ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೃದಯದ ಬಡಿತ ತಪ್ಪದಿರಲಿ, ಆರೋಗ್ಯದ ಹೆಜ್ಜೆ ನಿಲ್ಲದಿರಲಿ: ವಿಶ್ವ ಹೃದಯ ದಿನ: ಆರೋಗ್ಯಕರ ಜೀವನಶೈಲಿಗೆ ಒತ್ತು

ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯ ಸೇರಿದಂತೆ ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ, ಧೂಮಪಾನ, ಮದ್ಯಪಾನ, ಅಧಿಕ ತೂಕ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಪ್ರಮುಖ ಕಾರಣಗಳಾಗಿವೆ.

ವಿಶ್ವ ಹೃದಯ ದಿನ: ಆರೋಗ್ಯಕರ ಜೀವನಶೈಲಿಗೆ ಒತ್ತು

-

Profile
Ashok Nayak Sep 28, 2026 9:19 PM

ಚಿಕ್ಕಬಳ್ಳಾಪುರ: “ಹೃದಯದ ಬಡಿತ ತಪ್ಪದಿರಲಿ, ಆರೋಗ್ಯದ ಹೆಜ್ಜೆ ನಿಲ್ಲದಿರಲಿ” ಎಂಬ ಘೋಷ ವಾಕ್ಯದೊಂದಿಗೆ ಸೆ.29ರಂದು ವಿಶ್ವ ಹೃದಯ ದಿನ(World Heart Day) ಆಚರಿಸಲಾಗುತ್ತಿದ್ದು, ಹೃದಯದ ಆರೋಗ್ಯದ ಮಹತ್ವ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚೇತನ್ ತಿಳಿಸಿದ್ದಾರೆ.

ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯ ಸೇರಿದಂತೆ ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ, ಧೂಮಪಾನ, ಮದ್ಯಪಾನ, ಅಧಿಕ ತೂಕ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: Chikkaballapur News: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ: ಜಿಲ್ಲೆಯಲ್ಲಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ: 25,584 ಮತದಾರರು; ಸೆ.29ಕ್ಕೆ ಅಧಿಸೂಚನೆ, ಅ.23ರಂದು ಮತದಾನ

ಹೃದಯದ ಆರೋಗ್ಯಕ್ಕಾಗಿ ತರಕಾರಿ, ಹಣ್ಣು, ಸೊಪ್ಪು, ಬೇಳೆಕಾಳು, ಸಂಪೂರ್ಣ ಧಾನ್ಯ ಹಾಗೂ ನಾರಿನಾಂಶವಿರುವ ಆಹಾರ ಸೇವಿಸಬೇಕು. ಉಪ್ಪು, ಸಕ್ಕರೆ, ಹೆಚ್ಚು ಕೊಬ್ಬಿನ ಮತ್ತು ಸಂಸ್ಕರಿಸಿದ ಆಹಾರವನ್ನು ಮಿತಿಗೊಳಿಸಬೇಕು. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಅಥವಾ ವೇಗದ ನಡಿಗೆಯಲ್ಲಿ ತೊಡಗಿಕೊಳ್ಳಬೇಕು. ಧೂಮಪಾನ ಹಾಗೂ ತಂಬಾಕು ಸೇವನೆ ತ್ಯಜಿಸಿ, ಆರೋಗ್ಯಕರ ತೂಕ ಕಾಪಾಡಿಕೊಳ್ಳಬೇಕು.

ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್‌ನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು. ಎದೆ ನೋವು ಅಥವಾ ಬಿಗಿತ, ಉಸಿರಾಟದ ತೊಂದರೆ, ಅತಿಯಾದ ಬೆವರು, ತಲೆಸುತ್ತು, ವಾಕರಿಕೆ ಸೇರಿದಂತೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಡಮಾಡದೆ ತುರ್ತು ವೈದ್ಯಕೀಯ ನೆರವು ಪಡೆಯಬೇಕು ಅಥವಾ ಕರೆ ಮಾಡಬಹುದು ಎಂದು ಹೃದಯ ತಜ್ಞ ಡಾ.ಚೇತನ್  ತಿಳಿಸಿದ್ದಾರೆ.