ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಬಿ-ಜಿ ರಾಮ್ ಜಿ ವಿರುದ್ದ ಸಚಿವ ಡಾ.ಎಂ.ಸಿ.ಸುಧಾಕರ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತಾ ವಾಗ್ದಾಳಿ

ಪ್ರಧಾನಿ ಮೋದಿ ಸರ್ಕಾರ ಆರ್‌ಎಸ್‌ಎಸ್‌ನ ಅಣತಿಯಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಗ್ರಾಮಪಂಚಾಯಿತಿಗಳ ಸ್ವಾಯತ್ತತೆಗೆ ಸಿಡಿಲು ಬಡಿಯುವಂತೆ ಮಾಡಿದೆ.ಎಲ್ಲಕ್ಕೂ ಹಿಂದಿ ಪದ ಬಳಕೆ ಮೋದಿ ಸರಕಾರದ ಹೆಗ್ಗಳಿಗೆ. ವಿಬಿ-ಜಿ ರಾಮ್‌ಜಿ(VB-G Ramji) ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ

ವಿಬಿ-ಜಿ ರಾಮ್ ಜಿ ವಿರುದ್ದ ಸಚಿವ ಡಾ.ಎಂ.ಸಿ.ಸುಧಾಕರ್ ವಾಗ್ದಾಳಿ

ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು. -

Ashok Nayak
Ashok Nayak Jan 10, 2026 10:29 PM

ಚಿಕ್ಕಬಳ್ಳಾಪುರ : ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ವಿಕಸಿತ್ ಭಾರತ್ ಗ್ಯಾರೆಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ ಬಿಲ್(ವಿಬಿ-ಜಿರಾಮ್‌ಜಿ) ಹಳ್ಳಿಗಳ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Higher Education and District In-charge Minister Dr. M.C. Sudhakar) ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನರೇಗಾ ಬಚಾವೋ  ಸಂಗ್ರಾಮ ಕಾರ್ಯ ಕ್ರಮದ ಅಡಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿ ಸರ್ಕಾರ ಆರ್‌ಎಸ್‌ಎಸ್‌ನ ಅಣತಿಯಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಗ್ರಾಮಪಂಚಾಯಿತಿಗಳ ಸ್ವಾಯತ್ತತೆಗೆ ಸಿಡಿಲು ಬಡಿಯುವಂತೆ ಮಾಡಿದೆ.ಎಲ್ಲಕ್ಕೂ ಹಿಂದಿ ಪದ ಬಳಕೆ ಮೋದಿ ಸರಕಾರದ ಹೆಗ್ಗಳಿಗೆ. ವಿಬಿ-ಜಿ ರಾಮ್‌ಜಿ(VB-G Ramji) ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ. ಭಾರತೀಯರ ಅಭಿಪ್ರಾಯ ಪಡೆಯದೆ ನೇರವಾಗಿ ಹೊಸ ಕಾಯ್ದೆ ಜಾರಿ ಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.  

ಇದನ್ನೂ ಓದಿ: VB Ji Ram Ji Yojana: ಭ್ರಷ್ಟಾಚಾರ ಅಂತ್ಯ ಮಾಡಿದ ವಿಬಿ ಜಿ ರಾಮ್ ಜಿ ಯೋಜನೆ, ಪಾರದರ್ಶಕತೆ ಹೆಚ್ಚಳ: ಸಂಸದ ಡಾ.ಕೆ.ಸುಧಾಕರ್

ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು ಮೊದಲಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಜನರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಕಾರ್ಯವನ್ನು ಮಾಡಿತ್ತು. ಮೋದಿ ಸರ್ಕಾರ ಡಿಸೆಂಬರ್ ೧೭ರಂದು ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಡಿ.೧೮ರಂದು ಅಂಗೀಕಾರ ಪಡೆದಿದೆ. ಸುಮಾರು ೧೨.೧೬ ಕೋಟಿ ನರೇಗಾ ಕಾರ್ಮಿಕರು ದೇಶದಲ್ಲಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳೆಯರು ಇದ್ದಾರೆ. ಪ.ಜಾತಿಯವರು ಶೇ.17, ಪ.ವರ್ಗ ಶೇ. 11 ಇದ್ದಾರೆ ಎಂದರು.

