ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anand Guruji : ಪಠ್ಯ ಶಿಕ್ಷಣದ ಜತೆಜತೆಗೆ ಮಕ್ಕಳಲ್ಲಿ ಭಾರತೀಯತೆಯ ಸ್ಪರ್ಷವನ್ನು ಬಿತ್ತಬೇಕಿದೆ : ಮಹರ್ಷಿವಾಣಿ ಖ್ಯಾತಿಯ ಆನಂದ ಗುರೂಜಿ ಸಂದೇಶ

ಶಾಲಾ ವಾರ್ಷಿಕೋತ್ಸವ ಎಂದರೆ ಕೇವಲ ಆಚರಣೆ ಮಾತ್ರವಾಗಿರದೆ ದೇಶದ ಕಲೆ ಸಾಹಿತ್ಯ ಸಂಸ್ಕೃತಿ ಯನ್ನು ಬಿಂಬಿಸುವ ಸುಂದರ ವೇದಿಕೆಯಾಗಿದೆ.ಇಲ್ಲಿ ಮಕ್ಕಳು ಪ್ರದರ್ಶಿಸುವ ಕಾರ್ಯಕ್ರಮಗಳು ಅವರ ಅಂತರ್ಗತ ಶಕ್ತಿಯ ಮೂರ್ತ ರೂಪಗಳಾಗಿವೆ. ಹೀಗಾಗಿ ಏನೇ ಬದಲಾವಣೆ ಆದರೂ ಶಾಲಾ ವಾರ್ಷಿ ಕೋತ್ಸವಗಳಿಗೆ ತಮ್ಮದೇ ಆದ ಮಹತ್ವವಿದೆ

ಪಠ್ಯ ಶಿಕ್ಷಣದ ಜತೆಜತೆಗೆ ಮಕ್ಕಳಲ್ಲಿ ಭಾರತೀಯತೆಯ ಸ್ಪರ್ಷವನ್ನು ಬಿತ್ತಬೇಕಿದೆ

-

Ashok Nayak
Ashok Nayak Jan 4, 2026 12:49 PM

ಶಾರದೆಯ ಪೂಜೆಯೊಂದಿಗೆ ಪ್ರಾರಂಭ ಗುರೂಜಿಗೆ ಪೂರ್ಣಕುಂಭಸ್ವಾಗತ : ದೇಸಿ ಸಂಸ್ಕೃತಿ ಬಿಂಬಿಸಿದ ಪೂರ್ಣಪ್ರಜ್ಞಾ ಶಾಲೆಯ ಶಾಲಾ ವಾರ್ಷಿಕೋತ್ಸವ

ಚಿಕ್ಕಬಳ್ಳಾಪುರ: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯ ಜತೆಗೆ ಅವರಲ್ಲಿ ಭಾರತೀಯತೆ ಸ್ಪರ್ಷವನ್ನು ಬಿತ್ತಬೇಕು.ಇದಾದಲ್ಲಿ ಪೋಷಕರನ್ನು ಆಧರಿಸುವ, ಗುರುಹಿರಿಯರನ್ನು ಗೌರವಿಸುವ ಆದರ್ಶ ಗುಣಗಳು ತಾನಾಗೇ ಬೆಳೆಯಲು ಸಾಧ್ಯ ಎಂದು ಮಹರ್ಷಿವಾಣಿ ಖ್ಯಾತಿಯ ಪ್ರವಚನಕಾರ ಆನಂದ ಗುರೂಜಿ ತಿಳಿಸಿದರು.

ನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಏರ್ಪಡಿಸಿದ್ದ ಶಾರದಾಪೂಜೆ ಮತ್ತು ಕನ್ನಡ ಭವನದಲ್ಲಿ ಏರ್ಪಡಿಸಿದ್ದ 20ನೇ ವರ್ಷದ ಕೌಸ್ತುಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಲಾ ವಾರ್ಷಿಕೋತ್ಸವ ಎಂದರೆ ಕೇವಲ ಆಚರಣೆ ಮಾತ್ರವಾಗಿರದೆ ದೇಶದ ಕಲೆ ಸಾಹಿತ್ಯ ಸಂಸ್ಕೃತಿ ಯನ್ನು ಬಿಂಬಿಸುವ ಸುಂದರ ವೇದಿಕೆಯಾಗಿದೆ.ಇಲ್ಲಿ ಮಕ್ಕಳು ಪ್ರದರ್ಶಿಸುವ ಕಾರ್ಯ ಕ್ರಮಗಳು ಅವರ ಅಂತರ್ಗತ ಶಕ್ತಿಯ ಮೂರ್ತ ರೂಪಗಳಾಗಿವೆ.ಹೀಗಾಗಿ ಏನೇ ಬದಲಾವಣೆ ಆದರೂ ಶಾಲಾ ವಾರ್ಷಿಕೋತ್ಸವಗಳಿಗೆ ತಮ್ಮದೇ ಆದ ಮಹತ್ವವಿದೆ ಎಂದರು.

