Gauribidanur News: ಪತ್ರಕರ್ತರು ಸ್ವಾಸ್ಥ್ಯ ಸಮಾಜದ ಪ್ರತಿಬಿಂಬ: ಎಂ.ಎಸ್.ಜಗನ್ನಾಥ್
ಪತ್ರಿಕೋದ್ಯಮವು ಸಮಾಜದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ರಂಗಗಳಿ ಗಿಂತಲೂ ಭಿನ್ನವಾಗಿ ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪತ್ರಕರ್ತರು ಪ್ರಾಣದ ಹಂಗು ತೊರೆದು ಸುದ್ದಿ ಸಂಗ್ರಹಕ್ಕೆ ತೆರಳುವ ಪರಿಸ್ಥಿತಿಗಳೂ ಎದುರಾಗುತ್ತವೆ. ಯಾವುದೇ ಮಾಸಿಕ ವೇತನ ಇಲ್ಲದೆ ನಿಸ್ವಾರ್ಥವಾಗಿ ಶ್ರಮಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ
-
ಗೌರಿಬಿದನೂರು : ನೈಜ ಪತ್ರಕರ್ತರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಜೊತೆಗೆ ನಾಗರೀಕರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಸಮಾಜದ ಪ್ರತಿಬಿಂಬಗಳಾಗಿ ಬದ್ಧತೆಯಿಂದ ಕೆಲಸ ಮಾಡುತ್ತಾರೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎ.ಎಸ್.ಜಗನ್ನಾಥ್ ತಿಳಿಸಿದರು.
ನಗರದ ಲಯನ್ಸ್ ಭವನದಲ್ಲಿ ಬುಧವಾರ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರನ್ನು ಅಭಿನಂದಿಸಿ ಮಾತನಾಡಿದರು.
ಪತ್ರಿಕೋದ್ಯಮವು ಸಮಾಜದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ರಂಗಗಳಿ ಗಿಂತಲೂ ಭಿನ್ನವಾಗಿ ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪತ್ರಕರ್ತರು ಪ್ರಾಣದ ಹಂಗು ತೊರೆದು ಸುದ್ದಿ ಸಂಗ್ರಹಕ್ಕೆ ತೆರಳುವ ಪರಿಸ್ಥಿತಿಗಳೂ ಎದುರಾಗುತ್ತವೆ. ಯಾವುದೇ ಮಾಸಿಕ ವೇತನ ಇಲ್ಲದೆ ನಿಸ್ವಾರ್ಥವಾಗಿ ಶ್ರಮಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಇದನ್ನೂ ಓದಿ: Gauribidanur News: ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ವಿ
ಇದೇ ವೇಳೆ, ಹಿರಿಯ ಪತ್ರಕರ್ತರಾದ ದೇವಿ ಮಂಜುನಾಥ್ ರವರು ಮಾತನಾಡಿ, ಲಯನ್ಸ್ ಸಂಸ್ಥೆಯ ಕಳೆದ 50 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ವಿವಿಧ ಕ್ಷೇತ್ರದಲ್ಲಿ ಜನರ ಸೇವೆ ಮಾಡುತ್ತಾ ಬಂದಿದೆ. ಕಣ್ಣಿನ ತಪಾಸಣಾ ಶಿಬಿರ, ರಕ್ತದಾನ, ಪರಿಸರ ಸಂರಕ್ಷಣೆ, ಶೈಕ್ಷಣಿಕ ಸಹಕಾರ, ಹಸಿವು ನಿವಾರಣೆ ಸೇರಿದಂತೆ ಇತರ ಸಮಾಜಮುಖಿ ಕಾರ್ಯಗಳ ಮೂಲಕ ಸಂಸ್ಥೆಯು ಜನಮನ್ನಣೆ ಪಡೆದಿದೆ. ಇಂತಹ ಸಂಸ್ಥೆಯು ಸ್ಥಳೀಯ ಪತ್ರಕರ್ತರ ಸೇವೆ ಯನ್ನು ಗುರ್ತಿಸಿ ಅಭಿನಂಧಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಜಿ.ಎನ್.ಅಶ್ವತ್ಥನಾರಾಯಣ, ಕೆ.ಎನ್.ನರಸಿಂಹಮೂರ್ತಿ, ಆರ್.ಮಂಜುನಾಥ್, ಜಿ.ಎ.ಪ್ರದೀಪ್, ಟಿ.ವಿ.ಮಂಜುನಾಥ್, ಲಯನ್ಸ್ ಟ್ರಸ್ಟ್ ನ ಅಧ್ಯಕ್ಷರಾದ ಇ.ಎಸ್.ಸತೀಶ್ ಕುಮಾರ್, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಆರ್.ಚಂದ್ರಮೌಳಿ, ಖಜಾಂಚಿ ಅಂಬಿಕಾ ರವಿಶಂಕರ್, ಉಪಾಧ್ಯಕ್ಷೆ ಎನ್.ಲಕ್ಷ್ಮಿ ಸದಸ್ಯರಾದ ಆರ್.ಜೆ.ಶ್ರೇಣಿಕ್, ಎಚ್.ಆರ್. ಗೋವಿಂದರಾಜು, ಜಿ.ಎನ್.ಸೂರಜ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಲಯನ್ಸ್ ಸಂಸ್ಥೆಯ ಸೇವೆ ಅಗ್ರಗಣ್ಯ
ಲಯನ್ಸ್ ಸಂಸ್ಥೆ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಕಳೆದ 50 ವರ್ಷಗಳಿಂದಲೂ ನಿರಂತರವಾಗಿ ಸಾಮಾಜಿಕ ಕಳಕಳಿ ಮತ್ತು ಬದ್ದತೆಯೊಂದಿಗೆ ಕಣ್ಣಿನ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಪಶು ವೈದ್ಯಕೀಯ ತಪಾಸಣಾ ಶಿಬಿರ, ಹಸಿವು ನಿವಾರಣಾ ಕಾರ್ಯ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸೇವೆಗಳನ್ನು ಮಾಡಿಕೊಂಡು ಬರುತ್ತಿದೆ.
ನಗರದ ಮುನೇಶ್ವರ ಬಡಾವಣೆಯಲ್ಲಿ ಸಂಸ್ಥೆಯು ಸ್ವಂತ ಕಣ್ಣಿನ ತಪಾಸಣಾ ಕೇಂದ್ರ ಹೊಂದಿದ್ದು, ಇದರಲ್ಲಿ ಪ್ರತೀ ತಿಂಗಳ ಮೊದಲನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಕಣ್ಣಿನ ತಪಾಸಣಾ ಶಿಬಿರ ಹಾಗೂ ಎರಡನೇ ಭಾನುವಾರ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಉಚಿತವಾಗಿ ನಡೆಸುತ್ತಿದೆ.
ಜೊತೆಗೆ ಡಯಾಗ್ನೋಸ್ಟಿಕ್ ಲ್ಯಾಬ್ ಸೆಂಟರ್ ನ್ನು ಒಳಗೊಂಡಿದ್ದು, ರಿಯಾಯಿತಿ ದರದಲ್ಲಿ ಜನರಿಗೆ ಸೇವೆಯನ್ನು ನೀಡುತ್ತಿದೆ. ಪರಿಸರ ಸಂರಕ್ಷಣಾ ದೃಷ್ಟಿಯಿಂದ ಪ್ರತೀ ವರ್ಷ ಬೃಹತ್ ವನಮಹೋ ತ್ಸವ ಕಾರ್ಯ ಮಾಡುತ್ತಿದೆ. ಇದಲ್ಲದೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಸ್ಥೆ ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಎಸ್.ಜಗನ್ನಾಥ್ ತಿಳಿಸಿದರು.