ನಮ್ಮ ರಾಜ್ಯದಲ್ಲಿ 71.18 ಲಕ್ಷ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 36.75 ಲಕ್ಷ ಮಹಿಳೆಯರು, ಅಂದರೆ ಶೇ.51.6ಮಹಿಳೆಯರಿದ್ದಾರೆ. ಇವರಿಗೆಲ್ಲಾ ಈ ಕಾಯ್ದೆಯಿಂದ ಸಮಸ್ಯೆ ಆಗಲಿದೆ ಎಂದರು.

ಮನಮೋಹನ್ ಸಿಂಗ್(Manmohan Singh) ಅವರ ಜನಪರ ಕಾಯ್ದೆಯನ್ನು ಹಿಂಪಡೆದುಕೊಳ್ಳುವ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ನರೇಗಾ ಕಾಯ್ದೆ ಪ್ರಕಾರ ಜನಸಾಮಾನ್ಯರು, ಕೂಲಿ ಕಾರ್ಮಿಕರು, ಕೃಷಿ ಕಾರ್ಯಗಳ ಜೊತೆಯಲ್ಲಿ ತಾವಿದ್ದ ಸ್ಥಳದಲ್ಲೇ ನರೇಗಾ ಅಡಿ ಕೂಲಿ ಕೆಲಸ ಮಾಡಲು ಅವಕಾಶವಿತ್ತು. ಆ ಮೂಲಕ ಹಳ್ಳಿಗಾಡಿನ ಆರ್ಥಿಕತೆ ಕಟ್ಟಲು ಸಾಧ್ಯವಾಗಿತ್ತು. ಸ್ಥಳೀಯವಾಗಿ ಆಸ್ತಿ ಸೃಜನೆಯಾಗು ತ್ತಿತ್ತು. ಉದ್ಯೋಗ ಕೇಳಿ ಪಡೆಯುವ ಹಕ್ಕು ಜನರಿಗಿತ್ತು. ಈಗ ಇದ್ಯಾವುದೂ ಇಲ್ಲವಾಗಿದೆ ಎಂದರು.  