Anand G 3

ಆಧುನಿಕತೆಯ ಬೆಳಕಲ್ಲಿ ಮಕ್ಕಳಿಗೆ ಸಂಸ್ಕಾರಯುವ ಗುಣಮಟ್ಟದ ಶಿಕ್ಷಣ ಕೊಡುವುದು ಸವಾಲಿನ ಕೆಲಸವೇ ಸರಿ.ಇಂತಹ ಸವಾಲಿನ ಕೆಲಸವನ್ನು ಅಗ್ನಿದಿವ್ಯದಂತೆ ಪೂರ್ಣಪ್ರಜ್ಞ ಶಾಲೆ 20 ವರ್ಷ ಗಳಿಂದ ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ವಿಚಾರ ವಾಗಿದೆ ಎಂದರು.

ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವಳಿಗೆ ಸಿಕ್ಕದಂತೆ ವಿದ್ಯಾರ್ಥಿಗಳನ್ನು ಕಾಪಾಡುವುದೇ ಕಷ್ಟಕರ ಎಂಬ ಸನ್ನಿವೇಶದ ನಡುವೆ ಭಾರತೀಯತೆಯ ಸ್ಪರ್ಷವನ್ನು ಮಕ್ಕಳಲ್ಲಿ ಬಿತುತ್ತಿರುವ ಈ ಸಂಸ್ಥೆಯು ಉತ್ತರೋತ್ತರ ಅಭಿವೃದ್ದಿಯನ್ನು ಕಾಣಲಿ. ಇಲ್ಲಿ ಓದುವ ಮಕ್ಕಳು ವಿಶ್ವೇಶ್ವರಯ್ಯ ಅವರಂತೆ ಎತ್ತರದ ಸ್ಥಾನ ಮಾನಗಳನ್ನು ಗಳಿಸಲಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳು ದುಶ್ಟಗಳಿಗೆ ದಾಸರಾಗವಾರದು. ಮಕ್ಕಳ ಮೇಲೆ ಶಾಲೆಗಿಂತ ಮನೆಯ ಪರಿಸರವೇ ಹೆಚ್ಚಿನ ಪ್ರಭಾವ ಬೀರುವ ಕಾರಣ ಇದನ್ನು ಮನಗಂಡು ಪೋಷಕರು ಸದ್ಗುಣ ಗಳನ್ನು ಬೆಳೆಸಿಕೊಳ್ಳಬೇಕು, ಮಕ್ಕಳಲ್ಲಿ ಬೆಳೆಸಬೇಕು.ವಿದ್ಯಾಬ್ಯಾಸಕ್ಕೆ ಶ್ರದ್ಧೆಯೇ ಬಹುದೊಡ್ಡ ಸಾಧನ. ಎಲ್ಲಿ ಶ್ರದ್ಧೆಯಿರಲಿದೆಯೋ ಅಲ್ಲಿ ವಿದ್ಯೆ ತಾನಾಗೇ ನೆಲೆಗೊಳ್ಳಲಿದೆ.

ಇದನ್ನೂ ಓದಿ: Chikkaballapur New: ಜಲಮೂಲಗಳಿಗೆ ಸಂಸ್ಕರಿಸದ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ: ಎಚ್ಚರಿಕೆ

