Special Train: ಅ.4 ರಿಂದ ಹೊಸಪೇಟೆ ಮಾರ್ಗವಾಗಿ ತಿರುಪತಿ-ವಿಜಯಪುರ ವಿಶೇಷ ರೈಲು
ತಿರುಪತಿ ವೆಂಕಟೇಶ್ವರ ದರ್ಶನಕ್ಕೆ ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಈ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಎರಡು ರೈಲ್ವೆ ವಲಯಗಳ ನೈರುತ್ಯ ರೈಲ್ವೆ ಹಾಗೂ ಪೂರ್ವ ಕರಾವಳಿ ರೈಲ್ವೆ ವಲಯ (ವಿಶಾಖಪಟ್ಟಣ) ಪ್ರಧಾನ ವ್ಯವಸ್ಥಾಪಕರಿಗೆ ಅಭಿನಂಧನೆಗಳನ್ನು ಸಲ್ಲಿಸಿ ಮುಂದಿನ ದಿನಗಳಲ್ಲಿ ಈ ರೈಲು ಸಂಚಾರ ನಿರಂತರವಾಗಿ ಮುಂದುವರೆಸಿ ಖಾಯಂಗೊಳಿಸಬೇಕೆಂದು ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ಮನವಿ ಮಾಡಿದ್ದಾರೆ.
-
ಹೊಸಪೇಟೆ: ಹಬ್ಬದ ಸಂದರ್ಭದಲ್ಲಿ ತಿರುಪತಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯ ಹೊಸಪೇಟೆ ಮಾರ್ಗವಾಗಿ ತಿರುಪತಿ-ವಿಜಯಪುರ ನಡುವೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ಅ.4 ರಿಂದ 25ನೇ ತಾರೀಖಿನವರೆಗೆ ಪ್ರತಿ ಭಾನುವಾರ ತಿರುಪತಿಯಿಂದ ಹೊರಡಲಿದೆ.
ಗಾಡಿ ಸಂಖ್ಯೆ : 07419 ಭಾನುವಾರ ದಿನಾಂಕ : 5-10-2026 ಬೆಳಿಗ್ಗೆ : 8.15 ಕ್ಕೆ ನಿರ್ಗಮಿಸಿ ರಾಜಂಪೇಟ, ಕಡಪ, ರ‍್ರಗುಂಟ್ಲಾ, ತಾಡಪತ್ರಿ, ಗುತ್ತಿ, ಗುಂತಕಲ್ಲು, ಬಳ್ಳಾರಿ, ಹೊಸಪೇಟೆಗೆ ಸಂಜೆ : 4. 30 ಕ್ಕೆ ಆಗಮಿಸಿ, ಇಲ್ಲಿಂದ ಕೊಪ್ಪಳ, ಗದಗ, ಬಾಗಲಕೋಟೆ ಮಾರ್ಗವಾಗಿ ವಿಜಯಪುರಕ್ಕೆ ರಾತ್ರಿ : 10.20 ಕ್ಕೆ ತಲುಪುವುದು.
ಅದೇ ರೀತಿ ಗಾಡಿ ಸಂಖ್ಯೆ : 07420, ಅದೇ ರಾತ್ರಿ ಭಾನುವಾರ 11.35 ಕ್ಕೆ ಕ್ಕೆ ವಿಜಾಪುರದಿಂದ ನಿರ್ಗಮಿಸಿ ಹೊಸಪೇಟೆಯನ್ನು ಸೋಮುವಾರ ಮುಂಜಾನೆ 4.30 ಕ್ಕೆ ಆಗಮಿಸಿ ಇಲ್ಲಿಂದ ಅದೇ ಮಾರ್ಗವಾಗಿ ತಿರುಪತಿಗೆ ಮಧ್ಯಾಹ್ನ : 2.15 ಕ್ಕೆ ತಲುಪುತ್ತದೆ.