Dr. M.C.Sudhakar: ಎತ್ತಿನಹೊಳೆ ನೀರನ್ನು ಜಿಲ್ಲೆಗೆ ಹರಿಸಿದರೆ ಜಿಲ್ಲೆಯ ಜನತೆ ನಿಮಗೆ ಋಣಿಯಾಗಿರುತ್ತೇವೆ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವನಾಗಿ ಕೆಲಸ ಮಾಡುವ ಪುಣ್ಯ ಒಲಿದು ಬಂದಿರುವುದು ಅತ್ಯಂತ ಸಂತೋಷ ತಂದಿದೆ. ಮುಖ್ಯಮಂತ್ರಿ, ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಎಂದೆಂದಿಗೂ ಚಿರಋಣಿಯಾಗಿದ್ದೇನೆ. ಈ ೨.೫ ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗುವಂತೆ ನೋಡಿಕೊಳ್ಳಲಾಗಿದೆ.
-
2.5 ವರ್ಷ ಅಭಿವೃದ್ಧಿಯ ಪರ್ವದಲ್ಲಿ ಜಿಲ್ಲೆ: 2000.74ಕೋಟಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆಯೇ ಇದಕ್ಕೆ ಸಾಕ್ಷಿ
ಚಿಕ್ಕಬಳ್ಳಾಪುರ : ಸುಮಾರು 2000.74 ಕೋಟಿ ರೂಗಳ ವೆಚ್ಚದಲ್ಲಿ ಜಿಲ್ಲೆಯ ಸರಕಾರಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿ ೩ನೇ ಹಂತದ 164 ಕೆರೆಗಳಿಗೆ ಶುದ್ಧೀಕರಿಸುವ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ ವೇ ಜಿಲ್ಲೆಯಲ್ಲಿ ಅಭಿವೃದ್ದಿಯ ಪರ್ವ ಆರಂಭವಾಗಿದೆ ಎಂಬುದರ ಧ್ಯೋತಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ..ಸಿ.ಸುಧಾಕರ್(Dr. M.C.Sudhakar) ತಿಳಿಸಿದರು.
ನಗರ ಹೊರವಲಯ ಹನುಮಂತಪುರ ಗೇಟ್ ಸಮೀಪದ ಬೃಹತ್ ವೇದಿಕೆಯಲ್ಲಿ ಜಿಲ್ಲಾಡ ಳಿತದಿಂದ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ೧೭ ವಿವಿಧ ಇಲಾಖೆ ಗಳ ಮಂತ್ರಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವನಾಗಿ ಕೆಲಸ ಮಾಡುವ ಪುಣ್ಯ ಒಲಿದು ಬಂದಿರುವುದು ಅತ್ಯಂತ ಸಂತೋಷ ತಂದಿದೆ. ಮುಖ್ಯಮಂತ್ರಿ, ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಎಂದೆಂದಿಗೂ ಚಿರಋಣಿಯಾಗಿದ್ದೇನೆ. ಈ ೨.೫ ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗುವಂತೆ ನೋಡಿಕೊಳ್ಳಲಾಗಿದೆ. ಕೇವಲ ನನ್ನ ಕ್ಷೇತ್ರ ದಲ್ಲಿ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಕ್ಷೇತ್ರöಗಳಿಗೂ ಸಮಾನ ಅವಕಾಶ ನೀಡಲಾಗಿದೆ. ಇದಕ್ಕೆ ಸಾಕ್ಷಿಯಂಬಂತೆ ಶಿಡ್ಲಘಟ್ಟದಲ್ಲಿ ಮುಖ್ಯಮಂತ್ರಿಗಳಿಂದ ನಡೆಯುತ್ತಿರುವ ಕಾರ್ಯಕ್ರಮವಾಗಿದೆ ಎಂದರು.
ಶಿಡ್ಲಘಟ್ಟದ ಹನುಮಂತಪುರ ಗೇಟ್‌ಬಳಿ ಸುಮಾರು ೧೨.೨೬ ಎಕರೆ ಪ್ರದೇಶದಲ್ಲಿ ೨೦೦ ಕೋಟಿ ಅನುದಾನದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಗಳು ಭೂಮಿಪೂಜೆ ಮಾಡಿದ್ದಾರೆ.