ವರ್ಷದ ಯಾವುದೇ ಅವಧಿಯಲ್ಲಿ ಲಭ್ಯವಾಗುತ್ತಿದ್ದ ಕೂಲಿ ಕೆಲಸವನ್ನು ಈಗ ನಿರ್ಬಂಧಿಸ ಲಾಗಿದ್ದು, ಕೃಷಿ ಚಟುವಟಿಕೆ ಅವಧಿಯ 60 ದಿನ ಯೋಜನೆಯಡಿ ಯಾವುದೇ ಉದ್ಯೋಗ ನೀಡ ಲಾಗುವುದಿಲ್ಲ. ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹಣವನ್ನು ಸರಿದೂಗಿಸುವ ಅವಕಾಶವನ್ನು ತೆಗೆದು ಹಾಕಲಾಗಿದೆ. ಹಿಂದಿನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿತ್ತು. ಹೊಸ ಕಾಯ್ದೆ ಪ್ರಕಾರ ಶೇ.60ರಷ್ಟು ಕೇಂದ್ರ ಹಾಗೂ ಶೇ.40ರಷ್ಟು ರಾಜ್ಯ ಸರ್ಕಾರ ಭರಿಸಲಿದೆ. ಇದು ರಾಜ್ಯಗಳ ಮೇಲೆ ಹೆಚ್ಚಿನ ಹಣಕಾಸು ಹೊರೆಯನ್ನು ಹೇರಲಿದ್ದು, ಇದು ಸಂವಿಧಾನದ ಆರ್ಟಿಕಲ್ 258 ಮತ್ತು 280ಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಲ್ನೋಟಕ್ಕೆ 125 ದಿನ ಕೆಲಸ  ನೀಡುವುದು ಎಂದಿದ್ದರೂ , ನಿರ್ದಿಷ್ಟವಾಗಿ ಆಗುವಂತಿಲ್ಲ. ಇದಕ್ಕೆ ಹಣವೆಲ್ಲಿದೆ? ಶೇ.೪೦% ರಷ್ಟು ಅನುದಾನವನ್ನು  ರಾಜ್ಯ ಸರ್ಕಾರ ಭರಿಸಬೇಕಿದೆ. ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳುವಂತಿದ್ದರೆ ಸಂಬಂಧಪಟ್ಟ ರಾಜ್ಯಗಳೊಂದಿಗೆ ಚರ್ಚೆ ಮಾಡಬೇಕು. ಆದರೆ ಹಾಗೆ ಆಗಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸುಗಳು ಅನುಷ್ಠಾನಕ್ಕೆ ಬಂದ ನಂತರ ಇದನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತಾ(AICC Secretary Abhishek Dutta) ಮಾತನಾಡಿ, ಯುಪಿಎ ಅವಧಿ(UPA term) ಯಲ್ಲಿ ಮನರೆಗಾ ಸ್ಕೀಂ(MNREGA Scheme) ಜಾರಿಗೊಳಿಸುವ ಸಂದರ್ಭದಲ್ಲಿ 140 ದಿನಗಳ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆದೇ ಜಾರಿ ಮಾಡಲಾಯಿತು. ಈ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳ ಲಾಯಿತು. ಆದರೆ ಬಿಜೆಪಿ ವಿಬಿ ಜಿರಾಮ್‌ಜಿ ಡಿಸೆಂಬರ್ 12ರಂದು ಬಿಲ್ಲನ್ನು ಮಂಡಿಸುತ್ತದೆ. 3 ದಿನಗಳಲ್ಲಿ ಪಾಸು ಮಾಡುತ್ತದೆ. 12 ಕೋಟಿ ಜನರ ಜೀವನಕ್ಕೆ ಆಧಾರವಾಗಿದ್ದ ಯೋಜನೆಯನ್ನು ಹೀಗೆ ಜಾರಿಮಾಡುತ್ತಾರೆ ಎಂಬುದೇ ಆಶ್ಚರ್ಯ ತಂದಿದೆ. ರೈತರ ಹೋರಾಟವನ್ನು ಹತ್ತಿಕ್ಕಿದ ರೀತಿಯಲ್ಲಿಯೇ ಕಾರ್ಮಿಕರ ಗ್ರಾಮೀಣರ ಹಕ್ಕುಗಳನ್ನು ಹತ್ತಿಕ್ಕಲು ಹೊರಟಿದೆ.ಇದರ ವಿರುದ್ಧ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮನರೇಗಾ ಬಚಾವ್ ಹೋರಾಟ ರೂಪಿಸಲಿದ್ದೇವೆ ಎಂದರು.

ಮಹಾತ್ಮಾ ಗಾಂಧೀಜಿಯವನ್ನು ಗೋಡ್ಸೆ ಕೊಂದರೆ ಅವರ ವಿಚಾರಧಾರೆಗಳನ್ನು ಮೋದಿ ಸರಕಾರ ಕೊಲ್ಲಲು ಹೊರಟಿದೆ. ವಿಕಸಿತ್ ಭಾರತ್ ಗ್ಯಾರೆಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ ಬಿಲ್ ವಿರುದ್ಧ ಕಾಂಗ್ರೆಸ್ ಪಕ್ಷವು ಸಂಘಟಿತ ಹೋರಾಟ ಮಾಡಲಿದೆ. ಹೊಸ ಬಿಲ್ ಮೂಲಕ ಗ್ರಾಮೀಣ ಜನರ ಜೀವನೋಪಾಯ ಕಸಿಯಲಾಗುತ್ತಿದೆ. ಇದರ ವಿರುದ್ಧ ದೇಶದಾದ್ಯಂತ ರೈತರು ಗ್ರಾಮೀಣರು ಕಾರ್ಮಿಕರ ಜತೆಗೆ ಹೋರಾಟ ಕಟ್ಟಲಿದ್ದೇವೆ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿರದ ಕೇಂದ್ರ ಸರಕಾರವು ರಾಜ್ಯ ಸರ್ಕಾರಳೊಟ್ಟಿಗೆ ಕನಿಷ್ಟ ಚರ್ಚೆ ಮಾಡದೆ, ಜೊತೆ ಚರ್ಚೆ, ರಾಜ್ಯಗಳ ಆಯವ್ಯಯದ ಮೇಲೆ ಹೆಚ್ಚಿನ ಹೊರೆಯನ್ನು ಸಂವಿಧಾನ ಬಾಹಿರವಾಗಿ ಹೇರಲಾಗುತ್ತಿದೆ. ಹೊಸ ಕಾಯ್ದೆಯಿಂದ ನಿರುದ್ಯೋಗ ಹೆಚ್ಚಳ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ, ದಲಿತ ಹಾಗೂ ಆದಿವಾಸಿ ಕುಟುಂಬಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿ, ಗ್ರಾಮೀಣ ಜೀವನೋಪಾಯಗಳ ಕುಸಿತದಿಂದ ಗ್ರಾಮೀಣ ಬದುಕು ದುಸ್ತರಗೊಳ್ಳಲಿದೆ. ಪಂಚಾಯಿತಿಗಳು ಕೇವಲ ಅನುಷ್ಠಾನ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸು ವಂತಾಗುತ್ತದೆ. ಈ ಮೂಲಕ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.  
ಶಾಸಕ ಕೆ.ಪಿ.ಪುಟ್ಟಸ್ವಾಮಿ ಗೌಡ(MLA KP Puttaswamy Gowda) ಮಾತನಾಡಿ, 20 ವರ್ಷಗಳ ಕಾಲ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಮನರೇಗಾ ಕ್ರಾಂತಿಕಾರಿಯಾದ ಯೋಜನೆಯಾಗಿತ್ತು. ಬಡವರ ಆರ್ಥಿಕಾಭಿವೃದ್ದಿಗೆ ಮುನ್ನುಡಿ ಬರೆದಿದ್ದ ಯೋಜನೆಯನ್ನು ಈಗ ರದ್ದುಪಡಿಸಲಾಗಿದೆ. ಇನ್ಮುಂದೆ ರಾಜ್ಯ ಸರಕಾರದ ತೆರಿಗೆ ಮೂಲಕ ಈ ಯೋಜನೆ ಸಾಗಬೇಕಿರುವುದರಿಂದ ದೀರ್ಘಕಾಲ ನಡೆಯಲಿದೆ ಎಂಬ ನಂಬಿಕೆಯಿಲ್ಲ. ಆ ಮೂಲಕ ಗ್ರಾಮೀಣರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳ ಲಾಗಿದೆ. ಸ್ಥಳೀಯ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ. ಹೀಗಾಗಿ ಕೇಂದ್ರದ ಬಿಜೆಪಿ ಸರಕಾರ ಗ್ರಾಮೀಣ ವಿರೋಧಿ ಸರಕಾರವಾಗಿದೆ.ಜತೆಗೆ ರಾಜ್ಯಗಳ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳಲಿದೆ.ಇದರ ವಿರುದ್ಧ ಹೋರಾಟ ಅಗತ್ಯ ಎಂದು ಹೇಳಿದರು.

