ನ.30ರಂದು ಪಟ್ಟಣದಲ್ಲಿ ನಡೆಯುವ ಕರ್ನಾಟಕ ಮಾದಾರ ಮಹಾ ಸಭೆಗೆ ಸಚಿವ ಕೆ.ಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ಎ.ನಾರಾಯಣಸ್ವಾಮಿ ಭೇಟಿ
ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಮಾದಿಗ ಸಮುದಾಯದ ಬಂಧುಗಳು ಏನೇ ಕೆಲಸ ಇದ್ದರೂ ಅದನ್ನು ಬದಿಗೊತ್ತಿ ನಮ್ಮ ಸಮಾಜದ ಸಚಿವರಾದ ಕೆ.ಹೆಚ್.ಮುನಿಯಪ್ಪ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ ಹಾಗೂ ಎಲ್ಲಾ ಪಕ್ಷಗಳ ನಾಯಕರು ಆಗಮಿಸಲಿದ್ದು ಕರ್ನಾಟಕ ಮಾದಾರ ಮಹಾ ಸಭೆ ಹಾಗೂ ಸದಸ್ಯತ್ವ ದ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ
ಚೇಳೂರು ಪಟ್ಟಣದಲ್ಲಿ ಮಾದಾರ ಮಹಾ ಸಭೆಗೆ ಆಹ್ವಾನ ನೀಡುತ್ತಿರುವ ಸಮಾಜದ ಮುಖಂಡರು. -
ಬಾಗೇಪಲ್ಲಿ: ಕರ್ನಾಟಕ ಮಾದಾರ ಮಹಾಸಭೆಯ ಅಭಿವೃದ್ದಿಗಾಗಿ ಹಾಗೂ ಸದಸ್ಯತ್ವ ನೋಂದಣಿ ಗಾಗಿ ಹಾಲಿ ಸಚಿವ ಕೆ.ಚ್.ಮುನಿಯಪ್ಪ (K.H.Muniyappa) ಮಾಜಿ ಸಚಿವ ಎ.ನಾರಾಯಣಸ್ವಾಮಿ( Former Minister A. Narayanaswamy) ಅವರು ದಿ.೩೦ ಭಾನುವಾರ ಪಟ್ಟಣದ ಗಿರಿಜಾ ಕಲ್ಯಾಣ ಮಂಟದಲ್ಲಿ ಸಮಯ ೨ ಗಂಟೆಗೆ ಆಗಮಿಸಲಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎ.ವಿ. ಪೂಜಪ್ಪ ತಿಳಿಸಿದ್ದಾರೆ.
ಅವರು ಚೇಳೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಮಾದಿಗ ಸಮುದಾಯದ ಬಂಧುಗಳು ಏನೇ ಕೆಲಸ ಇದ್ದರೂ ಅದನ್ನು ಬದಿಗೊತ್ತಿ ನಮ್ಮ ಸಮಾಜದ ಸಚಿವರಾದ ಕೆ.ಹೆಚ್.ಮುನಿಯಪ್ಪ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ ಹಾಗೂ ಎಲ್ಲಾ ಪಕ್ಷಗಳ ನಾಯಕರು ಆಗಮಿಸಲಿದ್ದು ಕರ್ನಾಟಕ ಮಾದಾರ ಮಹಾ ಸಭೆ ಹಾಗೂ ಸದಸ್ಯತ್ವ ದ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಇಡೀ ಕ್ಷೇತ್ರದ ಮಾದಿಗ ಸಮಾಜದ ಬಂದುಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಿ.ವಿ.ವೆಂಕಟರವಣ, ಆ.ನಾ.ಮೂರ್ತಿ, ಕಡ್ಡೀಲು ವೆಂಕಟರವಣ, ಜಿ.ಎನ್.ಅಂಜಿನಪ್ಪ, ಜೀವಿಕಾ ನಾರಾಯಣಸ್ವಾಮಿ, ಎನ್.ಕೋಟಪ್ಪ, ಬಿ.ನರಸಿಂಹಪ್ಪ, ವೆಂಕಟರವಣ, ಬಾಬು, ಈಶ್ವರಪ್ಪ, ಸುಬ್ರಮಣಿ, ಜಯಂತ್, ಹರೀಶ್, ಎಂ.ಎನ್.ವೆಂಕಟೇಶ್, ಭಗವಾನ್ ಮೂರ್ತಿ, ಚಂದ್ರ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.