Chinthamani News: ನಾರಿ ಶಕ್ತಿ ಪ್ರದರ್ಶನ: ಮೀಸಲಾತಿ ಕಸಿದುಕೊಂಡ ಕಾಂಗ್ರೆಸ್ ವಿರುದ್ಧ ಚಿಂತಾಮಣಿಯಲ್ಲಿ ಬಿಜೆಪಿ ಪ್ರತಿಭಟನಾ ರ‍್ಯಾಲಿ
ದಶಕಗಳ ಕಾಲ ಮಹಿಳಾ ಮೀಸಲಾತಿಯನ್ನು ಮೂಲೆ ಗುಂಪು ಮಾಡಿದ್ದ ಕಾಂಗ್ರೆಸ್,ಈಗ ಕೇಂದ್ರ ಸರ್ಕಾರ ಅದನ್ನು ಜಾರಿಗೆ ತರುತ್ತಿದ್ದರೂ ತಾಂತ್ರಿಕ ಅಡೆತಡೆಗಳನ್ನು ಒಡ್ಡುವ ಮೂಲಕ ಮಹಿಳೆಯರಿಗೆ ಸಿಗಬೇಕಾದ ನ್ಯಾಯಯುತ ಹಕ್ಕನ್ನು ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಎಂ ಎಲ್ ಸಿ ಭಾರತೀ ಶೆಟ್ಟಿ ಮತ್ತು ಬಿಜೆಪಿ ಮುಖಂಡ ವೇಣುಗೋಪಾಲ್ (ಗೋಪಿ) ಆಕ್ರೋಶ ವ್ಯಕ್ತಪಡಿಸಿದರು.
-
ಚಿಂತಾಮಣಿ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಐತಿಹಾಸಿಕ 'ನಾರಿಶಕ್ತಿ ವಂದನ್ ಅಧಿನಿಯಮ' (ಮಹಿಳಾ ಮೀಸಲಾತಿ) ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಗೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಅಸಹಕಾರ ತೋರುತ್ತಿವೆ ಎಂದು ಆರೋಪಿಸಿ ಚಿಂತಾಮಣಿ ತಾಲ್ಲೂಕು ಬಿಜೆಪಿ ಘಟಕವು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ದಶಕಗಳ ಕಾಲ ಮಹಿಳಾ ಮೀಸಲಾತಿಯನ್ನು ಮೂಲೆ ಗುಂಪು ಮಾಡಿದ್ದ ಕಾಂಗ್ರೆಸ್,ಈಗ ಕೇಂದ್ರ ಸರ್ಕಾರ ಅದನ್ನು ಜಾರಿಗೆ ತರುತ್ತಿದ್ದರೂ ತಾಂತ್ರಿಕ ಅಡೆತಡೆಗಳನ್ನು ಒಡ್ಡುವ ಮೂಲಕ ಮಹಿಳೆಯರಿಗೆ ಸಿಗಬೇಕಾದ ನ್ಯಾಯಯುತ ಹಕ್ಕನ್ನು ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಎಂ ಎಲ್ ಸಿ ಭಾರತೀ ಶೆಟ್ಟಿ ಮತ್ತು ಬಿಜೆಪಿ ಮುಖಂಡ ವೇಣುಗೋಪಾಲ್ (ಗೋಪಿ) ಆಕ್ರೋಶ ವ್ಯಕ್ತಪಡಿಸಿದರು.
ಸಾಂವಿಧಾನಿಕವಾಗಿ ನಡೆಯಬೇಕಾದ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ನೋಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಯಿತು.
ಮಹಿಳೆಯರ ಸಬಲೀಕರಣಕ್ಕಾಗಿ ತಂದಿರುವ ಈ ಮೈಲಿಗಲ್ಲನ್ನು ಸ್ವಾಗತಿಸುವ ಬದಲು ರಾಜಕೀಯ ಪ್ರೇರಿತ ಅಸಹಕಾರ ತೋರುತ್ತಿರುವುದು ಖಂಡನೀಯ. ಕೂಡಲೇ ಕಾಂಗ್ರೆಸ್ ತನ್ನ ಪಟ್ಟಭದ್ರ ಹಿತಾಸಕ್ತಿಯನ್ನು ಬಿಟ್ಟು ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಸಹಕರಿಸಬೇಕು" ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರಾಜಣ್ಣ, ಮಹೇಶ್ ಬೈ,ರೋಹಿಣಿ, ಗೌತಮಿ, ಪೂಜಾ, ದೇವರಾಜ್, ಗಾಜಲು ಶಿವ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.