Chikkaballapur News: ‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ದಿಂದ ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಉತ್ಸವ
ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಸೇವಾ ಅಭಿಯಾನವು ಸಾಯಿ ಬಾಬಾ ಅವರ ಸ್ಮರಣೆಯಲ್ಲಿ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ 2025’ ಆಯೋಜಿಸಿತ್ತು. ಆಗಸ್ಟ್ 16 ರಿಂದ ನವೆಂಬರ್ 23, 2025 ರವರೆಗೆ ನಡೆದ ಈ ಉತ್ಸವ ವು ಹಲವು ವೈಶಿಷ್ಟ್ಯಗಳೊಂದಿಗೆ ಎಲ್ಲರ ಗಮನ ಸೆಳೆಯಿತು.
100ನೇ ದಿನದ ಅಂಗವಾಗಿ ವಿಶ್ವವಿಖ್ಯಾತ ಸಿಂಫನಿ ಆರ್ಕೆಸ್ಟ್ರಾ ತಂಡದ ಪ್ರದರ್ಶನ ಮನಸೂರೆಗೊಂಡಿತು. -
ಚಿಕ್ಕಬಳ್ಳಾಪುರ: ಶ್ರೀ ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ (ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್) ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಿಂದ ಸತ್ಯ ಸಾಯಿ ಗ್ರಾಮದಲ್ಲಿ ದೈವಿಕ ಪ್ರೀತಿಯ ಮಳೆಗರೆಯಿತು.
ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಸೇವಾ ಅಭಿಯಾನವು ಸಾಯಿ ಬಾಬಾ ಅವರ ಸ್ಮರಣೆಯಲ್ಲಿ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ 2025’ ಆಯೋಜಿಸಿತ್ತು. ಆಗಸ್ಟ್ 16 ರಿಂದ ನ.23ರವರೆಗೆ ನಡೆದ ಈ ಉತ್ಸವವು ಹಲವು ವೈಶಿಷ್ಟ್ಯಗಳೊಂದಿಗೆ ಎಲ್ಲರ ಗಮನ ಸೆಳೆಯಿತು. ಈ ಸುದೀರ್ಘ ಉತ್ಸವವು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ಕಲೆ, ನೃತ್ಯ ಮತ್ತು ಸೇವಾ ಉಪಕ್ರಮಗಳೊಂದಿಗೆ 100 ದೇಶಗಳನ್ನು ಒಂದು ವೇದಿಕೆಯಲ್ಲಿ ಬೆಸೆಯಿತು.
100 ಮಾನವತಾವಾದಿಗಳು, 140 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳ ನಾಯಕರನ್ನು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಿತು. 45ಕ್ಕೂ ಹೆಚ್ಚು ಜಾಗತಿಕ ಚಿಂತಕರು, ಮಾಧ್ಯಮ, ಪತ್ರಿಕೋದ್ಯಮ ಮತ್ತು ನ್ಯಾಯದಾನ ಕ್ಷೇತ್ರದ ಹಲವು ಸಾಧಕರನ್ನು ಈ ವೇಳೆ ಗುರುತಿಸಿ, ಗೌರವಿಸಲಾಯಿತು.
ಇದನ್ನೂ ಓದಿ: Chikkaballapur News: ಹಿರಿಯ ನಾಗರಿಕರಿಗೆ ಆರೋಗ್ಯಕರ ಜೀವನಶೈಲಿಗೆ ಆಯುರ್ ವೇದ ಉತ್ತಮ: ಡಾ.ಎಸ್.ಮಂಜುಳ ಸಲಹೆ
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ "ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ" ಎನ್ನುವ ಸಂದೇಶವು ಈಗ ಒಂದು ಪರಂಪರೆಯೇ ಆಗಿದೆ. ಇದನ್ನು ಮತ್ತಷ್ಟು ವಿಸ್ತರಿಸಲು ಸೇವಾ ಅಭಿಯಾನವು ಅನ್ನ, ಅಕ್ಷರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹಲವು ಸೇವಾ ಉಪಕ್ರ ಮಗಳನ್ನು ಆರಂಭಿಸಿದೆ. ಸಾಂಸ್ಕೃತಿಕ ಮಹೋತ್ಸವದ ಸಂದರ್ಭದಲ್ಲಿ 126 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಷ್ಟ್ರ ಸಮರ್ಪಿಸಲಾಯಿತು.
