ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಅಗಲಿಕೆಗೆ ಜಿಲ್ಲೆಯ ಕಂಬನಿ : ಸಚಿವ ಸಂಸದರಿಂದ ಸಂತಾಪ ಸಲ್ಲಿಕೆ

ಪ್ರಸಿದ್ಧ ಕನ್ನಡ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪ ಅವರ ಅಗಲಿಕೆಯ ಸುದ್ದಿ ಆಘಾತಕರ. ಅವರ ಸಾಹಿತ್ಯಕೃತಿಗಳು ಹಲವು ಪೀಳಿಗೆಗಳನ್ನು ಶ್ರೀಮಂತಗೊಳಿಸಿದ್ದು, ಮುಂದಿನ ಪೀಳಿಗೆಗಳಿಗೂ ಪ್ರೇರಣೆ ಆಗಲಿದೆ. ಅವರ ಕುಟುಂಬ, ಅಭಿಮಾನಿಗಳು ಹಾಗೂ ಸಾಹಿತ್ಯ ಲೋಕಕ್ಕೆ ಹೃತ್ಪೂರ್ವಕ ಸಂತಾಪಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಅಗಲಿಕೆಗೆ ಜಿಲ್ಲೆಯ ಕಂಬನಿ

-

Ashok Nayak Ashok Nayak Sep 25, 2025 7:41 AM

ಚಿಕ್ಕಬಳ್ಳಾಪುರ : ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರಸಾಹಿತ್ಯ ಅಕಾಡೆಮಿ,ಪದ್ಮಶ್ರೀ, ಸರಸ್ವತಿ ಸಮ್ಮಾನ್ ಸೇರಿ ಹತ್ತುಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ಹಿರಿಯ ಸಾಹಿತಿ ಕಾದಂಬರಿ ಕಾರ ಎಸ್.ಎಲ್.ಭೈರಪ್ಪ ಅವರ ನಿಧನ ಸಾಹಿತ್ಯ ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ. ಈ ಬಗ್ಗೆ ಜಿಲ್ಲೆಯ ಮನಸ್ಥಿತಿ ಮಿಡಿದ ಪರಿ ಹೀಗಿದೆ.

ಪ್ರಸಿದ್ಧ ಕನ್ನಡ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪ ಅವರ ಅಗಲಿಕೆಯ ಸುದ್ದಿ ಆಘಾತಕರ. ಅವರ ಸಾಹಿತ್ಯಕೃತಿಗಳು ಹಲವು ಪೀಳಿಗೆಗಳನ್ನು ಶ್ರೀಮಂತಗೊಳಿಸಿದ್ದು, ಮುಂದಿನ ಪೀಳಿಗೆಗಳಿಗೂ ಪ್ರೇರಣೆ ಆಗಲಿದೆ. ಅವರ ಕುಟುಂಬ, ಅಭಿಮಾನಿಗಳು ಹಾಗೂ ಸಾಹಿತ್ಯ ಲೋಕಕ್ಕೆ ಹೃತ್ಪೂರ್ವಕ ಸಂತಾಪಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಶ್ರೇಷ್ಠ ಸಾಹಿತಿಗಳು, ನಾಡಿನ ಅತ್ಯಂತ ಜನಪ್ರಿಯ ಕಾದಂಬರಿಕಾರರು, ಪದ್ಮಭೂಷಣ ಪುರಸ್ಕೃತ ರಾದ ಶ್ರೀ ಎಸ್.ಎಲ್.ಭೈರಪ್ಪ ಅವರ ನಿಧನದಿಂದ ತಾಯಿ ಕನ್ನಡಾಂಬೆ ತನ್ನ ಹೆಮ್ಮೆಯ ಸರಸ್ವತಿ ಪುತ್ರನನ್ನು ಕಳೆದುಕೊಂಡಿದ್ದಾಳೆ.

ಇದನ್ನೂ ಓದಿ: Chikkaballapur News: ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರ ಯಕ್ಷಗಾನ, ಜಾನಪದ ರಂಗಕಲೆ ಕಲಿಯಲು ಅವಕಾಶ: ಸದ್ಗುರು ಶ್ರೀ ಮಧುಸೂದನ ಸಾಯಿ

ಎಲ್ಲ ವಯಸ್ಸಿನ ಓದುಗರನ್ನು ಸೆಳೆಯುವಂತಹ ಕಾದಂಬರಿಗಳನ್ನು ರಚಿಸುವ ಕಲೆಯನ್ನು ಕರಗತಗೊಳಿಸಿಕೊಂಡಿದ್ದ ಭೈರಪ್ಪನವರು, ತಮ್ಮ ಕಾದಂಬರಿಗಳಿಗೆ ಆರಿಸಿಕೊಳ್ಳುತ್ತಿದ್ದ ಕಥಾವಸ್ತು ಆಗಿರಲಿ, ಅದಕ್ಕೆ ಬೇಕಾದ ಆಳವಾದ ಸಂಶೋಧನೆ ಆಗಿರಲಿ, ಅವರ ಬರವಣಿಗೆಯ ಶೈಲಿಯಾಗಲಿ ಇವೆಲ್ಲದರ ಮೂಲಕ ಕನ್ನಡದ ಅಕ್ಷರ ಲೋಕದಲ್ಲಿ ಒಂದು ಅಚ್ಚಳಿಯದ ಛಾಪು ಬಿಟ್ಟು ಹೋಗಿದ್ದಾರೆ.

