ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರೀಡಾ ಮನೋಭಾವವಿರಲಿ ಜಗಳ ಬೇಡ : ಜಿಲ್ಲಾ ನ್ಯಾಯಾಧೀಶೆ ಭವಾನಿ ನೇರಳೆ ವೀರಭದ್ರಯ್ಯ

ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಯಾರೇ ಆಗಿರಲಿ ತಮ್ಮ ವೃತ್ತಿಯ ಬದುಕಿನ ಒತ್ತಡ ವನ್ನು ನಿವಾರಿಸಿಕೊಂಡು ಲವಲವಿಕೆಯಿಂದ ತಮ್ಮತಮ್ಮ ಕಾಯಕದಲ್ಲಿ ಕಾರ್ಯತತ್ಪರ ರಾಗಬೇಕಾದರೆ ಕ್ರೀಡೆಗಳಲ್ಲಿ ಭಾಗಿಯಾವುದು ಒಳಿತು.ಎಲ್ಲಿ ಆರೋಗ್ಯದ ದೇಹವಿರಲಿದೆಯೋ ಅಲ್ಲಿ ಆರೋಗ್ಯವಂತ ಮನಸ್ಸು ಇರಲಿದೆ. ಇದನ್ನರಿತು ಕ್ರೀಡೆಗಳಲ್ಲಿ ಭಾಗವಾಗುವುದನ್ನು ರೂಢಿಸಿಕೊಳ್ಳಿ ಎಂದರು.

ಕ್ರೀಡಾ ಮನೋಭಾವವಿರಲಿ ಜಗಳ ಬೇಡ

ನಗರ ಹೊರವಲಯದ ಕೆ.ವಿ.ಕ್ಯಾಂಪಸ್‌ನಲ್ಲಿ ಜಿಲ್ಲಾ ವಕೀಲರ ಸಂಘ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂಧಿಗೆ  ಎರ್ಪಡಿಸಿದ್ದ ಸ್ವಾತಂತ್ರ‍್ಯ ದಿನಾಚರಣೆ  ಕೀಡಾಕೂಟ ೨೦೨೫ನ್ನು ನ್ಯಾ.ನೇರಳೆ ವೀರಭದ್ರಯ್ಯ ಭವಾನಿ ಉದ್ಘಾಟಿಸಿದರು.

Ashok Nayak Ashok Nayak Aug 4, 2025 11:20 PM

ಿಕ್ಕಬಳ್ಳಾಪುರ : ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಸುತ್ತಿರುವ ಕ್ರೀಡಾಕೂಟದಲ್ಲಿ ಭಾಗಿಯಾಗಿರುವ ಎಲ್ಲರೂ ಕ್ರೀಡಾಸ್ಪೂರ್ತಿಯಿಂದ ಆಟೋಗಳಲ್ಲಿ ತೊಡಗಬೇಕು.ಯಾವುದೇ ಕಾರಣಕ್ಕೂ ಜಗಳ ಮಾಡಿಕೊಳ್ಳಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶೆ ಭವಾನಿ ನೇರಳೆ ವೀರಭದ್ರಯ್ಯ ತಿಳಿಸಿದರು.

ನಗರ ಹೊರವಲಯ ಸಿವಿವಿ ಕ್ಯಾಂಪಸ್ ಕ್ರೀಡಾಂಗನದಲ್ಲಿ ಸೋಮವಾರ ಜಿಲ್ಲಾ ವಕೀಲರ ಸಂಘ ದಿಂದ ಏರ್ಪಡಿಸಿದ್ದ 78ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಯಾರೇ ಆಗಿರಲಿ ತಮ್ಮ ವೃತ್ತಿಯ ಬದುಕಿನ ಒತ್ತಡವನ್ನು ನಿವಾರಿಸಿಕೊಂಡು ಲವಲವಿಕೆಯಿಂದ ತಮ್ಮತಮ್ಮ ಕಾಯಕದಲ್ಲಿ ಕಾರ್ಯತತ್ಪರ ರಾಗಬೇಕಾದರೆ ಕ್ರೀಡೆಗಳಲ್ಲಿ ಭಾಗಿಯಾವುದು ಒಳಿತು.ಎಲ್ಲಿ ಆರೋಗ್ಯದ ದೇಹವಿರಲಿದೆಯೋ ಅಲ್ಲಿ ಆರೋಗ್ಯವಂತ ಮನಸ್ಸು ಇರಲಿದೆ. ಇದನ್ನರಿತು ಕ್ರೀಡೆಗಳಲ್ಲಿ ಭಾಗವಾಗುವುದನ್ನು ರೂಢಿಸಿಕೊಳ್ಳಿ ಎಂದರು.

