Bharani Venkatesh 52nd Birthday: ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಜನ್ಮದಿನ ಆಚರಿಸಿಕೊಂಡ ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್
ಹುಟ್ಟುಹಬ್ಬವನ್ನು ಆಡಂಬರ ದಿಂದ ಆಚರಿಸುವ ಬದಲು ಸೇವಾ ಮನೋಭಾವದಿಂದ ಸರಳವಾಗಿ ಆಚರಿಸಬೇಕು ಎಂಬುದು ತಮ್ಮ ಆಶಯವಾಗಿದೆ .ಆದರೂ ತಮ್ಮ ಮೇಲಿನ ಪ್ರೀತಿ ಮತ್ತು ಅಭಿಮಾನ ದಿಂದ ಬಾಲಕುಂಟಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಅವರು ಚಿತ್ರದುರ್ಗದಿಂದ ಮಾಡಿಸಿ ತಂದಿದ್ದ ನಾಣ್ಯಗಳಿಂದ ತಯಾರಿಸಿದ ಹಾರವನ್ನು ಅರ್ಪಿಸಿರುವುದು ಸಂತಸ ತಂದಿದೆ
ಚಿಮುಲ್ ನಿರ್ದೇಶಕರು ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಕೆಎಂಎಫ್ ಪ್ರತಿನಿಧಿ ಭರಣಿ ವೆಂಕಟೇಶ್ ಅವರು ತಮ್ಮ ೫೨ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು, ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷ ಉಪಾಧ್ಯಕ್ಷರು ಅಪಾರ ಬಂಧು-ಬಳಗ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು. -
ಚಿಕ್ಕಬಳ್ಳಾಪುರ : ಚಿಮುಲ್ ನಿರ್ದೇಶಕರು ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಕೆಎಂಎಫ್ (KMF)ಪ್ರತಿನಿಧಿ ಭರಣಿ ವೆಂಕಟೇಶ್(Bharani Venkatesh) ಅವರು ತಮ್ಮ 52ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು, ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷ ಉಪಾಧ್ಯಕ್ಷರು ಅಪಾರ ಬಂಧು-ಬಳಗ ಅಭಿಮಾನಿ ಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.
ತಾಲೂಕಿನ ದೊಡ್ಡಮ್ಮತಾಯಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದ ಬಳಿಕ ನಲ್ಲಕದಿರೇನಹಳ್ಳಿ ಗ್ರಾಮದ ಸ್ವಗೃಹದ ಬಳಿ ಆಗಮಿಸಿದ್ದ ಆಪ್ತರೊಂದಿಗೆ ಬೆರೆತು ಸಿಹಿ ವಿತರಣೆ ಮಾಡುವ ಮೂಲಕ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.
ಇದನ್ನೂ ಓದಿ: KMF Nandini: ಆರ್‌ಸಿಬಿಗೆ ಅಧಿಕೃತ ಡೈರಿ ಪಾರ್ಟ್ನರ್ ಆದ ಕೆಎಂಎಫ್ ನಂದಿನಿ; ಮೈದಾನದಲ್ಲಿ ಅಮುಲ್ ಉತ್ಪನ್ನಗಳಿಗೆ ಸ್ಪರ್ಧೆ
ತಮ್ಮ ನಾಯಕರ ಜನ್ಮದಿನದ ಅಂಗವಾಗಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಇದೇ ವೇಳೆ ಹಾರ ಪೇಟ ತಿಡಿಸಿ ಪಟಾಕಿ ಸಿಡಿಸಿ ಶುಭಾಶಯ ಕೋರಿದರು.
ಈ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಭರಣಿ ವೆಂಕಟೇಶ್, ಹುಟ್ಟುಹಬ್ಬವನ್ನು ಆಡಂಬರ ದಿಂದ ಆಚರಿಸುವ ಬದಲು ಸೇವಾ ಮನೋಭಾವದಿಂದ ಸರಳವಾಗಿ ಆಚರಿಸಬೇಕು ಎಂಬುದು ತಮ್ಮ ಆಶಯವಾಗಿದೆ .ಆದರೂ ತಮ್ಮ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಬಾಲಕುಂಟಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಅವರು ಚಿತ್ರದುರ್ಗದಿಂದ ಮಾಡಿಸಿ ತಂದಿದ್ದ ನಾಣ್ಯಗಳಿಂದ ತಯಾರಿಸಿದ ಹಾರವನ್ನು ಅರ್ಪಿಸಿರುವುದು ಸಂತಸ ತಂದಿದೆ ಎಂದರು.
