MLA S N Subbareddy: ಶೇ 100ರಷ್ಠು ಫಲಿತಾಂಶ ತಂದು ಕೊಡುವ ಪ್ರತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಿಗೆ ವೈಯಕ್ತಿಕವಾಗಿ 1 ಲಕ್ಷ ನಗದು ಬಹುಮಾನ
ಖಾಸಗಿ, ಅನುದಾನಿತ ಮತ್ತು ಸರ್ಕಾರಿ ವಸತಿ ಶಾಲೆಗಳನ್ನು ಹೊರತು ಪಡಿಸಿ ಸರ್ಕಾರಿ ಪ್ರೌಢಶಾಲೆಗಳಿಗೆ ಈ ಬಹುಮಾನ ಅನ್ವಯವಾಗುತ್ತದೆ. ಅತಿ ಶೀಘ್ರದಲ್ಲಿಯೇ ವಿದ್ಯಾರ್ಥಿಗಳಿಗೂ ಉತ್ತಮ ಬಹುಮಾನ ವನ್ನು ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು
Source : Chikkaballapur Reporter
ಬಾಗೇಪಲ್ಲಿ: ಶೇ 100ರಷ್ಠು ಫಲಿತಾಂಶ ತರುವ ಸರ್ಕಾರಿ ಶಾಲೆ ಶಿಕ್ಷಕರಿಗೆ ೧ ಲಕ್ಷ ನಗದು ಬಹು ಮಾನ ಪ್ರೇರಣಾ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಘೋಷಣೆ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100ರಷ್ಠು ಫಲಿತಾಂಶವನ್ನು ತಂದು ಕೊಡುವ ಪ್ರತಿಯೊಂದು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಿಗೆ ವೈಯಕ್ತಿಕವಾಗಿ ೧ ಲಕ್ಷ ನಗದು ಬಹುಮಾನ ವನ್ನು ನೀಡಿ ಸನ್ಮಾನಿಸಲಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಘೋಷಿಸಿದರು.
ತಾಲೂಕಿನ ಮಿಟ್ಟೆಮರಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ೨೦೨೪-೨೫ ನೇ ಸಾಲಿನ ಎಸ್‌ಎಸ್ ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಕೈಗೊಂಡಿರುವ ಮಿಟ್ಟೇಮರಿ ಹೋಬಳಿ ಮಟ್ಟದ ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸಬೇಕೆಂಬ ಉದ್ದೇಶದಿಂದ ಪ್ರೊತ್ಸಾಹದಾಯಕವಾಗಿ ಶೇ.100ರಷ್ಠು ಫಲಿತಾಂಶ ತಂದುಕೊಡುವ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ೧ ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ನೀಡಲು ತೀರ್ಮಾನಿಸಿದ್ದೇನೆ. ಖಾಸಗಿ, ಅನುದಾನಿತ ಮತ್ತು ಸರ್ಕಾರಿ ವಸತಿ ಶಾಲೆಗಳನ್ನು ಹೊರತು ಪಡಿಸಿ ಸರ್ಕಾರಿ ಪ್ರೌಢಶಾಲೆಗಳಿಗೆ ಈ ಬಹುಮಾನ ಅನ್ವಯವಾಗುತ್ತದೆ. ಅತಿ ಶೀಘ್ರದಲ್ಲಿಯೇ ವಿದ್ಯಾರ್ಥಿಗಳಿಗೂ ಉತ್ತಮ ಬಹುಮಾನವನ್ನು ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವು ಬಾಗೇಪಲ್ಲಿ ತಾಲ್ಲೂಕು ಇಡೀ ಜಿಲ್ಲೆಯಲ್ಲೇ ಮೊದಲ ಸ್ಥಾನ ಗಳಿಸುವ ನಿಟ್ಟಿನಲ್ಲಿ ಶಿಕ್ಷಕರು ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಒಳ್ಳೆಯ ಮೆರಿಟ್ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಉತ್ತೇಜನ ನೀಡುವುದರ ಜೊತೆಗೆ ಮೊದಲು ಅನುತ್ತೀರ್ಣವಾಗುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಆಸಕ್ತಿ ನೀಡಿ ಅಂತಹ ವಿದ್ಯಾರ್ಥಿಗಳು ಉತ್ತೀರ್ಣಗೊಂಡರೆ ಅದೇ ನಮ್ಮ ದೊಡ್ಡ ಸಾಧನೆಯಾಗುತ್ತದೆ. ಮಕ್ಕಳು ಮನೆಯಲ್ಲಿ ಓದುವ ಸಮಯದಲ್ಲಿ ಟಿವಿ ನೋಡುವುದು ಮೊಬೈಲ್ ಬಳಸುವುದರಿಂದ ಅವರ ಏಕಾಗ್ರತೆಗೆ ಭಂಗ ತರುತ್ತದೆ.
