#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ಆರೋಗ್ಯವಂತ ಸಮಾಜವು ದೇಶದ ಆರ್ಥಿಕ ಪ್ರಗತಿಗೆ ಪೂರಕ : ಗ್ರಾ.ಪಂ.ಮಾಜಿ ಅಧ್ಯಕ್ಷ ಅಮರನಾಥ್

ಸರಕಾರಗಳು ಕಾಲಕಾಲಕ್ಕೆ ಇತ್ತ ಗಮನ ಹರಿಸಿ ಪಂಚಾಯಿತಿ, ಹೋಬಳಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಬೇಕಿದೆ.ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಘನತೆ ಉಳಿಸಿಕೊಂಡಿ ರುವ ನಾಗಾರ್ಜುನ ಕಾಲೇಜು,ಆರೋಗ್ಯ ಕ್ಷೇತ್ರದಲ್ಲಿ ಬದ್ಧತೆ ಉಳಿಸಿಕೊಂಡಿರುವ ಆಕಾಶ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಿರುವುದು ಸಂತೋಷ ತಂದಿದೆ

ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

Profile Ashok Nayak Feb 12, 2025 9:24 PM

ಚಿಕ್ಕಬಳ್ಳಾಪುರ : ಆರೋಗ್ಯವಂತ ಸಮಾಜವು ದೇಶದ ಆರ್ಥಿಕ ಪ್ರಗತಿಗೆ ಪೂರಕ ಎಂಬುದನ್ನು ಸಮಾಜಶಾಸ್ತ್ರಜ್ಞರು ಹೇಳುತ್ತಾರೆ. ನಾಗಾರ್ಜುನ ಕಾಲೇಜು, ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿ ನಮ್ಮೂರಿಗೆ ಬಂದು ನಾಗರೀಕರ ಆರೋಗ್ಯ ತಪಾಸಣೆಗೆ ಮುಂದಾಗಿರುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದು ವೆಂಕಟಗಿರಿಕೋಟೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮರನಾಥ್ ತಿಳಿಸಿದರು. ವೆಂಕಟಗಿರಿಕೋಟೆ ಗ್ರಾಮದ ಚನ್ನಕೇಶವಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ನಾಗಾ ರ್ಜುನ ಕಾಲೇಜು, ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವೆಂಕಟಗಿರಿಕೋಟೆ ಗ್ರಾಪಂ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಿಂದ ವಿಮುಖವಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನತೆ ಅನಾರೋ ಗ್ಯಕ್ಕೆ ತುತ್ತಾಗುತ್ತಿರುವುದು ಹೆಚ್ಚಿದೆ. ಸರಕಾರಗಳು ಕಾಲಕಾಲಕ್ಕೆ ಇತ್ತ ಗಮನ ಹರಿಸಿ ಪಂಚಾಯಿತಿ, ಹೋಬಳಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಬೇಕಿದೆ.ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಘನತೆ ಉಳಿಸಿಕೊಂಡಿರುವ ನಾಗಾರ್ಜುನ ಕಾಲೇಜು,ಆರೋಗ್ಯ ಕ್ಷೇತ್ರದಲ್ಲಿ ಬದ್ಧತೆ ಉಳಿಸಿಕೊಂಡಿರುವ ಆಕಾಶ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಿರುವುದು ಸಂತೋಷ ತಂದಿದೆ.

ಇದನ್ನೂ ಓದಿ: Chikkaballapur News: ಬೆದರಿಕೆಗಳಿಗೆ ಭಯಪಡುವ ಶಾಸಕ ನಾನಲ್ಲ ಎಂದ ಶಾಸಕರ ಕ್ಷಮೆಯಾಚನೆಗೆ ದಸಂಸ ಒತ್ತಾಯ