ಚಿಕ್ಕಬಳ್ಳಾಪುರದಂತಹ ಪುಣ್ಯಕ್ಷೇತ್ರದಲ್ಲಿ ಹುಟ್ಟುವುದು ಒಂದು ಸೌಭಾಗ್ಯ ಇಲ್ಲಿ ಚಿತ್ರಾವತಿ, ನಂದಿ, ಭೋಗ ಯೋಗ ನಂಧೀಶ್ವರ, ಪಾಪಾಗ್ನಿ,ರಂಗಸ್ಥಳ ಮೀಸಾಗ್ನಿ ಇಂತಹ ಪುಣ್ಯ ಸ್ಥಳದಲ್ಲಿ ನಾನು ಹುಟ್ಟಿರುವುದು ನನ್ನ ಪೂರ್ವಜನ್ಮದ ಪುಣ್ಯ.ಸರ್.ಎಂ.ವಿಶ್ವೇಶ್ವರಯ್ಯ ಮಹಾತ್ಮ ಹುಟ್ಟಿ ಬೆಳೆದು ನಡೆದಾಡಿರುವಂತಹ ಪುಣ್ಯಭೂಮಿಯಲ್ಲಿ ಪೂರ್ಣಪ್ರಜ್ಞಾ ಎಂಬ ವಿದ್ಯಾಸಂಸ್ಥೆಯಿರುವುದು ಮತ್ತೂ ಸಂತೋಷ.ಈ ಶಾಲೆಯಲ್ಲಿ ಓದುವುದೇ ಮಕ್ಕಳ ಪಾಲಿನ ಪುಣ್ಯ. ಇಂದು ಜ್ಞಾನದ ದಿನವಾಗಿದೆ. ಈ ದಿನವೇ ಶಾರದೆಯ ಪೂಜೆಯ ಮೂಲಕ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಸುತ್ತಿರುವುದು ಇದಕ್ಕೆ ನನ್ನನ್ನು ಅತಿಥಿಯಾಗಿ ಕರೆದು ನನ್ನ ಕಡೆಯಿಂದ ಮಕ್ಕಳಿಗೆ ಗುರು ಬೋಧೆ ಮಾಡಿಸಿರುವುದು ನೆನಪಿನಲ್ಲಿ ಸದಾ ಉಳಿಯಲಿದೆ ಎಂದರು.

ಪೂರ್ಣಪ್ರಜ್ಞಾ ಶಾಲೆಯ ೨೦೨೬ರ ಶಾಲಾ ವಾರ್ಷಿಕೋತ್ಸವ ಇಷ್ಟೊಂದು ಅರ್ಥಪೂರ್ಣವಾಗಿ ನಡೆಯಲು ಕಾರಣಕರ್ತರು ಯಾರೆಂದರೆ ಅದೇ ಮಹರ್ಷಿವಾಣಿ ಖ್ಯಾತಿಯ ಆನಂದ ಗುರೂಜಿ ಸಂದೇಶ ಮತ್ತು ಉಪಸ್ಥಿತಿಯೇ ಆಗಿದೆ.ನಮ್ಮ ಶಾಲೆಯಲ್ಲಿ ಓದುವ ಪ್ರತಿ ಮಗುವೂ ಕೂಡ ಆದರ್ಶಗಳ ಗಣಿಯಾಗಬೇಕು ಎಂಬುದೇ ಆಗಿದೆ.ಗುರೂಜಿಯ ಆಗಮನ ಪೋಷಕರಿಗೆ ಸಂತೋಷ ತಂದಿದೆ ಎಂದು ಭಾವಿಸಿದ್ದೇನೆ.ಯಾರಿಗೂ ಕೆಡುಕನ್ನು ಮಾಡದೆ ನನ್ನ ತಂದೆ ತಾಯಿ ನಡೆದು ಕೊಂಡ ರೀತಿ,ಅವರು ನಮಗೆ ಹಾಕಿಕೊಟ್ಟ ಮಾರ್ಗದರ್ಶನ,ಸತ್ಯಸಾಯಿ ಶಾಲೆಯಲ್ಲಿ ಓದಿದ ಕಾರಣ ಶಿಸ್ತಿನಿಂದ ಬೆಳೆದೆವು. ನಮ್ಮ ಶಾಲೆಯಲ್ಲಿ ಓದುವ ಮಕ್ಕಳಿಗೂ ನಾನು ಇದನ್ನೇ ಕಲಿಸಿದ್ದೇನೆ ಎಂದರು.

