಾಗೆ ಐದನೇ ಸೋಲಾಯಿತು.
ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆಕೆಆರ್ ನೀಡಿದ್ದ 181 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ, ಶುಭಮ್ ಗಿಲ್ (86 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ 19.4 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿ ಗೆದ್ದು ಬೀಗಿತು. ಇದು ಜಿಟಿ ತಂಡಕ್ಕೆ ಮೂರನೇ ಗೆಲುವಾಗಿದೆ.
KKR vs GT: ಸಿಕ್ಸ್ ಹೊಡೆದು ಟಾಟಾ ಸಿಯೆರಾ ಕಾರಿಗೆ ಡೆಂಟ್ ಮಾಡಿದ ಕ್ಯಾಮೆರಾನ್ ಗ್ರೀನ್! ವಿಡಿಯೊ
ಶುಭಮನ್ ಗಿಲ್ ಸ್ಪೋಟಕ ಬ್ಯಾಟಿಂಗ್
ಜಿಟಿ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ನಾಯಕ ಶುಭಮನ್ ಗಿಲ್. ಅವರು ಒಂದು ತುದಿಯಲ್ಲಿ ನಿಂತು ದೀರ್ಘಾವಧಿ ಬ್ಯಾಟ್ ಮಾಡಿದರು. ಅವರು ಆಡಿದ 50 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 86 ರನ್‌ಗಳನ್ನು ಚಚ್ಚಿದರು. ಆ ಮೂಲಕ ಗುಜರಾತ್ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರ ಜೊತೆಗೆ ಸಾಯಿ ಸುದರ್ಶನ್ 22 ರನ್ ಹಾಗೂ ಜೋಸ್ ಬಟ್ಲರ್ 25 ರನ್‌ಗಳ ಕೊಡುಗೆಯನ್ನು ನೀಡಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ ಎರಡು ವಿಕೆಟ್ ಕಿತ್ತರು.
Skipper Shubman Gill spreads his rizz in Ahmedabad and is adjudged the Player of the Match🏅
— IndianPremierLeague (@IPL) April 17, 2026
WATCH HIS KNOCK ▶️ https://t.co/m7lkZghYwU#TATAIPL | #KhelBindaas | #GTvKKR | @ShubmanGill pic.twitter.com/LprHC3iaeh
180 ರನ್ ಕಲೆ ಹಾಕಿದ ಕೆಕೆಆರ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅರ್ಧಶತಕ ಬಾರಿಸಿದ ಕ್ಯಾಮೆರಾನ್ ಗ್ರೀನ್ ಅವರನ್ನು ಹೊರತುಪಡಿಸಿ ಇನ್ನುಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಇದರ ಪರಿಣಾಮ ಕೆಕೆಆರ್ 200ರ ಗಡಿ ದಾಟುವಲ್ಲಿ ವಿಫಲವಾಯಿತು ಹಾಗೂ ತನ್ನ ಪಾಲಿನ 20 ಓವರ್‌ಗಳಿಗೆ 180 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಎದುರಾಳಿ ಜಿಟಿ ತಂಡಕ್ಕೆ 180 ರನ್‌ಗಳ ಗುರಿಯನ್ನು ನೀಡಿತು.
2⃣ points in the bag ✅
— IndianPremierLeague (@IPL) April 17, 2026
Hat-trick of wins ✅@gujarat_titans wrap a fantastic all-round show at home 🥳🏠
Scorecard ▶️ https://t.co/FACeUzse3B#TATAIPL | #KhelBindaas | #GTvKKR pic.twitter.com/mVnSg3ZI5p
ಕೆಕೆಆರ್‌ಗೆ ಆರಭಂಭಿಕ ಆಘಾತ
ಕೆಕೆಆರ್ ಪರ ಇನಿಂಗ್ಸ್ ಆರಂಭಿಸಿದ ಟಿಮ್ ಸೈಫರ್ಟ್ ಹಾಗೂ ಅಜಿಂಕ್ಯ ರಹಾನೆ ವಿಫಲರಾದರು. ಅಜಿಂಕ್ಯ ರಹಾನೆ ಆಡಿದ ಮೊದಲ ಎಸೆತದಲ್ಲಿಯೇ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಕೊಟ್ಟು ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಅಂಗ್‌ಕ್ರಿಷ್ ರಘುವಂಶಿ (8) ಹಾಗೂ ಟಿಮ್ ಸೈಫರ್ಟ್ (19) ಅವರು ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಕೆಕೆಆರ್ 32 ರನ್‌ಗಳಿಗೆ 3 ವಿಕೆಟ್ ಕಳೆದಕೊಂಡು ಆರಂಭಿಕ ಆಘಾತ ಅನುಭವಿಸಿತು.
