ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಪವರ್‌ಪ್ಲೇನಲ್ಲಿ 35 ವಿಕೆಟ್‌ ಕಿತ್ತು ಮುಂಬೈ ಇಂಡಿಯನ್ಸ್‌ ದಾಖಲೆ ಮುರಿದ ಆರ್‌ಸಿಬಿ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ವಿಶೇಷ ದಾಖಲೆಯನ್ನು ಬರೆದಿದೆ. ಏಕೈಕ ಐಪಿಎಲ್‌ ಸೀಸನ್‌ನ ಪವರ್‌ಪ್ಲೇನಲ್ಲಿ 35 ವಿಕೆಟ್‌ ಕಿತ್ತ ಮೊದಲ ತಂಡ ಎಂಬ ದಾಖಲೆಯನ್ನುಆರ್‌ಸಿಬಿ ಬರೆದಿದೆ. ಆ ಮೂಲಕ 33 ವಿಕೆಟ್‌ ಕಿತ್ತಿದ್ದ ಮುಂಬೈ ಇಂಡಿಯನ್ಸ್‌ ದಾಖಲೆಯನ್ನು ಆರ್‌ಸಿಬಿ ಮುರದಿದೆ.

IPL 2026: ಮುಂಬೈ ಇಂಡಿಯನ್ಸ್‌ ದಾಖಲೆಯನ್ನು ಮುರಿದ ಆರ್‌ಸಿಬಿ!

ಐಪಿಎಲ್‌ ಪವರ್‌ಪ್ಲೇನಲ್ಲಿ ದಾಖಲೆ ಬರೆದ ಆರ್‌ಸಿಬಿ. -

Profile
Ramesh Kote May 31, 2026 11:01 PM

ಅಹಮದಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿ(IPL 2026) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಬೌಲಿಂಗ್‌ನಲ್ಲಿ ಅಪರೂಪದ ದಾಖಲೆಯನ್ನು ಬರೆದಿದೆ. ಐಪಿಎಲ್‌ ಫೈನಲ್‌ ಪಂದ್ಯದ ಪವರ್‌ಪ್ಲೇನಲ್ಲಿ ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಅವರನ್ನು ಔಟ್‌ ಮಾಡುವ ಮೂಲಕ ಆರ್‌ಸಿಬಿ ತಂಡ, ಏಕೈಕ ಐಪಿಎಲ್‌ ಸೀಸನ್‌ನ ಪವರ್‌ಪ್ಲೇನಲ್ಲಿ 35 ವಿಕೆಟ್‌ಗಳನ್ನು ಕಬಳಿಸಿದ ಮೊದಲ ತಂಡ ಎಂಬ ದೊಡ್ಡ ದಾಖಲೆಯನ್ನು ಆರ್‌ಸಿಬಿ ತಂಡ ಬರೆದಿದೆ. ಆ ಮೂಲಕ ಈ ಹಿಂದೆ 2013ರಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ 2023ರಲ್ಲಿ ತನ್ನದೇ ಜಂಟಿ ದಾಖಲೆಯನ್ನು ಬೆಂಗಳೂರು ತಂಡ ಇದೀಗ ಬ್ರೇಕ್‌ ಮಾಡಿದೆ.

ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದ ಗುಜರಾತ್‌ ಟೈಟನ್ಸ್‌ ಇನಿಂಗ್ಸ್‌ ವೇಳೆ ಆರ್‌ಸಿಬಿ ಈ ದಾಖಲೆಯನ್ನು ಬರೆಯಿತು. ಅಂದ ಹಾಗೆ ಆರ್‌ಸಿಬಿಯ ಈ ದಾಖಲೆಯನ್ನು ಮುರಿಯಲು ಗುಜರಾತ್‌ ಟೈಟನ್ಸ್‌ಗೆ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಪಡೆಯಬೇಕಾಗಿತ್ತು. ಆದರೆ, ಆರ್‌ಸಿಬಿ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. 156 ರನ್‌ಗಳ ಚೇಸಿಂಗ್‌ನಲ್ಲಿ ಆರ್‌ಸಿಬಿ ಪವರ್‌ಪ್ಲೇ ಅಂತ್ಯಕ್ಕೆ 70 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಆ ಮೂಲಕ ಜಿಟಿ, ಆರ್‌ಸಿಬಿ ಜೊತೆ ಜಂಟಿ ದಾಖಲೆಯನ್ನು ಹೊಂದಿದೆ.

RCB vs GT ಫೈನಲ್‌ನಲ್ಲಿ ಆಶಿಶ್ ನೆಹ್ರಾರ 'ರಕ್ಷಣಾತ್ಮಕ' ತಂತ್ರದ ವಿರುದ್ಧ ಎಬಿ ಡಿವಿಲಿಯರ್ಸ್ ಆಕ್ರೋಶ!

ಶುಭಮನ್‌ ಗಿಲ್‌ ಮತ್ತು ಸಾಯಿ ಸುದರ್ಶನ್ 2026ರ ಐಪಿಎಲ್‌ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿ ಹೊರಹೊಮ್ಮಿದ್ದರು. ಅವರು ಈಗಾಗಲೇ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು 100ಕ್ಕೂ ಅಧಿಕ ರನ್‌ಗಳ ಜೊತೆಯಾಟಗಳ ದಾಖಲೆಯನ್ನು ನಿರ್ಮಿಸಿದ್ದು, ಒಟ್ಟಾಗಿ 3000 ರನ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಜೋಡಿಯಾಗುವ ಸನಿಹದಲ್ಲಿದ್ದರು.