೨೦೨೭ಕ್ಕೆ ಪೂರ್ಣಗೊಳಿಸುವ ಗುರಿಯೊಂದಿಗೆ ಹೆಚ್.ಎನ್ ವ್ಯಾಲಿ ದ್ವಿತೀಯ ಹಂತದಲ್ಲಿ ಶಿಡ್ಲಘಟ್ಟದ ೪೫ ಕೆರಗಳಿಗೆ, ೩ನೇ ಹಂತದಲ್ಲಿ ಚಿಂತಾಮಣಿ ತಾಲೂಕಿನ ೧೧೯ ಕೆರೆಗಳಿಗೆ ನೀರುತುಂಬಿಸಲು ೨೩೭ಕೋಟಿ ಸಣ್ಣ ನೀರಾವರಿ ಇಲಾಖೆ ಯಿಂದ ಒದಗಿಸಲಾಗಿದೆ. ಸರಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದರು.
ಅಮರಾವತಿಯ ಬಳಿಯಲ್ಲಿ ನಿರ್ಮಾನವಾಗುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಎರಡನೇ ಹಂತದಲ್ಲಿ ೧೨೦ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಕೂಡ ಶಂಕುಸ್ಥಾಪನೆ ಮಾಡಲಾಗಿದೆ.ಚಿಂತಾಮಣಿ ತಾಲೂಕಿನಅ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡ ಅಡ್ಮಿನ್ ಬ್ಲಾಕ್, ಗ್ರಂಥಾಲಯ, ಆಡಿಟೋರಿಯಂ ನಿರ್ಮಿಸಿ ಉನ್ನತೀ ಕರಿಸಲು ೫೦ ಕೋಟಿ ವೆಚ್ಚದಲ್ಲಿ ಕ್ರಮ,ಉನ್ನತ ಶಿಕ್ಷಣ ಇಲಾಖೆಯಿಂದ ೧೭೩.೫೦ಕೋಟಿ ಒದಗಿಸಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ೭೨.೩೯ಕೋಟಿ ವೆಚ್ಚದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ೧೪೦ ಕಿ.ಮಿ.ರಸ್ತೆ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ ಇದರಲ್ಲಿ ನಂದಿಬೆಟ್ಟದ ಮೇಲ್ಬಾಗದಲ್ಲಿರುವ ರಸ್ತೆಯೂ ಸೇರಿದೆ ಎಂದರು.
೩೨ಕೋಟಿ ವೆಚ್ಚದಲ್ಲಿ ಮುರುಗಮಲೆಯ ಅಮ್ಮಾಜಾನ್ ಬಾವಾಜಾನ್ ಧಾರ್ಮಿಕ ಕ್ಷೇತ್ರದ ಅಭಿವೃದ್ದಿ,೩೦ಕೋಟ ವೆಚ್ಚದಲ್ಲಿ ಚಿಂತಾಮಣಿ ನಗರಕ್ಕೆ ಅಡಚಣೆಯಿಲ್ಲದ ವಿದ್ಯುತ್ ಪೂರೈಕೆಗೆ ಕ್ರಮ. ೧೦ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ, ೯ ಕೋಟಿ ವೆಚ್ಚದಲ್ಲಿ ಝಾನ್ಸಿರಾಣಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾಕ್ ನಿರ್ಮಾಣ, ೭ ಕೋಟಿ ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ಅಭಿವೃದ್ದಿ,೩ಕೋಟಿ ವೆಚ್ಚದಲ್ಲಿ ಚಿಂತಾಮಣಿಯಲ್ಲಿ ಗ್ರಂಥಾಲಯದ ಮೇಲಂತಸ್ತು ನಿರ್ಮಾಣ,೧೪.೫೩ ಕೋಟಿ ವೆಚ್ಚದಲ್ಲಿ ಜಿಲ್ಲೆಯ ತಾಲೂಕು ಆಸ್ಪತ್ರೆಗಳ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಇದು ನಮ್ಮ ಅಭಿವೃದ್ಧಿಯ ನೋಟ ಎಂದರು.