ಗ್ರಾಮದಲ್ಲಿ ಆರೋಗ್ಯ ಸುಧಾರಿಸಲು ಎರಡು ತಿಂಗಳ ಪ್ರಚಾರ ಮಾಡಿ ಈ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದ್ದೇವೆ.ಏಕೆಂದರೆ ನಮ್ಮಲ್ಲಿ ಹೆಣ್ಣುಮಕ್ಕಳು, ವೃದ್ಧರು, ಮಕ್ಕಳು ಅನಾರೋಗ್ಯದಿಂದ ಬಳಲುವುದು ಕಂಡಿದ್ದೇವೆ. ಇಂತಹ ಶಿಬಿರಗಳ ಮೂಲಕ ಆರೋಗ್ಯ ಸಂಬಂಧಿ ನಾನಾ ಸಮಸ್ಯೆಗಳಿಗೆ ಅವರಿರುವಲ್ಲಿಯೇ ಪರಿಹಾರ ಕಾಣಿಸಲು ಗುರಿಹಾಕಿಕೊಂಡಿದ್ದೆವು. ಇಲ್ಲಿ ಪತ್ತೆಯಾಗುವ ರೋಗಗಳಿಗೆ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುವುದು. ಈ ದಿನ ತಪಾಸಣೆಗೆ ಒಳಗಾಗುವವರಿಗೆ ರಿಯಾಯಿತಿ ಧರದಲ್ಲಿ ಚಿಕಿತ್ಸೆ ದೊರೆ ಯುತ್ತಿದೆ. ಈ ಆರೋಗ್ಯ ಶಿಬಿರ ಇಲ್ಲಿ ಆಗಲು ನಾಗಾರ್ಜುನ ಕಾಲೇಜು ಆಡಳಿತ ಮಂಡಳಿಯೇ ನೇರ ಕಾರಣ.ಅವರಿಗೆ ವೆಂಕಟಗಿರಿಕೋಟೆ ಗ್ರಾಮಪಂಚಾಯಿತಿ ವತಿಯಿಂದ ಧನ್ಯವಾದಗಳ್ನು ಅರ್ಪಿಸು ತ್ತೇನೆ ಎಂದರು.

ನಾಗಾರ್ಜುನ ಕಾಲೇಜಿನ ಪ್ರಾಧ್ಯಾಪಕಿ ಶೋಭ ಮಾತನಾಡಿ ಇಂದಿನ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸ್ಪಂಧನೆ ಕಡಿಮೆ ಆಗುತ್ತಿರುವುದು ಕಳವಳಕಾರಿ ಸಂಗತಿ.ಇದನ್ನು ಮನಗಂಡು ಎನ್‌ಎಸ್‌ಎಸ್ ಘಟಕದಿಂದ ನಾನಾ ಕಾರ್ಯಕ್ರಮ ಮಾಡುವುದು ಒಂದು.ಗ್ರಾಮೀಣ ಪ್ರದೇಶಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಅವರಲ್ಲಿ ಗ್ರಾಮೀಣ ನೈರ್ಮಲ್ಯ, ಆರೋಗ್ಯ ಬಲವರ್ಧನೆ, ಸಮುದಾಯದ ಸಹಭಾಿತ್ವ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಬುಧವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಹಿಳೆಯರಿಗೆ ಗರ್ಭಕೋಶ, ಮುಟ್ಟಿ ನ ತೊಂದೆರೆ, ಬಂಜೆತನ,ಕೀಲುನೋವು, ಊತ, ಮೊಣಕಾಲು ಸೊಂಟನೋವು ಪೈಲ್ಸ್, ಥೈರಾಯ್ಡ್, ಅಪೆಂಡಿಕ್ಸ್, ಗಡ್ಡೆಗಳು, ಅಲ್ಸರ್, ಬಿಪಿ, ಪರೀಕ್ಷೆ, ಸಕ್ಕರೆ ಕಾಯಿಲೆ, ಇಸಿಜಿ ಇತ್ಯಾದಿ ಪರೀಕ್ಷೆಗಳನ್ನು ಮಾಡಲಾಯಿತು. ಇದೇ ವೇಳೆ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 15ಯೂನಿಟ್ ರಕ್ತ ಸಂಗ್ರಹವಾಯಿತು.

ಈ ವೇಳೆ ನಾಗಾರ್ಜುನ ಕಾಲೇಜ್ ಆಫ್ ಮೇನೇಜ್‌ಮೆಂಟ್ ಸ್ಟಡೀಸ್ ಪ್ರಾಂಶುಪಾಲೆ ಡಾ.ಆನಂದ ಮ್ಮ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಶೋಭ, ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಮೀನಾ, ಆಕಾಶ್ ಆಸ್ಪತ್ರೆಯ ಡಾ.ಶಾಂತಿ, ಗ್ರಾಪಂ.ಉಪಾಧ್ಯಕ್ಷ ಜಗನ್ನಾಥ್ ಮತ್ತು ಎಲ್ಲಾ ಸದಸ್ಯರು, ಪಿಡಿಒ ಬಸವನಗೌಡ ಗಂಗಪ್ಪಳವರ್ ಮತ್ತಿತರರು ಇದ್ದರು.