600 ಹಾಸಿಗೆ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಉಚಿತ, ಖಾಸಗಿ ಆಸ್ಪತ್ರೆಯು ಇದೀಗ ಉದ್ಘಾಟನೆಗೆ ಸಜ್ಜಾಗಿದೆ. ಇದು ಎಲ್ಲರಿಗೂ ಆರೋಗ್ಯ ಸೇವೆಯು ಲಭ್ಯವಾಗುವಂತೆ ಮಾಡು ವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವೆನಿಸಿದೆ.
ಶತಮಾನೋತ್ಸವ ಆಚರಣೆಯು ಭಾರತದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಎನ್ನುವ ಶ್ರೇಯಕ್ಕೆ ಪಾತ್ರವಾದ ಸಾಯಿ ಸಿಂಫನಿ ಆರ್ಕೆಸ್ಟ್ರಾದ ಪ್ರಸ್ತುತಿಯೊಂದಿಗೆ ಸಂಪನ್ನ ಗೊಂಡಿದೆ. ಇದರಲ್ಲಿ ವಿಶ್ವದ 60 ದೇಶಗಳ 450 ಕಲಾವಿದರು, 70 ಗಾಯಕರು ಮತ್ತು 200 ವಿದ್ಯಾರ್ಥಿಗಳು ಇದ್ದರು. ಈ ಅದ್ಘುತ ನಾದ ಗೌರವದೊಂದಿಗೆ ಶತಮಾನೋತ್ಸವ ಆಚರಣೆ ಗಳು ಸಂಪನ್ನಗೊಂಡವು.
ಸಾಯಿ ಬಾಬಾ ಅವರ ಗೌರವಾರ್ಥ ನಡೆದ ಸಾಂಸ್ಕೃತಿಕ ಮಹೋತ್ಸವದಲ್ಲಿ 100 ದೇಶಗಳು ಕಲೆ, ಸಂಗೀತ ಮತ್ತು ನೃತ್ಯದ ಪ್ರಸ್ತುತಿಗಳ ಮೂಲಕ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದವು, ಈ ಮೂಲಕ ಮಾನವೀಯತೆಯ ಮೂಲತತ್ತ್ವಗಳಿಗೆ ದೇಶ-ಭಾಷೆಗಳ ಗಡಿ ಇಲ್ಲ. ಎಲ್ಲರೂ ಒಂದೇ ವಿಶ್ವ ಕುಟುಂಬದ ಭಾಗವಾಗಿದ್ದೇವೆ ಎನ್ನುವುದನ್ನು ಸಾರಿ ಹೇಳಿತು. ‘ವಸುಧೈವ ಕುಟುಂಬಕಂ’ ಎನ್ನುವುದು ಕೇವಲ ಹೇಳಿಕೆಯಾಗದೆ ಅನುದಿನದ ಬದುಕಿನ ಜೀವಂತ ವಾಸ್ತವವಾಗಿದೆ ಎನ್ನುವುದನ್ನೂ ಮನಗಾಣಿಸಿತು.
