Jyotiba Phule-2026 Award: ಶಿಕ್ಷಕಿ ಗೀತಾ ಲೋಕೇಶ್ ಅವರಿಗೆ ಜ್ಯೋತಿಬಾ ಫುಲೆ-2026 ಪ್ರಶಸ್ತಿ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪಲಮನೇರು ಲಯನ್ಸ್ ಕ್ಲಬ್ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆ -2026 ಅವಾರ್ಡ್ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 60 ಜನ ಸಾಧಕರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.
-
ಗುಬ್ಬಿ: ನೆರೆರಾಜ್ಯ ಆಂಧ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆಯ್ಕೆಯಾದ ತಾಲ್ಲೂಕಿನ ಸಿ.ಎಸ್.ಪುರ ಕೆಪಿಎಸ್ ಶಾಲೆಯ ಶಿಕ್ಷಕಿ ಗೀತಾ ಲೋಕೇಶ್ ರವರಿಗೆ ಆಂಧ್ರ ಲಯನ್ಸ್ ಕ್ಲಬ್ ವತಿಯಿಂದ ಜ್ಯೋತಿಬಾ ಫುಲೆ -2026 ಪ್ರಶಸ್ತಿ(Jyotiba Phule-2026 Award) ನೀಡಿ ಗೌರವಿಸಲಾಯಿತು.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪಲಮನೇರು ಲಯನ್ಸ್ ಕ್ಲಬ್ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆ -2026 ಅವಾರ್ಡ್ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು, ಕರ್ನಾಟಕ ಮತ್ತು ಕೇರಳದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 60 ಜನ ಸಾಧಕರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು. ಈ ಪೈಕಿ, ಕರ್ನಾಟಕದಿಂದ ಗುಬ್ಬಿ ತಾಲ್ಲೂಕಿನ ಶಿಕ್ಷಕಿ ಗೀತಾ ಲೋಕೇಶ್ ಆಯ್ಕೆಯಾಗಿದ್ದು ತಾಲ್ಲೂಕಿಗೆ ಕೀರ್ತಿ ಬಂದಿದೆ.
ಇದನ್ನೂ ಓದಿ: Gubbi News: ನಮ್ಮ ಸರ್ಕಾರ ಪತ್ರಕರ್ತರ ಪರವಾಗಿದೆ: ಶಾಸಕ ಎಸ್.ಆರ್.ಶ್ರೀನಿವಾಸ್
ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಪಾತ್ರರಾದ ಗಣ್ಯರನ್ನು ಹೂಗುಚ್ಛವನ್ನು ಕೊಡುವ ಮೂಲಕ ವೈದಿಕ ಸಂಪ್ರದಾಯದಂತೆ ಪಾದಪೂಜೆ ಮಾಡಿ, ಪವಿತ್ರವಾದ ಗಂಗಾ ನದಿಯ ನೀರನ್ನು ಸಿಂಪಡಿಸಿ ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ನಿಜಕ್ಕೂ ಕನ್ನಡಿ ಗರು ನೆರೆಯ ರಾಜ್ಯದಲ್ಲಿಯೂ ಸಹ, ಕನ್ನಡದ ಕಹಳೆ ಮೊಳಗಿಸಿ, ಕನ್ನಡದ ಕಂಪನ್ನು ಪಸರಿಸಿರು ವುದು ನಿಜಕ್ಕೂ ಶ್ಲಾಘನೀಯ.
ಈ ಸಂದರ್ಭದಲ್ಲಿ ಕೊಳಚ್ಚಪ್ಪೆ ಗೋವಿಂದ ಭಟ್, ಪೋಸಲ ರವಿ, ಹಿಂದುಳಿದ ವರ್ಗ ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥರು ಕರಣಮ್ ಸುಬ್ರಹ್ಮಣ್ಯಂ , ಚಿರಂಜೀವಿ ಮತ್ತು ಅವಿಲಾಲ್ ಶ್ರೀಧರ್ ಫೌಂಡೇಶನರ್ ಆಫ್ ತಿರುಪತಿ ಯ ಸದಸ್ಯರು ಮತ್ತಿತರರು ಇದ್ದರು.