Cameron Green turning up in Ahmedabad 🔥
— IndianPremierLeague (@IPL) April 17, 2026
First fifty in #KKR colors for the all-rounder 👊
Updates ▶️ https://t.co/FACeUzse3B#TATAIPL | #KhelBindaas | #GTvKKR pic.twitter.com/kbgtSHPm6k
ಕ್ಯಾಮೆರಾನ್ ಗ್ರೀನ್ ಅರ್ಧಶತಕ
ನಾಲ್ಕನೇ ವಿಕೆಟ್‌ಗೆ ಜೊತೆಯಾದ ಕ್ಯಾಮೆರಾನ್ ಗ್ರೀನ್ ಹಾಗೂ ರೊವ್ಮನ್ ಪೊವೆಲ್ 55 ರನ್‌ಗಳ ಜೊತೆಯಾಟವನ್ನು ಆಡಿದರು. 20 ಎಸೆತಗಳಲ್ಲಿ 27 ರನ್ ಗಳಿಸಿ ಸಿಕ್ಕ ಉತ್ತಮ ಆರಂಭವನ್ನು ಪೊವೆಲ್ ಕೈ ಚೆಲ್ಲಿದರು. ನಂತರ ಗ್ರೀನ್ ಅವರು ಅನುಕುಲ್ ರಾಯ್ ಅವರ ಜೊತೆ ಕೇವಲ 23 ಎಸೆತಗಳಲ್ಲಿ 60 ರನ್ ಜೊತೆಯಾಟವನ್ನು ಆಡಿದರು. ಕಳೆದ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಕ್ಯಾಮೆರಾನ್ ಗ್ರೀನ್ ಈ ಪಂದ್ಯದಲ್ಲಿ ಕೊನೆಯವರೆಗೂ ಬ್ಯಾಟ್ ಮಾಡಿ 55 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 79 ರನ್ ಗಳಿಸಿದರು.
IPL 2026: ಟಿ20 ಕ್ರಿಕೆಟ್‌ನಲ್ಲಿ 300 ಕ್ಯಾಚ್ ಮೈಲುಗಲ್ಲು ತಲುಪಿದ ಜೋಸ್ ಬಟ್ಲರ್!
ಒಂದು ಹಂತದಲ್ಲಿ 15ನೇ ಓವರ್‌ನಲ್ಲಿ ಕೆಕೆಆರ್ ಹೆಚ್ಚೂ ಕಮ್ಮಿ 10ರ ಸರಾಸರಿಯಲ್ಲಿ ರನ್ ಕಲೆ ಹಾಕಿತ್ತು. ಆದರೆ ಡೆತ್ ಓವರ್‌ಗಳಲ್ಲಿ ಜಿಟಿ ಬೌಲರ್‌ಗಳು ಕಮ್‌ಬ್ಯಾಕ್ ಮಾಡಿದರು ಹಾಗೂ ಕೇವಲ 32 ರನ್‌ಗಳಿಗೆ ಕಟ್ಟಿ ಹಾಕಿದರು. ಡೆತ್ ಓವರ್‌ಗಳಲ್ಲಿ ರಿಂಕು ಸಿಂಗ್ ಹಾಗೂ ರಮಣ್‌ದೀಪ್ ಸಿಂಗ್ ಕೈ ಕೊಟ್ಟರು. ಕಗಿಸೊ ರಬಾಡ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಕಿತ್ತರು.