ಮಹಾತ್ಮಾಗಾಂಧೀಜಿ ಅವರ ಸ್ವಾತಂತ್ರ್ಯ ಚಳವಳಿಯಲ್ಲಿ ಸ್ವಂತ ಸುಖವನ್ನು ತ್ಯಜಿಸಿ ಇಡೀ ರಾಷ್ಟç ತಿರುಗಾಡಿ ಅಹಿಂಸೆಯ ಮೂಲಕ ಸ್ವಾತಂತ್ಯ ಗಳಿಸಿಕೊಟ್ಟ ತ್ಯಾಗಜೀವಿಯ ಹೆಸರನ್ನು ಬದಲಾಯಿಸಿರುವುದು ಅಮಾನವೀಯ ನಡೆವಳಿಕೆ.ಯಾವುದೇ ಸರಕಾರ ಸಮಾಜಗಳೂ ಕೂಡ ಮಹಾತ್ಮಾಗಾಂಧೀಜಿ ಹೆಸರನ್ನು ಕೂಡ ಮರೆಯುವಂತೆ ಮಾಡಲು ತೊಡಗಿವೆ. ಓಟ್‌ಗಾಗಿ ಪ್ರಬಲ ಜಾತಿಗಳ ಹೆಸರನ್ನು ಇಡಲು ಹೊರಡುವುದು ಕೂಡ ಸರ್ವಥಾ ಸರಿಯಲ್ಲ.ವೈಯಕ್ತಿಕವಾಗಿ ನಾನು ಖಂಡಿಸುತ್ತೇನೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಡಾ.ಎಂ.ಶಿವಾನಂದ್,  ಅನಸೂಯಮ್ಮ, ನಿಗಮ ಮಂಡಳಿಗಳ ಅಧ್ಯಕ್ಷರಾದ ಎನ್.ಹೆಚ್.ಶಿವಶಂಕರರೆಡ್ಡಿ, ಎಂ.ಆAಜಿನಪ್ಪ, ಎನ್.ಸಂಪೆAಗಿ, ಮುದ್ದುಗಂಗಾಧರ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ.ಎನ್.ಕೇಸವರೆಡ್ಡಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್,ರಕ್ಷಿತ್ ರೆಡ್ಡಿ, ಮುಖಂಡರಾದ ಎಸ್.ಎಂ.ರಫೀಕ್, ಕೋನಪಲ್ಲಿ ಕೋದಂಡ,  ಸುರೇಶ್, ಜಾತವಾರ ರಾಮಕೃಷ್ಣಪ್ಪ, ಪಟ್ರೇನಹಳ್ಳಿ ಕೃಷ್ಣ, ಮತ್ತಿತರರು ಇದ್ದರು.

*
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ,ಕಳೆದ ೧೧ ವರ್ಷಗಳ ಕೇಂದ್ರ ಸರ್ಕಾರದ ಸಾಧನೆ ಅಂದರೆ ಯೋಜನೆಗಳ ಹೆಸರು ಬದಲಾಯಿಸಿರುವುದು ಮಾತ್ರ. ಹಿಂದೆ ಜಾರಿಯಲ್ಲಿದ್ದ ಸುಮಾರು 30 ಯೋಜನೆಗಳ ಹೆಸರು ಬದಲಾವಣೆ ಅಥವಾ ಕಾಯ್ದೆಗಳನ್ನು ಹಿಂತೆಗೆದು ಕೊಳ್ಳುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ. ಇದರ ಮಾಹಿತಿ ಬೇಕಿದ್ದರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ವೆಬ್ ಸೈಟ್ ನೋಡಿದರೆ ಮಾಹಿತಿ ದೊರೆಯಲಿದೆ. ಪ್ರಸ್ತುತ ಕೇಂದ್ರ ಸರಕಾರವು ಜಾರಿ ಮಾಡಿರುವ  ಕಾಯ್ದೆಯಡಿ 100 ದಿನ ಕನಿಷ್ಟ ಕೆಲಸ ನೀಡಬೇಕಾಗಿತ್ತು.  ಅವರು ಎಲ್ಲಿ ವಾಸಿಸುತ್ತಾರೋ ಅಲ್ಲಿಯೇ ಕೆಲಸ ನೀಡಬೇಕಾಗಿತ್ತು. ಈಗ ಹೊಸ ಕಾಯ್ದೆ ಸೆಕ್ಷನ್ 5(1) ಪ್ರಕಾರ ಸರ್ಕಾರ ಅಧಿಸೂಚಿತ ಪ್ರದೇಶದಲ್ಲಿ ಮಾತ್ರ ಉದ್ಯೋಗ ನೀಡಲಾಗುತ್ತದೆ. ಉದ್ಯೋಗ ದೊರೆಯುವ ಬಗ್ಗೆ ಯಾವುದೇ ಗ್ರಾಮ ಪಂಚಾಯತ್‌ಗಳಿಗೂ ಖಾತ್ರಿಯಿರುವುದಿಲ್ಲ ಎಂದರು.