ಜನನಾಯಕರಾದವರು ಸದಾ ಕಾಲ ಜನರ ಮಧ್ಯೆಯೇ ಇದ್ದು ಅವರೊಂದಿಗೆ ಬೆರೆತು ಬಾಳಬೇಕು ಎಂಬ ಸಂಕಲ್ಪವುಳ್ಳವನು ನಾನು. ಹಾಲು ಉತ್ಪಾದಕರ ಸಮಸ್ಯೆ ಪರಿಹರಿಸುವ ಸಂಬಂಧ ನನ್ನ ಪೋನು ಎಂದು ಆಫ್ ಮಾಡಲ್ಲ. ಪ್ರತಿಯೊಬ್ಬರ ಕರೆಯನ್ನೂ ಸ್ವೀಕರಿಸಿ ಅವರ ಸಮಸ್ಯೆ ಪರಿಹಾರ ಕ್ಕೆ ಮೊದಲ ಆಧ್ಯತೆ ನೀಡಲಾಗುವುದು ಎಂದ ಅವರು ನನ್ನ ಬದುಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನದಿಂದ ಆರಂಭಗೊಂಡ ತಮ್ಮ ಸಾರ್ವಜನಿಕ ಬದುಕು, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರಾಗಿ ಹಾಗೂ ನಂತರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮೊದಲ ಅವಧಿಯ ನಿರ್ದೇಶಕರಾಗಿ , ಕೆಎಂಎಫ್ ಪ್ರತಿನಿಧಿಯಾಗುವವರೆಗೆ ನಡೆದು ಬಂದ ಹಾದಿಗೆ ಜನರ ವಿಶ್ವಾಸವೆಂಬ ಅಸ್ತ್ರವೇ ಬಲವಾಗಿದೆ ಎಂದು ಹೇಳಿದರು.
ಜನರ ಪ್ರೀತಿ ಮತ್ತು ಬೆಂಬಲ ಇರುವವರೆಗೂ ಸಾರ್ವಜನಿಕ ಸೇವೆಯಲ್ಲಿ ಮುಂದುವರಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಜನ್ಮದಿನದ ಅಂಗವಾಗಿ ಬಾಲಕುಂಟಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ಮಹೇಂದ್ರಗೌಡ ಹಾಗೂ ಅವರ ತಂಡ ಚಿತ್ರದುರ್ಗ ಜಿಲ್ಲೆಯ ಬೆಳಗೂರು ಗ್ರಾಮದ ಮಾಲೆಕಾರ ಕುಟುಂಬದಿಂದ ತಯಾರಿಸಲಾದ ನಾಣ್ಯಗಳ ವಿಶೇಷ ಹಾರವನ್ನು ಭರಣಿ ವೆಂಕಟೇಶ್ ಅವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್, ತಮ್ಮ ರಾಜಕೀಯ ಬೆಳವಣಿಗೆಗೆ ಭರಣಿ ವೆಂಕಟೇಶ್ ಅವರ ಪ್ರೋತ್ಸಾಹ ಕಾರಣವಾಗಿದೆ ಎಂದು ಹೇಳಿ, ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸ್ಥಾನಗಳನ್ನು ಅಲಂಕರಿಸಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿ ಜನಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.
ಬೆಳಗ್ಗೆಯಿಂದ ಸಂಜೆವರೆಗೆ ನಲ್ಲಕದಿರೇನಹಳ್ಳಿ ಗ್ರಾಮ ಹಾಗೂ ಚಿಕ್ಕಬಳ್ಳಾಪುರ ಕಚೇರಿಗೆ ಆಗಮಿಸಿದ ವಿವಿಧ ಪಕ್ಷಗಳ ಮುಖಂಡರು, ಹಾಲು ಉತ್ಪಾದಕರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಭರಣಿ ವೆಂಕಟೇಶ್ ಅವರಿಗೆ ಶುಭಾಶಯ ಕೋರಿದರು. ಆಗಮಿಸಿದ ಎಲ್ಲರಿಗೂ ಸಿಹಿ ಹಾಗೂ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮರಳುಕುಂಟೆ ಕೃಷ್ಣಮೂರ್ತಿ, ಮಿಲ್ಟನ್ ವೆಂಕಟೇಶ್, ಡೈರಿ ಗೋಪಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ, ಕಣಿವೆಪುರ ನಾರಾಯಣಸ್ವಾಮಿ, ಎನ್.ಸಿ. ಸುರೇಶ್ ಗೌಡ, ಎಂ.ಸಿ. ದಯಾನಂದ್ ಗೌಡ, ಚಂದ್ರು, ಪ್ರಮೀಳಾ ಗೌಡ, ಸಂತೋಷ್, ಅಶ್ವಿನಿ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ಅಲ್ಲು ಅನಿಲ್, ಭಾಸ್ಕರ್ ಗೌಡ, ಅರುಣ್ ಗೌಡ, ಪೋಶೆಟ್ಟಹಳ್ಳಿ ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.