ಎತ್ತಿನಹೊಳೆಗೆ ಮನವಿ
ಹೆಚ್.ಎನ್.ವ್ಯಾಲಿ ಕೆ.ಸಿ, ವ್ಯಾಲಿಯಂತಹ ಸಂಸ್ಕರಿಸಿದ ನೀರಿನ ಮರುಬಳಕೆ ಮಾಡಿ ಕೊಳ್ಳುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅಗ್ರಮಾನ್ಯ ಸ್ಥಾನವಿದೆ. ಈ ಯೋಜನೆಯ ಮಾದರಿಯನ್ನು ವಿವಿಧ ರಾಜ್ಯಗಳಲ್ಲಿ ಅಳವಡಿಸಲು ಕೇಂದ್ರ ಸರಕಾರವು ಆಶಯ ವ್ಯಕ್ತಪಡಿಸಿದೆ. ಆದರೂ ಜಿಲ್ಲೆಯ ಜನತೆಗೆ ಶುದ್ಧಕುಡಿಯುವ ನೀರನ್ನು ಒದಗಿಸುವ ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸಿ 2027ರೊಳಗೆ ಕೆರೆಗಳಿಗೆ ಹರಿಸಿದ್ದೇ ಆದಲ್ಲಿ ಜಿಲ್ಲೆಯ ಜನತೆ ನಿಮಗೆ ಋಣಿಯಾಗಿರುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಗಮನ ಹರಿಸಬೇಕು.ನುಡಿದಂತೆ ನಡೆವಅ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರವಾಗಿರುವ ಸಿದ್ಧರಾಮಯ್ಯ ಅವರು ಹೆಚ್ಚಿನ ಮುತುವರ್ತಿ ವಹಿಸಿದರೆ ಜಿಲ್ಲೆಯ ಜನತೆ ಶತಮಾನಗಳ ಶಾಪದಿಂದ ಮುಕ್ತರಾಗಿ ಆರೋಗ್ಯವಂತ ಜೀವನ ನಡೆಸುತ್ತಾರೆ. ಅಂತರ್ಜಲವನ್ನೇ ನಂಬಿಕೊAಡು ಅದಲ್ಲಿಯೇ ಪ್ರಯೋಗ ನಡೆಸಿ ಸ್ವಾಭಿಮಾನ ಬದುಕು ಕಟ್ಟಿಕೊಂಡಿರುವ ಈ ಭಾಗದ ರೈತರು ಶ್ರಮಜೀವಿಗಳು, ತಂತ್ರಜ್ಞಾನದೊಂದಿಗೆ ಸಾಗುತ್ತಿರುವ ಬುದ್ಧಿಜೀವಿ ಗಳಾಗಿದ್ದಾರೆ ಎಂದರು.
*
ದುಬಾರಿ ಉಡುಗೊರೆ ಯಾಕೆ?
ಶಿಡ್ಲಘಟ್ಟದಲ್ಲಿ ನಡೆದ ಎರಡುಸಾವಿರ ಕೋಟಿಗೂ ಮೀರಿದ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ, ಸವಲತು ವಿತರಣೆ ಕಾರ್ಯಕ್ರಮವು ಹಲವು ಘಟನಾವಳಿ ಗಳಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರಿಗೆ ಜಿಲ್ಲಾಡ ಳಿತದ ವತಿಯಿಂದ ನೀಡಿದ ದುಬಾರಿ ಬೆಲೆಯ ಸ್ಮರಣಿಕೆಗಳು ಪ್ರೇಕ್ಷಕರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿತ್ತು. ಪಂಚಲೋಹದ ವಿವಿಧ ನಮೂನೆಯ ಮೂರ್ತಿಗಳನ್ನು ನೀಡಿದ್ದು, ಸಾರ್ವಜನಿಕರ ತೆರಿಗೆಯ ದುರ್ಬಳಕೆಯಂತಿತ್ತು.ರೇಷ್ಮೆ ಹಾರಗಳು ಜಿಲ್ಲೆಯ ಸೊಗಡಿನ ಪ್ರತೀಕದಂತಿದ್ದದ್ದು ಓಕೆ, ಪಂಚಲೋಹದ ಗಿಫ್ಟ್ಯಾಕೆ ಎಂದು ಜನಸಮಾನ್ಯರು ಕೂತಲ್ಲಿಯೇ ಗೊಣಗುತ್ತಿದ್ದರು.
