Chikkaballapur News: ವೃತ್ತಿಪರ ನೈತಿಕತೆ ಕಾಪಾಡಿಕೊಂಡ ವಕೀಲರು ಸಮಾಜಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗುತ್ತಾರೆ: ನ್ಯಾ.ಬಿ.ಶಿಲ್ಪ
ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಶಿಲ್ಪ ಮಾತನಾಡಿ, ವಕೀಲಿ ವೃತ್ತಿ ಕೇವಲ ಒಂದು ಉದ್ಯೋಗ ವಲ್ಲ, ಇದು ಸಮಾಜಕ್ಕೆ ಸಲ್ಲಿಸುವ ದೊಡ್ಡ ಸೇವೆ. ಕಾನೂನು ವಿದ್ಯಾರ್ಥಿಗಳಿಗೆ ಕಾನೂನಿನ ರಕ್ಷಣೆ ಜತೆಗೆ ಕಾನೂನಿನ ಅರಿವು ಹಾಗೂ ನೆರವು ನೀಡುವುದರ ಬಗ್ಗೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು
ವೃತ್ತಿಪರ ನೈತಿಕತೆಯನ್ನು ಕಾಪಾಡಿಕೊಂಡಿ ಕೆಲಸ ಮಾಡುವ ವಕೀಲರು ಸಮಾಜಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗುತ್ತಾರೆ ಎಂದು ನ್ಯಾ.ಬಿ.ಶಿಲ್ಪ ಅಭಿಪ್ರಾಯಪಟ್ಟರು. -
ಚಿಕ್ಕಬಳ್ಳಾಪುರ: ವಕೀಲರು ಪ್ರಜಾಪ್ರಭುತ್ವದ ಪ್ರಮುಖ ಸ್ತಂಭವಾದ ನ್ಯಾಯಾಂಗವು, ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ತನ್ನ ಕಾಯಕದಲ್ಲಿ ಬಡವರು, ಮಹಿಳೆಯರು, ಶೋಷಿತರು,ಹಾಗೂ ನಿರ್ಗತಿಕರಿಗೆ ನ್ಯಾಯ ದೊರಕಿಸಿಕೊಡಲು ಸೇತುವೆಯಾಗಿ ಕೆಲಸ ಮಾಡಬೇಕು. ಸತ್ಯ ನಿಷ್ಠೆ ಪ್ರಾಮಾ ಣಿಕತೆ ಮತ್ತು ವೃತ್ತಿಪರ ನೈತಿಕತೆ ಕಾಪಾಡಿಕೊಂಡು ಕೆಲಸ ಮಾಡುವ ವಕೀಲರು ಸಮಾಜದಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಬಿ.ಶಿಲ್ಪ ತಿಳಿಸಿದರು.
ನಗರದ ಶ್ರೀ ಸಿದ್ದರಾಮಯ್ಯ ಕಾಲೇಜು ಕಾನೂನು ಮಹಾ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಸತ್ಯಸಾಯಿ ಆಸ್ಪತ್ರೆ ಬಳಿ ನಿರ್ಮಾಣವಾಗಲಿರುವ ಪ್ರಯಾಣಿಕರ ತಂಗುದಾಣ ಅಧಿಕಾರಿಗಳಿಂದ ತಡೆ
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಶಿಲ್ಪ ಮಾತನಾಡಿ, ವಕೀಲಿ ವೃತ್ತಿ ಕೇವಲ ಒಂದು ಉದ್ಯೋಗವಲ್ಲ, ಇದು ಸಮಾಜಕ್ಕೆ ಸಲ್ಲಿಸುವ ದೊಡ್ಡ ಸೇವೆ. ಕಾನೂನು ವಿದ್ಯಾರ್ಥಿಗಳಿಗೆ ಕಾನೂನಿನ ರಕ್ಷಣೆ ಜತೆಗೆ ಕಾನೂನಿನ ಅರಿವು ಹಾಗೂ ನೆರವು ನೀಡುವುದರ ಬಗ್ಗೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ವಕೀಲರ ಸಂಘ ಚಿಕ್ಕಬಳ್ಳಾಪುರ ಅಧ್ಯಕ್ಷರಾದ ಅಭಿಲಾಶ್ ಮಾತನಾಡಿ, ವಕೀಲಿಕೆ ಎಂಬುವುದು ಸಮಾಜದ ಸೈನಿಕರಂತೆ ಶಿಸ್ತಿನಿಂದ ಅಭ್ಯಾಸ ಮಾಡಿದಲ್ಲಿ ಉತ್ತಮ ಭವಿಷ್ಯ ನಿಮ್ಮದಾಗಲಿದೆ ಎಂದು ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಇದೇ ವೇಳೆ, ವಿದ್ಯಾರ್ಥಿಗಳಿಗೆ ವಕೀಲರ ವೃತ್ತಿಯ ವೃತ್ತಿ ಪರ ಮೌಲ್ಯಗಳ ಬಗ್ಗೆ ವಿಷದವಾಗಿ ತಿಳಿಸಲಾಯಿತು.
ಶ್ರೀಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯ ಕಾಲೇಜಿನ ಆಡಳಿತಾಧಿಕಾರಿ ಡಾ. ಶಿವಜ್ಯೋತಿ ಕಾರ್ಯಕ್ರಮದ ಬ್ಗೆ ಕುರಿತು ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮವಾದಂತಹ ಕೊಡುಗೆ ನೀಡುವುದು ಕಾನೂನು ಪದವಿಯ ಪ್ರಮುಖ ಧ್ಯೇಯವಾಗಿರುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ಶ್ರೀಚಚನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯ, ಪವನ್ ಕುಮಾರ್ ಬೋಧಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.