ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾಮೂಹಿಕ ಪ್ರಯತ್ನಗಳಿಂದ ಗ್ರಾಮಗಳಲ್ಲಿ ಹಿಂದಿನ ಕಾಲದಂತೆ ಸ್ವಾವಲಂಬಿ ವ್ಯವಸ್ಥೆಯ ಸ್ಥಾಪನೆ

ತಾಲ್ಲೂಕಿನ ಸುಮಾರು ಹದಿಮೂರು ಕೆರೆಗಳಾದ ಸಾರಗೊಂಡ್ಲು, ವೆಂಕಟಾಪುರ, ಮಿದ್ದಿಲು, ಬೆಳ್ಳಾಲ ಬೊಮ್ಮ ಸಂದ್ರ, ಚೋಳಶೆಟ್ಟಿಹಳ್ಳಿ, ಗುಂಡ್ಲ ಕೊತ್ತೂರು, ಹುಣಸೇನಹಳ್ಳಿ, ಗೊಟಕನಾಪುರ, ಮುದುಗೆರೆ, ಸೊನಗಾನಹಳ್ಳಿ, ಅಗ್ರಹಾರ ಹೊಸಹಳ್ಳಿ ಹಾಗೂ ದ್ಯಾವಸಂದ್ರ ಕೆರೆಗಳನ್ನು ಇಲ್ಲಿಯವರೆಗೂ ಯಶಸ್ವಿ ಯಾಗಿ ಪುನರುಜ್ಜೀವನಗೊಳಿಸಿದೆ ಎಂದು ಹೇಳಿದ ಅವರು ಈ ಮೂಲಕ ಸುಮಾರು 530 ಎಕರೆ ಪ್ರದೇಶವನ್ನು ಮರುಪೂರಣಗೊಳಿಸಲಾಗಿದೆ.

ಗ್ರಾಮಗಳಲ್ಲಿ ಹಿಂದಿನ ಕಾಲದಂತೆ ಸ್ವಾವಲಂಬಿ ವ್ಯವಸ್ಥೆಯ ಸ್ಥಾಪನೆ

-

Profile
Ashok Nayak Apr 12, 2026 11:52 PM

ಗೌರಿಬಿದನೂರು: ಸೇವಾ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಕೈಗೊಂಡಿರುವ ಗೊಟಕನಾಪುರ ಕೆರೆ ಪುನರುಜ್ಜೀವನ ಕಾಮಗಾರಿಯನ್ನು ಇಂದು ಶಾಸಕ ಎಸ್. ಸುರೇಶ್ ಕುಮಾರ್(MLA S.Suresh Kumar) ಭೇಟಿ ನೀಡಿ ಪರಿಶೀಲಿಸಿದರು. ಟ್ರಸ್ಟ್ ಕೈಗೊಂಡಿರುವ ಸಮಗ್ರ ಮತ್ತು ಜನಸಹಭಾಗಿತ್ವದ ಕಾರ್ಯವನ್ನು ಅವರು ಹೃತ್ಪೂರ್ವಕವಾಗಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಾಸಕ ಸುರೇಶ್ ಕುಮಾರ್(MLA Suresh Kumar) ಮಾತನಾಡಿ, ತಾಲ್ಲೂಕಿನ ಸುಮಾರು ಹದಿಮೂರು ಕೆರೆಗಳಾದ ಸಾರಗೊಂಡ್ಲು, ವೆಂಕಟಾಪುರ, ಮಿದ್ದಿಲು, ಬೆಳ್ಳಾಲ ಬೊಮ್ಮ ಸಂದ್ರ, ಚೋಳಶೆಟ್ಟಿಹಳ್ಳಿ, ಗುಂಡ್ಲ ಕೊತ್ತೂರು, ಹುಣಸೇನಹಳ್ಳಿ, ಗೊಟಕನಾಪುರ, ಮುದುಗೆರೆ, ಸೊನಗಾನಹಳ್ಳಿ, ಅಗ್ರಹಾರ ಹೊಸಹಳ್ಳಿ ಹಾಗೂ ದ್ಯಾವಸಂದ್ರ ಕೆರೆಗಳನ್ನು ಇಲ್ಲಿಯವರೆಗೂ ಯಶಸ್ವಿಯಾಗಿ ಪುನರುಜ್ಜೀವನಗೊಳಿಸಿದೆ ಎಂದು ಹೇಳಿದ ಅವರು ಈ ಮೂಲಕ ಸುಮಾರು 530 ಎಕರೆ ಪ್ರದೇಶವನ್ನು ಮರುಪೂರಣಗೊಳಿಸಲಾಗಿದೆ.

