ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಟ, ರಂಗನಿರ್ದೇಶಕ ದಿಲೀಪ್‌ ಕುಮಾರ್. ಆರ್.ನಿರ್ದೇಶನದ ವಿದುರಾಶ್ವತ್ಥ ಹತ್ಯಾಕಾಂಡ ನಾಟಕಕ್ಕೆ ಪ್ರಥಮ ಸ್ಥಾನ

ಸಕಲ ರಂಗಹೆಜ್ಜೆ ಟ್ರಸ್ಟ್ (ರಿ.) ಚಿಕ್ಕಬಳ್ಳಾಪುರ, ಸಕಲ ರಂಗಪಯಣ 2025 ರ ನಾಟಕ ಶ್ರೀ ವಿಶ್ವ ವಿವೇಕ ಪಿಯು ಕಾಲೇಜು, ವಾಪಸಂದ್ರ ವಿದ್ಯಾರ್ಥಿಗಳು ಅಭಿನಯಿಸಿದ "ವಿದುರಾಶ್ವತ್ಥ ಹತ್ಯಾ ಕಾಂಡ" ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಪ್ರದರ್ಶನಗೊಂಡು ತೀರ್ಪುಗಾರ ಅಯ್ಕೆಯಂತೆ ಪ್ರಥಮ ಸ್ಥಾನ ಪಡೆದಿದೆ.

ವಿದುರಾಶ್ವತ್ಥ ಹತ್ಯಾಕಾಂಡ ನಾಟಕಕ್ಕೆ ಪ್ರಥಮ ಸ್ಥಾನ

-

Ashok Nayak
Ashok Nayak Nov 23, 2025 10:28 PM

ಚಿಕ್ಕಬಳ್ಳಾಪುರ: ಸಕಲ ರಂಗಹೆಜ್ಜೆ ಟ್ರಸ್ಟ್ (ರಿ.) ಚಿಕ್ಕಬಳ್ಳಾಪುರ, ಸಕಲ ರಂಗಪಯಣ 2025 ರ ನಾಟಕ ಶ್ರೀ ವಿಶ್ವ ವಿವೇಕ ಪಿಯು ಕಾಲೇಜು, ವಾಪಸಂದ್ರ ವಿದ್ಯಾರ್ಥಿಗಳು ಅಭಿನಯಿಸಿದ "ವಿದುರಾಶ್ವತ್ಥ ಹತ್ಯಾಕಾಂಡ" ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಪ್ರದರ್ಶನಗೊಂಡು ತೀರ್ಪುಗಾರ ಅಯ್ಕೆಯಂತೆ ಪ್ರಥಮ ಸ್ಥಾನ ಪಡೆದಿದೆ. 

ಇದನ್ನೂ ಓದಿ: Chief Minister Siddaramaiah: ನ.24 ರಂದು 2 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನವುಳ್ಳ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಲೋಕಾರ್ಪಣೆ

ಈ ನಾಟಕವನ್ನು ಡಾ. ಟಿ. ಲಕ್ಷ್ಮೀನಾರಾಯಣ ರಚಿಸಿರುತ್ತಾರೆ, ಸಂಗೀತ ಇನ್ಸಾಫ್ ಹೊಸ ಪೇಟೆ, ವಸ್ತ್ರ ವಿನ್ಯಾಸ ಕವಿತ (ಮೈಸೂರು) ಚಿತ್ರ ವಿನ್ಯಾಸ ಸತೀಶ್. ಸಿ ಎಲ್ ಕಲಾ ಶಿಕ್ಷಕರು, ನಿರ್ವಹಣೆ ಮತ್ತು ಬೆಂಬಲ, ಪ್ರತಿಭಾ ಶ್ರೀನಿವಾಸ್ ಪ್ರಾಂಶುಪಾಲರು ಮತ್ತು ಕಾಲೇಜಿನ ಎಲ್ಲಾ ಉಪನ್ಯಾಸಕರು. 

ನಾಟಕದಲ್ಲಿ ಪಾತ್ರಧಾರಿಗಳಾಗಿ ಆಯಿಷ, ಭಾರ್ಗವ್, ಶಿವ ಶಂಕರ್, ಜೈಲಕ್ಷೀ ಜಿ.ಎಸ್, ಉಜ್ಮಾ, ರುಬಿನ, ರಕ್ಷಿತ, ವಿಕಾಸ್ ಜಿ.ಎಸ್, ಯುಕ್ತಿ ಎಚ್.ಎನ್.ಆಕಾಶ್ ಎಲ್.ಎ, ಕರುಣಾ ಕರ್ ಎ.ಎಸ್, ನಿತ್ಯ, ನಿತ್ಯಶ್ರೀ ಕೆ. ಎಸ್, ರಿಶನ್, ಭಾನು ಪ್ರಿಯ, ಯತೀಂದ್ರ ರಾಮ್ ಟಿ, ಭವಿತ ಇದ್ದರು. ನಾಟಕ ವಿನ್ಯಾಸ ಮತ್ತು ನಿರ್ದೇಶನ, ದಿಲೀಪ್‌ಕುಮಾರ್. ಆರ್ ನಟ, ರಂಗ ನಿರ್ದೇಶಕ, ಚಿಕ್ಕಬಳ್ಳಾಪುರ.