Chinthamani News: ಜು.30ಕ್ಕೆ ಬಾರ್ಲಹಳ್ಳಿ ಕ್ರಾಸ್ ಸಾಯಿಬಾಬಾ ಮಂದಿರದಲ್ಲಿ ಭವ್ಯ ಗುರುಪೂರ್ಣಿಮೆ!
ಸುಮಾರು 15 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಈ ಭವ್ಯ ಬಾಬಾ ಮಂದಿರ ನಿರ್ಮಾಣ ಗೊಂಡಿದ್ದು, ಕಳೆದ 2 ವರ್ಷಗಳಿಂದ ನಿರಂತರ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ದೇವಾಲಯದ ಆವರಣದಲ್ಲಿ ಇನ್ನು ಕಾಂಪೌಂಡ್ ಗೋಡೆ,ಗೋಪುರ ನಿರ್ಮಾಣ ಮುಂತಾದ ಅಭಿವೃದ್ಧಿ ಕೆಲಸಗಳು ಬಾಕಿ ಇರುವುದರಿಂದ, ದಾನಿಗಳು ಹಾಗೂ ಭಕ್ತಾದಿಗಳು ತನು, ಮನ, ಧನಗಳಿಂದ ಸಹಕರಿಸಬೇಕಾಗಿ ಟ್ರಸ್ಟ್ ಮತ್ತು ಗ್ರಾಮಸ್ಥರು ಕೋರಿದ್ದಾರೆ.
-
ಚಿಂತಾಮಣಿ: ತಾಲೂಕಿನ ಕಾಗತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದ ಬಾರ್ಲಹಳ್ಳಿ ಕ್ರಾಸ್, ಮುರುಗಮಲೆ ರಸ್ತೆಯ,ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜು.30ರ ಗುರುವಾರದಂದು ವಿಜೃಂಭಣೆಯ ಗುರುಪೂರ್ಣಿಮೆ ಮಹೋತ್ಸವ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಈ ವಿಶೇಷ ಮಹೋ ತ್ಸವದ ಅಂಗವಾಗಿ ಬಾಬಾರವರಿಗೆ ವಿಶೇಷ ಅಲಂಕಾರ,ಅಭಿಷೇಕ ಹಾಗೂ ಪುಷ್ಪಾಲಂಕಾರ ಸೇವೆಗಳು ನೆರವೇರಲಿವೆ.
ಇದನ್ನೂ ಓದಿ: Chinthamani News:ಹಾದಿಗೆರೆ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ
ಅಂದು ಬೆಳಿಗ್ಗೆ 10 ಗಂಟೆಗೆ ಕಾಗತಿ ಶ್ಯಾಮಣ್ಣ ಮತ್ತು ತಂಡದವರಿಂದ ನಾದಸ್ವರ ಕಛೇರಿ. ಮಧ್ಯಾ ಹ್ನ 1 ಗಂಟೆಗೆ ಕಾಗತಿ ಮಂಜುನಾಥ್ ಹಾಗೂ ಶ್ರೀಮತಿ ಲೀಲಾ ಲಕ್ಷ್ಮೀ ನಾರಾಯಣ ಅವರಿಂದ ಸುಗಮ ಸಂಗೀತ.ಕೀಬೋರ್ಡ್: ರಾಜೇಶ್,ರಿದಂ ಪ್ಯಾಡ್: ಚಂದ್ರಶೇಖರ್, ದೊಡ್ಡಪುರ ರಾತ್ರಿ 8 ಗಂಟೆಗೆ ಊಲವಾಡಿ ರಮೇಶ್ ಮತ್ತು ತಂಡದವರಿಂದ ಭಜನೆ ಕಾರ್ಯಕ್ರಮ. ಬೆಳಿಗ್ಗೆ 10 ಗಂಟೆ ಯಿಂದ ರಾತ್ರಿ 10 ಗಂಟೆಯವರೆಗೆ ಸತತವಾಗಿ ಮಹಾ ಪ್ರಸಾದ ವಿನಿಯೋಗ (ಅನ್ನದಾನ) ಇರಲಿದೆ.
ಸುಮಾರು 15 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಈ ಭವ್ಯ ಬಾಬಾ ಮಂದಿರ ನಿರ್ಮಾಣ ಗೊಂಡಿದ್ದು, ಕಳೆದ 2 ವರ್ಷಗಳಿಂದ ನಿರಂತರ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ದೇವಾಲ ಯದ ಆವರಣದಲ್ಲಿ ಇನ್ನು ಕಾಂಪೌಂಡ್ ಗೋಡೆ,ಗೋಪುರ ನಿರ್ಮಾಣ ಮುಂತಾದ ಅಭಿವೃದ್ಧಿ ಕೆಲಸಗಳು ಬಾಕಿ ಇರುವುದರಿಂದ, ದಾನಿಗಳು ಹಾಗೂ ಭಕ್ತಾದಿಗಳು ತನು, ಮನ, ಧನಗಳಿಂದ ಸಹಕರಿಸಬೇಕಾಗಿ ಟ್ರಸ್ಟ್ ಮತ್ತು ಗ್ರಾಮಸ್ಥರು ಕೋರಿದ್ದಾರೆ.
ಆದ್ದರಿಂದ ಸುತ್ತಮುತ್ತಲಿನ ಕಾಗತಿ, ಮುರುಗಮಲೆ ಹಾಗೂ ಇತರೆ ಗ್ರಾಮಗಳ ಸಮಸ್ತ ಸಾಯಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸದ್ಗುರು ಸಾಯಿಬಾಬಾರವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕಾಗಿ ಪ್ರಮುಖರು ಹೇಳಿದರು.