ಅವರು ಸೃಷ್ಟಿಸಿರುವ ಓದುಗ ಸಂಸ್ಕೃತಿ ಹೀಗೆ ಮುಂದುವರೆಯಲಿ, ಅವರ ಪ್ರೇರಣೆ ಇನ್ನಷ್ಟು ಹೊಸ ಸಾಹಿತಿಗಳಿಗೆ ದಾರಿದೀಪವಾಗಲಿ ಎಂದು ಆಶಿಸುತ್ತಾ, ಭೈರಪ್ಪನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಅಪಾರ ಓದುಗ ಬಳಗಕ್ಕೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ.ಹೋಗಿ ಬನ್ನಿ ಭೈರಪ್ಪನವರೇ, ಕನ್ನಡ ನಾಡಿನಲ್ಲೇ ಮತ್ತೆ ಹುಟ್ಟು ಬನ್ನಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ನಿಧನರಾದ ಸಮಾಚಾರ ತಿಳಿದು ಮನಸ್ಸಿಗೆ ಬಹಳ ಬೇಸರವಾಯಿತು. ಕಾದಂಬರಿ ಪ್ರಕಾರದ ಮೂಲಕ ಕನ್ನಡದ ಮನಸ್ಸು ಗಳನ್ನು ಹಲವು ದಶಕಗಳ ಕಾಲ ಓದಿಗೆ ಹಚ್ಚಿದ್ದ ಹಿರಿಯ ಸಾಹಿತಿಯಾಗಿದ್ದರು.ಇವರ ಅಗಲಿಕೆ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ತಿಳಿಸಿದ್ದಾರೆ.

ಪ್ರಸಿದ್ಧ ಕನ್ನಡ ಕಾದಂಬರಿಕಾರರಾದ ಡಾ. ಎಸ್ ಎಲ್ ಭೈರಪ್ಪ ಅವರ ಅಗಲಿಕೆಯ ಸುದ್ದಿ ಆಘಾತಕರ. ಅವರ ಸಾಹಿತ್ಯಕೃತಿಗಳು ಹಲವು ಪೀಳಿಗೆಗಳನ್ನು ಶ್ರೀಮಂತಗೊಳಿಸಿದ್ದು, ಮುಂದಿನ ಪೀಳಿಗೆಗಳಿಗೂ ಪ್ರೇರಣೆ ಆಗಲಿದೆ. ಅವರ ಅಗಲಿಕೆಯು ಕುಟುಂಬ, ಅಭಿಮಾನಿಗಳು ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎನ್ನುವುದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಅಭಿಲಾಷ್ ಸಂತಾಪ ಸೂಚಿಸಿದ್ದಾರೆ.

ಎಸ್.ಎಲ್.ಭೈರಪ್ಪ ಕನ್ನಡದ ಬಹುದೊಡ್ಡ ಲೇಖಕರು. ಅವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು ಕನ್ನಡ ಹೊರಗೂ ಅವರಿಗೆ ಅಪಾರ ಓದುಗರಿದ್ದರು. ಭೈರಪ್ಪನವರ ಧರ್ಮಶ್ರೀ,ಆವರಣ, ಗೃಹಭಂಗ, ಪರ್ವ, ದಾಟು ಮತ್ತಿತರ ಕೃತಿಗಳು ಎಂತಹವ ರನ್ನೂ ಓದಿಸಿಕೊಂಡು ಹೋಗುತ್ತವೆ.ಹಿರಿಯ ಸಾಹಿತಿಯಾಗಿ, ಹತ್ತಾರು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿ ತುಂಬು ಜೀವನ ನಡೆಸಿ ನಿರ್ಗಮಿಸಿದ ಹಿರಿಯ ಸಾಹಿತಿಗೆ ಭಾವಪೂರ್ಣ ನಮನಗಳು ಎನ್ನುವುದು ಹಿರಿಯ ಉಪನ್ಯಾಸಕ ಅರಿಕೆರೆ ಮುನಿರಾಜು ಅವರ ಅಭಿಪ್ರಾಯ ತಿಳಿಸಿದರು.

ಹೀಗೆ ಜಿಲ್ಲೆಯ ಜನತೆ ಸಂಘ ಸಂಸ್ಥೆಗಳ ಮುಖ್ಯಸ್ಥರು,ಸಚಿವರ ಸಂಸದರು, ಸಾಹಿತಿ, ಉಪನ್ಯಾಸಕರು ಅಗಲಿದ ಸಾಹಿತಿಗೆ ನುಡಿನಮನದ ಮೂಲಕ ಸಂತಾಪಗಳನ್ನು ಸಲ್ಲಿಸಿದ್ದಾರೆ.