ಇದನ್ನೂ ಓದಿ: Gauribidanur News: ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯಗಳು ಅಗತ್ಯ

ಸುಮಾರು 150 ಕೋಟಿಗೂ ಅಧಿಕ ಲೀಟರ್ ಶುದ್ಧ ಮತ್ತು ತಾಜಾ ನೀರನ್ನು ಸಂಗ್ರಹ ಸಾಮರ್ಥ್ಯ ವನ್ನು ಹೆಚ್ಚಿಸಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು ಸುಮಾರು 178 ಕೆರೆಗಳು ಇದ್ದು, ಅವುಗಳನ್ನೆಲ್ಲಾ ಪುನರುಜ್ಜೀವನಗೊಳಿಸಿದರೆ ಈ ಪ್ರದೇಶದಲ್ಲಿ ಜಲ ಸ್ವಾವಲಂಬನೆ ಸಾಧಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಇತ್ತೀಚೆಗೆ ಕರ್ನಾಟಕ ಸರ್ಕಾರ ಪ್ರಕಟಿಸಿರುವಂತೆ ಈ ತಾಲ್ಲೂಕು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿರುವುದನ್ನೂ ಅವರು ಉಲ್ಲೇಖಿಸಿದರು.

ಸರಳ ವಿಧಾನದಲ್ಲಿ ಸಾರ್ವಜನಿಕರ ಸಹಬಾಗಿತ್ವದಲ್ಲಿ ಸಂಪನ್ಮೂಲಗಳನ್ನು ನಿರ್ಮಿಸುವಲ್ಲಿ ಟ್ರಸ್ಟ್ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಅವರು ಪ್ರಶಂಸಿಸಿದರು.

ಕೆರೆಗಳ ಶುದ್ಧೀಕರಣದಿಂದ ದೊರೆಯುವ ಪೋಷಕಾಂಶಯುಕ್ತ ಮಣ್ಣನ್ನು ರೈತರು ತಮ್ಮ ಕೃಷಿ ಭೂಮಿಗೆ ಬಳಸಿಕೊಳ್ಳಬೇಕು ಎಂದು ಸುರೇಶ್ ಕುಮಾರ್ ಮನವಿ ಮಾಡಿದರು. ಈ ರೀತಿಯ ಸಾಮೂಹಿಕ ಪ್ರಯತ್ನಗಳಿಂದ ಗ್ರಾಮಗಳು ಹಿಂದಿನ ಕಾಲದಂತೆ ಸ್ವಾವಲಂಬಿ ವ್ಯವಸ್ಥೆಯನ್ನು ಪುನಃ ಸ್ಥಾಪಿಸಿಕೊಳ್ಳಬಹುದು ಎಂದು ಹೇಳಿದರು.

ಉಳಿದಿರುವ ಕೆರೆಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕಾಗಿ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಗೌರವಾಧ್ಯಕ್ಷ ಸಂಜೀವ್ ರೆಡ್ಡಿ, ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್, ಬಿಜೆಪಿ ಪಕ್ಷದ ಮುಖಂಡರಾದ ಡೈರಿ ರಮೇಶ್, ನರಸಿಂಹ ರೆಡ್ಡಿ, ಹರೀಶ್, ವರುಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.