ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ಗುಡಿಬಂಡೆ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ: ಬಾಲಾಜಿ, ಶ್ರೀರಾಮರೆಡ್ಡಿ ಹಾಗೂ ಸುಬ್ಬಲಕ್ಷ್ಮಮ್ಮಗೆ ಜಯ

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ನಡೆದ ಈ ಪ್ರಕ್ರಿಯೆಯು ರಾಜಕೀಯ ಚುನಾವಣೆಯಷ್ಟೇ ಪೈಪೋಟಿಯಿಂದ ಕೂಡಿದ್ದು ಎಲ್ಲರ ಗಮನ ಸೆಳೆಯಿತು. ಸಾಮಾನ್ಯ ಕ್ಷೇತ್ರದ ಎರಡು ಸ್ಥಾನಗಳಿಗಾಗಿ ಒಟ್ಟು 4 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣೆಯಲ್ಲಿ ಬಾಲಾಜಿ 80 ಮತಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದರೆ, ಇ.ಎನ್. ಶ್ರೀರಾಮರೆಡ್ಡಿ 72 ಮತಗಳನ್ನು ಪಡೆದು ಜಯಶಾಲಿ ಯಾದರು.

ಗುಡಿಬಂಡೆ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. -

Profile
Ashok Nayak May 2, 2026 11:52 PM

ಗುಡಿಬಂಡೆ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಅಧಿಕೃತ ಫಲಿತಾಂಶ ಪ್ರಕಟವಾಗಿದೆ.

ಸಾಮಾನ್ಯ ಕ್ಷೇತ್ರದಿಂದ ಬಾಲಾಜಿ ಮತ್ತು ಇ.ಎನ್. ಶ್ರೀರಾಮರೆಡ್ಡಿ ಹಾಗೂ ಮಹಿಳಾ ಕ್ಷೇತ್ರದಿಂದ ಕೆ. ಸುಬ್ಬಲಕ್ಷ್ಮಮ್ಮ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಕೃಷ್ಣಕುಮಾರಿ ತಿಳಿಸಿದರು.

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ನಡೆದ ಈ ಪ್ರಕ್ರಿಯೆಯು ರಾಜಕೀಯ ಚುನಾವಣೆಯಷ್ಟೇ ಪೈಪೋಟಿಯಿಂದ ಕೂಡಿದ್ದು ಎಲ್ಲರ ಗಮನ ಸೆಳೆಯಿತು. ಸಾಮಾನ್ಯ ಕ್ಷೇತ್ರದ ಎರಡು ಸ್ಥಾನಗಳಿಗಾಗಿ ಒಟ್ಟು 4 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣೆಯಲ್ಲಿ ಬಾಲಾಜಿ 80 ಮತಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದರೆ, ಇ.ಎನ್. ಶ್ರೀರಾಮರೆಡ್ಡಿ 72 ಮತಗಳನ್ನು ಪಡೆದು ಜಯಶಾಲಿ ಯಾದರು.

ಇದನ್ನೂ ಓದಿ:Gudibande News: ಅರ್ಹ ಕಾರ್ಮಿಕರಿಗೆ ಸೌಲಭ್ಯಗಳು ದೊರೆಯಲಿ: ಹೆಚ್.ಪಿ.ರಾಮನಾಥ್

ಇನ್ನಿಬ್ಬರು ಅಭ್ಯರ್ಥಿಗಳಾದ ವಿ. ಶ್ರೀರಾಮಪ್ಪ ಅವರು 65 ಮತಗಳನ್ನು ಹಾಗೂ ಎಂ. ಶಂಕರ್ ಅವರು 54 ಮತಗಳನ್ನು ಪಡೆದರು. ಇನ್ನೂ ಮಹಿಳಾ ಮೀಸಲು ಕ್ಷೇತ್ರದಲ್ಲಿ ನಡೆದ ನೇರ ಹಣಾ ಹಣಿಯಲ್ಲಿ ಕೆ. ಸುಬ್ಬಲಕ್ಷ್ಮಮ್ಮ ಅವರು ಭರ್ಜರಿ ಗೆಲುವಿನ ನಗೆ ಬೀರಿದ್ದಾರೆ. ಸುಬ್ಬಲಕ್ಷ್ಮಮ್ಮ ಒಟ್ಟು 75 ಮತಗಳನ್ನು ಪಡೆಯುವ ಮೂಲಕ ವಿಜೇತರಾದರು. ಅವರ ವಿರುದ್ಧ ಸ್ಪರ್ಧಿಸಿದ್ದ ಮತ್ತೊಬ್ಬ ಅಭ್ಯರ್ಥಿ ಶ್ವೇತ 67 ಮತಗಳನ್ನು ಪಡೆದುಕೊಂಡರು.

ಇನ್ನೂ ತಾಲ್ಲೂಕಿನಲ್ಲಿ ಒಟ್ಟು 148 ಶಿಕ್ಷಕ ಮತದಾರರಿದ್ದು, ಈ ಪೈಕಿ 146 ಮತಗಳು ಚಲಾವಣೆ ಯಾಗಿದ್ದವು. ಕೇವಲ ಇಬ್ಬರು ಮತದಾರರು ಗೈರು ಹಾಜರಾಗಿದ್ದು, ಚಲಾವಣೆಯಾದ ಮತಗಳಲ್ಲಿ 3 ಮತಗಳು ಅಸಿಂಧು ಎಂದು ಪರಿಗಣಿಸಲ್ಪಟ್ಟವು. ಈ ಬಾರಿಯ ಚುನಾವಣೆ ಅಕ್ಷರಶಃ ಸಾಮಾನ್ಯ ಚುನಾವಣೆಗಳಂತೆ ಕಂಡುಬಂದಿದ್ದು ವಿಶೇಷವಾಗಿತ್ತು.