ಆದರೆ ಫೈನಲ್‌ನಲ್ಲಿ ಮೂರನೇ ಓವರ್‌ನಲ್ಲೇ ಜಿಟಿಗೆ ಮೊದಲ ಆಘಾತ ಎದುರಾಯಿತು. ಜಾಶ್‌ ಹೇಝಲ್‌ವುಡ್‌ ಎಸೆದ ಓವರ್‌ನ ಮೊದಲ ಎಸೆತವನ್ನು ಗಿಲ್ ಮಿಡ್‌ವಿಕೆಟ್ ಕಡೆ ಬೌಂಡರಿಗೆ ಅಟ್ಟಿದರು. ಆದರೆ ಮುಂದಿನ ಎಸೆತವನ್ನು ಹೇಝಲ್‌ವುಡ್ ಅದೇ ರೀತಿ ಇನ್ನಷ್ಟು ವೇಗದ ಶಾರ್ಟ್-ಆಫ್-ಲೆನ್ತ್‌ ಎಸೆತವನ್ನು ಹಾಕಿದರು. ಚೆಂಡು ನಿರೀಕ್ಷೆಗಿಂತ ಹೆಚ್ಚು ಎತ್ತರಕ್ಕೆ ಎದ್ದ ಕಾರಣ ಗಿಲ್ ಟಾಪ್ ಎಡ್ಜ್ ನೀಡಿದರು. ಮಿಡ್‌ಆಫ್‌ನಲ್ಲಿ ನಿಂತಿದ್ದ ಎದುರಾಳಿ ನಾಯಕ ರಜತ್‌ ಸುಲಭ ಕ್ಯಾಚ್ ಪಡೆದು ಜಿಟಿ ನಾಯಕನ ಇನಿಂಗ್ಸ್‌ಗೆ ತೆರೆ ಎಳೆದರು.

IPL 2026: 15ನೇ ವಯಸ್ಸಿನಲ್ಲೇ ಆರೆಂಜ್‌ ಕ್ಯಾಪ್‌ ಗೆದ್ದು ಇತಿಹಾಸ ಸೃಷ್ಟಿಸಿದ ವೈಭವ್‌ ಸೂರ್ಯವಂಶಿ!

ಇದೇ ತಂತ್ರವನ್ನು ಮುಂದುವರಿಸಿದ ಭುವನೇಶ್ವರ್‌ ಕುಮಾರ್‌ ಬಳಿಕ ಸಾಯಿ ಸುದರ್ಶನ್ ವಿಕೆಟ್‌ನ್ನೂ ಕಬಳಿಸಿದರು. ಹೇಝಲ್‌ವುಡ್‌ನಂತೆ ಅವರು ಕೂಡ ಸತತ ಎರಡು ಬೌನ್ಸರ್‌ಗಳನ್ನು ಎಸೆದರು. ಎರಡನೇ ಬೌನ್ಸರ್ ಸುದರ್ಶನ್‌ಗೆ ಅಚ್ಚರಿ ಉಂಟುಮಾಡಿದ್ದು, ಬ್ಯಾಟ್‌ನ ಅಂಚು ತಗುಲಿ ಚೆಂಡು ವಿಕೆಟ್‌ಕೀಪರ್ ಕಡೆಗೆ ಹಾರಿತು. ಜಿತೇಶ್‌ ಶರ್ಮಾ ಯಾವುದೇ ತಪ್ಪು ಮಾಡದೇ ಕ್ಯಾಚ್ ಪಡೆದು ಜಿಟಿಗೆ ಮತ್ತೊಂದು ದೊಡ್ಡ ಹೊಡೆತ ನೀಡಿದರು.

ಶುಭಮನ್‌ ಗಿಲ್‌ ಮತ್ತು ಸಾಯಿ ಸುದರ್ಶನ್‌ ಈ ಸೀಸನ್‌ನಲ್ಲಿ ಪವರ್‌ಪ್ಲೇ ಅವಧಿಯಲ್ಲೇ ಔಟಾಗಿದ್ದು ಕೇವಲ ನಾಲ್ಕು ಬಾರಿ ಮಾತ್ರ. ಅದರಲ್ಲಿ ಮೂರು ಸಂದರ್ಭಗಳಲ್ಲಿ ಅವರನ್ನು ಔಟ್ ಮಾಡಿದ್ದ ತಂಡವೇ ಆರ್‌ಸಿಬಿ. ಈ ಬಾರಿ ಕೂಡ ಆರಂಭದಲ್ಲೇ ಈ ಇಬ್ಬರು ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡ ಪರಿಣಾಮ, ಗುಜರಾತ್‌ ತಂಡ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವಿಫಲವಾಯಿತು. ಪರಿಣಾಮವಾಗಿ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 155/8 ರನ್‌ಗಳಿಗೆ ಸೀಮಿತಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.