ಅಧ್ಯಾತ್ಮ ಸಾಧಕರು ಮತ್ತು ಉತ್ಸಾಹಿ ಸೇವಾವ್ರತಿಗಳು ಉತ್ಸವದ ಸಂಭ್ರಮವನ್ನು ಹೆಚ್ಚಿಸಿ ದರು. ವಿವಿಧ ಪ್ರದೇಶಗಳು ಮತ್ತು ಧರ್ಮಗಳು ಪ್ರತಿಧ್ವನಿಸುವ ಶಾಶ್ವತ ಸತ್ಯಗಳು ಮತ್ತು ಜ್ಞಾನವನ್ನು ಮುಕ್ತವಾಗಿ ಹಂಚಿಕೊಂಡರು - ಭಗವಾನ್ ಬಾಬಾ ಅವರ "ಏಕತೆಯೇ ದೈವತ್ವ. ಪರಿಶುದ್ಧತೆಯೇ ಜ್ಞಾನೋದಯ" ಎಂಬ ಸಂದೇಶವನ್ನು ದೃಢಪಡಿಸಿದರು.
ಈ ಉತ್ಸವವು ತಂತ್ರಜ್ಞಾನ, ವಿಜ್ಞಾನ, ನಾವೀನ್ಯತೆ ಮತ್ತು ಸಾಮಾಜಿಕ ಉದ್ಯಮ ಕ್ಷೇತ್ರಗಳ ಜಾಗತಿಕ ನಾಯಕರು, ಪರಿವರ್ತನೆಗಳಿಗೆ ಕಾರಣರಾದವರು ಮತ್ತು ಚಿಂತಕರನ್ನು ಗೌರವಿ ಸಿತು. ತಮ್ಮ ಸಾಧನೆಗಳ ಮೂಲಕ ಅಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಿದ ಅವರು, ಜಗತ್ತಿನಲ್ಲಿ ಒಳಿತಿನ ಆಶಯಗಳು ವ್ಯಾಪಿಸಲು ಮತ್ತು ಸಾಮಾನ್ಯರ ಬದುಕು ಸುಧಾರಿಸಲು ತಮ್ಮದೇ ರೀತಿಯಲ್ಲಿ ಪ್ರಯತ್ನಿಸಿದವರು.
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಗ್ಲೋಬಲ್ ಲೀಡರ್‌ಶಿಪ್ ಪ್ರಶಸ್ತಿಗೆ ಭಾಜನರಾದ ಪ್ರಮುಖ ವ್ಯಕ್ತಿಗಳಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಶ್ರೀ ಆರ್.ಸಿ.ಭಾರ್ಗವ, ಟಾಟಾ ಸನ್ಸ್‌ನ ಅಧ್ಯಕ್ಷ ಶ್ರೀ ನಟರಾಜನ್ ಚಂದ್ರಶೇಖರನ್, ಭಾರತದ ಅತ್ಯಂತ ಗೌರವಾ ನ್ವಿತ ಮಾಧ್ಯಮ ವ್ಯಕ್ತಿಗಳಾದ ಶ್ರೀ ರಜತ್ ಶರ್ಮಾ, ಭಾರತದಲ್ಲಿ ರೊಬೊಟಿಕ್ ಸರ್ಜರಿಯ ಪಿತಾಮಹ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಡಾ ಸುಧೀರ್ ಪಿ.ಶ್ರೀವಾಸ್ತವ, ಪ್ರಖ್ಯಾತ ವಿಜ್ಞಾನಿ, ಲೇಖಕ ಡಾ ಆನಂದ್ ರಂಗನಾಥನ್ ಮತ್ತು ಇನ್ನೂ ಅನೇಕರು ಸೇರಿದ್ದಾರೆ.
‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ದ ಜೊತೆಗೂಡಿ ನಿಸ್ವಾರ್ಥ ಸೇವೆ ಯಲ್ಲಿ ಕೈಜೋಡಿಸುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಭರವಸೆ, ಆರೋಗ್ಯ ಮತ್ತು ಸಂತೋಷವನ್ನು ತಂದಿದ್ದಕ್ಕಾಗಿ 140 ಕ್ಕೂ ಹೆಚ್ಚು ಕಾರ್ಪೊರೇಟ್ ಮತ್ತು ಸಾಮಾಜಿಕ ಉದ್ಯಮಗಳಿಗೆ ‘ಸಿಎಸ್‌ಆರ್ ಸರ್ಕಲ್ ಹಾನರ್ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಆರೋಗ್ಯ ರಕ್ಷಣೆ, ಶಿಕ್ಷಣ, ಪರಿಸರ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ಧರ್ಮದ ಏಕತೆ, ಕ್ರೀಡೆ ಮತ್ತು ಯೋಗ, ಸಂಗೀತ ಮತ್ತು ಲಲಿತಕಲೆಗಳ ವಿಭಾಗಗಳಲ್ಲಿ ಸಾಧನೆ ಮಾಡಿದ 100 ದೇಶಗಳ 100 ಮಾನವತಾವಾದಿಗಳನ್ನು ಉತ್ಸವದಲ್ಲಿ ಗೌರವಿಸಲಾಯಿತು. ಈ ಮಾನವತಾ ವಾದಿಗಳು ತಮ್ಮ ಮಿತಿಗಳನ್ನು ಮೀರಿ ಬೆಳೆದರು, ಸೇವೆಗೆ ಅಡ್ಡಿಯಾಗುತ್ತಿದ್ದ ಸ್ಥಾಪಿತ ಮಾನದಂಡಗಳನ್ನು ಧಿಕ್ಕರಿಸಿದರು. ಈ ಮೂಲಕ ಸಮಾಜದಲ್ಲಿ ನಾವು ನೋಡಲು ಬಯಸುವ ಬದಲಾವಣೆಗೆ ಪ್ರೇರಣೆಯಾದರು.
ವಿಶ್ವ ಸಾಂಸ್ಕೃತಿಕ ಮಹೋತ್ಸವದ ಪ್ರಮುಖ ಅಂಶಗಳಲ್ಲಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ವಾಯ್ಸ್ ಆಫ್ ದಿ ಪೀಪಲ್’ ಪ್ರಶಸ್ತಿಯು ಸಹ ಒಂದಾಗಿತ್ತು. ಇದು ಮಾಧ್ಯಮ, ಪತ್ರಿಕೋ ದ್ಯಮ, ಸಾಹಿತ್ಯ ಮತ್ತು ಕಾನೂನು ಸೇವೆಗಳ ಕ್ಷೇತ್ರಗಳ ಸಾಧಕರನ್ನು ಅವರ ದೃಷ್ಟಿಕೋನ ಮತ್ತು ಸ್ಫೂರ್ತಿ, ಸಹಾನುಭೂತಿ ಮತ್ತು ಏಕತೆಯನ್ನು ಬೆಳೆಸುವ ವಿಚಾರದಲ್ಲಿ ಮಾಡಿದ ಸಾಧನೆಗಳಿಗಾಗಿ ಗುರುತಿಸಿತು.
ವಿಶೇಷ ಯೋಜನೆಗಳ ಸಿಎನ್‌ಎನ್-ನ್ಯೂಸ್ 18 ನ ಹಿರಿಯ ನಿರೂಪಕ ಮತ್ತು ವ್ಯವಸ್ಥಾಪಕ ಸಂಪಾದಕ ಶ್ರೀ ಆನಂದ್ ನರಸಿಂಹನ್, ಟಿವಿ 9 ನೆಟ್‌ವರ್ಕ್‌ನ ಸುದ್ದಿ ನಿರ್ದೇಶಕ ಶ್ರೀ ಹೇಮಂತ್ ಶರ್ಮಾ, ಬೆಂಗಳೂರು ಮೂಲದ ಪ್ರಸಿದ್ಧ ಇತಿಹಾಸಕಾರ ಮತ್ತು ಲೇಖಕ ಡಾ ವಿಕ್ರಮ್ ಸಂಪತ್ ಅವರು ಪ್ರಶಸ್ತಿಯನ್ನು ಪಡೆದ ಕೆಲವು ಪ್ರಮುಖರು, ಇದು ಅವರ ಅಚಲ ಬದ್ಧತೆ, ಸರ್ವರಿಗೂ ಒಳಿತಾಗಬೇಕೆನ್ನುವ ಉದ್ದೇಶದಿಂದ ನಡೆಯುವ ಧ್ವನಿಯ ಪರಂಪರೆಗೆ ಸಾಕ್ಷಿಯಾಗಿದೆ.