೨ ತಿಂಗಳು ಕಡ್ಡಾಯವಾಗಿ ಇವುಗಳಿಂದ ದೂರ ಇದ್ದು ಮಕ್ಕಳ ವ್ಯಾಸಂಗಕ್ಕೆ ಪೂರಕವಾಗಿ ನಡೆದು ಕೊಳ್ಳಬೇಕು. ನಮ್ಮ ಮಕ್ಕಳ ಬಗ್ಗೆ ನಾವು ಸದಾ ಹೆಮ್ಮೆ ಪಡಬೇಕು. ಇತರರೊಂದಿಗೆ ಹೋಲಿಕೆ ಸರಿಯಲ್ಲ. ಮಕ್ಕಳು ಅಷ್ಠೆ ಅವರು ಮಾಡುವ ಸಾಧನೆ ಸಮಾಜದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವ ರೀತಿಯಲ್ಲಿ ಇರಬೇಕು. ತಂದೆ-ತಾಯಿ ಹೆಮ್ಮೆಯಿಂದ ಹೇಳಿಕೊಳ್ಳುವಂತಿರಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗು ಶೈಕ್ಷಣಿಕ ಯಶಸ್ಸಿನಲ್ಲಿ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿ ಗಳು ಒಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಶಿಸ್ತು-ಸಂಕಲ್ಪ ನನ್ನ ಯಶಸ್ಸಿನ ಜೀವನ ರಹಸ್ಯ: ನಾನು ಶಾಲಾ ಸಮಯದಿಂದಲೇ ರೂಢಿಸಿ ಕೊಂಡು ಬಂದಿರುವ ಶಿಸ್ತು,ಸಂಕಲ್ಪ, ಸಾಧಿಸಬೇಕು ಎಂಬ ಛಲ ನಾನು ಇಂದು ಯಶಸ್ವಿ ವ್ಯಕ್ತಿ ಯಾಗಿ ರೂಪಗೊಳ್ಳಲು ಕಾರಣ. ನಾನು ಒಬ್ಬ ಸಾಮಾನ್ಯ ರೈತನ ಮಗನಾಗಿ ಸರ್ಕಾರಿ ಶಾಲೆಯಲ್ಲಿ ಯೇ ಓದಿದ್ದೇನೆ. ಇಂದು ಶಾಸಕನಾಗಿ ನಿಮ್ಮ ಮುಂದೆ ಇರುವುದಕ್ಕೆ ಜೀವನದಲ್ಲಿ ರೂಢಿಸಿಕೊಂಡು ಬಂದಿರುವ ಶಿಸ್ತು, ಸಾಧಿಸಬೇಕೆಂಬ ಗುರಿಯೊಂದಿಗೆ ಕಷ್ಠಪಟ್ಟೆ ಅದರಿಂದಾಗಿ ಉದ್ಯಮಿಯಾಗಿ ಹಾಗು ಶಾಸಕನಾಗಿ ಯಶಸ್ಸನ್ನು ಪಡೆದುಕೊಂಡೆ.
