ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಭಾಗವತವು ಭಗವಂತನಲ್ಲಿ ನಂಬಿಕೆ ಹೆಚ್ಚಿಸುತ್ತದೆ: ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್

ಭಗವಂತನ ಅವತಾರ ಮತ್ತು ಲೀಲೆಗಳನ್ನು ಕುರಿತು ಭಾಗವತವು ರಚಿತವಾಗಿದೆ. ಭಾಗವತ ದಲ್ಲಿರುವ ಕಥೆಗಳು ಮಹತ್ವಪೂರ್ಣವಾದುದು. ಭಾಗವತವು ಗುರುಉಪದೇಶವಿದ್ದಂತೆ. ಗುರು ಉಪದೇಶವೆಂದರೆ ಆತ್ಮದ ಉದ್ದಾರ. ಭಾಗವತದ ಸಂದೇಶಗಳಿಂದ ಆತ್ಮಪ್ರಕಾಶವಾಗುತ್ತದೆ. ಗುರುಗಳು ಹೇಳಿರುವ ಸಾಧನೆಯ ಮಾರ್ಗವನ್ನು ಅನುಸರಿಸಿದರೆ ಪರಮಾತ್ಮನ ದರ್ಶನವನ್ನು ಮಾಡಬಹುದು.

ಭಾಗವತವು ಭಗವಂತನಲ್ಲಿ ನಂಬಿಕೆ ಹೆಚ್ಚಿಸುತ್ತದೆ

ಪರಮಾತ್ಮನನ್ನು ಯಾರು ನಂಬುತ್ತಾರೋ, ಅಂತಹವರನ್ನು ಭಗವಂತ ಎಂದಿಗೂ ಕೈ ಬಿಡುವುದಿಲ್ಲ. ದೇವರನ್ನು ನಂಬಬೇಕು. ಅಂತಹ ನಂಬಿಕೆಯು ಹೆಚ್ಚುವಂತೆ ಶ್ರೀಭಾಗವತವು ಮಾಡುತ್ತದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು. -

Profile
Ashok Nayak May 3, 2026 10:33 PM

ಚಿಂತಾಮಣಿ: ಪರಮಾತ್ಮನನ್ನು ಯಾರು ನಂಬುತ್ತಾರೋ, ಅಂತಹವರನ್ನು ಭಗವಂತ ಎಂದಿಗೂ ಕೈ ಬಿಡುವುದಿಲ್ಲ. ದೇವರನ್ನು ನಂಬಬೇಕು. ಅಂತಹ ನಂಬಿಕೆಯು ಹೆಚ್ಚುವಂತೆ ಶ್ರೀಭಾಗವತವು ಮಾಡುತ್ತದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಅಭಿಪ್ರಾಯ ಪಟ್ಟರು.

ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ಒಂದು ವರ್ಷಗಳ ಕಾಲ ಹಮ್ಮಿಕೊಳ್ಳಲಾಗಿ ರುವ ಕೈವಾರ ತಾತಯ್ಯನವರ 300ನೇ ಜಯಂತೋತ್ಸವದ ಕಾರ್ಯಕ್ರಮದ ಅಂಗವಾಗಿ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ಸಪ್ತಾಹವನ್ನು ಚಿಕ್ಕಬಳ್ಳಾಪುರ ನಗರದ ಧರ್ಮಛತ್ರದ ರಸ್ತೆಯಲ್ಲಿರುವ ಶ್ರೀವಿದ್ಯಾಗಣಪತಿ ದೇವಾಲಯದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.