ಇದನ್ನೂ ಓದಿ: Chikkaballapur News: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಒಕ್ಕೂಟಗಳಿಂದ ಜಿಲ್ಲಾ ಪ್ರಜಾ ಸೌಧದ ಮುಂದೆ ಪ್ರತಿಭಟನೆ

ಕ್ರೀಡಾಕೂಟಗಳಲ್ಲಿ ಭಾಗಿಯಾಗುವುದೆಂದರೆ ನಮ್ಮನ್ನು ನಾವು ಅರಿತುಕೊಳ್ಳುವುದೆಂದೇ ಅರ್ಥ. ಕ್ರೀಡಾಸ್ಪೂರ್ತಿಯಿಲ್ಲದೆ ಆಟೋಟಗಳಲ್ಲಿ ಭಾಗಿಯಾಗುವುದು ಬೇಡ. ಸೋಲಿದ್ದಲ್ಲಿ ಗೆಲುವಿರಲಿದೆ. ಗೆಲುವಿದ್ದಲ್ಲಿ ಸೋಲಿರಲಿದೆ.ಇವೆರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳು. ವಕೀಲ ವೃತ್ತಿಯಿರಲಿ, ನ್ಯಾಯಾಧೀಶರ ವೃತ್ತಿಯಿರಲಿ ತೀರಾ ಸಹನೆಯನ್ನು ಬೇಡುತ್ತದೆ. ಸಹನೆಯ ಗುಣ ಕ್ರೀಡೆಗಳಿಂದ ಬರಲಿದೆ.ಜತೆಗೆ ನಾಯಕತ್ವದ ಗುಣ, ಸಾಮಾಜಿಕರಣದ ಗುಣ ಬೆಳೆಸಿಕೊಳ್ಳಲು ಕ್ರೀಡೆ ಗಳು ಉತ್ತತ ವೇದಿಕೆಗೆಗಳಾಗಿವೆ. ವಕೀಲರು ತಪ್ಪದೆ ನಿತ್ಯವೂ ಒಂದು ಗಂಟೆಕಾಲ ನಿಮ್ಮ ಮತ್ತು ನಿಮ್ಮ ಅವಲಂಭಿತರ ಕಾರಣಕ್ಕಾಗಿ ಕ್ರೀಡೆ, ಯೋಗ, ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಶಾಲಾ ಕಾಲೇಜು ದಿನಗಳಲ್ಲಿ ದೈಹಿಕ ಸದೃಢತೆಗೆ ಆದ್ಯತೆ ಕೊಡುವ ನಾವು ನಂತರ ಉದಾಸೀನತೆಯಿಂದ ಮತ್ತು ಕೆಲಸದ ಒತ್ತಡದಲ್ಲಿ ಮರೆಯುತ್ತೇವೆ. ದೈಹಿಕ ಮತ್ತು ಮಾಸಿಕ ದೃಢತೆಗೆ ಕ್ರೀಡೆ ವ್ಯಾಯಾಮ ಅಗತ್ಯವಿದೆ. ದೈಹಿಕ ದೃಢತೆಗಿಂತ ಮಾನಸಿಕ ದೃಢತೆ ಅತ್ಯಗತ್ಯವಾಗಿ ಬೇಕಾಗಿದೆ. ಮಾನಸಿಕ ದೃಢತೆಯಿಂದ ಪರಸ್ಪರ ಹೊಂದಾಣಿಕೆ ಸಾಮರಸ್ಯ ಏರ್ಪಟ್ಟು, ಯಾವುದೇ ತಂಡವಾಗಿ ಆಡುವ ಕ್ರೀಡೆಯಲ್ಲಿ ಗೆಲುವು ಸಾಧ್ಯವಾಗುತ್ತದೆ ಎಂದರು.

6cbpm6ne

ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲರೂ ಗೆಲುವು ಸಾಧಿಸಲು ಸಾಧ್ಯವಿಲ್ಲ, ಒಬ್ಬರಿಗೆ ಮಾತ್ರ ಗೆಲ್ಲುವ ಅವಕಾಶವಿರುತ್ತದೆ. ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಸೋಲನ್ನು ಸ್ವೀಕರಿಸುವ  ್ರೀಡಾ ಸ್ಪೂರ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಒತ್ತಡದ ವಾತಾವರಣದಲ್ಲಿಯೇ ಕಾರ್ಯ ನಿರ್ವ ಹಿಸುತ್ತಿದ್ದು, ತಮ್ಮ ಆರೋಗ್ಯದ ಬದುಕನ್ನು ಸಾಗಿಸಲು ಕ್ರೀಡೆ ಸಹಕಾರಿಯಾಗಿದೆ. ಮನುಷ್ಯ ಸದೃಢ ಹಾಗೂ ಆರೋಗ್ಯಕರವಾಗಿದ್ದಾಗ ಮಾತ್ರ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯ,ವಕೀಲ ವೃತ್ತಿಯಲ್ಲಿ ಕ್ರೀಡಾಸ್ಪೂರ್ತಿ ಅತ್ಯಂತ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರುಗಳಾದ ಕಾಂತರಾಜು, ಶ್ರೀಧರ್, ಉಮೇಶ್, ಭಾರತಿ, ಲತಾ ಕುಮಾರಿ, ಮಾನಸ ಶೇಖರ್, ಶಾರದ, ಪ್ರೇಮ್ ಕುಮಾರ್, ವರ್ಣಿಕಾ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ಮುನಿರಾಜು, ಖಜಾಂಚಿ ರಘುಕಾಂತ್. ಕ್ರೀಡಾ ಸಮಿತಿಯ ಅಧ್ಯಕ್ಷ ಪಿ.ಸುಬ್ರಹ್ಮಣಿ, ವಕೀಲರಾದ  ನವೀನ್, ಮುರಳಿ ಮೋಹನ್, ಮುನಿರಾಜು, ರುಕ್ಮಿಣಿ ಸೇರಿದಂತೆ ಜಿಲ್ಲೆಯ ವಕೀಲರು, ನ್ಯಾಯಾಲಯಗಳ ಸಿಬ್ಬಂದಿ ಮತ್ತಿತರ ವಕೀಲರು ಇದ್ದರು.