Anand G 2

ಯಾವ ಪೋಷಕರು ಮಕ್ಕಳಿಗೆ ಶಿಸ್ತನ್ನು ಕಲಿಸಲು ಒತ್ತು ನೀಡುತ್ತಾರೋ, ಆ ಮಕ್ಕಳ ಭವಿಷ್ಯ ಉತ್ತಮವಾಗಿರಲಿದೆ.ಅಂತಹ ಮಕ್ಕಳು ಜನ್ಮದಾತರನ್ನು ವೃದ್ದಾಶ್ರಮಕ್ಕೆ ಕಳಿಸುವುದಿಲ್ಲ.ನಮ್ಮ ಶಾಲೆಯಲ್ಲಿ ಓದುವ ಮಕ್ಕಳಿಂದ ಇಂತದೇ ಗುಣವನ್ನು ನಾನು ನಿರೀಕ್ಷೆ ಮಾಡುತ್ತೇನೆ.ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿದ ಕೂಡಲೇ ಜವಾಬ್ದಾರಿ ಮುಗಿಯಿತು ಎನ್ನುವಂತಿಲ್ಲ. ಅವರ ಬೆಳವಣಿಗೆಯನ್ನು ಗಮನವಿಟ್ಟು ನೋಡಿದಾಗ ಮಾತ್ರ ಮಕ್ಕಳು ಭಾರತದ ಸತ್ಪ್ರಜೆಗಳಾಗಿ ರೂಪು ಗೊಳ್ಳಲು ಸಾಧ್ಯ ಎಂದರು.

*
ಶಾಲಾ ವಾರ್ಷಿಕೋತ್ಸವದ ಹೆಗ್ಗಳಿಕೆ ಎಂದರೆ 50 ವರ್ಷಗಳಿಗೂ ಹೆಚ್ಚುಕಾಲ ನಗರದ ಶಾಲೆಗಳಲ್ಲಿ ಆಯಾ ಆಗಿಯೇ ಸೇವೆ ಸಲ್ಲಿಸಿ ಬದುಕಿಗೆ ಆಸರೆಯಿಲ್ಲದೆ ಬದುಕುತ್ತಿರುವ ವಸಂತಮ್ಮ ಅವರನ್ನು 10 ಸಾವಿರ ನಗದು ನೀಡಿ ಗೌರವಿಸಲಾಯಿತು. ಈಕೆಯ ಸೇವೆ ತಾಯಿಯನ್ನು ನೆನೆಪಿಗೆ ತರದಿರದು. ಭಾರತದ ಚರಿತ್ರೆಯಲ್ಲಿ ಪೂರ್ಣಪ್ರಜ್ಞಾ ಶಾಲೆ ಮಾಡಿದ ಕಾರ್ಯವನ್ನು ಬಹುಶ: ಯಾರೂ ಕೂಡ ಮಾಡಿರಲು ಸಾಧ್ಯವಿಲ್ಲ.ದೇಶದ ಎಲ್ಲಾ ಆಯಾಗಳ ಸೇವೆಯ ಪ್ರತೀಕವಾಗಿ ವಸಂತಮ್ಮ ಅವರನ್ನು ಇಂತಹ ದೊಡ್ಡ ವೇದಿಕೆಯಲ್ಲಿ ಸನ್ಮಾನಿಸಲಾಯಿತು. 75 ವರ್ಷದ ಸಂಧ್ಯಾ ಕಾಲದಲ್ಲಿರುವ ಈಕೆಯ ಬದುಕು ಇನ್ನಾದರೂ ಹಸನಾಗಲಿ.ವಯಸ್ಸಾದರೂ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೂ, ಆಸರೆಗೆ ಯಾರೂ ಇಲ್ಲದಿದ್ದರೂ ಸ್ವಾಭಿಮಾನಿಯಾಗಿ ಗೃಹಲಕ್ಷ್ಮೀ ಹಣದಲ್ಲಿ ದಿನದೂಡುತ್ತಿರುವ ಇವರು ಆರೋಗ್ಯವಂತರಾಗಿ, ಮನಶ್ಯಾಂತಿಯಿಂದ ಗೌರವಪೂರ್ಣ ಬದುಕನ್ನು ಭಗವಂತ ನೀಡಲಿ ಎಂದು ಶುಭಕೋರಲಾಯಿತು.

ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಮೂಡಿ ಬಂದ ತರಹೆವರಿ ಮನರಂಜನಾ ಕಾರ್ಯಕ್ರಮಗಳು ಪೋಷಕರ ಮೆಚ್ಚುಗೆ ಗಳಿಸಿದವು.

ವೇದಿಕೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಶೈಲಜಾ ವೆಂಕಟೇಶ್, ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಸುನಂದಮ್ಮ, ವಿಷ್ಣುಪ್ರಿಯ, ಓಂಶ್ರೀ, ಪರಿಣಿತ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ, ಶಿಕ್ಷಕರು ಪೋಷಕರು ಮಕ್ಕಳು ಇದ್ದರು.