"ಮಾನವ ಸೇವೆಯೇ ಮಾಧವ ಸೇವೆ" - ಭಗವಾನ್ ಬಾಬಾ ಅವರ ಬೋಧನೆಗಳಿಂದ ಪ್ರೇರಿತರಾಗಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಸೇವಾ ಅಭಿಯಾನವು (ಮಿಷನ್) ಅನ್ನ, ಅಕ್ಷರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹಲವು ಉಪಕ್ರಮಗಳನ್ನು ಆರಂಭಿಸಿದೆ. ಈವರೆಗೆ ವಿಶ್ವದ 1.3 ಕೋಟಿ ಜನರಿಗೆ ಈ ಸೇವೆಯ ಪ್ರಯೋಜನಗಳು ಲಭಿಸಿವೆ. ಅಧ್ಯಾತ್ಮ ಗುರು ಮತ್ತು ಸೇವಾ ಅಭಿಯಾನಕ್ಕೆ ಸ್ಫೂರ್ತಿಯಾಗಿರುವ ಭಗವಾನ್ ಸತ್ಯ ಸಾಯಿ ಬಾಬಾ ಅವರ ಗೌರವಾರ್ಥ ಈ ಸಂದರ್ಭದಲ್ಲಿ ಹಲವು ಹೊಸ ಉಪಕ್ರಮಗಳಿಗೆ ಚಾಲನೆ ನೀಡಲಾಯಿತು.
ಇದು 'ಪ್ರೀತಿ ಮತ್ತು ಪ್ರಾಯೋಗಿಕ ಸಹಾನುಭೂತಿ’ಗೆ ಸಾಕ್ಷಿ ಎನಿಸಿತು.ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದ ಕೊಡುಗೆಯಾಗಿ 126 ಸಾಯಿ ಸ್ವಾಸ್ಥ್ಯ ಕೇಂದ್ರಗಳನ್ನು ಸಮರ್ಪಿಸಲಾಯಿತು, ಇದು ಆರೋಗ್ಯ ರಕ್ಷಣೆಯನ್ನು ಎಲ್ಲರಿಗೂ, ವಿಶೇಷವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ದೂರ ಇರುವ ಸಮುದಾಯಗಳಿಗೆ ಲಭ್ಯವಾಗುವಂತೆ ಮಾಡುವಲ್ಲಿ ಮಹತ್ವದ ಪ್ರಯತ್ನ ಎನಿಸಿದೆ.
600 ಹಾಸಿಗೆಗಳ ಸಾಮರ್ಥ್ಯದ ವಿಶ್ವದ ಅತಿದೊಡ್ಡ, ಉಚಿತ, ಖಾಸಗಿ ಆಸ್ಪತ್ರೆಯು ಉದ್ಘಾಟನೆಗೆ ಸಜ್ಜಾಗಿದೆ. ಈ ಆಸ್ಪತ್ರೆಯು ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸೇವಾ ಅಭಿಯಾನ’ವು ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಮಾಡುತ್ತಿರುವ ಪ್ರಯತ್ನಗಳ ಹೆಗ್ಗುರುತಿನ ವಿಸ್ತರಣಾ ಉಪಕ್ರಮವಾಗಿದೆ.
