J K KrishnaReddy 57th Birthday: ಚಿಂತಾಮಣಿಗೆ ಮತ್ತೆ ಜೆ.ಕೆ.ಅಣ್ಣನ ನಾಯಕತ್ವ ಬೇಕು": ಜನ್ಮದಿನಾಚರಣೆ ವೇಳೆ ಜೆಡಿಎಸ್ ಮುಖಂಡರ ಆಶಯ
ಕೃಷ್ಣಾರೆಡ್ಡಿರವರ 10 ವರ್ಷಗಳ ಆಡಳಿತ ಅವಧಿಯಲ್ಲಿ ಚಿಂತಾಮಣಿಯ ಜನರು ನೆಮ್ಮದಿಯಿಂದ ಇದ್ದರು. ಆದರೆ ಇವತ್ತಿನ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ, ಆ ನೆಮ್ಮದಿ ಇಲ್ಲ ಎಂದು ಅಭಿಪ್ರಾಯಪಟ್ಟರು ಹಾಗೂ ಮುಂದಿನ ಚುನಾವಣೆಯಲ್ಲಿ ಕೃಷ್ಣಾರೆಡ್ಡಿ ರವರು ಶಾಸಕರಾಗಿ, ಮಂತ್ರಿಯಾಗಿ ಚಿಂತಾಮಣಿಯ ಕಳೆದುಹೋಗಿರುವ ನೆಮ್ಮದಿಯನ್ನು ಮತ್ತೆ ಜನರಿಗೆ ತಂದು ಕೊಡಲಿ
-
ಚಿಂತಾಮಣಿ: ಜೆಡಿಎಸ್ ಕಾರ್ಯಕರ್ತರು ಹಾಗು ಮುಖಂಡರೆಲ್ಲರೂ ಸೇರಿ ಚಿಂತಾಮಣಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಮಾಜಿ ಉಪಸಭಾಧ್ಯಕ್ಷರಾದ ಜೆ.ಕೆ.ಕೃಷ್ಣಾರೆಡ್ಡಿ(J K KrishnaReddy) ರವರ 57ನೇ ಹುಟ್ಟುಹಬ್ಬವನ್ನು ಚಿಂತಾಮಣಿ ನಗರದ ಆಧಾರ್ ಶಾಲೆಯ ವಿಶೇಷ ಮಕ್ಕಳ ಜೊತೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಿದರು,
ಇದೇ ವೇಳೆ ಜೆಡಿಎಸ್ ಮುಖಂಡರಾದ ಅಬ್ದುಲ್ ಸಮದ್ ಮಾತನಾಡಿ, ಕೃಷ್ಣಾರೆಡ್ಡಿರವರ 10 ವರ್ಷ ಗಳ ಆಡಳಿತ ಅವಧಿಯಲ್ಲಿ ಚಿಂತಾಮಣಿಯ ಜನರು ನೆಮ್ಮದಿಯಿಂದ ಇದ್ದರು. ಆದರೆ ಇವತ್ತಿನ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ, ಆ ನೆಮ್ಮದಿ ಇಲ್ಲ ಎಂದು ಅಭಿಪ್ರಾಯಪಟ್ಟರು ಹಾಗೂ ಮುಂದಿನ ಚುನಾವಣೆಯಲ್ಲಿ ಕೃಷ್ಣಾರೆಡ್ಡಿರವರು ಶಾಸಕರಾಗಿ, ಮಂತ್ರಿಯಾಗಿ ಚಿಂತಾಮಣಿಯ ಕಳೆದು ಹೋಗಿ ರುವ ನೆಮ್ಮದಿಯನ್ನು ಮತ್ತೆ ಜನರಿಗೆ ತಂದು ಕೊಡಲಿ ಎಂದು ಹಾರೈಸಿದರು.
ಇದನ್ನೂ ಓದಿ; Chikkaballapur News: ಸಮಗ್ರ ಆರೋಗ್ಯ ಅಭಿಯಾನಕ್ಕೆ ಶೀಘ್ರ ಚಾಲನೆ: ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಕರೆ
ಇನ್ನೂ ಚಿಂತಾಮಣಿ ನಗರದ ಅಗ್ರಹಾರದಲ್ಲಿರುವ ಶ್ರೀ ನಾಗನಾಥೇಶ್ವರ ದೇವಸ್ಥಾನದಲ್ಲಿ ಜೆಡಿಎಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಮಾಜಿ ಶಾಸಕರಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ಅಲ್ಲಾ ಬಕಾಶ್, ಅಗ್ರಹಾರ ಮುರಳಿ, ಅಬ್ಬು ಗೊಂಡು ಶ್ರೀನಿವಾಸ್ ರೆಡ್ಡಿ, ದೇವಳಂ ಶಂಕರ್, ಜೆಡಿಎಸ್ ತಾಲೂಕ ಅಧ್ಯಕ್ಷರಾದ ಬೈರೆಡ್ಡಿ, ಯುವ ಘಟಕ ಅಧ್ಯಕ್ಷರಾದ ಚಲಪತಿ, ಪ್ರಭಾಕರ್, ಅಪ್ಸರ್ ಪಾಷ, ಯೂನಿಸ್ ಪಾಷಾ, ಆಕ್ರಂ ಪಾಷಾ, ಮುನ್ವರ್ ಪಾಷಾ, ರಹಮತುಲ್ಲಾ, ಆಯಿಷಾ, ಮಧು, ಗಂಗಾಧರ, ಸಂತೋಷ್, ಎಂ ವಿ ರಾಮಪ್ಪ, ಕೊತ್ತೂರು ಬಾಬು, ಚಂದ್ರ ರೆಡ್ಡಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.