8r

ಭಗವಂತನ ಅವತಾರ ಮತ್ತು ಲೀಲೆಗಳನ್ನು ಕುರಿತು ಭಾಗವತವು ರಚಿತವಾಗಿದೆ. ಭಾಗವತ ದಲ್ಲಿರುವ ಕಥೆಗಳು ಮಹತ್ವಪೂರ್ಣವಾದುದು. ಭಾಗವತವು ಗುರುಉಪದೇಶವಿದ್ದಂತೆ. ಗುರು ಉಪದೇಶವೆಂದರೆ ಆತ್ಮದ ಉದ್ದಾರ. ಭಾಗವತದ ಸಂದೇಶಗಳಿಂದ ಆತ್ಮಪ್ರಕಾಶವಾಗುತ್ತದೆ. ಗುರುಗಳು ಹೇಳಿರುವ ಸಾಧನೆಯ ಮಾರ್ಗವನ್ನು ಅನುಸರಿಸಿದರೆ ಪರಮಾತ್ಮನ ದರ್ಶನವನ್ನು ಮಾಡಬಹುದು. ನಮ್ಮಲ್ಲಿರುವ ಶತ್ರುಗಳಾದ ಆಸೆ, ಕ್ರೋಧ, ದ್ವೇಷ, ಮಾತ್ಸರ್ಯಗಳನ್ನು ಹೊಡೆ ದೊಡಿಸಲು ಶ್ರೀ ಭಾಗವತವು ಸಹಕಾರಿಯಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಬೇಸಿಗೆ ಶಿಬಿರಗಳು ರಜಾ ಅವಧಿಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ : ಪಿಡಿಒ ಲೋಕೇಶ್ ಬಣ್ಣನೆ

ಕಾರ್ಯಕ್ರಮದಲ್ಲಿ ಭಾಗವತ ಪ್ರವಚನಕಾರರಾದ ಮಂಕಾಲ ಶ್ರೀಹರಿಶರ್ಮ ರವರು ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ನೀಡಿದರು.

ಪ್ರವಚನದಲ್ಲಿ ಪೋತನ ಭಾಗವತದ ಹಲವಾರು ಘಟ್ಟಗಳನ್ನು ವಿವರಿಸಿ ವ್ಯಾಖ್ಯಾನಿಸಿದರು.  ಏಳು ದಿನಗಳ ಕಾಲ ಸಂಜೆ ೬.೩೦ ರಿಂದ ೮ ಗಂಟೆಯವರೆಗೂ ಈ ಭಾಗವತ ಸಪ್ತಾಹವನ್ನು ಹಮ್ಮಿಕೊಳ್ಳ ಲಾಗಿದೆ.  ಕಾರ್ಯಕ್ರಮಕ್ಕೂ ಮೊದಲು ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಲಾಯಿತು.

3cbpm8kai

ವಿದ್ವಾನ್ ಚಿಂತಲಪಲ್ಲಿ ಸೋಮಶೇಖರ್ ಹಾಗೂ ಚಿಂತಲಪಲ್ಲಿ ಕಿಶೋರ್ ಕುಮಾರ್ ಶಿಷ್ಯ ವೃಂದ ದವರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದುಷಿ ಶಾಂತಲಾ ಅರಸ್ ತಂಡದವ ರಿಂದ ಪ್ರಾರ್ಥನೆ ನಡೆಯಿತು.

ಮದಲ್ಲಿ ಕೈವಾರ ಯೋಗಿನಾರೇಯಣ ಟ್ರಸ್ಟ್ ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ವಿ.ಸುರೇಶ್, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಕೆ.ವಿ.ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಕೆ.ವಿ.ನವೀನ್‌ಕಿರಣ್, ರಾಮಕೋಟಿಯ ಅಧ್ಯಕ್ಷ ರಾದ ಪುರದಗಡ್ಡೆ ಕೃಷ್ಣಪ್ಪ, ರಾಮಕೋಟಿ ಉಪಾಧ್ಯಕ್ಷರಾದ ರಂಗಣ್ಣ, ಜಿ.ಎನ್.ವೆಂಕಟೇಶ್, ಗಾಯಿತ್ರಿ ಮಹಿಳಾ ಮಂಡಳಿ ಸದಸ್ಯರುಗಳು, ಬಾಲಕೃಷ್ಣ ಭಜನಾ ಮಂಡಳಿಯ ಕಲಾವಿದರು, ನಿವೃತ್ತ ಶಿಕ್ಷಕ ಗುಡಿಬಂಡೆ ಗಂಗಾಧರ್, ಲಲಿತಾ ಮಾತೃ ಮಂಡಳಿ ಸದಸ್ಯರು, ರಾಮಕೊಟಿ ಸದಸ್ಯರುಗಳು ಮತ್ತು ಅಧಿಕ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.