ವಯೋ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣಾಧಿಕಾರಿಗಳಾದ ಬಿ.ಎನ್.ನಟರಾಜ್ ಗೆ ಅಭೂತಪೂರ್ವ ಬೀಳ್ಕೊಡುಗೆ
ತಮ್ಮ ದೈಹಿಕ ಶಿಕ್ಷಣ ಕೌಶಲ್ಯದಿಂದ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳನ್ನಾಗಿ ಮಾಡಿ ಹೆಸರು ಗಳಿಸಿದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಇವರ ಸೇವೆ ಇಲಾಖೆಗೆ ತೃಪ್ತಿ ತಂದಿದೆ. ಅವರ ಮುಂದಿನ ನಿವೃತ್ತಿ ಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಹಾಗೂ ಕಿರಿಯ ಶಿಕ್ಷಕರಿಗೆ ಮಾರ್ಗ ದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುತ್ತೇನೆ


ಬಾಗೇಪಲ್ಲಿ: ತಾಲ್ಲೂಕು ,ಯಲಹಂಕ ದೈಹಿಕ ಶಿಕ್ಷಣ ಪರವೀಕ್ಷರಾಗಿ ಸೇವೆ ಸಲ್ಲಿಸಿ ತದನಂತರ ವರ್ಗಾವಣೆಗೊಂಡು ಚಿಕ್ಕಬಳ್ಳಾಪುರ ದೈಹಿಕ ಶಿಕ್ಷಣಾಧಿಕಾರಿಗಳಾದ ಬಿ.ಎನ್.ನಟರಾಜ್ ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಪಟ್ಟಣದ ಬಾಲಕಿಯರ ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಪ್ರೌಢಶಾಲಾ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ,ಖಾಸಗಿ ಶಿಕ್ಷಕರ ಸಂಘ ,ಬಡ್ತಿ ಶಿಕ್ಷಕರ ಸಂಘ, ಹಾಗೂ ಪದಾಧಿಕಾರಿಗಳು ಪ್ರತ್ಯೇಕವಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಬಿಇಓ ಮಾತನಾಡಿ, ತಮ್ಮ ದೈಹಿಕ ಶಿಕ್ಷಣ ಕೌಶಲ್ಯದಿಂದ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳನ್ನಾಗಿ ಮಾಡಿ ಹೆಸರು ಗಳಿಸಿದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಇವರ ಸೇವೆ ಇಲಾಖೆಗೆ ತೃಪ್ತಿ ತಂದಿದೆ. ಅವರ ಮುಂದಿನ ನಿವೃತ್ತಿ ಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಹಾಗೂ ಕಿರಿಯ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.
ನಿವೃತ್ತ ಬಿಇಓ ಆದಿಲಕ್ಷ್ಮಮ್ಮ ಮಾತನಾಡಿ, ಬಿ.ಎನ್.ನಟರಾಜ್ ಅವರು ಸದಾ ಹಸನ್ಮುಖಿಯಾಗಿ ಎಂದೂ ಯಾರ ಮೇಲೂ ಕೋಪ ಮಾಡಿಕೊಳ್ಳದೆ ಶಾಂತ ಸ್ವರೂಪಿಯಾಗಿದ್ದರು. ಅವರ ತಾಳ್ಮೆ ಮತ್ತು ಸಹನೆ ಇತರರಿಗೆ ಮಾದರಿಯಾಗಿದ್ದಾರೆ. ಅವರು ಕ್ರೀಡೆ ಜತೆಗೆ ವಿವಿಧ ರಾಷ್ಟ್ರೀಯ ಹಬ್ಬಗಳು, ಸಾಂಸ್ಕೃತಿಕವಾಗಿಯೂ ಮಕ್ಕಳನ್ನು ಬೆಳಸುತ್ತಿದ್ದರು.
ಅಂತಹ ಕ್ರಿಯಾಶೀಲ ಹೃದಯ ವೈಶಾಲ್ಯ ಇರುವ ಶಿಕ್ಷಕರು ವಯೋ ನಿವೃತ್ತಿ ಹೊಂದುತ್ತಿರುವುದು ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ರಾಮಚಂದ್ರಪ್ಪರವರು ಸುಮಾರು 12 ಶಾಲೆಗಳಿಗೆ ಕ್ರೀಡಾ ಕೂಟದ ಬ್ಯಾಂಡ್ ಸೆಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಆರ್.ಹನುಮಂತ ರೆಡ್ಡಿ, ಶಿಕ್ಷಣ ಸಂಯೋಜಕ ಆರ್ ವೆಂಕಟರಾಮ್, ಪಿ.ವಿ. ವೆಂಕಟರವಣ, ಸಿ.ವೆಂಕಟ ರಾಯಪ್ಪ, ರಂಗಾರೆಡ್ಡಿ, ಮಂಜುನಾಥ್, ಪ್ರಭಾವತಿ, ಪ್ರಮೀಳಾ, ಶಿವಪ್ಪ, ಬಾಲರಾಜು,ಬಾನಲಪಲ್ಲಿ ಶ್ರೀನಿವಾಸ್, ಬಾಲರಾಜು, ಶ್ರೀನಿವಾಸ್, ಈಶ್ವರಪ್ಪ, ರಂಗನಾಥ್, ಸಿ.ನಾರಾಯಣ ಸ್ವಾಮಿ, ಕೆ.ವಿ.ಆದಿನಾರಾಯಣ, ನಾಗಭೂಷಣ, ಪಿ.ಎನ್.ನಾರಾಯಣ ಸ್ವಾಮಿ, ಇತರರು ಇದ್ದರು.