ಕಿಟ್‌ಗೆ ಮುಗಿಬಿದ್ದ ಪತ್ರöಕರ್ತರು
ಕಾರ್ಯಕ್ರಮದಲ್ಲಿ ಸುದ್ದಿ ಮಾಡಲು ಬಂದಿದ್ದ ಪತ್ರಕರ್ತರಿಗೆ ಕಾರ್ಯಕ್ರಮದ ಆಯೋಜ ಕರು ನೀಡಿದ ಉಡುಗೊರೆ ಚರ್ಚೆಗೆ ಕಾರಣವಾಗಿದೆ.ಜಿಲ್ಲಾ ವಾರ್ತಾಧಿಕಾರಿ ಪತ್ರಕರ್ತರ ಬಳಿಗೆ ಬಂದು ಕಾರ್ಯಕ್ರಮ ಮುಗಿದ ಮೇಲೆ ಗಿಫ್ಟ್ ಇದೆ ಪಡೆದುಕೊಳ್ಳಿ ಎಂದು ಹೇಳಿದರು. ಅದರಂತೆ ಕಾರ್ಯಕ್ರಮ ಮುಗಿದ ಕೂಡಲೇ ನಾಮುಂದು ತಾ ಮುಂದು ಎಂದು ಮುಗಿ ಬಿದ್ದ ಪತ್ರಕರ್ತರು ಹರಸಾಹಸಪಟ್ಟು ಗಿಫ್ಟ್ ಬ್ಯಾಗ್ ಪಡೆದರು.ಬ್ಯಾಗ್ ತೆರೆದು ನೋಡಿದಾಗ ಚಿಂತಾಮಣಿ ಕಡಲೆಬೀಜ, ಚೆಕ್ಕುಲಿ,ನೋಟ್ ಬುಕ್ ಪೆನ್ ನೋಡಿ ಕಕ್ಕಾಬಿಕ್ಕಿಯಾಗಿದ್ದು ಮಾತ್ರ ಸುಳ್ಳಲ್ಲ. ಈ ದುಬಾರಿ ಗಿಫ್ಟ್ ಪಡೆಯಲು ಒಬ್ಬರ ಮೇಲೆ ಒಬ್ಬರು ಬಿದ್ದು ಪಡೆದಿದ್ದಕ್ಕೆ ಹಿಡಿಶಾಪ ಹಾಕಿಕೊಂಡು ಬಂದದಾರಿಗೆ ಸುಂಕವಿಲ್ಲದಂತೆ ಸಾಗಿದ್ದು ವಿಶೇಷವಾಗಿತ್ತು.
ಹೊಗಳಿಕೆ
ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಬೆರಗಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ೧೭ ಇಲಾಖೆ ಸಚಿವರು ಕಾರಣಕರ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಶಾಸಕ ಬಿ.ಎನ್.ರವಿಕುಮಾರ್ ಮತ್ತು ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು. ಇದನ್ನು ತಲೆಗೆ ಏರಿಸಿ ಕೊಳ್ಳದ ಈ ಈರ್ವರು ಮಂದಸ್ಮಿತ ನಗೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗುವಂತೆ ನೋಡಿಕೊಂಡ ರಲ್ಲದೆ, ಜಿಲ್ಲೆಯ ಗೌರವ ಕಾಪಾಡುವಲ್ಲಿ ಸಂಪೂರ್ಣ ಯಶಸ್ವಿಯಾದರು.