ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ದೇವಸ್ಥಾನದ ಬಗ್ಗೆ ನನಗೆ ಭಾವನಾತ್ಮಕ ಸಂಬಂಧವಿದೆ: ಪ್ರವಚನಕಾರ ಶ್ರೀ ಶ್ರೀ ಮಾಂಕಾಲ ಹರಿ ಶರ್ಮ

ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ, ಶ್ರೀಮರಿಗಮ್ಮ ಹಾಗೂ ಸೊಲ್ಲಾ ಪುರಮ್ಮ ಗ್ರಾಮ ದೇವತೆಗಳಿಗೆ ಮತ್ತು ದೇವಸ್ಥಾನಕ್ಕೆ ಹೆಚ್ಚಿನ ಶಕ್ತಿ ಇದ್ದು, ಭಕ್ತಾದಿಗಳ ಇಷ್ಟಾರ್ಥ ಗಳನ್ನು ನೆರವೇರಿಸುವಂತಹ ಶಕ್ತಿಯನ್ನು ಹೊಂದಿವೆ, ಈ ದೇವಸ್ಥಾನದ ಬಗೆ ನನಗೆ ಭಾವನಾತ್ಮಕ ಸಂಬಂಧವಿದೆ ಎಂದು ಪ್ರವಚನ ಕಾರರಾದ ಶ್ರೀ ಶ್ರೀ ಮಾಂಕಾಲ ಹರಿ ಶರ್ಮ ತಿಳಿಸಿದರು

ದೇವಸ್ಥಾನದ ಬಗ್ಗೆ ನನಗೆ ಭಾವನಾತ್ಮಕ ಸಂಬಂಧವಿದೆ

-

Profile
Ashok Nayak Jun 13, 2026 11:48 PM

ಗೌರಿಬಿದನೂರು: ನಗರದ ಶ್ರೀ ಮರಿಗಮ್ಮ ಸೊಲ್ಲಾಪುರಮ್ಮ ದೇವಸ್ಥಾನಕ್ಕೆ ಪ್ರವಚನಕಾರರಾದ ಶ್ರೀ ಮಾಂಕಾಲ ಹರಿಶರ್ಮ ಭೇಟಿ ನೀಡಿ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿದರು.

ನಂತರ ಶ್ರೀಗಳು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ, ಶ್ರೀಮರಿಗಮ್ಮ ಹಾಗೂ ಸೊಲ್ಲಾ ಪುರಮ್ಮ ಗ್ರಾಮ ದೇವತೆಗಳಿಗೆ ಮತ್ತು ದೇವಸ್ಥಾನಕ್ಕೆ ಹೆಚ್ಚಿನ ಶಕ್ತಿ ಇದ್ದು, ಭಕ್ತಾದಿಗಳ ಇಷ್ಟಾರ್ಥಗಳನ್ನು ನೆರವೇರಿಸುವಂತಹ ಶಕ್ತಿಯನ್ನು ಹೊಂದಿವೆ, ಈ ದೇವಸ್ಥಾನದ ಬಗ್ಗೆ ನನಗೆ ಭಾವನಾತ್ಮಕ ಸಂಬಂಧ ವಿದೆ ಎಂದು ಪ್ರವಚನಕಾರ ಶ್ರೀ ಶ್ರೀ ಮಾಂಕಾಲ ಹರಿ ಶರ್ಮ ತಿಳಿಸಿದರು.

ಇದನ್ನೂ ಓದಿ: Gauribidanur News: ಅಮರನಾರೇಯಣ ಶತಕವು ಜೀವನದ ಮೌಲ್ಯಗಳನ್ನು ಸಾರುವ ಆಧ್ಯಾತ್ಮಿಕ ಮಾರ್ಗದರ್ಶಕ

ನಂತರ ಅವರು ದೇವಸ್ಥಾನದ ಆವರಣದಲ್ಲಿ ಇರುವ ಗೋಶಾಲೆಯ ಗೋವುಗಳಿಗೆ ಅಲಂಕರಿಸಿ ಗೋಪೂಜೆ ನೆರವೇರಿಸಿದರು.

ಈ ಸಂಧರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಎಸ್ ರೂಪ ಅನಂತರಾಜು, ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರಾದ ರಾಮ್ ಬಾಬು, ನಗರಸಭೆ ಮಾಜಿ ಸದಸ್ಯರಾದ ಅನಂತ ರಾಜು ,ರಮೇಶ್, ವೆಂಕಟಾದ್ರಿ, ವೆಂಕಟೇಶ್, ಶ್ರೀನಿವಾಸ್ ,ಮಂಜುನಾಥ್, ಶಶಿಕಲಾ, ಪುಷ್ಪ, ಲಕ್ಷ್ಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.