Chikkaballapur News: ರೈಲ್ವೇ ಮೇಲ್ಸೇತುವೆ ಮೇಲೆ ಎಲ್‌ಇಡಿ ಲೈಟುಗಳ ಅಳವಡಿಕೆ: ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳಿಗೆ ಕೃತಜ್ಞತೆ
ರೈಲ್ವೆ ಇಲಾಖೆ ಉತ್ತಮ ಗುಣಮಟ್ಟದ ವೈರಿಂಗ್ ಮತ್ತು ಸುಮಾರು ಅರವತ್ತು ಎಲ್‌ಇಡಿ ಲೈಟುಗಳನ್ನು ರೈಲ್ವೇ ಮೇಲುಸೇತುವೆ ಮೇಲೆ ಹೊಸದಾಗಿ ಅಳವಡಿಸಿದ್ದಾರೆ. ಇದರಿಂದಾಗಿ, ರೈಲ್ವೆ ಮೇಲ್ಸೇತುವೆ ಮೇಲೆ ರಾತ್ರಿ ಹೊತ್ತಿನಲ್ಲಿ ಹಾದು ಹೋಗುವ ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಅನುಕೂಲವಾಗಿದೆ.


ಗೌರಿಬಿದನೂರು: ನಗರದ ಮಧುಗಿರಿ ರಸ್ತೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಯ ರೈಲ್ವೆ ಮೇಲುಸೇತುವೆಯ ಮೇಲಿನ ಕಳಪೆ ಎಲ್‌ಇಡಿ ಲೈಟಿಂಗ್ ಕಾರಣ ಸುಮಾರು ತಿಂಗಳು ಗಳಿಂದ ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ಹಾಗೂ ಮುಖ್ಯವಾಗಿ ವಾಹನ ಚಾಲನೆ ಮಾಡುವವರಿಗೆ ತುಂಬಾ ತೊಂದರೆಯಾಗುತ್ತಿತ್ತು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಈ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಆದಷ್ಟು ಬೇಗನೆ ನಿವಾರಿಸ ಬೇಕೆಂದು ಸತತವಾಗಿ ಒತ್ತಡ ಹಾಕಿದ ಪರಿಣಾಮ, ರೈಲ್ವೆ ಇಲಾಖೆ ಉತ್ತಮ ಗುಣಮಟ್ಟದ ವೈರಿಂಗ್ ಮತ್ತು ಸುಮಾರು ಅರವತ್ತು ಎಲ್‌ಇಡಿ ಲೈಟುಗಳನ್ನು ರೈಲ್ವೇ ಮೇಲುಸೇತುವೆ ಮೇಲೆ ಹೊಸದಾಗಿ ಅಳವಡಿಸಿದ್ದಾರೆ. ಇದರಿಂದಾಗಿ, ರೈಲ್ವೆ ಮೇಲ್ಸೇತುವೆ ಮೇಲೆ ರಾತ್ರಿ ಹೊತ್ತಿನಲ್ಲಿ ಹಾದು ಹೋಗುವ ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಅನುಕೂಲವಾಗಿದೆ.
ನನ್ನ ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ನಗರಸಭೆ ಮಾಜಿ ಅಧ್ಯಕ್ಷೆ ಎಸ್.ರೂಪ ಅನಂತರಾಜು ತಿಳಿಸಿದರು.