Chikkaballapur News: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಕಟ್ಟಡ ತೆರವು ಕಾರ್ಯಾಚರಣೆ, ಕಟ್ಟಡ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜನಿಯರ್ ರಾಜರೆಡ್ಡಿ ಮಾತ ನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಎಂ.ಜಿ.ರಸ್ತೆ ಬದಿಯಲ್ಲಿನ ಕಟ್ಟಡ ಮಾಲೀಕರಿಗೆ ಒಂದು ವರ್ಷದ ಹಿಂದೆ ನೋಟಿಸ್ ನೀಡಲಾಗಿದೆ. ಈಗಾಗಲೇ ಹಲವು ಮಂದಿ ಕಟ್ಟಡ ಮಾಲೀಕರು ಸ್ವಯಂ ಪ್ರೇರಿತವಾಗಿ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ೬೯ ರಸ್ತೆ ಅಗಲೀಕರಣಕ್ಕೆ ತೊಡಕ್ಕಾಗಿದ್ದ ಕೆಲವು ಕಟ್ಟಡಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಯಂತ್ರಗಳ ನೆರವಿನಿಂದ ತೆರವುಗೊಳಿಸಿದರು. -
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ ೬೯ ರಸ್ತೆ ಅಗಲೀಕರಣಕ್ಕೆ ತೊಡಕ್ಕಾಗಿದ್ದ ಕೆಲವು ಕಟ್ಟಡ ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಯಂತ್ರಗಳ ನೆರವಿನಿಂದ ತೆರವುಗೊಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜನಿಯರ್ ರಾಜರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ನಗರ ಪೊಲೀಸ್ ಠಾಣೆ ಬಳಿಯ ವಿಕ್ರಂ ಜೋಷಿ ಎಂಬುವರಿಗೆ ಸೇರಿದ ಎರಡು ಅಂತಸ್ತಿನ ಕಟ್ಟಡವನ್ನು ತೆರವುಗೊಳಿಸಲು ಮುಂದಾದರು.
ಆಗ ಕಟ್ಟಡ ಮಾಲೀಕರು ಕಟ್ಟಡವನ್ನು ಕೆಡವಬಾರದು ಇದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ದಲ್ಲಿ ವ್ಯಾಜ್ಯ ನಡೆಯುತ್ತಿದೆ. ಈಗಾಗಲೇ ನ್ಯಾಯಾಲಯ ತಡೆಯಾಜ್ಞೆ ಸಹ ನೀಡಿದೆ ಆದರಿಂದ ಕಟ್ಟಡವನ್ನು ತೆರವುಗೊಳಿಸಬಾರದು ಎಂದು ತೆರವು ಕಾರ್ಯಾಚಾರಣೆ ವೇಳೆ ಅಡ್ಡಿಪಡಿಸಲು ಯತ್ನಿಸಿದರು. ಅಲ್ಲದೇ ಒಂದು ವಾರದ ಗಡುವು ನೀಡಿದರೆ ಕಟ್ಟಡವನ್ನು ಸ್ವತಃ ತಾವೇ ತೆರವು ಗೊಳಿಸುತ್ತೇವೆ ಎಂದು ಮನವಿ ಮಾಡಿದರು.
ಇದನ್ನೂ ಓದಿ: Chikkaballapur News: ಸಾಧು ಮಠದಲ್ಲಿ ದತ್ತಾತ್ರೇಯ ಜಯಂತಿ ಸಂಭ್ರಮ : 66ನೇ ವರ್ಷದ ಪೂಜೆಗೆ ಹರಿದು ಬಂದ ಭಕ್ತಸಮೂಹ
ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತ್ತಲ್ಲದೇ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮದ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಅಧಿಕಾರಿಗಳು ಕಟ್ಟಡ ತೆರವು ಕಾರ್ಯಾ ಚರಣೆ ಮುಂದುವರೆಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜನಿಯರ್ ರಾಜರೆಡ್ಡಿ ಮಾತ ನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಎಂ.ಜಿ.ರಸ್ತೆ ಬದಿಯಲ್ಲಿನ ಕಟ್ಟಡ ಮಾಲೀಕರಿಗೆ ಒಂದು ವರ್ಷದ ಹಿಂದೆ ನೋಟಿಸ್ ನೀಡಲಾಗಿದೆ. ಈಗಾಗಲೇ ಹಲವು ಮಂದಿ ಕಟ್ಟಡ ಮಾಲೀಕರು ಸ್ವಯಂ ಪ್ರೇರಿತವಾಗಿ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ.
ವಿಕ್ರಂ ಅವರಿಗೂ ಒಂದು ವರ್ಷದ ಹಿಂದೆ ನೋಟಿಸ್ ನೀಡಲಾಗಿತ್ತು. ನವೆಂಬರ್ ೨೬ ರಂದು ಒತ್ತುವರಿ ಮಾಡಿರುವ ೧೦ ಅಡಿಯನ್ನು ಸ್ವಯಂ ತೆರವು ಗೊಳಿಸುವಂತೆ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿ ತೆರವುಗೊಳಿಸ ಬೇಕೆಂದು ಮನವಿ ಮಾಡಲಾಗಿತ್ತು. ಮನವಿಗೆ ಸ್ಫಂದಿಸದಿರುವುದರಿAದ ಒತ್ತುವರಿ ಮಾಡಿರುವ ೧೦ ಅಡಿ ಜಾಗವನ್ನು ಪ್ರಾಧಿಕಾರದಿಂದಲೇ ತೆರವುಗೊಳಿಸುತ್ತಿದ್ದೇವೆ ಎಂದರು.
ಈಗಾಗಲೇ ಸಿವಿಲ್ ಬಸ್ ನಿಲ್ದಾಣ ಬಳಿ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ. ಇನ್ನೂ ಎರಡು ತಿಂಗಳಲ್ಲಿ ಶಿಡ್ಲಘಟ್ಟ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆದಿದೆ ಎಂದು ಹೇಳಿದರು.