SMAT 2025: ಅನುಕುಲ್ ರಾಯ್ ಆಲ್‌ರೌಂಡರ್ ಆಟದ ಎದುರು ಸೋಲೊಪ್ಪಿಕೊಂಡ ಕರ್ನಾಟಕ!
ಕರ್ನಾಟಕ ತಂಡ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯ ಎಲೈಟ್ ಡಿ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಎರಡು ವಿಕೆಟ್ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ, ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 157 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿದಿದ ಜಾರ್ಖಂಡ್, 19.4 ಓವರ್‌ಗಳಿಗೆ 8 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿ ಗೆಲುವು ಪಡೆಯಿತು.
ಕರ್ನಾಟಕ ವಿರುದ್ಧ ಜಾರ್ಖಂಡ್‌ಗೆ 2 ವಿಕೆಟ್ ರೋಚಕ ಜಯ. -
ಅಹಮದಾಬಾದ್: ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಕರ್ನಾಟಕ ತಂಡ, ತನ್ನ ಎರಡನೇ ಪಂದ್ಯದಲ್ಲಿ (KAR vs JHKD) ಜಾರ್ಖಂಡ್ ವಿರುದ್ಧ ಎರಡು ವಿಕೆಟ್ ಸೋಲು ಅನುಭವಿಸಿತು. ಆ ಮೂಲಕ 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ (Syed Mushtaq Ali Trophy Elite 2025) ಮಯಾಂಕ್ ಅಗರ್ವಾಲ್ ನಾಯಕತ್ವದ ತಂಡ ಮೊದಲನೇ ಸೋಲು ಅನುಭವಿಸಿದೆ. ಇದಕ್ಕೂ ಮುನ್ನ ಕರ್ನಾಟಕ ತಂಡ, ಉತ್ತರಾಖಂಡ ವಿರುದ್ಧ ಗೆದ್ದು 20 ಓವರ್‌ಗಳ ಟೂರ್ನಿಯಲ್ಲಿ ಶುಭಾರಂಭ ಕಂಡಿತ್ತು. ಅಂದ ಹಾಗೆ ಈ ಪಂದ್ಯದಲ್ಲಿ ಎದುರಾಳಿ ಜಾರ್ಖಂಡ್ ತಂಡದ ಅನಕುಲ್ ರಾಯ್ (Anukul Roy) ತಮ್ಮ ಸ್ಪೋಟಕ ಬ್ಯಾಟಿಂಗ್ ಜೊತೆಗೆ ಎರಡು ವಿಕೆಟ್ ಕಿತ್ತು ಎಲ್ಲರ ಗಮನವನ್ನು ಸೆಳೆದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕರ್ನಾಟಕ ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ (37) ಹಾಗೂ ಸ್ಮರಣ್ ರವಿಚಂದ್ರನ್ (32) ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಸುಶಾಂತ್ ಮಿಶ್ರಾ ಬೌಲಿಂಗ್ ದಾಳಿಗೆ ನಲುಗಿದ ಕರ್ನಾಟಕ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 157 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಜಾರ್ಖಂಡ್ ತಂಡಕ್ಕೆ 158 ರನ್‌ಗಳ ಗುರಿಯನ್ನು ನೀಡಿತು. ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ (15), ಕರುಣ್ ನಾಯರ್ (4), ಅಭಿನವ್ ಮನೋಹರ್ (3), ಕೆ ಶ್ರೀಜಿತ್ (4) ಸೇರಿ ಕರ್ನಾಟಕ ತಂಡದ ಪ್ರಮುಖ ಬ್ಯಾಟರ್‌ಗಳು ವಿಫಲರಾದರು.
ಚಂಡೀಗಢ ವಿರುದ್ಧ 3 ವಿಕೆಟ್ ಕಿತ್ತು ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದ ಅರ್ಜುನ್ ತೆಂಡೂಲ್ಕರ್!
ಜಾರ್ಖಂಡ್ ತಂಡದ ಪರ ಪರಿಣಾಮಕಾರಿಯಾಗಿ ಬೌಲ್ ಮಾಡಿದ ಸುಶಾಂತ್ ಮಿಶ್ರಾ 3 ವಿಕೆಟ್ ಕಿತ್ತರೆ, ಸೌರಭ್ ಶೇಖರ್ ಹಾಗೂ ಅನುಕುಲ್ ರಾಯ್ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು.
ಆರಂಭಿಕ ಆಘಾತ ಅನುಭವಿಸಿದ ಜಾರ್ಖಂಡ್
ಕರ್ನಾಟಕ ತಂಡ ನೀಡಿದ್ದ ಸ್ಪರ್ಧಾತಕ ಮೊತ್ತದ ಗುರಿಯನ್ನು ಹಿಂಬಾಲಿಸಿದ ಜಾರ್ಖಂಡ್ ತಂಡಕ್ಕೆ ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ ವಿದ್ಯಾಧರ್ ಪಾಟೀಲ್ ಆರಂಭಿಕ ಆಘಾತ ನೀಡಿದ್ದರು. ಅವರು ನಾಯಕ ಹಾಗೂ ಟೀಮ್ ಇಂಡಿಯಾ ಆಟಗಾರ ಇಶಾನ್ ಕಿಶನ್ ಹಾಗೂ ಕುಮಾರ್ ಕುಶಾಗ್ರ ಅವರನ್ನು ಔಟ್ ಮಾಡಿದರು. ಇದಕ್ಕೂ ಮುನ್ನ ವೈಶಾಖ್ ವಿಜಯ್‌ಕುಮಾರ್, ಉತ್ಕರ್ಷ್ ಸಿಂಗ್ ಅವರನ್ನು ಔಟ್ ಮಾಡಿದರು. ಆ ಮೂಲಕ ಜಾರ್ಖಂಡ್ ತಂಡ, 38 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.
IND vs SA: ರೋಹಿತ್-ಜೈಸ್ವಾಲ್ ಓಪನರ್ಸ್, ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಅನುಕುಲ್ ರಾಯ್ ಸ್ಪೋಟಕ ಅರ್ಧಶತಕ
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅನುಕುಲ್ ರಾಯ್, ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 58 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 95 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಕೊನೆಯ ಓವರ್‌ನಲ್ಲಿ ಕಠಿಣ ಹೋರಾಟ ನಡೆಸಿ ಜಾರ್ಖಂಡ್ ತಂಡವನ್ನು ಗೆಲ್ಲಿಸಿದರು. ಅಂತಿಮವಾಗಿ ಇಶಾನ್ ಕಿಶನ್ ತಂಡ, 19.4 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ, ಈ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಕರ್ನಾಟಕ ತಂಡದ ಪರ ವಿದ್ಯಾಧರ್ ಪಾಟೀಲ್ ಮೂರು ವಿಕೆಟ್ ಕಿತ್ತರೆ, ಪ್ರವೀಣ್ ದುಬೆ ಎರಡು ವಿಕೆಟ್ ಪಡೆದರು.