ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ರಾಶ್ಚೆರುವು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಚೌಡಪ್ಪ ಅವಿರೋಧ ಆಯ್ಕೆ

ಚೇಳೂರು ತಾಲ್ಲೂಕಿನ ರಾಶ್ಚೆರುವು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೇವತಿ ಶ್ರೀನಿವಾಸ್ ಇತ್ತೀಚೆಗೆ ರಾಜಿನಾಮೆ ಸಲ್ಲಿಸಿದ್ದರು. ಇದರ ಹಿನ್ನಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯು ಬುಧವಾರ ನಿಗಧಿಯಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಚೌಡಪ್ಪರವರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಪಂಚಾಯತಿ ನೂತನ ಅಧ್ಯಕ್ಷರಾಗಿ ಚೌಡಪ್ಪ ಅವಿರೋಧ ಆಯ್ಕೆ

ರಾಶ್ಚೆರುವು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಚೌಡಪ್ಪ ಅವಿರೋಧ ಆಯ್ಕೆಯಾದರು.

Ashok Nayak Ashok Nayak Aug 7, 2025 12:33 PM

ಚಿಕ್ಕಬಳ್ಳಾಪುರ : ಚೇಳೂರು ತಾಲ್ಲೂಕಿನ ರಾಶ್ಚೆರುವು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೇವತಿ ಶ್ರೀನಿವಾಸ್ ಇತ್ತೀಚೆಗೆ ರಾಜಿನಾಮೆ ಸಲ್ಲಿಸಿದ್ದರು. ಇದರ ಹಿನ್ನಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯು ಬುಧವಾರ ನಿಗಧಿಯಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಚೌಡಪ್ಪರವರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಬಿ.ಕೆ ಶ್ವೇತ ಘೋಷಣೆ ಮಾಡಿದರು.

ತಾಲೂಕಿನ ರಾಶ್ಚೆರುವು ಗ್ರಾಮ ಪಂಚಾಯತಿಯಲ್ಲಿ 14 ಜನ ಸದಸ್ಯರು ಇದ್ದು,ಚೌಡಪ್ಪರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಹಾಗೂ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೇಯೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರೀಕರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಪಟ್ಟು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸಭೆ

ನಂತರ ಮಾಜಿ  ಗ್ರಾಮ ಪಂಚಾಯತಿ ಹಿರಿಯ ಮುಖಂಡ ಬಾಬುರೆಡ್ಡಿ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ದೀಪ, ಚರಂಡಿ,ರಸ್ತೆಯಂತಹ ಅಭಿವೃದ್ಧಿ ಕಾರ್ಯ ಗಳಿಗೆ ಒತ್ತು ನೀಡಬೇಕು. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಧ್ಯಕ್ಷರೊಂದಿಗೆ ಎಲ್ಲ ಸದಸ್ಯರು ಸಹಕರಿಸಿ ಮಾದರಿ ಗ್ರಾಮ ಪಂಚಾಯತಿಯನ್ನಾಗಿಸಲು ಶ್ರಮಿಸಬೇಕು ಎಂದು ತಿಳಿಸಿದರು.

ಈ ವೇಳೆ ಗ್ರಾಮ ಪಂಚಾಯತಿ ಪಿಡಿಓ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷ ಗೋವಿಂದ ರೆಡ್ಡಿ, ನಾಗಿರೆಡ್ಡಿ, ಮದ್ದಿರೆಡ್ಡಿ, ಕಣ್ಯಮ್ಮ ಶಿವಣ್ಣ,ಸರಸ್ವತಮ್ಮ,ವಿರಾಂಜಿನೇಯ,ಚಿನ್ನ ಮದ್ದಿರೆಡ್ಡಿ,ಶ್ಯಾಮಲಮ್ಮ ಚೌಡಪ್ಪ, ವಕೀಲ ವೆಂಕಟಾಚಲಪತಿ, ಮತ್ತಿತರರು ಇದ್ದರು.