ಈ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಸಾಮೂಹಿಕ ಮತ್ತು ಸಹಾನುಭೂತಿಯ ಅಗತ್ಯ ವನ್ನು ಪೂರೈಸುತ್ತದೆ. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಮೂಲಕ ಮುಂದಿನ ಪೀಳಿಗೆಯ ಆರೋಗ್ಯ ವೃತ್ತಿಪರರನ್ನು ಸಜ್ಜುಗೊಳಿಸಲು ಎರಡನೇ ಬೋಧನಾ ಆಸ್ಪತ್ರೆಯಾಗಿ ಕಾರ್ಯನಿರತರವಾಗಲಿದೆ. 'ಯಾರನ್ನೂ ಕೈಬಿಡಬೇಡಿ’ ಎಂಬ ಗುರಿಯನ್ನು ಹೊಂದಿರುವ ಈ ಸೌಲಭ್ಯವು ಅತ್ಯಾ ಧುನಿಕ ತಂತ್ರಜ್ಞಾನಗಳಿಂದ ಸಜ್ಜುಗೊಂಡಿದೆ. ತುರ್ತು ಮತ್ತು ಆಘಾತದ ಸಂದರ್ಭದಲ್ಲಿ ಜೀವ ಉಳಿಸುವ ಸೇವೆಯನ್ನು ಎಲ್ಲರಿಗೂ ಒದಗಿಸಲಿದೆ.
“ಜಗತ್ತಿನಲ್ಲಿ ಇರುವುದು ಒಂದೇ ಧರ್ಮ, ಅದು ಪ್ರೀತಿಯ ಧರ್ಮ" - ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಸಂದೇಶದಿಂದ ಪ್ರೇರಿತರಾಗಿ, ನವೆಂಬರ್ 21 ರಿಂದ 23 ರವರೆಗೆ ಆಯೋಜಿಸಲಾದ ವಿಶ್ವ ಧರ್ಮಗಳ ಶೃಂಗಸಭೆಯು ವಿಶ್ವದ 12 ಅತ್ಯಂತ ಪ್ರಭಾವಶಾಲಿ ಧರ್ಮಗಳ ಆಧ್ಯಾತ್ಮಿಕ ನಾಯಕರು, ಚಿಂತಕರು ಮತ್ತು ಜಾಗತಿಕ ಪರಿವರ್ತನೆಗಾಗಿ ಶ್ರಮಿಸುತ್ತಿರುವವರನ್ನು ಒಂದು ವೇದಿಕೆಯಲ್ಲಿ ಒಗ್ಗೂಡಿಸಿತು.
ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ 100 ದಿನಗಳ ಕಾಲದ ನಡೆದ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ಸಮಾರೋಪದಲ್ಲಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸಿಂಫನಿ ಆರ್ಕೆಸ್ಟ್ರಾ’ ಸಂಗೀತ ಪ್ರಸ್ತುತಿ ನೀಡಿತು. 60 ದೇಶಗಳ 450 ಜಾಗತಿಕ ಸಂಗೀತಗಾರರು, 70 ಕಲಾವಿದರ ಗಾಯಕವೃಂದ ಇರುವ ಈ ತಂಡವು ಭಾರತದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಎನಿಸಿದೆ. 200 ಯುವ ವಿದ್ಯಾರ್ಥಿಗಳೂ ಈ ತಂಡದಲ್ಲಿರುವುದು ಉಲ್ಲೇಖಾರ್ಹ ಅಂಶ. ಮನಮುಟ್ಟುವ ಸಂಗೀತದ ಮೂಲಕ ಭಗವಾನರಿಗೆ ಈ ತಂಡವು ನಾದ ಗೌರವ ಸಲ್ಲಿಸಿತು.
ಜಾಗತಿಕ ರಾಯಭಾರ ಕಚೇರಿಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉತ್ಸವಕ್ಕೆ ಹೊಸ ಆಯಾಮವನ್ನು ನೀಡಿದರು, ಈ ರಾಷ್ಟ್ರಗಳೊಂದಿಗೆ ಭಾರತದ ಸಹಯೋಗದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದರು.