Chikkaballapur Breaking: ಗ್ರಾಹಕರ ದೂರಿನ ಮೇರೆಗೆ ಆಹಾರ ಸುರಕ್ಷತೆ ಅಧಿಕಾರಿಗಳು ಕೇಕ್‌ವರ್ಲ್ಡ್‌ ಬೇಕರಿ ಮೇಲೆ ದಾಳಿ: ಪರಿಶೀಲನೆ

ಮನ ನೊಂದ ಗ್ರಾಹಕನು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಯಲ್ಲಿ ಅಧಿಕಾರಿಗಳು ಕೇಕ್‌ವರ್ಲ್ಡ್‌ ಬೇಕರಿಗೆ ಭೇಟಿ ನೀಡಿ ಪೂರ್ಣ ಪ್ರಮಾಣದಲ್ಲಿ ಬೇಕರಿ ಪದಾರ್ಥ ಗಳನ್ನ ತಯಾರಿಸಲು ಬಳಸುವ ವಸ್ತುಗಳನ್ನು ಪರಿಶೀಲಿಸಿ ಕೆಲವು ಪದಾರ್ಥಗಳನ್ನು ತಪಾ ಸಣೆಗೆ ಕಳುಹಿಸುವುದಾಗಿ ತಿಳಿಸಿದರು

CHK
Profile Ashok Nayak January 18, 2025

Source : Chikkaballapur Reporter

ಗೌರಿಬಿದನೂರು: ಗ್ರಾಹಕರು ಮಂಗಳವಾರ ಕೇಕ್‌ವರ್ಲ್ಡ್‌ ಬೇಕರಿಯಲ್ಲಿ ಖರೀದಿ ಮಾಡಿ ದಂತಹ ಬೇಕರಿ ತಿನಿಸಿನಲ್ಲಿ ಹುಳುಗಳು ಕಾಣಿಸಿಕೊಂಡಿದ್ದು ಕೂಡಲೆ ಗ್ರಾಹಕನು ಬೇಕರಿ ಯ ವ್ಯವಸ್ಥಾಪಕನಿಗೆ ವಿಷಯ ತಿಳಿಸಿರುತ್ತಾನೆ. ಆದರೂ ಸಹ ಬೇಕರಿಯವರು ಯಾವುದೇ ರೀತಿ ಪ್ರತಿಕ್ರಿಯಿಸದೆ ಗ್ರಾಹಕನಿಗೆ ಸ್ಪಂದಿಸದೆ ಜಗಳ ಮಾಡಿದ್ದಾರೆ.

ಮನ ನೊಂದ ಗ್ರಾಹಕನು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಯಲ್ಲಿ ಅಧಿಕಾರಿಗಳು ಕೇಕ್‌ವರ್ಲ್ಡ್‌ ಬೇಕರಿಗೆ ಭೇಟಿ ನೀಡಿ ಪೂರ್ಣ ಪ್ರಮಾಣ ದಲ್ಲಿ ಬೇಕರಿ ಪದಾರ್ಥ ಗಳನ್ನ ತಯಾರಿಸಲು ಬಳಸುವ ವಸ್ತುಗಳನ್ನು ಪರಿಶೀಲಿಸಿ ಕೆಲವು ಪದಾರ್ಥ ಗಳನ್ನು ತಪಾಸಣೆಗೆ ಕಳುಹಿಸುವುದಾಗಿ ತಿಳಿಸಿದರು.

ಕೆಲವು ಅವಧಿ ಮುಗಿದ ಚಾಕೊಲೇಟ್ ಮಾರಾಟ ಮತ್ತು ಕ್ಯಾಂಡಿಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡು ಹೆಚ್ಚರಿಸಿ ಕೂಡಲೆ ಅವುಗಳನ್ನು ಮಾರಾಟ ಮಾಡದಂತೆ ಹೆಚ್ಚರಿಕೆ ನೀಡಿದರು.

ತಯಾರಿಕೆ ಸ್ಥಳ ಮತ್ತು ಸಿಬ್ಬಂಧಿಗಳು ಅನೈರ್ಮಲ್ಯ: ಕೈಗೆ ಹ್ಯಾಂಡ್ಗ್ಲೌಸ್ ಮತ್ತು ತಲೆಗೆ ಹೆಡ್ಮಾಸ್ಕ್ ಧರಿಸುವುದಿಲ್ಲ, ತಿನಿಸುಗಳನ್ನು ತಯಾರಿಸುವ ಸ್ಥಳದಲ್ಲಿ ಸ್ವಲ್ಪವೂ ಸ್ವಚ್ಚ ವಾಗಿಟ್ಟುಕೊಂಡಿಲ್ಲ, ನಂತರ ಪದಾರ್ಥಗಳನ್ನು ತಯಾರಿಸುವ ಅಡುಗೆ ಕೋಣೆಯ ನೆಲಮಹಡಿಯಲ್ಲರುತ್ತದೆ. ಪಕ್ಕದಲ್ಲೇ ಸಾರ್ವಜನಿಕರು ಮೂತ್ರ-ವಿಸರ್ಜನೆ ಮಾಡಿದರೆ ಕಿಟಕಿಗಳ ಮೂಲಕ ಒಳಬರುವ ಸಾಧ್ಯತೆಯಿದೆ. ಕನಿಷ್ಠ ಕಿಟಕಿಗೆ ಗಾಜಿನಮೆಷ್ ಅಥವಾ ಫೈಬರ್ ಶೀಟ್ ಸಹ ಅಳವಡಿಸಿಲ್ಲ. ಬೇಕರಿಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳದಿದ್ದರೆ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಬೇಕರಿಗೆ ಪರವಾನಗಿ ಮುಗಿದಿದೆ ಇಲ್ಲಿಯ ವರೆವಿಗೂ ಪರವಾನಗಿ ಪಡೆಯದೆ, ಸಾರ್ವ ಜನಿಕರ ಪ್ರಾಣದ ಜೊತೆಯಲ್ಲಿ ಚಲ್ಲಾಟವಾಡುತ್ತಿರುವ ಕೇಕ್‌ವರ್ಲ್ಡ್‌ ಬೇಕರಿಯವರು.

ಈ ಬಾರಿ ಅಧಿಕಾರಿಗಳ ಆದೇಶದಂತೆ ಎಲ್ಲಾ ಪರೀಕ್ಷಿಸಿ ವರದಿಯನ್ನು ಸಿದ್ದಗೊಳಿಸಲಾಗಿದೆ. ಮುಂದಿನ ಸೂಕ್ತ ಕ್ರಮವನ್ನು ಮೆಲಾಧಿಕಾರಿಗಳು ತೆಗೆದುಕೊಳುತ್ತಾರೆಂದು ಧಾಳಿಮಾಡಿದ ಅಧಿಕಾರಿ ತಿಳಿಸಿದ್ದಾರೆ.

ಕಳೆದ 20-ನಂವೆಂಬರ್-2024ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯ ಮೇರೆಗೆ 2ನೇ ಬಾರಿ ಆಹಾರ ಸುರಕ್ಷತೆ ಅಧಿಕಾರಿಗಳು ಇದೇ ಬೇಕರಿ ಮೇಲೆ ದಾಳಿ ನಡೆಸಿ ದೊಡ್ಡ ಮಟ್ಟ ದಲ್ಲಿ ನಿಷೇಧಿತ ಕೃತಕ ಬಣ್ಣ ಹಾಗೂ ನಿಷೇಧಿತ ವಸ್ತುಗಳನ್ನು ಬಳಸಿ ತಯಾರಿಸಿಟ್ಟ ಆಹಾರ ವಸ್ತುಗಳನ್ನು ವಶಕ್ಕೆ ಪಡೆದು ತಪಾಸಣೆಗೆ ಕಳುಹಿಸಲು ಬೇಕರಿ ಮಾಲಿಕನಿಗೆ 25,000/-ಸಾವಿರ ರೂಗಳನ್ನು ದಂಡವನ್ನು ವಿಧಿಸಿದರು.

ಮೊದಲು ಒಮ್ಮೆ ಎಚ್ಚರಿಕೆ ನೀಡಿಲಾಗಿದೆ, ನೋಟಿಸ್ ಜಾರಿಮಾಡಲಾಗಿದೆ, ನಂತರ 2ನೇ ಬಾರಿ ಎಚ್ಚೆತ್ತುಕೊಳ್ಳದಿದ್ದಕ್ಕೆ ದಂಡವನ್ನು ಸಹ ವಿಧಿಸಲಾಗಿದೆ. ಇದೀಗ 3ನೇ ಬಾರಿ ಕೇಕ್‌ ವರ್ಲ್ಡ್‌ ಬೇಕರಿ ಮೇಲೆದಾಳಿ ನಡೆಸಲಾಗುತ್ತಿದೆ. ಆದರೂ ಅಧಿಕಾರಿಗಳೆಂದರೆ ಬೇಕರಿ ಯವರು ಕಿಂಚೆತ್ತು ಗೌರವ ತೋರುತ್ತಿಲ್ಲ.

