Pawan Kalyan Birthday Celebration: ಅನಾಥಾಶ್ರಮದ ಮಕ್ಕಳೊಂದಿಗೆ ಪವನ್ ಕಲ್ಯಾಣ್ ಜನ್ಮದಿನ ಆಚರಣೆ: ಬಲಿಜ ಸಂಘದಿಂದ ಕೇಕ್ ಕತ್ತರಿಸಿ ಸಂಭ್ರಮ; ಮಕ್ಕಳಿಗೆ ಊಟದ ವ್ಯವಸ್ಥೆ
ಜನಸೇನಾ ಪಕ್ಷದ ಮುಖಂಡ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಅವರು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಹಲವು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ದೇಶದ ಜನರ ಗಮನ ಸೆಳೆದಿದ್ದಾರೆ. ಮಾನವೀಯ ಅಂತಃಕರಣ ಹೊಂದಿರುವ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲಿ
-
ಗೌರಿಬಿದನೂರು: ನೆರೆಯ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಚಿತ್ರನಟ ಪವನ್ ಕಲ್ಯಾಣ್(Pawan Kalyan) ಅವರ ಜನ್ಮದಿನವನ್ನು ಗೌರಿಬಿದನೂರು ತಾಲೂಕು ಬಲಿಜ ಸಂಘದ ವತಿಯಿಂದ ನಗರದ ಜೀವಜಲ ಅನಾಥಾಶ್ರಮದ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಹಾಗೂ ಸಂಘದ ತಾಲೂಕು ಕಾರ್ಯದರ್ಶಿ ಕೆ.ಎಸ್. ಅನಂತರಾಜು ಮಾತನಾಡಿ, ಜನಸೇನಾ ಪಕ್ಷದ ಮುಖಂಡ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಅವರು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಹಲವು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ದೇಶದ ಜನರ ಗಮನ ಸೆಳೆದಿದ್ದಾರೆ. ಮಾನವೀಯ ಅಂತಃಕರಣ ಹೊಂದಿರುವ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಇದನ್ನೂ ಓದಿ: Pawan Kalyan: ಪವನ್ ಕಲ್ಯಾಣ್ ಭುಜದ ಶಸ್ತ್ರಚಿಕಿತ್ಸೆ; ಪತ್ನಿ ಭಾವುಕ
ಜನ್ಮದಿನದ ಅಂಗವಾಗಿ ಆಶ್ರಮದ ಮಕ್ಕಳಿಗೆ ಸಂಘದ ವತಿಯಿಂದ ಊಟದ ವ್ಯವಸ್ಥೆ ಮಾಡಲಾ ಗಿತ್ತು. ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ವೆಂಕಟೇಶ್, ಶ್ರೀನಿವಾಸ್ ಮಾಸ್ಟರ್, ರಾಜಕುಮಾರ್, ಸಂದೀಪ್, ಸುರೇಶ್, ಶ್ರೀನಿವಾಸ್, ಸಂತೋಷ್ (ಸಂತು), ಮೋಹನ್, ರಮೇಶ್, ಶಂಕರ್, ಭರತ್, ಜನಾರ್ಧನ್, ಅರುಣ್, ಬಾಲಾಜಿ, ಪವನ್, ಸುಪ್ರೀತ್, ಅಶ್ವಥ್, ಕಾರ್ತಿಕ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.