ಸಿದ್ಧತೆಯೊಂದಿಗೆ ಪರೀಕ್ಷೆ ಎದುರಿಸಬೇಕು
ತಹಸೀಲ್ದಾರ್ ಮನೀಷ್ ಎನ್. ಮಹೇಶ್ ಪತ್ರಿ ಮಾತನಾಡಿ, ಈಗಿರುವ ೨ ತಿಂಗಳಲ್ಲಿ ವಿದ್ಯಾರ್ಥಿ ಗಳನ್ನು ಸರಿಯಾಗಿ ಸಿದ್ದಪಡಿಸಿದರೆ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಶಿಸ್ತನ್ನು ವಿದ್ಯಾರ್ಥಿ ಗಳು ರೂಢಿಸಿಕೊಳ್ಳಬೇಕು. ಶಿಸ್ತಿನ ಜೀವನವನ್ನು ರೂಢಿಸಿಕೊಂಡರೆ ಯಶಸ್ಸು ದೊರೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಶೈಕ್ಷಣಿಕ ಜೀವನದ ಹಂತದಲ್ಲಿ ಕಠಿಣ ಪ್ರಯತ್ನವನ್ನು ಮಾ ಡಿದಾಗ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಾಧ್ಯವಾಗುತ್ತದೆ. ಎಸ್‌ಎಸ್‌ಎಲ್‌ಸಿ ಎನ್ನುವುದು ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಅದನ್ನು ಸರಿಯಾದ ಸಿದ್ಧತೆಯೊಂದಿಗೆ ಎದುರಿಸಬೇಕು. ಯಾವುದೇ ರೀತಿಯ ಪರೀಕ್ಷೆ ಎಂದರೆ ಭಯ, ಒತ್ತಡ ಇದ್ದೇ ಇರುತ್ತದೆ. ಆದರೆ ಅದಕ್ಕಾಗಿ ನಾವು ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡು ಪರೀಕ್ಷೆ ಬರೆದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ವೆಂಕಟರಾಮಪ್ಪ, ಜಿಪಂ ಮಾಜಿ ಸದಸ್ಯ ನರಸಿಂಹಪ್ಪ, ಗ್ರಾಪಂ ಅದ್ಯಕ್ಷೆ ಸೀತಮ್ಮ, ಉಪಾಧ್ಯಕ್ಷೆ ಗೌತಮಿ, ಎಸ್.ಡಿ.ಎಂ.ಸಿ ಅದ್ಯಕ್ಷ ದೇವರಾಜ್, ಬಿ.ವಿ.ಮಂಜುನಾಥ್, ಕಾಮಿರೆಡ್ಡಿ, ಅಂಜಿನಮ್ಮ, ಬಾಲಕೃಷ್ಣಸ್ವಾಮಿ, ವೆಂಕಟೇಶಪ್ಪ, ಅಂಜಿನಪ್ಪ, ನಾರಾಯಣಸ್ವಾಮಿ, ನರಸರೆಡ್ಡಿ, ನೋಡಲ್ ಅಧಿಕಾರಿ ಪಿ.ಎನ್.ನಾರಾಯಣಸ್ವಾಮಿ, ಇಸಿಓ ರವಿಕುಮಾರ್, ಎನ್.ಶಿವಪ್ಪ, ಮುಖ್ಯ ಶಿಕ್ಷಕರಾದ ಸುನಿತ, ಮುತ್ತುರಾಯಪ್ಪ, ಶ್ರೀನಿವಾಸಪ್ಪ, ಸುಬ್ಬರಾಯಪ್ಪ ಸೇರಿದಂತೆ ಹಲವಾರು ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೋಷಕರು ಹಾಜರಿದ್ದರು.
ಇದನ್ನೂ ಓದಿ: Chikkaballapur News: ಅಧಿಕಾರಿಗಳು ದರ್ಪ ಬಿಟ್ಟು ನ್ಯಾಯಯುತ ತೆರವುಗೊಳಿಸಿ