ಕೃತಕಬಣ್ಣ ಹಾಗು ಸರ್ಕಾರದಿಂದ ನಿಷೇಧಿತ ವಸ್ತುಗಳನ್ನು ಬಳಕೆ ಮಾಡಿದರೆ ೧ಲಕ್ಷದಂಡ ಹಾಗು ೬ವರ್ಷ ಜೈಲುವಾಸ ಎಂದು ಸರ್ಕಾರ ಹೊಸ ಕಾನೂನು ಜಾರಿ ಮಾಡಿದೆ. ಆದರೂ ವ್ಯಾಪಾರಿಗಳಿಗೆ ಯಾವುದೇ ಆತಂಕ ವಿಲ್ಲದೆ ಮಕ್ಕಳಜೀವ ಮತ್ತು ಜೀವನದ ಜೊತೆಯಲ್ಲಿ ವಿಷಕಾರಿ ಹಾಗು ಸ್ವಚ್ಚವಲ್ಲದ ಆಹಾರ ಪದಾರ್ಥಗಳನ್ನು ತಿನ್ನಿಸುತ್ತಿರುವ ಬೇಕರಿಗಳು. ಗ್ರಾಹಕರ ಆರೋಗ್ಯ ಅಥವಾ ಉತ್ಪನ್ನದ ಗುಣಮಟ್ಟವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ತ್ವರಿತವಾಗಿ ಹಣವನ್ನುಗಳಿಸುವ ದುರಾಶೆಯಲ್ಲಿ ಹಲವಾರು ದುಷ್ಕೃತ್ಯಗಳನ್ನು ಅಳವಡಿಸಿಕೊಂಡಿದೆ. ಅವರಲ್ಲಿ ಕೆಲವರು ಸಿಕ್ಕಿ ಬೀಳುವವರೆಗೂ ಇದನ್ನು ನಿಯಮಿತ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

ಕೃತಕ ಬಣ್ಣಗಳು ಆಹಾರವನ್ನು ನೋಡುವಲ್ಲಿ ಕಣ್ಸೆಳೆಯುವಂತೆ ಮಾಡಿ, ಇದು ಗ್ರಾಹಕ ರಲ್ಲಿ ತಿನ್ನುವ ಬಯಕೆಯನ್ನು ಹೆಚ್ಚಿಸಲಿವೆ. ಕೃತಕ ಬಣ್ಣಗಳು ಅಲರ್ಜಿ, ಮಕ್ಕಳಲ್ಲಿ ಅಧಿಕ ಕ್ರಿಯಾಶೀಲತೆ ಹಾಗೂ ಕಾರ್ಸಿನೋಜೆನಿಕ್, ಆಕ್ಸಿಡೇಟಿವ್ ಒತ್ತಡ ಮತ್ತು ಕೋಶಗಳ ಅಪೊ ಪ್ಟೋಸಿಸ್ ಮತ್ತು ಬ್ರೈನ್ಸ್ಟೆಮ್ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಆದ್ದರಿಂದ ಗ್ರಾಹಕರು ಇಂತಹ ದುಷ್ಕೃತ್ಯಗಳ ವಿರುದ್ಧ ಜಾಗರೂಕರಾಗಿರಬೇಕು.

ಈ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿ ಹರೀಶ್,ಮಾತನಾಡಿ, ಬೇಕರಿ ಯಲ್ಲಿ ಪರವಾನಗಿಯನ್ನು ಪ್ರದರ್ಶನ ಮಾಡದೇ ಇರುವುದು, ಸ್ವಚ್ಛತೆ ಕಾಪಾಡದೇ ಇರು ವುದು, ಅವಧಿ ಮೀರಿದ ತಿನಿಸುಗಳು, ತಿನ್ನಲು ಯೋಗ್ಯವಲ್ಲದ ತಿನಿಸುಗಳು ಕಂಡು ಬಂದಿವೆ. ಇವುಗಳನ್ನು ರಾಜ್ಯ ಮಟ್ಟದ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು, ಜಿಲ್ಲಾ ಅಂಕಿತಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಈಗಲಾದರೂ ಶಾಶ್ವತ ಪರಿಹಾರ ನೀಡಿ: ದಸಂಸ ಮುಖಂಡರು ಕಾರ್ಯಕರ್ತರು ಪ್ರತಿಭಟನೆ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